ವ್ಹಾಟ್ಸ್ಆಪ್ ಮೂಲಕ ಬಂತು ಹದಿನಾಲ್ಕು ಲಕ್ಷದ ತೊಂಬತ್ತು ಸಾವಿರ ರೂಪಾಯಿಗಳ ಚಕ್..!
ಜನ ಎಲ್ಲಿಯವರೆಗೆ ಮೋಸ ಹೋಗುತ್ತಾರೋ ಅಲ್ಲಿಯವರೆಗೆ ಮೋಸ ಮಾಡುವವರು ಇರುತ್ತಾರೆ ಅನ್ನುವ ಮಾತು ನೀವೆಲ್ಲಾ ಕೇಳಿದ್ದಿರಿ. ಬದಲಾದ ಈ ಕಾಲದಲ್ಲೂ ಶಿಕ್ಷಣವಂತರನ್ನೂ ಬಿಡದೆ ವಂಚನೆ ಮಾಡಲಾಗುತ್ತಿದೆ. ನಗರದಲ್ಲಿ ಹೆಚ್ಚು ಶಿಕ್ಷಿತರು ಇರುವ ಕಾರಣದಿಂದಲೋ ಗೊತ್ತಿಲ್ಲ ಗ್ರಾಮೀಣ ಭಾಗದದಲ್ಲಿ ಆನ್ ಲೈನ್ ಮತ್ತು ಸಾಮಾಜಿಕ ಜಾಲತಾಣ ಬಳಸಿಕೊಂಡು ವಂಚನೆಗಳು ಈಗ ಹೆಚ್ಚಾಗಿ ನಡೆಯುತ್ತಿದೆ . ಇದಕ್ಕೆ ಜೀವಂತ ನಿದರ್ಶನ ಕಡಬ ತಾಲೂಕಿನ ನೆಲ್ಯಾಡಿಯ ಪ್ರಭ ಎನ್ನುವವರಿಗೆ ಕಳೆದ ಕೆಲವು ದಿನಗಳಿಂದ ಎರಡು ದೂರವಾಣಿ ಸಂಖ್ಯೆಗಳಿಂದ ಕರೆ ಬಂದಿದೆ. ನಿಮಗೆ 15 ಲಕ್ಷರೂಪಾಯಿ ಹಾಗೂ ಕಾರು ಬಹುಮಾನ ಬಂದಿದೆ ಎಂದು ಪದೆ ಪದೆ ಹೇಳುತ್ತಿದ್ದು, ಇದನ್ನು ಪಡೆಯಲು ನಿಗದಿತ ಖಾತೆಗೆ ಗೆ 25,000 ರೂಪಾಯಿ ಕಳುಹಿಸಿ ಎಂದಿದ್ದಾರೆ. ಈ ಸುದ್ದಿಯನ್ನು ನಿರಾಕರಿಸಿದ ಪ್ರಭಾ ಅವರಿಗೆ ಮತ್ತೆ ನಂಬಿಕೆ ಹುಟ್ಟಿಸಲು ಪ್ರಭಾ ಹೆಸರಿನಲ್ಲಿ 14,90,000 ರುಪಾಯಿಯ ಚೆಕ್ ಮತ್ತು ಕಾರಿನ ಮಾದರಿ ಚಿತ್ರವನ್ನು ಕಳುಹಿಸಿಕೊಟ್ಟಿದ್ದಾರೆ. ಪದೇ ಪದೇ ಕರೆ ಬಂದ ಕಾರಣ ಪ್ರಭ ಅವರು ಬಂದಿರುವ ಬಹುಮಾನ ಹಣದಲ್ಲಿಯೇ 25 ಸಾವಿರ ಕಡಿತಗೊಳಿಸಿ ಉಳಿದ ಹಣವನ್ನು ನೀಡುವಂತೆ ಮರು ಉತ್ತರಿಸಿದ್ದಾರೆ. ಕೋಟಕ್ ಮಹೇಂದ್ರ ಬ್ಯಾಂಕ್ ನಲ್ಲಿರುವ ಈ ಚಕ್ ನ್ನು ಪ್ರಭ ಅವರ ಕುಟುಂಬದ ಸದಸ್ಯರೋರ್ವರು ಪರಿಶೀಲನೆ ನಡೆಸಿದ್ದು, ನಕಲಿ ಖಾತೆಯೆಂದು ತಿಳಿದು ಬಂದಿದೆ. ಲಕ್ಷ್ಮಿ ಗ್ರೂಪ್ ಆಫ್ ಕಂಪೆನಿ ಎಂದು ಹೆಸರು ನಮೂದಾಗಿದ್ದು, ಲಕ್ಷ್ಮಿ ನಾರಾಯಣ ಶರ್ಮ ಈ ಕಂಪೆನಿಯ ಮುಖ್ಯಸ್ಥ ಎಂದು ಬರೆಯಲಾಗಿದೆ ಇದೊಂದು ಹೊಸ ರೂಪದ ವಂಚನೆಯಾಗಿರುವುದು ಗೊತ್ತಾಗಿದೆ. ಈ ವಿಚಾರವನ್ನು ಸಾಮಾಜಿಕ ಕಾರ್ಯಕರ್ತ ಪ್ರಕಾಶ್ ಕೋಡಿಂಬಾಳ ಮಾಹಿತಿ ಕಳುಹಿಸಿದ್ದಾರೆ . ಇದು ನೆಲ್ಯಾಡಿ ಮಾತ್ರವಲ್ಲದೆ ಕಡಬ ತಾಲೂಕಿನ ಹಲವು ಕಡೆಗಳಲ್ಲಿನ ನಾಗರೀಕರಿಗೆ ಕರೆ ಬಂದಿದೆ. ಈ ಬಗ್ಗೆ ಸಾರ್ವಜನಿಕರು ಎಚ್ಚರವಹಿಸಿವಂತೆ ನಮ್ಮ ಮನವಿ.
“ನನಗೆ ದಿನಾ ಕರೆ ಮಾಡಿ ಬಹುಮಾನ ಬಂದಿರುವುದರ ಬಗ್ಗೆ ಹೇಳಿದ್ದರು. ಜಮೆ ಮಾಡಲು ಒಪ್ಪದ ಕಾರಣ ವಾಟ್ಸಪ್ ಮೂಲಕ ಚಕ್ ಮತ್ತು ಕಾರಿನ ಮಾದರಿ ಚಿತ್ರವನ್ನು ಕಳುಹಿಸಿಕೊಟ್ಟಿದ್ದಾರೆ. ನಾನು ವಿದ್ಯಾವಂತೆಯಾಗಿದ್ದು ಮೋಸದ ಬಗ್ಗೆ ಎಲ್ಲರಿಗೂ ಅರಿವು ಮೂಡಿಸುತ್ತಿದ್ದೆನೆ”-ಪ್ರಭಾ ವಂಚನೆ ಕರೆ ಸ್ವೀಕರಿಸಿರುವ ಯುವತಿ
ಜಾಗದ ದಾಖಲೆ ಪತ್ರ, ಎಲ್ಲಾ ಗುರುತಿನ ಪುರಾವೆ ಇದ್ದರೂ ನಮ್ಮೂರಿನ ಬ್ಯಾಂಕೂಗಳೇ 10 ಸಾವಿರ ಸಾಲ ಕೊಡುವುದಿಲ್ಲ ಇನ್ನು ಅಪರಿಚಿತ ಸ್ಥಳದಿಂದ 25 ಲಕ್ಷ ಬಹುಮಾನ ಬರುವುದು ಮೋಸವಲ್ಲದೆ ಬೇರೆನೂ ಅಲ್ಲ. ಎಲ್ಲರಿಂದ ಮಾಹಿತಿ ಪಡೆದು ಪೊಲೀಸರಿಗೆ ದೂರು ಕೊಡಲು ತೀರ್ಮಾನಿಸಿದ್ದೆವೆ. ಶಂಕರ ನೆಲ್ಯಾಡಿ ,ಓರ್ವ ನಾಗರೀಕ.
Leave A Reply