ಕೇಬಲ್ ಟಿವಿ ಆಪರೇಟರ್ಸ್ ದಾರಿ ತಪ್ಪಿಸುತ್ತಿದ್ದಾರೆ. ಎಚ್ಚರ ಗ್ರಾಹಕರೇ ಎಚ್ಚರ!!
ರಾಷ್ಟ್ರದ ಬೇರೆ ಭಾಗಗಳ ಬಗ್ಗೆ ನಿಮಗೆ ಗೊತ್ತಿಲ್ಲ. ಆದರೆ ಮಂಗಳೂರಿನ ಕೇಬಲ್ ಆಪರೇಟರ್ ಗಳು ಖಂಡಿತವಾಗಿ ನಿಮ್ಮ ದಾರಿ ತಪ್ಪಿಸಲು ಪ್ರಯತ್ನ ಮಾಡುತ್ತಿದ್ದಾರೆ. ನಿಮಗೆ ಸರಿಯಾದ ಮಾಹಿತಿ ಕೊಡದೇ ನಿಮಗೆ ಕೇಂದ್ರ ಸರಕಾರದ ಮಹತ್ತರ ಸುಧಾರಣೆಯೊಂದರ ಬಗ್ಗೆ ಸುಳ್ಳು ಮಾಹಿತಿ ಕೊಟ್ಟು ನಿಮಗೆ ಕೇಂದ್ರ ಸರಕಾರದ ಬಗ್ಗೆ ಕೋಪ ಬರುವಂತೆ ಮಾಡುತ್ತಿದ್ದಾರೆ. ಅದು ಏನು ಎಂದು ವಿವರಿಸುತ್ತೇನೆ. ನಿಮ್ಮ ಮನೆಯ ಟಿವಿಯಲ್ಲಿ ಬರುವ ಕಾರ್ಯಕ್ರಮಗಳು ಕೇಬಲ ಮೂಲಕ ನಿಮ್ಮ ಮನೆ ತಲುಪುತ್ತಿದ್ದರೆ ನೀವು ಈ ಜಾಗೃತ ಅಂಕಣವನ್ನು ಓದಲೇಬೇಕು ಮತ್ತು ಇತರರಿಗೂ ತಿಳಿಸಬೇಕು. ನೀವು ಇದನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ಮತ್ತು ಬೇರೆಯವರಿಗೆ ತಿಳಿಸಿದರೆ ಉಳಿಯುವುದು ನಿಮ್ಮದೇ ಹಣ ವಿನ: ನನಗೇನೂ ವೈಯಕ್ತಿಕ ಲಾಭವಿಲ್ಲ. ಬರುವ ತಿಂಗಳಿನಿಂದ ನೀವು ನಿಮ್ಮ ಆಯ್ಕೆಯ ಚಾನೆಲ್ ಗಳನ್ನು ಮಾತ್ರ ವೀಕ್ಷಿಸಿ ಅದಕ್ಕೆ ತಗಲುವ ಹಣವನ್ನು ಮಾತ್ರ ನೀಡಿದರೆ ಸಾಕು ಎನ್ನುವ ವಿಷಯ ನಿಮ್ಮ ಗಮನಕ್ಕೆ ಖಂಡಿತ ಬಂದಿರುತ್ತದೆ. ಕೇಬಲ್ ಆಪರೇಟರ್ಸ್ ಏನು ಹೇಳುತ್ತಿದ್ದಾರೆ ಎಂದರೆ “ನೂರಾ ಮೂವತ್ತು ರೂಪಾಯಿ ಮತ್ತು ಜಿಎಸ್ ಟಿ ಇಪ್ಪತ್ತೆರಡು ರೂಪಾಯಿ ಒಟ್ಟು ಮಿನಿಮಮ್ 152 ರೂಪಾಯಿ ಕಟ್ಟಿದ್ರೆ ನಿಮಗೆ ನೂರು ಫ್ರೀ ಚಾನೆಲ್ ಗಳು ಕೊಡುತ್ತೇವೆ. ಇನ್ನು ಪೇ ಚಾನೆಲ್ ಗಳು ಬೇಕಾದರೆ ಅದರ ಗೊಂಚಲನ್ನು ಪಡೆಯುವ ಮೂಲಕ ಅದರ ಹಣವನ್ನು ಪ್ರತ್ಯೇಕ ನೀಡಬೇಕು. ಹಿಂದೆ ನಾವು ಮುನ್ನೂರು ರೂಪಾಯಿಗಳಿಗೆ ಲೆಕ್ಕವಿಲ್ಲದಷ್ಟು ಚಾನೆಲ್ ಗಳನ್ನು ನೀಡುತ್ತಿದ್ದೇವು. ಇನ್ನು ನಿಮಗೆ ಅಷ್ಟು ಚಾನೆಲ್ಸ್ ಬೇಕಾದರೆ ಐನೂರು ರೂಪಾಯಿ ತನಕ ಹೋಗುತ್ತದೆ. ಮೋದಿ ಸರಕಾರ ನಿಮ್ಮ ಮೇಲೆ ಹೆಚ್ಚಿನ ಹೊರೆ ಹಾಕುತ್ತಿದೆ” ಎಂದು ಹೇಳುತ್ತಿದ್ದಾರೆ.
ಮೀನಿಮಮ್ ಹಣದಲ್ಲಿ ಪೇ ಚಾನೆಲ್ ಸಿಗುತ್ತದೆ…
ಇಲ್ಲಿ ಹೆಚ್ಚಿನವರಿಗೆ ಗೊತ್ತಿಲ್ಲದ ವಿಷಯ ಏನೆಂದರೆ ನೀವು ಜಿಎಸ್ ಟಿ ಸೇರಿಸಿ ಕಟ್ಟಲಿರುವ 152 ರೂಪಾಯಿಗಳಲ್ಲಿಯೇ ನಿಮಗೆ ಪೇ ಚಾನೆಲ್ ಗಳನ್ನು ಕೂಡ ನೋಡುವ ಅವಕಾಶ ಇದೆ. ಅದು ಹೇಗೆ ಎನ್ನುವುದನ್ನು ಹೇಳುತ್ತೇನೆ. ನಾವೆಲ್ಲ ಅಂದುಕೊಂಡದ್ದು ಏನೆಂದರೆ 130 ಪ್ಲಸ್ ಜಿಎಸ್ ಟಿ ಮಿನಿಮಮ್. ಅದರ ನಂತರ ಯಾವುದೇ ಪೇ ಚಾನೆಲ್ ಬೇಕಾದರೆ ಹೆಚ್ಚುವರಿ ಹಣ ಕೊಡಬೇಕು. ಆದರೆ ವಿಷಯ ಹಾಗಲ್ಲ. ನಿಮಗೆ 130 ಪ್ಲಸ್ ಜಿಎಸ್ ಟಿ ಒಳಗೆನೆ ಪೇ ಚಾನೆಲ್ ನೋಡುವ ಹಕ್ಕನ್ನು ಟ್ರಾಯ್ ನೀಡಿದೆ. ಉದಾಹರಣೆಗೆ ನೀವು ಸ್ಟಾರ್ ಪ್ಲಸ್ ಮತ್ತು ಝೀ ಹಿಂದಿ ಚಾನೆಲ್ ನೋಡಬೇಕು ಎಂದು ಬಯಸುತ್ತಿದ್ದಿರಿ ಎಂದು ಅಂದುಕೊಳ್ಳೋಣ. ಆ ಚಾನೆಲ್ ಗಳ ದರ ತಲಾ 19 ರೂಪಾಯಿ. ಅದರೊಂದಿಗೆ ಕಲರ್ಸ್ ಕನ್ನಡ ಬೇಕು ಎಂದಾದರೆ ಅದಕ್ಕೆ ಹತ್ತು ರೂಪಾಯಿ ಇರಬಹುದು. ಇನ್ನು ಕೆಲವು ಚಾನೆಲ್ ಗಳು ಒಂದೆರಡು ರೂಪಾಯಿಗಳಿಗೆ ಸಿಗುತ್ತವೆ. ಇಷ್ಟೆಲ್ಲಾ ಪೇ ಚಾನೆಲ್ ಸೇರಿ ಒಟ್ಟು 12 ಪೇ ಚಾನೆಲ್ ನೀವು ಪಟ್ಟಿ ಮಾಡಿ ಆಯ್ಕೆ ಮಾಡಿದ್ದೀರಿ ಎಂದು ಇಟ್ಟುಕೊಳ್ಳೋಣ. ಅದು ನೂರಾ ಮೂವತ್ತು ರೂಪಾಯಿ ಒಳಗೆನೆ ಬಂದಿರುತ್ತದೆ. ಅದರ ಅರ್ಥ ಒಟ್ಟು 100 ಚಾನೆಲ್ ಗಳಲ್ಲಿ 12 ಪೇ ಚಾನೆಲ್ ನೀವೆ ಆಯ್ಕೆ ಮಾಡಿದರೆ ಉಳಿದ 88 ಫ್ರೀ ಏರ್ ಚಾನೆಲ್ ನಿಮಗೆ ಸಿಕ್ಕಿ ಒಟ್ಟು ನೂರು ಚಾನೆಲ್ ಆಗುತ್ತದೆ. ಆದರೆ ಕೇಬಲ್ ಟಿವಿ ಆಪರೇಟರ್ಸ್ ಏನು ಹೇಳುತ್ತಾರೆ ಎಂದರೆ ನೀವು ಸ್ಟಾರ್ ನವರ ಇಡೀ ಗೊಂಚಲನ್ನು ತೆಗೆದುಕೊಳ್ಳಬೇಕು. ಝೀ, ಸೋನಿಯವರ ಇಡೀ ಗೊಂಚಲನ್ನು ತೆಗೆದುಕೊಳ್ಳಬೇಕು, ಸಿಂಗಲ್ ಸಿಗಲ್ಲ ಎನ್ನುತ್ತಾರೆ. ಇದು ಅಪ್ಪಟ ಸುಳ್ಳು.
ಟ್ರಾಯ್ ವೆಬ್ ಸೈಟ್ ನಲ್ಲಿ ಹೆಚ್ಚಿನ ಮಾಹಿತಿ ಇದೆ…
ನಿಮಗೆ ಐದು ಪೇ ಚಾನೆಲ್, ಉದಾಹರಣೆಗೆ ಒಂದು ಝೀ ಕನ್ನಡ, ಒಂದು ಝೀ ನ್ಯೂಸ್, ಒಂದು ಸೋನಿ, ಒಂದು ಸ್ಟಾರ್ ಪ್ಲಸ್ ಮತ್ತು ಒಂದು ಕಲರ್ಸ್ ಕನ್ನಡ ಮಾತ್ರ ಬೇಕಾದರೆ ಅಷ್ಟು ಮಾತ್ರ ತೆಗೆದುಕೊಂಡು 130 ಪ್ಲಸ್ ಜಿಎಸ್ ಟಿ 22 ರೂಪಾಯಿ ಕೊಟ್ಟರೆ ಮುಗಿಯಿತು. ಅದರ ಮೇಲೆ ಹತ್ತು ರೂಪಾಯಿ ಕೂಡ ಜಾಸ್ತಿ ಕೊಡಬೇಕಾಗಿಲ್ಲ. ಇದನ್ನು ಕೇಬಲ್ ಟಿವಿ ಆಪರೇಟರ್ಸ್ ಮುಚ್ಚಿಡುತ್ತಿದ್ದಾರೆ. ಕೇಂದ್ರ ಸರಕಾರ ಜನರು ಕಡಿಮೆ ಹಣದಲ್ಲಿ ಕೇಬಲ್ ಟಿವಿ ಖರ್ಚು ಮುಗಿಸಲಿ ಎಂದು ಬಯಸಿ ಇಂತಹ ಉತ್ತಮ ಯೋಜನೆ ನೀಡುತ್ತಿದ್ದರೆ ಕೇಬಲ್ ಟಿವಿ ಆಪರೇಟರ್ಸ್ ಇಷ್ಟು ವರ್ಷ ಸುಲಿಗೆ ಮಾಡಿದ್ದು ಸಾಕಾಗಲಿಲ್ಲ ಎಂದು ಅದನ್ನು ಮುಂದುವರೆಸಿಕೊಂಡು ಹೋಗುವ ತಂತ್ರದಲ್ಲಿದ್ದಾರೆ. ನಿಮಗೆ ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಬೇಕಾದರೆ “ಟ್ರಾಯ್” ಅವರ ವೆಬ್ ಸೈಟ್ ನೋಡಬಹುದು. ಇನ್ನೂ ಹೆಚ್ಚಿನ ವಿಷಯ ಬೇಕಾದರೆ ಕಂಪ್ರೈಸಸ್ ಆಫ್ ಇಂಟೆಲ್ ಕನೆಕ್ಷನ್ ರೆಗ್ಯೂಲೇಶನ್ 2017 ಇದರಲ್ಲಿ ಕ್ವಾಲಿಟಿ ಆಫ್ ಸರ್ವಿಸ್ ಎಂಡ್ ಕನ್ಸೂಮರ್ ಪ್ರೋಟೇಕ್ಷನ್ ರೆಗ್ಯೂಲೇಶನ್ 2017 ಇದನ್ನು ಓದಿಬಿಡಿ. ಕೇಬಲ್ ಟಿವಿ ಆಪರೇಟರ್ಸ್ ಗಳ ಅಸಲಿಯತ್ತು ಬಯಲಿಗೆ ಬಂದು ಬಿಡುತ್ತದೆ!
Leave A Reply