• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಕುಮಾರಧಾರಾ ನದಿಯಲ್ಲಿ ಮದ್ಯದ ಬಾಟಲಿ, ಮುಟ್ಟಿನ ಪ್ಯಾಡ್ ಇನ್ನೇನೂ ಇತ್ತೊ!!

Hanumantha Kamath Posted On May 2, 2019
0


0
Shares
  • Share On Facebook
  • Tweet It

ಕುಕ್ಕೆ ಸುಬ್ರಮ್ಮಣ್ಯ ಸ್ವಾಮಿ ದೇವಸ್ಥಾನ ರಾಜ್ಯದ ಮುಜುರಾಯಿ ಇಲಾಖೆಗೆ ಒಳಪಟ್ಟ ಅತ್ಯಂತ ಶ್ರೀಮಂತ ದೇವಸ್ಥಾನಗಳಲ್ಲಿ ಒಂದು. ಅದು ಒಂದು ರೀತಿಯಲ್ಲಿ ರಾಜ್ಯ ಸರಕಾರಕ್ಕೆ ಎಟಿಎಂನಂತೆ ಕಾಣುತ್ತಿದೆಯೇನೋ ಎನ್ನುವಂತಹ ಭಾವನೆ ವ್ಯಕ್ತವಾಗುತ್ತಿದೆ. ಯಾಕೆಂದರೆ ಅಲ್ಲಿ ಹುಂಡಿಗೆ ಬಿದ್ದ ಲಕ್ಷಾಂತರ ರೂಪಾಯಿ ಕಾಣಿಗೆ ಹಣವನ್ನು ಒಟ್ಟು ಮಾಡಿ ತೆಗೆದುಕೊಂಡು ಹೋಗುವುದರಲ್ಲಿ ನಮ್ಮ ರಾಜ್ಯ ಸರಕಾರ ತೋರಿಸುತ್ತಿರುವ ಆಸಕ್ತಿ ಅಲ್ಲಿನ ಮೂಲಭೂತ ಅವಶ್ಯಕತೆಗಳ ವಿಷಯ ಬಂದಾಗ ತೋರಿಸುವುದಿಲ್ಲ ಎನ್ನುವುದು ಬೇಸರದ ಸಂಗತಿ. ಕುಮಾರಧಾರಾ ಸುಬ್ರಹ್ಮಣ್ಯದ ಪಾಲಿಗೆ ಕಸದ ಡಬ್ಬಿ ಆಗಿ ಹೋಗಲು ಮುಖ್ಯ ಕಾರಣ ಅಲ್ಲಿನ ಆಡಳಿತ ಮಂಡಳಿ. ತ್ಯಾಜ್ಯದ ಕೊಂಪೆಯಾಗಿರುವ ಕುಮಾರಧಾರಾವನ್ನು ಸ್ವಚ್ಚ ಮಾಡಿಡಬೇಕಾಗಿದ್ದ ಜವಾಬ್ದಾರಿ ದೇವಸ್ಥಾನದ ಆಡಳಿತ ಮಂಡಳಿಗೆ ಇದೆ. ಅದು ಯುವ ಬ್ರಿಗೇಡಿನ ಕೆಲಸವಲ್ಲ. ಆದರೂ ಚಕ್ರವರ್ತಿ ಸೂಲಿಬೆಲೆಯವರ ನೇತೃತ್ವದಲ್ಲಿ ಅವರ ಸಂಘಟನೆಯ ಯುವಕರು ಅದನ್ನು ಮಾಡಿ ತೋರಿಸಿದ್ದಾರೆ. ಆ ಮೂಲಕ ದೇವಸ್ಥಾನದ ಆಡಳಿತ ಮಂಡಳಿಯ ಮುಖಕ್ಕೆ ಕನ್ನಡಿ ಹಿಡಿದಿದ್ದಾರೆ. ಧಾರ್ಮಿಕ ಕೇಂದ್ರಗಳ ಜವಾಬ್ದಾರಿ ತೆಗೆದುಕೊಳ್ಳುವವರು ರಾಜಕೀಯರಹಿತವಾಗಿ ಇರಬೇಕು. ಆದರೆ ಅನೇಕ ಮುಜುರಾಯಿ ದೇವಸ್ಥಾನಗಳ ಆಡಳಿತ ಮಂಡಳಿಯಲ್ಲಿ ಇರುವವರು ರಾಜ್ಯದ ಮುಖ್ಯಮಂತ್ರಿಯವರನ್ನು, ಮಂತ್ರಿಗಳನ್ನು ಖುಷಿಪಡಿಸುವುದರಲ್ಲಿ ತಮ್ಮ ಸಮಯವನ್ನು ಪೋಲು ಮಾಡುತ್ತಾರೆ. ನಾನು ದೇವಸ್ಥಾನಕ್ಕೆ ಬಂಗಾರ ರಥ ಕೊಡುವುದಕ್ಕೆ ವಿರೋಧ ಅಲ್ಲ. ಆದರೆ ಅದಕ್ಕಿಂತ ಮೊದಲು ಅಲ್ಲಿನ ತ್ಯಾಜ್ಯ ಸಂಸ್ಕರಣ ಘಟಕ ಸಮರ್ಥವಾಗಿ ಕೆಲಸ ನಿರ್ವಹಿಸುವಂತೆ ಮಾಡುವ ಹೊಣೆ ಅಲ್ಲಿನ ಆಡಳಿತ ಮಂಡಳಿಯವರಿಗೆ ಬೇಕು. ಬಂಗಾರದ ರಥ ಆದ ನಂತರ ಒಂದು ವೇಳೆ ಕುಮಾರಸ್ವಾಮಿಯವರೇ ಮುಖ್ಯಮಂತ್ರಿಯಾಗಿ ಇದ್ದರೆ ಅವರು ಬಂದು ದೇವಸ್ಥಾನದ ಅತಿಥಿಗೃಹದಲ್ಲಿ ನಿಂತು ಅಲ್ಲಿಯೇ ಸ್ನಾನ ಮಾಡಿ ಶಾಸ್ತ್ರ ತೀರಿಸಿ ಹೋಗುತ್ತಾರೆ. ಆದರೆ ನಿತ್ಯ ಸಾವಿರಾರು ಭಕ್ತರು ಅಲ್ಲಿ ಬರುತ್ತಾರಲ್ಲ. ಅವರು ಪುಣ್ಯ ತೀರ್ಥವೆಂದು ಸ್ನಾನ ಮಾಡುವುದು ಅದೇ ದರ್ಪಣ ತೀರ್ಥದಲ್ಲಿ. ಅಂತಹ ಭಕ್ತರು ಅತ್ಯಂತ ಗಲೀಜಾಗಿರುವ ನೀರಿನಲ್ಲಿ ಸ್ನಾನ ಮಾಡಿದರೆ ಅದರ ಶಾಪ ಯಾರಿಗೆ ತಟ್ಟುತ್ತದೆ. ಅವರ ಧಾರ್ಮಿಕ ಭಾವನೆಯೊಂದಿಗೆ ಆಟವಾಡಿದ ಪಾಪಕ್ಕೆ ಪ್ರಾಯಶ್ಚಿತ್ತ ಇಲ್ಲ.

ಹಾಗಾದರೆ ಇದನ್ನು ತಡೆಯುವುದು ಹೇಗೆ?

ಮೊತ್ತಮೊದಲನೇಯದಾಗಿ ತಕ್ಷಣ ಸುಬ್ರಹ್ಮಣ್ಯದ ತ್ಯಾಜ್ಯ ಘಟಕ ಸಂಪೂರ್ಣ ರಿಪೇರಿಯಾಗಬೇಕು. ಎರಡನೇಯದ್ದಾಗಿ ಯಾವೆಲ್ಲ ಲಾಡ್ಜ್, ಹೋಟೇಲು, ಅತಿಥಿಗೃಹ, ಛತ್ರದಿಂದ ನೇರ ತ್ಯಾಜ್ಯ ಕುಮಾರಧಾರಾವನ್ನು ಸೇರುತ್ತಿದೆಯಲ್ಲ, ಅದು ಸಂಸ್ಕರಿಸಿದ ನಂತರವೇ ಹೊರಗೆ ಹೋಗಬೇಕು. ಅಂತಹ ಸಂಸ್ಕರಣೆ ಮಾಡಿದ ನೀರನ್ನು ಕುಡಿಯುವುದು, ಸ್ನಾನ ಮಾಡುವುದು ಬಿಟ್ಟು ಬೇರೆದಕ್ಕೆ ಬಳಸಬಹುದು. ಮೂರನೇಯದಾಗಿ ಕುಮಾರಧಾರಾ ನದಿಯಲ್ಲಿ ಸ್ನಾನ ಮಾಡುವ ಭಕ್ತರು ತಮ್ಮ ಉಟ್ಟಬಟ್ಟೆಯನ್ನು ನೀರಿನಲ್ಲಿಯೇ ಬಿಡಬೇಕು ಎನ್ನುವ ಗೊಡ್ಡು ಸಂಪ್ರದಾಯವನ್ನು ಯಾವ ಜ್ಯೋತಿಷಿ ಮೊದಲಿಗೆ ಹೇಳಿದನೋ, ಅದು ಅಸಂಬದ್ಧ ಎಂದು ಜಾಗೃತಿ ಮೂಡಿಸಲು ಅಲ್ಲಲ್ಲಿ ಬೋರ್ಡ್ ಹಾಕಬೇಕು. ಉತ್ತರ ಕರ್ನಾಟಕದಲ್ಲಿ ಬಟ್ಟೆಗಳನ್ನು ನದಿಗೆ ಬಿಸಾಡಿ ಬಂದರೆ ಮನೆಯಲ್ಲಿ ಬೇಗ ಶುಭ ಕಾರ್ಯ ನಡೆಯುತ್ತದೆ ಎನ್ನುವ ಮೂಢನಂಬಿಕೆ ಇದೆ. ಅದು ಕಾಲಕ್ರಮೇಣದಲ್ಲಿ ಉತ್ತರ ಕರ್ನಾಟಕ ಮೂಲದವರಿಂದ ದಕ್ಷಿಣ ಕನ್ನಡ ಜಿಲ್ಲೆಗೆ ದಾಳಿ ಇಟ್ಟಿರಬಹುದು. ಅದು ತಪ್ಪು ಎನ್ನುವ ಜಾಗೃತಿ ಇಲ್ಲಿ ಮೂಡಿಸಬೇಕು. ನಾಲ್ಕನೇಯದಾಗಿ ಯಾವುದೇ ಕಾರಣಕ್ಕೂ ದೇವರ ಫೋಟೋಗಳನ್ನು ನೀರಿಗೆ ಬಿಡಬಾರದು ಎನ್ನುವ ನಿಯಮ ತರಬೇಕು. ಐದನೇಯದಾಗಿ ಯಾವುದೇ ವೃತಧಾರಿಗಳು ತಮ್ಮ ಸರ, ಹಾರಗಳನ್ನು ನೀರಿಗೆ ಬಿಸಾಡಬಾರದು. ಆರನೇಯದಾಗಿ ಸುಬ್ರಹ್ಮಣ್ಯಕ್ಕೆ ಬರುವಾಗ ಚೆಕ್ ಪೋಸ್ಟ್ ಮಾಡಿ ತಿರುಪತಿಯ ಶೈಲಿಯಲ್ಲಿ ಯಾವುದೇ ಮದ್ಯ, ಸಿಗರೇಟು, ತಂಬಾಕು ಪದಾರ್ಥ ಒಳಗೆ ಬರದ ರೀತಿಯಲ್ಲಿ ನೋಡಬೇಕು. ಏಳನೇಯದಾಗಿ ಪ್ಲಾಸ್ಟಿಕ್ ವಸ್ತುಗಳ ಬಳಕೆಯನ್ನು ಸುಬ್ರಹ್ಮಣ್ಯದಲ್ಲಿ ಸಂಪೂರ್ಣ ನಿಲ್ಲಿಸಬೇಕು. ಎಂಟನೇಯದಾಗಿ ಋತುಮತಿಯಾದ ಮಹಿಳೆಯರು ಸುಬ್ರಹ್ಮಣ್ಯಕ್ಕೆ ಪ್ರವಾಸಕ್ಕೆ ಬರಬಾರದು. ಕೊನೆಯ ಪಾಯಿಂಟ್ ನಿಮಗೆ ಆಶ್ಚರ್ಯ ತಂದಿರಬಹುದು.

ಪ್ಯಾಡ್ ನೀರಿಗೆ ಬಿಡಲಾಗುತ್ತಿದೆ…

ಹೌದು. ಕುಮಾರಧಾರಾ ನದಿಯನ್ನು ಸ್ವಚ್ಚಮಾಡಿದ ಸೋದರಿ ನಿವೇದಿತಾ ಪ್ರತಿಷ್ಟಾನದ ಹೆಣ್ಣುಮಗಳೊಬ್ಬಳು ತನ್ನ ಫೇಸ್ ಬುಕ್ ವಾಲ್ ನಲ್ಲಿ ಈ ಬಗ್ಗೆ ಬರೆದಿದ್ದಾರೆ. ತಾವು ನದಿ ಸ್ವಚ್ಚ ಮಾಡುವ ಸೇವೆಯಲ್ಲಿ ಇದ್ದಾಗ ಮಹಿಳೆಯರು ಋತುಚಕ್ರದ ಸಮಯದಲ್ಲಿ ಬಳಸುವ ಪ್ಯಾಡುಗಳು ಕೂಡ ಸಿಕ್ಕಿರುವ ಬಗ್ಗೆ ಬರೆದಿದ್ದಾರೆ. ದೇವಸ್ಥಾನದ ಸೆರಗಿನಲ್ಲಿ ಹಾದು ಹೋಗುವ ನದಿಗಳು ನಮ್ಮ ತ್ಯಾಜ್ಯವನ್ನು ಬಿಸಾಡುವುದಕ್ಕೆ ಎಂದು ನಾವು ಅಂದುಕೊಂಡಿರುವುದರಿಂದ ಇಂತಹ ಘಟನೆಗಳು ನಡೆಯುತ್ತಿವೆ. ಪ್ಯಾಡ್ ಗಳಲ್ಲಿರುವ ಕೆಟ್ಟ ರಕ್ತ ನೀರನ್ನು ಸೇರುವುದರಿಂದ ಆ ನದಿಯಲ್ಲಿ ಮುಳುಗು ಹಾಕುವವರಿಗೆ ಯಾವ ಶುದ್ಧತೆ ಸಿಗುತ್ತದೆ?

0
Shares
  • Share On Facebook
  • Tweet It




Trending Now
ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
Hanumantha Kamath November 1, 2025
ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
Hanumantha Kamath October 31, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
    • ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
    • ಸಿಎಂ ಚರ್ಚೆ- ದಲಿತರನ್ನು ಸಿಎಂ ಮಾಡುವಂತೆ ಒತ್ತಡ ಹಾಕುವ ಕೈ ನಾಯಕರ ಚಿಂತನೆ ಫಲ ಕೊಡುತ್ತಾ?
    • ರಾಜ್ಯ ಸರಕಾರ ತಂದಿದ್ದ "ಅಂಕುಶ"ದ ನಿಯಮ! ಹೈಕೋರ್ಟ್ ತಡೆ.
    • ಭಿಕ್ಷುಕರ ಕಲ್ಯಾಣಕ್ಕೆ ಸೆಸ್ ಆಗಿ ಸಾವಿರಾರು ಕೋಟಿ ಸಂಗ್ರಹ! ಎಲ್ಲಿ ಹೋಯ್ತು ಹಣ!
    • ಮುಸ್ತಫಾಬಾದ್ ಇನ್ನು ಕಬೀರ್ ಧಾಮ್! ಮುಸ್ಲಿಮರೇ ಇಲ್ಲದ ಊರದು!
    • ಕಾಂತಾರಾ ಚಾಪ್ಟರ್ 1 ಒಟಿಟಿಯಲ್ಲಿ ರಿಲೀಸ್! ದಿನ ಫಿಕ್ಸ್!
    • ಜಿಎಸ್ಟಿ ಇಳಿಕೆ ಪರಿಣಾಮ- ದೀಪಾವಳಿಗೆ 6.05 ಲಕ್ಷ ಕೋಟಿ ವಸ್ತು ಮಾರಾಟ!
    • ಪುತ್ತೂರು: ಅಕ್ರಮ ಗೋಸಾಗಾಟ, ಪೊಲೀಸರಿಂದ ಫೈರಿಂಗ್!
    • ದೀಪಾವಳಿ ಬೋನಸ್ ಕಡಿಮೆ ಕೊಟ್ಟಿದ್ದಕ್ಕೆ ಟೋಲ್ ಸಿಬ್ಬಂದಿಗಳು ಮಾಡಿದ್ದೇನು?
  • Popular Posts

    • 1
      ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
    • 2
      ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!

  • Privacy Policy
  • Contact
© Tulunadu Infomedia.

Press enter/return to begin your search