ಕೇಂದ್ರ ಸಚಿವ ಅನಂತ ಕುಮಾರ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಸಂಸದ ನಳಿನ್ ಮತ್ತು ಶಾಸಕ ಕಾಮತ್!
ಕೇಂದ್ರ ಸಚಿವ ಅನಂತ ಕುಮಾರ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನವನ್ನು ಬೆಂಗಳೂರಿನ ಬಸವನಗುಡಿಯಲ್ಲಿರುವ ಅನಂತ ಕುಮಾರ್ ಅವರ ಸ್ವಗೃಹದಲ್ಲಿ ದಕ್ಷಿಣ ಕನ್ನಡ ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್ ಹಾಗೂ ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ , ಹೈಕೋರ್ಟ್ ವಕೀಲರಾದ ಎಸ್ ಪವನ್ ಚಂದ್ರ ಶೆಟ್ಟಿ ಪಡೆದು ಅಗಲಿದ ಮಹಾನ್ ನಾಯಕನಿಗೆ ಅಂತಿಮ ನಮನ ಸಲ್ಲಿಸಿದರು.
ಭಾರತೀಯ ಜನತಾ ಪಾರ್ಟಿಯ ಹಿರಿಯ ಮುಖಂಡರಾಗಿದ್ದ, ಅಟಲ್ ಜಿ, ಅಡ್ವಾಣಿಜಿ, ನರೇಂದ್ರ ಮೋದಿಜಿ ಅವರ ಆತ್ಮೀಯರಾಗಿದ್ದ, ಸಂಘದ ಶಿಸ್ತಿನ ಸಿಪಾಯಾಗಿ, ಕೇಂದ್ರದಲ್ಲಿ ಮಂತ್ರಿಯಾಗಿ ಕರ್ನಾಟಕಕ್ಕೆ ಅನೇಕ ಯೋಜನೆಗಳನ್ನು ನೀಡಿದ್ದ ಅದರಲ್ಲಿಯೂ ವಿಶೇಷವಾಗಿ ವಿಮಾನಯಾನ ಸಚಿವರಾಗಿದ್ದಾಗ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಅಭಿವೃದ್ಧಿಗೆ ವಿಶೇಷ ಮುತುವರ್ಜಿಯಲ್ಲಿ ಶ್ರಮಿಸಿದ, ರಾಸಾಯನಿಕ ಮತ್ತು ರಸಗೊಬ್ಬರ ಇಲಾಖೆಯ ಸಚಿವರಾಗಿದ್ದಾಗ ರೈತರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ರಸಗೊಬ್ಬರ ಇಲಾಖೆಯಿಂದ ಕೃಷಿಕರಿಗೆ ಸಿಗಬೇಕಾದ ಸಕಲ ಯೋಜನೆ ಸಿಗುವಂತೆ ಮಾಡಿದ, ಮಂಗಳೂರಿನ ಎಂಸಿಎಫ್ ಪುನಶ್ಚೇತನಕ್ಕೆ ಶ್ರಮಿಸಿದ, ಹೃದಯದ ಶಸ್ತ್ರಚಿಕಿತ್ಸೆಗೆ ಒಳಗಾಗುವ ಬಡ ಜನರಿಗೆ ಕಡಿಮೆ ಬೆಲೆಯಲ್ಲಿ ಸ್ಟ್ರೆಂಟ್ ಸಿಗುವಂತೆ ಮಾಡಿದ, ಜೆನೆರಿಕ್ ಔಷಧದ ಮೂಲಕ ಜನಸಾಮಾನ್ಯರಿಗೆ ಕಡಿಮೆ ಖರ್ಚಿನಲ್ಲಿ ಔಷಧ ಸಿಗುವಂತೆ ಮಾಡಿದ, ಮಂಗಳೂರಿನಲ್ಲಿ ಪ್ಲಾಸ್ಟಿಕ್ ಪಾರ್ಕ್ ನಿರ್ಮಾಣಕ್ಕೆ ರೂಪುರೇಶೆ ಹಾಕಿಕೊಟ್ಟ ಅಪ್ಪಟ ರಾಷ್ಟ್ರಪ್ರೇಮಿ ಅನಂತ ಕುಮಾರ್ ಜಿ ಅವರ ಆತ್ಮಕ್ಕೆ ಭಗವಂತ ಚಿರಶಾಂತಿ ಕರುಣಿಸಲಿ ಹಾಗೆ ಅವರ ಪತ್ನಿ, ಮಕ್ಕಳು ಹಾಗೂ ಕುಟುಂಬಸ್ಥರಿಗೆ ಈ ದುಃಖ ಭರಿಸುವ ಶಕ್ತಿ ಭಗವಂತ ನೀಡಲಿ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಶಾಸಕ ಡಿ ವೇದವ್ಯಾಸ ಕಾಮತ್ ಹೇಳಿದ್ದಾರೆ.
Leave A Reply