ವಿಜಯ ಬ್ಯಾಂಕ್ ಉಳಿಸುವ ಸರ್ವ ಪಕ್ಷ ಸಭೆಯಲ್ಲಿ ರಮನಾಥ ರೈ ಅವರು ಉರಿದು ಬಿದ್ದದ್ದು ಏಕೆ ?
ವಿಜಯ ಬ್ಯಾಂಕ್ ಉಳಿಸಿ ಹೋರಾಟ ಸಮಿತಿ ಇಂದು ಕುದ್ಮಲ್ ರಂಗ ರಾವ್ ಪುರಭವನದಲ್ಲಿ ಆಯೋಜಿಸಿದ್ದ ಜಿಲ್ಲೆಯ ಸರ್ವ ಪಕ್ಷದ ಜನ ಪ್ರತಿನಿಧಿಗಳ ನಿಲುವು ಎನ್ನುವ ಕಾರ್ಯಕ್ರಮದಲ್ಲಿ ರಮನಾಥ ರೈಯವರು ಬಾಲಕ್ಕೆ ಬೆಂಕಿ ಹಿಡಿದ ಬೆಕ್ಕಿನಂತಾಡಿದ್ದು ನಗೆಪಾಟಲಿಗೀಡಾಗಿದೆ.
ಘಟನೆಯ ವಿವರ :
ವಿಜಯ ಬ್ಯಾಂಕ್ ಉಳಿಸಿ ಹೋರಾಟ ಸಮಿತಿಯು ಮಂಗಳೂರಿನ ಪುರಭವನದಲ್ಲಿ ಜಿಲ್ಲೆಯ ಎಲ್ಲಾ ಪಕ್ಷದ ಜನಪ್ರತಿನಿಧಿಗಳ ನಿಲುವು ಎನ್ನುವ ಕಾರ್ಯಕ್ರಮ ಆಯೋಜಿಸಿತ್ತು.ಕಾರ್ಯಕ್ರಮದ ಆರಂಭದಲ್ಲಿ ಮಾಜಿ ಸಚಿವರಾದ ರಮನಾಥ ರೈ ಅವರು ಮಾತನಾಡಿ ಬ್ಯಾಂಕ್ ವಿಲೀನದ ಕುರಿತು ಕೇಂದ್ರ ಸರಕಾರವನ್ನು ಮತ್ತು ದ.ಕ ಜಿಲ್ಲೆಯ ಸಂಸದರ ಬಗ್ಗೆ ಕಿಡಿಕಾರಿದ್ದಾರೆ.
ಸ್ವಲ್ಪ ತಡವಾಗಿ ಕಾರ್ಯಕ್ರಮಕ್ಕೆ ಆಗಮಿಸಿದ ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ವೇದವ್ಯಾಸ್ ಕಾಮತ್ ಅವರು ತನ್ನ ಭಾಷಣದಲ್ಲಿ,1991 ಅಗಸ್ಟ್ 14 ರಂದು ಅಂದಿನ ಕೇಂದ್ರ ಸರಕಾರವು ಭಾರತದ ಬ್ಯಾಂಕಿಂಗ್ ವ್ಯವಸ್ಥೆಯ ಅಧ್ಯಯನಕ್ಕಾಗಿ ಎಂ ನರಸಿಹ ಅವರ ಅಧ್ಯಕ್ಷತೆಯಲ್ಲಿ ಒಂಬತ್ತು ಸದಸ್ಯ ಸಮಿತಿಯ ಆಯೋಗವೊಂದನ್ನು ನೇಮಿಸಿತು.ಆ ಸಮಿತಿ ಜ್ಯಾರಿಗೆ ಬಂದು ಅದ್ಯಯನ ನಡೆಸಿ 10 ಪ್ರಮುಖ ಶಿಫಾರಸುಗಳನ್ನು ಕೇಂದ್ರಕ್ಕೆ ಸಲ್ಲಿಸಿತ್ತು.ಅದರಲ್ಲಿ ಒಂದು ಬ್ಯಾಂಕ್ ವಿಲೀನದ ಕುರಿತಾಗಿತ್ತು.ಬ್ಯಾಂಕಿಂಗ್ ವ್ಯವಹಾರಗಳಲ್ಲಿ ದಕ್ಷತೆಯನ್ನು ಹೆಚ್ಚಿಸುವ ಸಲುವಾಗಿ ಬ್ಯಾಂಕ್ ಗಳ ಸಂಖ್ಯೆಯ ವಿಲೀನ ಮತ್ತು ಸಂಪಾದನೆಯ ಮೂಲಕ ಕಡಿತಗೊಳಿಸುವಂತೆ ಸರಕಾರಕ್ಕೆ ಸೂಚಿಸಿತ್ತು. ತದ ನಂತರ ಆ ಪ್ರಕ್ರಿಯೆಗೆ ಮರು ಜೀವ ನೀಡಿದ್ದು 2011-12ನೇ ಸಾಲಿಸಲ್ಲಿ ಯುಪಿಎ ಅವಧಿಯಲ್ಲಿ ವಿತ್ತ ಸಚಿವರಾಗಿದ್ದ ಪಿ.ಚಿದಂಬರಂ ಅವರು.ಕಳೆದ ಎಂಟು ವರ್ಷಗಳಿಂದ ಆ ಪ್ರಕ್ರಿಯೆ ನಡೆಯುತಿದ್ದಾಗ ಯಾರೊಬ್ಬರೂ ಆ ಕುರಿತು ಮಾತನಾಡಲಿಲ್ಲ.ಈಗ ರಾಜಕೀಯ ಲಾಭಕ್ಕಾಗಿ ವಿಜಯ ಬ್ಯಾಂಕ್ ಉಳಿಸಿ ಎನ್ನುತ್ತಾ ಬೀದಿಗಿಳಿಯುವುದು ಬಿಟ್ಟು ಪಕ್ಷಾತೀತವಾಗಿ ಕೇಂದ್ರ ಸಚಿವರನ್ನು ಭೇಟಿ ಮಾಡಿ ಈ ಕುರಿತು ಮನವಿ ಸಲ್ಲಿಸಬಹುದಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಅದಲ್ಲದೆ ನಮ್ಮ ಪಕ್ಷದಿಂದ ಆಯ್ಕೆಯಾಗಿರುವ ನಮ್ಮ ಜಿಲ್ಲೆಯ ಸಂಸದರು ಮತ್ತು ನಮ್ಮ ಜಿಲ್ಲೆಯ ಎಲ್ಲಾ ಶಾಸಕರನ್ನು ಜೊತೆಯಾಗಿ ಉಡುಪಿ ಜಿಲ್ಲೆಯ ಸಂಸದರು ಮತ್ತು ಶಾಸಕರನ್ನು ಸೇರಿಸಿಕೊಂಡು ನಿಯೋಜ ರಚಿಸಿ ಕೇಂದ್ರ ವಿತ್ತಸಚಿವ ಅರುಣ್ ಜೇಟ್ಲಿಯವರನ್ನು ಭೇಟಿ ಮಾಡುವ ಪ್ರಯತ್ನ ಮಾಡುತ್ತೇವೆ.ಹಾಗೆಯೇ ಕಾಂಗ್ರೇಸಿನ ಈಗಿನ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಮಾಜಿ ಅರಣ್ಯ ಸಚಿವರಾದ ರಮನಾಥ ರೈ ಅವರೂ ನಮ್ಮ ಜೊತೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಈ ಹಿಂದೆ ಮಂಗಳೂರಿನ ಲೈಟ್ ಹೌಸ್ ರಸ್ತೆಗೆ ವಿಜಯ ಬ್ಯಾಂಕ್ ಸ್ಥಾಪಕರಾದ ಮುಲ್ಕಿ ಸುಂದರ್ ರಾಮ್ ಶೆಟ್ಟಿ ಅವರ ಹೆಸರಿಡುವಾಗ ಕೋಮು ಗಲಭೆ ಆಗುತ್ತದೆ ಎಂಬ ನೆಪವೊಡ್ಡಿ ಕೊನೆಯ ಹಂತದಲ್ಲಿ ತಡೆ ತಂದವರೂ ಇಂದು ವಿಜಯ ಬ್ಯಾಂಕಿನ ಕುರಿತು ಅಪಾರ ಕಾಳಜಿ ವ್ಯಕ್ತಪಡಿಸುವ ನಾಟಕ ಬಿಟ್ಟು ನಮ್ಮೊಂದಿಗೆ ಕೈಜೋಡಿಸಿ ಬ್ಯಾಂಕಿನ ಹೆಸರು ಉಳಿಸುವ ಕಾರ್ಯಕ್ಕೆ ಕೈ ಜೋಡಿಸಿ ಎಂದು ಹೇಳಿದರು.
ಇಷ್ಟಾಗುತಿದ್ದಂತೆ ಆಕ್ರೋಶಗೊಂಡ ರಮನಾಥ ರೈಗಳು ಕ್ರೋದಗೊಂಡಿದ್ದಾರೆ.
Leave A Reply