ಕೊಡಗಿನ ನೆರವಿಗೆ ನಿಂತ್ರು ಆ ಪುಟಾಣಿ ಮಕ್ಕಳು..!!!!
ಹಣ ಸಂಗ್ರಹಿಸಲು ಮಕ್ಕಳು ಮಾಡಿದ್ದು ಏನು ಗೊತ್ತೆ…?
ಮಡಿಕೇರಿಗೆ ನೆರವು ಮಾಡುವ ಮೊತ್ತ ಎಷ್ಟು ಗೊತ್ತೆ…?
ಉಡುಪಿ : ಕೊಡಗಿಗೆ ಬಂದ ಮಹಾ ಮಳೆಯಿಂದ ಜನಜೀವನವೇ ತತ್ತರಿಸಿ ಹೋಯಿತು… ತನ್ನ ಮಾತ್ರ ಭೂಮಿಗಾಗಿ ಕತ್ತಿ ಕೋವಿ ಹಿಡಿದವರ ನಾಡಿನ ಜನರಿಗೆ ಆ ಮಹಾ ಮಳೆ ಬರ ಸಿಡಿಲನಂತೆ ಬಂದು ಅಪ್ಪಳಿಸಿತು. ಕೊಡಗಿಗೆ ಕೊಡಗೆ ಮುಳುಗಿ ಹೋಯಿತು. ಇಡೀ ದೇಶವೇ ಕೊಡಗಿನ ನೆರವಿಗೆ ನಿಂತಿದ್ದನ್ನು ನಾವು ನೀವೆಲ್ಲ ನೋಡಿದ್ವಿ. ಸರ್ಕಾರ ಸೇರಿದಂತೆ ಸಂಘಸಂಸ್ಥೆಗಳು ಕೊಡಗಿನ ಜನರಿಗೆ ಮೂಲಭೂತ ಸೌಕರ್ಯವನ್ನು ಪುನರ್‌ಕಲ್ಪಿಸುವುವಲ್ಲಿ ನೆರವಾಗಿತ್ತು.
ಮಹಾ ಮಳೆಯಿಂದ ತತ್ತರಿಸಿ ಹೋಗಿದ್ದ ಮಡಿಕೇರಿ ಮರಜೀವ ಪಡೆದುಕೊಳ್ಳುತ್ತಿದೆ. ಈ ನಡುವೆ ಉಡುಪಿಯ 39 ಮಕ್ಕಳು ಮಾನವ ಮತ್ತು ಗೋ ಬದುಕು ಕೇಂದ್ರಿತ ಕಲಾಕೃತಿಗಳನ್ನು ಮಾರಿ ಬಂದ ಹಣವನ್ನು ಕೊಡಗು ಸಂತ್ರಸ್ಥರಿಗೆ ನೀಡುವ ನಿರ್ಧಾರ ಮಾಡಿದ್ದಾರೆ.ಈ 39 ಮಕ್ಕಳು, ಗೋವಿನ ಜೊತೆಗಿನ ಮಾನವನ ಅವಿನಾಭಾವ ಸಂಬಂಧ, ಸಂಸ್ಕೃತಿ, ಪರಂಪರೆ, ನಗರ ಜೀವನದಲ್ಲಿ ಗೋವಿನ ಸ್ಥಿತಿಗತಿಯನ್ನು ಚಿತ್ರಿಸಿ, ಇಂತಹ ಕಲಾಕೃತಿಯನ್ನು ಮಾರಿ, ಬಂದ ಹಣವನ್ನು ಕೊಡಗಿನ ನೆರೆ ಸಂತ್ರಸ್ತರಿಗೆ ನೀಡುವ ಮನಸ್ಸು ಮಾಡಿದ್ದಾರೆ.ಹೌದು ಸಹಾಯ ಮಾಡೋಕೆ ಮನಸ್ಸು ಇದ್ದರೇ ಸಾಕು ಎಂಬುದಕ್ಕೆ, ಇವರೇ ಸಾಕ್ಷಿಯಾಗಿದ್ದಾರೆ.
ಈ ಚಿತ್ರಗಳಿಗೆ ಬೆಲೆ ಎಷ್ಟು ಗೋತ್ತೆ…?
ಇವರು ಚಿತ್ರಿಸಿರು ಗೋವಿನ ಕಲಾಕೃತಿಗಳಿಗೆ 5ರಿಂದ 10 ಸಾವಿರ ನಿಗದಿ ಮಾಡಿದ್ದಾರೆ
ಮಕ್ಕಳ ಯೋಚನೆ ಏನು ಗೊತ್ತೆ…?
ಮಾಡಿರುವ ಕಲಾಕೃತಿಯನ್ನು ಮಾರಾಟ ಮಾಡಿ ಅದರಿಂದ ಬರುವ ಹಣವನ್ನು ಮಡಿಕೇರಿಗೆ ಕೊಡುವ ಚಿಂತನೆ ಮಾಡಿದ್ದಾರೆ. ಸುಮಾರು 1 ಲಕ್ಷ ರುಪಾಯಿ ವರೆಗೆ ನೆರವು ಮಾಡುತ್ತೇವೆ ಅಂತಾರೆ ಈ ಮಕ್ಕಳು
ಮಣಿಪಾಲದ ಆರ್.ಎಸ್.ಬಿ ಸಭಾಭವನದಲ್ಲಿ ಮೂರುದಿನಗಳ ಕಾಲ ಈ ಚಿತ್ರಪ್ರದರ್ಶನ ನಡೆಯುತ್ತಿದೆ. ಕಲಾಕೃತಿಗಳ ಜೊತೆ ಶೀರ್ಷಿಕೆ, ಮಾಹಿತಿಯನ್ನು ಹಾಕಲಾಗಿದೆ. ಗೋವಿನ ಬಗೆಗೆ ಮೂಡಿ ಬಂದಿರುವ ಕಲಾಕೃತಿ ಸಮಾಜಕ್ಕೆ ಒಂದೊಂದು ಸಂದೇಶ ನೀಡುತ್ತಿದೆ.
ಕಸದ ಡಬ್ಬಿಯಲ್ಲಿ ಆಹಾರ ಹುಡುಕುವ ಗೋವು, ಒಡೆದ ಕನ್ನಡಿಯಲ್ಲಿ ಗೋವಿನ ಬಿಂಬ ಉತ್ತಮ ಸಂದೇಶ ನೀಡುತ್ತಿದೆ. ದೇವಳದಲ್ಲಿ ನಂದಿ ವಿಗ್ರಹದ ಮುಂದೆ ಹಸುವಿನ ಭಕ್ತಿಯ ನಿವೇದನೆ ಮೌನದಲ್ಲೇ ನೂರು ಭಾವಗಳನ್ನು ತೋರಿಸುತ್ತದೆ.
ಈ ಮಕ್ಕಳ ಚಿಂತನೆಗೆ ನಿಜವಾಗಲು ಶಹಬ್ಬಾಸ್ ಅನ್ನಲೇ ಬೇಕು…
Leave A Reply