• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಬ್ಯಾಂಕು ತನ್ನಿಂದ ತಾನೆ ಬೆಳೆಯಲ್ಲ, ಅದಕ್ಕೆ ಮೂಲ್ಕಿ ಸುಂದರರಾಮ ಶೆಟ್ಟಿಯಂತವರು ಬೇಕು, ಕಾಂಗ್ರೆಸ್ಸಿಗರೇ!!

Hanumantha Kamath Posted On January 14, 2019


  • Share On Facebook
  • Tweet It

ಮಂಗಳೂರಿನಲ್ಲಿ ಕೆಲವು ದಿನಗಳಿಂದ ಕಾಂಗ್ರೆಸ್ಸಿನ ಹಿರಿಕಿರಿ ನಾಯಕರೆಲ್ಲ ತಮ್ಮ ಏರಿಯಾದ ವಿಜಯಾ ಬ್ಯಾಂಕಿನ ಹೊರಗೆ ನಿಂತು ಕೈಯಲ್ಲಿ ಮೈಕ್ ಹಿಡಿದು ಒಂದೇ ಸಮನೆ ಮಾತನಾಡುತ್ತಿದ್ದಾರೆ. ಬಹುಶ: ಪಾಲಿಕೆಯ ಪ್ರತಿ ವಾರ್ಡಿನಲ್ಲಿಯೂ ಇಂತಹ ಪ್ರತಿಭಟನೆ ಮಾಡಬೇಕು ಎನ್ನುವ ಸೂಚನೆ ಹೈಕಮಾಂಡ್ ನಿಂದ ಬಂದಿರಬಹುದು. ಹಾಗೆ ಇಪ್ಪತ್ತು ಮೂವತ್ತು ಜನರನ್ನು ಸೇರಿಸಿ ಅಲ್ಲಲ್ಲಿ ಕಾಂಗ್ರೆಸ್ಸಿನ ವಾರ್ಡ್ ಅಧ್ಯಕ್ಷರು, ಕಾರ್ಪೋರೇಟರ್ ಗಳು ತಮ್ಮ ಶಕ್ತಿ ಪ್ರದರ್ಶನ ಮಾಡುತ್ತಿದ್ದಾರೆ. ಇವರು ಹೀಗೆ ಪ್ರತಿಭಟನೆ ಮಾಡುವುದರಲ್ಲಿ ತಪ್ಪಿಲ್ಲ. ಆದರೆ ಮಾಡುವ ಉದ್ದೇಶ ಏನು, ಯಾಕೆ ಎಂದು ಪ್ರತಿಭಟನೆಗೆ ಬರುವ ಕಾರ್ಯಕರ್ತರಿಗೆ ಹೇಳಿದರೆ ಒಳ್ಳೆಯದು. ಇಲ್ಲದಿದ್ದರೆ ಕೆಲವು ಸಮಯದ ಹಿಂದೆ ರಫೇಲ್ ವಿಷಯದಲ್ಲಿ ಕಾಂಗ್ರೆಸ್ಸಿಗರು ಪ್ರತಿಭಟನೆ ಮಾಡುವಾಗ ಸ್ಥಳೀಯ ಚಾನೆಲ್ ಒಂದು ಕಾಂಗ್ರೆಸ್ ಮುಖಂಡ/ಡೆಯರ ಎದುರು ಕ್ಯಾಮೆರಾ ಹಿಡಿದು ರಫೇಲ್ ಬಗ್ಗೆ ಪ್ರಶ್ನೆ ಕೇಳಿ ಇವರು ಬೆಬ್ಬೆಬ್ಬೆ ಎಂದು ಹೇಳಿ ಇವರ ಮರ್ಯಾದೆ ತೆಗೆದಿದ್ದರಲ್ಲ, ಹಾಗೆ ಮಾಡಿಬಿಡಬಹುದು. ಒಟ್ಟಿನಲ್ಲಿ ಪ್ರತಿಭಟನೆ ಮಾಡಬೇಕು, ಅದಕ್ಕೆ ಮಾಡುತ್ತಿದ್ದಾರೆ. ಎಲ್ಲಿಯ ತನಕ ಅಂದರೆ ಹೈಕಮಾಂಡ್ ಗೆ ತಮ್ಮ ವರ್ಚಸ್ಸು ಗೊತ್ತಾಗಬೇಕು ಎಂದು ಮಂಗಳೂರಿನಲ್ಲಿ ಕಾಂಗ್ರೆಸ್ಸಿನ ಯುವ ಕಾಂಗ್ರೆಸ್ ಘಟಕ ಮತ್ತು ವಲಸೆ ಕಾಂಗ್ರೆಸ್ಸು ಬಣಗಳು ಬೇರೆ ಬೇರೆ ಪ್ರತಿಭಟನೆ ಮಾಡಿದ್ದವು. ಒಬ್ಬರು ಬೆಳಿಗ್ಗೆ ಟಿಫೀನ್ ಮಾಡಿ ಉಪವಾಸಕ್ಕೆ ಕುಳಿತರೆ ಸಂಜೆ ಚಾ ಸಮಯಕ್ಕೆ ಸರಿಯಾಗಿ ಉಪವಾಸ ಮುಗಿಸಿಬಿಟ್ಟಿದ್ದರು. ಇನ್ನೊಂದು ಬಣದವರು ಬೆಳಿಗ್ಗೆ 6 ರಿಂದ 4 ಗಂಟೆಯ ತನಕ ಮಂಗಳೂರು ಬಂದ್ ಗೆ ಕರೆಕೊಟ್ಟಿದ್ದರೆ ಯಾವತ್ತೂ ಒಪನ್ ಆಗದ ಕೆಲವು ಅಂಗಡಿಗಳು ಕೂಡ ಆವತ್ತು ಒಪನ್ ಆಗಿ ಇವರ ಪ್ರತಿಭಟನೆಯನ್ನು ಅಣಕಿಸಿದ್ದವು. ಹೀಗೆ ಪ್ರತಿಭಟನೆಗಳು ನಡೆಯುತ್ತಿವೆ. ಶಾಮಿಯಾನದ ಕೆಳಗೆ ಪ್ರತಿಭಟನೆಗೆ ಕುಳಿತವರಿಗೆ ಬ್ಯಾಂಕುಗಳ ವಿಲೀನ ನಡೆದರೆ ಏನು ಲಾಭ ಇದೆ ಎಂದು ಗೊತ್ತಿಲ್ಲ. ಗೊತ್ತಾದರೆ ಏನು ಮಾಡಬೇಕು ಎಂದು ತಿಳಿದಿಲ್ಲ. ಯಾರಿಗಾದರೆ ನೀವು ಕೇಳಿದರೆ ಸಿಗುವ ಒಂದೇ ಪ್ರಶ್ನೆ “ಇಲೆಕ್ಷನ್ ಬಂತಲ್ಲ ಮಾರಾಯ್ರೆ ಏನಾದರೂ ಮಾಡಬೇಕಲ್ಲ”
ಶೆಟ್ರು ಆವತ್ತು ಬೇಡಾ, ಇವತ್ತು ಅವರ ಬ್ಯಾಂಕು ಬೇಕು…
ಈಗ ಹೆಚ್ಚಿನ ಕಾಂಗ್ರೆಸ್ಸಿಗರು ಇದು ನಮ್ಮ ಅಸ್ಮಿತೆಯ ಪ್ರಶ್ನೆ, ವಿಜಯ ಬ್ಯಾಂಕ್ ನಮ್ಮ ಊರಿನ ಬ್ಯಾಂಕು ಎನ್ನುತ್ತಿದ್ದಾರೆ. ವಿಜಯ ಬ್ಯಾಂಕ್ ಇಲ್ಲಿ ಹುಟ್ಟಿದ್ದು, ಇಲ್ಲಿ ಬೆಳೆದಿದ್ದು, ಒಪ್ಪಿಕೊಳ್ಳೋಣ. ಆದರೆ ಅದನ್ನು ನಮ್ಮ ಕಾಂಗ್ರೆಸ್ಸಿಗರು ಅಂದರೆ ಶ್ರೀಮತಿ ಇಂದಿರಾಗಾಂಧಿ ಇಲ್ಲಿಂದ ತೆಗೆದುಕೊಂಡು ಹೋಗಿ ರಾಷ್ಟ್ರೀಯ ಬ್ಯಾಂಕ್ ಮಾಡಿದ್ರು. ಈಗ ಅದು ರಾಷ್ಟ್ರೀಯ ಸೊತ್ತು. ಅದನ್ನು ಹೇಗೆ ಬಳಸಿಕೊಳ್ಳಬೇಕು ಎನ್ನುವುದು ಕೇಂದ್ರ ಸರಕಾರಕ್ಕೆ ಬಿಟ್ಟಿದ್ದು. ಆದರೆ ವಿಜಯಾ ಬ್ಯಾಂಕನ್ನು ಕಟ್ಟಿ ಬೆಳೆಸಿದವರಲ್ಲಿ ಮೂಲ್ಕಿ ಸುಂದರರಾಮ ಶೆಟ್ಟಿಯವರು ಅಗ್ರಗಣ್ಯರು. ಅವರು ತುಳುನಾಡಿನ ಜನರಿಗೆ ಆ ಬ್ಯಾಂಕಿನಲ್ಲಿ ಅರ್ಹತೆ ಇದೆಯೋ, ಇಲ್ಲವೋ ಎಂದು ನೋಡದೆ ಕೆಲಸ ಕೊಟ್ಟು ಜೀವನಕ್ಕೆ ದಾರಿದೀಪವಾಗಿದ್ದರು. ಅವರ ಹೆಸರನ್ನು ಮಂಗಳೂರಿನಲ್ಲಿ ವಿಜಯಾ ಬ್ಯಾಂಕಿನ ಆಡಳಿತ ಕಚೇರಿ ಇರುವ ರಸ್ತೆಗೆ ಇಡೋಣ ಎಂದಾಗ ಯಾಕೆ ಇದೇ ಕಾಂಗ್ರೆಸ್ಸಿನ ನಿಕಟಪೂರ್ವ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರು ನಗರಾಭಿವೃದ್ಧಿ ಇಲಾಖೆಯಿಂದ ತಡೆಯಾಜ್ಞೆ ತಂದದ್ದು. ಯಾಕೆ ಆಗ ಯಾವ ಕಾಂಗ್ರೆಸ್ಸಿನ ಮುಖಂಡರು ಕೂಡ ಬೀದಿಗೆ ಇಳಿಯಲಿಲ್ಲ. ಅದರ ಅರ್ಥ ನಿಮಗೆ ರಸ್ತೆಗೆ ಹೆಸರಿಟ್ಟರೆ ಎಲ್ಲಿಯಾದರೂ ಕ್ರೈಸ್ತರು ಬೇಸರಗೊಳ್ಳುತ್ತಾರೆ, ಅದಕ್ಕೆ ಲೈಟ್ ಹೌಸ್ ಹಿಲ್ ರಸ್ತೆ ಎಂದೇ ಇರಲಿ, ಇಲ್ಲದಿದ್ದರೆ ಎಲೋಶಿಯಸ್ ಕಾಲೇಜು ರಸ್ತೆ ಮಾಡೋಣ ಎಂದು ಇತ್ತೇ ವಿನ: ಆ ಮಹಾನ್ ಚೇತನದ ಅಗತ್ಯವೇ ಇರಲಿಲ್ಲ. ಈಗ ಚುನಾವಣೆ ಬರುತ್ತಿದ್ದಂತೆ ಮಂಗಳೂರಿನ ವಿಜಯಾ ಬ್ಯಾಂಕಿನ ಮೇಲೆ ಪ್ರೀತಿ ಹುಟ್ಟುತ್ತಿದೆ. ಯಾವುದೇ ಬ್ಯಾಂಕು ತನ್ನಿಂದ ತಾನೆ ಬೆಳೆಯಲ್ಲ, ಅದನ್ನು ಬೆಳೆಸಿದವರು ಮುಖ್ಯ.  ಅದರಲ್ಲಿಯೂ ಯಾವುದೇ ಫಲಾಪೇಕ್ಷೆ ಇಲ್ಲದೆ ಬೆಳೆಸಿದವರಿದ್ದಾರಲ್ಲ, ಅವರೇ ನಿಮಗೆ ಆರೇಳು ತಿಂಗಳ ಹಿಂದೆ ಬೇಡಾವಾಗಿದ್ದರು. ಈಗ ಅವರು ಬೆಳೆಸಿದ ಬ್ಯಾಂಕು ಸಿಕ್ಕಾಪಟ್ಟೆ ಪ್ರಿಯವಾಗಿದೆ.
ಬಿಜೆಪಿಯವರು ಪ್ರಯತ್ನ ಮಾಡಿ ಅಸ್ಮಿತೆ ಉಳಿಸಲಿ..
ಇಲ್ಲಿ ನಾನು ಬಿಜೆಪಿಯ ಸಂಸದರಿಗೆ ಹೇಳುವುದೆನೆಂದರೆ ಎಂದರೆ ವಿಜಯಾ ಬ್ಯಾಂಕ್ ಹೆಸರು ಯಾವುದೇ ಒಂದು ಪ್ರದೇಶಕ್ಕೆ ಸೀಮಿತವಾಗಿಲ್ಲ. ಬ್ಯಾಂಕ್ ಆಫ್ ಬರೋಡಾ ಆದರೆ ಅದು ಗುಜರಾತ್ ನ ಒಂದು ಪ್ರದೇಶ ಅಷ್ಟೇ. ಸಾಧ್ಯವಾಗುವುದಾದರೆ ನೀವು ಈ ವಿಷಯವನ್ನು ವಿತ್ತ ಸಚಿವ ಅರುಣ್ ಜೇಟ್ಲಿಯವರಿಗೆ ಮನವರಿಗೆ ಮಾಡಿಕೊಡಿ. ಬ್ಯಾಂಕ್ ಆಫ್ ಬರೋಡಾ ವಿಜಯಾ ಬ್ಯಾಂಕಿಗಿಂತ ಎರಡೂವರೆ ಪಟ್ಟು ಹೆಚ್ಚು ಬ್ರಾಂಚ್ ಹೊಂದಿರುವುದರಿಂದ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಕೂಡ ಶಾಖೆಯನ್ನು ಹೊಂದಿರುವುದರಿಂದ ಇದು ಪ್ರಾಕ್ಟೀಕಲ್ ಆಗಿ ಸಾಧ್ಯಾನಾ ಎಂದು ನನಗೆ ಗೊತ್ತಿಲ್ಲ. ಒಟ್ಟಿನಲ್ಲಿ ಈ ವಿಷಯವನ್ನು ಆದಷ್ಟು ಎನ್ ಕ್ಯಾಶ್ ಮಾಡಿಕೊಳ್ಳಲು ಕಾಂಗ್ರೆಸ್ಸಿಗರು ಶಕ್ತಿಮೀರಿ ಕೈಕಾಲು ಹೊಡೆಯುತ್ತಿದ್ದಾರೆ. ಮಂಗಳೂರಿನಲ್ಲಿ ವಾಸ್ತವತೆಗಿಂತ ಭಾವನಾತ್ಮಕ ವಿಷಯಗಳು ಹೆಚ್ಚು ಸುದ್ದಿಯಾಗುವುದರಿಂದ ವಿಜಯಾ ಬ್ಯಾಂಕ್ ನಿಂದ ಆದಷ್ಟು ಮೈಲೇಜ್ ಪಡೆಯುವ ಕೆಲಸ ಕಾಂಗ್ರೆಸ್ಸಿನವರು ಮಾಡುತ್ತಿದ್ದಾರೆ. ಆದರೆ ಅಪ್ಪಿತಪ್ಪಿಯೂ ಎಲ್ಲಿ ಕೂಡ ಮೂಲ್ಕಿ ಸುಂದರರಾಮ ಶೆಟ್ಟಿಯವರ ಹೆಸರನ್ನು ಇವರು ಹೇಳುತ್ತಿಲ್ಲ!
  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Hanumantha Kamath May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Hanumantha Kamath May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search