• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಸುಳ್ಳು ಮೊಕದ್ದಮೆ ದಾಖಲಿಸಿದಕ್ಕೆ ರಾಘವೇಂದ್ರರ ವಿರುದ್ಧ ಕಾಶೀ ಮಠದ ಭಕ್ತರಿಂದ ವ್ಯಾಪಕ ಖಂಡನೆ!

Tulunadu News Posted On May 13, 2019
0


0
Shares
  • Share On Facebook
  • Tweet It

rvtn

ಕಾಶೀಮಠದ 21ನೇ ಪೀಠಾಧೀಶರಾದ ಶ್ರಿ ಶ್ರಿ ಸಂಯಮೀಂದ್ರ ತೀರ್ಥ ಸ್ವಾಮೀಜಿ ಮೇಲೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಕ್ರೆö.ನಂ-61/2019 ಎಂಬ ಸುಳ್ಳು ಆರೋಪದಿಂದ ಕೂಡಿದ ದೂರು ದಾಖಲಾಗಿದ್ದ ವಿಚಾರ ಶ್ರಿ ಮಠದ ಗಮನಕ್ಕೆ ಬಂದಿರುತ್ತದೆ. ಇದು ಸ್ವಾಮೀಜಿಯವರ ಘನತೆಗೆ ಚ್ಯುತಿ ತರುವುದು ಮತ್ತು ಅವಮಾನ ಮಾಡುವ ದುರುದ್ಧೆÃಶದಿಂದ ದಾಖಲಾದ ಈ ಪ್ರಕರಣವನ್ನು ಶ್ರಿÃ ಮಠ ಹಾಗೂ ಭಕ್ತ ಸಮೂಹವು ತೀಕ್ಷಣವಾಗಿ ಖಂಡಿಸುತ್ತದೆ ಮತ್ತು ಈ ಬಗ್ಗೆ ಎಲ್ಲಾ ರೀತಿಯ ಹೋರಾಟವನ್ನು ನಡೆಸಲು ತೀರ್ಮಾನಿಸಿದೆ. ಶ್ರಿ ಮಠ ಹಾಗೂ ಶ್ರಿ ಸಂಯಮೀಂದ್ರ ಸ್ವಾಮೀಜಿಯವರ ವಿರುದ್ಧ ನಡೆಸುತ್ತಿರುವ ಈ ಷಡ್ಯಂತ್ರದ ಬಗ್ಗೆ ಯಾರೂ ಕೂಡ ಯಾವುದೇ ಗೊಂದಲಕ್ಕಿಡಾಗಬೇಕಾಗಿಲ್ಲ ಮತ್ತು ಈ ಬಗ್ಗೆ ಎಲ್ಲ ರೀತಿಯ ಪೂರಕ ದಾಖಲೆಗಳನ್ನು ಈಗಾಗಲೇ ಸಂಬಂಧಪಟ್ಟ ಇಲಾಖೆಗಳಿಗೆ ಸಲ್ಲಿಸಲಾಗಿದೆ.

1994ರಲ್ಲಿ ೨೦ನೇ ಕಾಶೀ ಮಠಾಧೀಶರಾಗಿದ್ದ ಶ್ರಿಮದ್ ಸುಧೀಂದ್ರ ತೀರ್ಥರು ಈ ಪ್ರಕರಣದ ದೂರುದಾರ ರಾಘವೇಂದ್ರ ಅವರಿಗೆ ಕೆಲವು ಅಧಿಕಾರ ಮತ್ತು ಕರ್ತವ್ಯ ಹಾಗೂ ಜವಾಬ್ದಾರಿಗಳನ್ನು ವಹಿಸಿದ್ದರು. ಅದನ್ನು ಅಸಮರ್ಪಕವಾಗಿ ನಿರ್ವಹಿಸುವುದರೊಂದಿಗೆ ಶ್ರಿ ಮಠದ ಹಣವನ್ನು ದುರುಪಯೋಗಪಡಿಸಿಕೊಂಡ ಕರ್ತವ್ಯಲೋಪ ಬೇಜವಾಬ್ದಾರಿತನ ಹಾಗೂ ಅಧಿಕಾರದ ದುರುಪಯೋಗ ಕಂಡು ಬಂದ ಕಾರಣ ಅವರನ್ನು ಜವಾಬ್ದಾರಿ ಕರ್ತವ್ಯದಿಂದ ವಜಾಗೊಳಿಸಿ 1999ರಲ್ಲಿ ಸಂಪೂರ್ಣವಾಗಿ ಶ್ರಿಮಠದಿಂದ ಬಿಡುಗಡೆಗೊಳಿಸಲಾಯಿತು. ಈ ಕ್ರಮವನ್ನು ಪ್ರಶ್ನಿಸಿ ತಿರುಪತಿ ಸಿವಿಲ್ ಕೋರ್ಟ್ ಮೊರೆ ಹೋಗಿದ್ದ ರಾಘವೇಂದ್ರ ಅವರ ದಾವೆಯನ್ನು ಕೋರ್ಟ್ ವಜಾಗೊಳಿಸಿದಲ್ಲದೆ, ಹಿರಿಯ ಸ್ವಾಮಿಗಳಾದ ಶ್ರೀ ಸುಧೀಂದ್ರ ಸ್ವಾಮೀಜಿಯವರ ವಾದವನ್ನು ಪುರಸ್ಕರಿಸಿ ರಾಘವೇಂದ್ರ ಅವರ ವಿರುದ್ಧ ಪ್ರತಿಬಂಧಕ ಆಜ್ಞೆಯನ್ನು ಹೊರಡಿಸಿತು, ಮತ್ತು ಈ ಸಂಬಂಧ ರಾಘವೇಂದ್ರ ರವರು ಶ್ರೀ ಸುಧೀಂದ್ರ ಸ್ವಾಮೀಜಿಯವರು ಸಲ್ಲಿಸಿದ ಎಕ್ಸಿ ಕ್ಯೂಷನ್ ಅರ್ಜಿಯನ್ನು ವಿನಾಕಾರಣ ವಿಳಂಬ ಮಾಡುತ್ತಾ ಮುಂದೂಡುತ್ತಿದ್ದಾರೆ ತಾನು ಕಾರ್ಯ ನಿರ್ವಹಿಸುತ್ತಿದ್ದ ಸಮಯದಲ್ಲಿ ಶ್ರಿ ಕಾಶೀ ಮಠಕ್ಕೆ ಸೇರಿದ 10 ಲಕ್ಷ ರೂ. ಠೇವಣಿಯನ್ನು ಕರ್ನಾಟಕ ಬ್ಯಾಂಕ್ ಸುರತ್ಕಲ್ ಶಾಖೆಯಲ್ಲಿ ದಿನಾಂಕ 10-2- 1999ರಲ್ಲಿ ಠೇವಣಿ ಇಟ್ಟಿದ್ದು, ಈ ಮೊತ್ತವನ್ನು ಕಾನೂನುಬಾಹಿರವಾಗಿ ತಮ್ಮ ಸ್ವಂತ ಹೆಸರಿನಲ್ಲಿ ಠೇವಣಿ ಇಟ್ಟ ಸಂದರ್ಭದಲ್ಲಿ ಆದಾಯ ಇಲಾಖೆ ದೂರುದಾರರಿಗೆ ನೋಟಿಸ್ ಜ್ಯಾರಿ ಮಾಡಿ ಠೇವಣಿ ಜಪ್ತಿ ಮಾಡಿತ್ತು. ಆದಾಯದ ಮೂಲವನ್ನು ಪ್ರಶ್ನೆ ಮಾಡಿದ ಪ್ರಕಾರ ಈ ಸಂದರ್ಭದಲ್ಲಿ ಮಠದ ಲೆಕ್ಕ ಪರಿಶೋಧಕರು ಆಕ್ಷೆಪಪಡಿಸಿದ್ದು ಸ್ವತಃ ದೂರುದಾರರಾದ ರಾಘವೇಂದ್ರ ಇವರೇ ಇದು ಕಾಶೀ ಮಠದ ಹಣವೆಂದು ಮತ್ತು ಕಾಶೀಮಠದ ಬ್ಯಾಲೆನ್ಸ್ಶೀಟ್‌ನಲ್ಲಿ ನಮೂದು ಆಗಿರುವುದೆಂದು ಆದಾಯ ಇಲಾಖೆಗೆ ಹೇಳಿಕೆ ನೀಡಿ ಸ್ಪಷ್ಟಿಕರಣ ಕೂಡ ಕೊಟ್ಟಿರುತ್ತಾರೆ. ಈ ಎಲ್ಲಾ ಅಂಶಗಳನ್ನು ವಿವಿಧ ಹಂತಗಳಲ್ಲಿ ಪರಿಶೀಲಿಸಿ, ಕಾನೂನು ಸಲಹೆ ಪಡೆದು ಇತ್ತಿಚೆಗೆ ಕರ್ನಾಟಕ ಬ್ಯಾಂಕ್ ಅಧಿಕಾರಿಗಳು ನವೀಕರಣಗೊಳಿಸಿರುವುದು ವಾಸ್ತವಿಕ ಸಂಗತಿ.

ದೂರುದಾರ ರಾಘವೇಂದ್ರ ಇವರು ತಾನು ಕಾಶೀಮಠದ ಉತ್ತರಾಧಿಕಾರಿ ಎಂಬಂತೆ ಬಿಂಬಿಸಿಕೊಂಡು ನಕಲಿ ಟ್ರಸ್ಟ್ ಒಂದನ್ನು ಸ್ಥಾಪಿಸಿಕೊಂಡು ಕಾಶೀಮಠದ ಹೆಸರು ಲಾಂಛನ ಹಾಗೂ ಆಸ್ತಿ-ಪಾಸ್ತಿಗಳನ್ನು ದುರುಪಯೋಗಪಡಿಸುವ ಪ್ರಯತ್ನ ಶ್ರಿÃ ಮಠದ ಗಮನಕ್ಕೆ ಬಂದಿದ್ದು ಬೆಂಗಳೂರು ಸಿಟಿ ಸಿವಿಲ್ ಕೋರ್ಟ್ನಲ್ಲಿ ಇದನ್ನು ಪ್ರಶ್ನಿಸಿ ದಾವೆ ದಾಖಲಿಸಿ ರಾಘವೇಂದ್ರ ಅವರ ವಿರುದ್ಧ ಪ್ರತಿಬಂಧಕ ಆಜ್ಞೆಯನ್ನು ಪಡೆಯಲಾಗಿದೆ. ಸದರಿ ಆದೇಶ ಪ್ರಕಾರ ರಾಘವೇಂದ್ರರವರು ಕಾಶೀ ಮಠದ ಆಡಳಿತ ವಹಿವಾಟು ವ್ಯವಹಾರ, ಸ್ಥಿರ ಚರ ಆಸ್ತಿಗಳ ವಿಚಾರದಲ್ಲಿ ಯಾವುದೇ ರೀತಿಯ ಹಸ್ತಕ್ಷೆÃಪ ನಡೆಸದಂತೆ ಹಾಗೂ ಕಾಶೀಮಠದ ಲಾಂಛನ, ಪರಂಪರೆ, ಹೆಸರು ಹಿಂದಿನ ಯತಿಗಳ ಭಾವಚಿತ್ರವನ್ನು ಬಳಸದಂತೆ ಪ್ರತಿಬಂಧಕ ಆದೇಶ ಆಗಿರುತ್ತದೆ. ಪ್ರಸ್ತುತ ದಾಖಲು ಮಾಡಿರುವ ದೂರು ನ್ಯಾಯಾಲಯದ ಉಲ್ಲಂಘನೆ ಮತ್ತು ಸತ್ಯವನ್ನು ಮರೆಮಾಚಿ ಪೋಲಿಸರಿಗೆ ಸುಳ್ಳು ಮಾಹಿತಿ ನೀಡಿರುವುದಾಗಿರುತ್ತದೆ. ಇದೇ ರೀತಿ ನಾನಾ ಕಡೆಗಳಲ್ಲಿ ತಾನು ಕಾಶೀಮಠದ ಮಠಾಧೀಶ ಎಂದು ನ್ಯಾಯಾಲಯದ ಆದೇಶಕ್ಕೆ ವ್ಯತಿರಿಕ್ತವಾಗಿ ನಡೆದುಕೊಂಡು ದೂರು ಅರ್ಜಿ ಸಲ್ಲಿಸುತ್ತಿರುವುದು ಅತ್ಯಂತ ಖಂಡನೀಯ. ಮತ್ತು ಈ ರೀತಿಯ ಯಾವುದೇ ದುಸ್ಸಾಹಸಗಳಿಗೆ ಸಮಾಜ ಯಾವುದೇ ರೀತಿಯಲ್ಲೂ ಬೆಲೆ ಕೊಡಬಾರದು. ಈ ಬಗ್ಗೆ ಕಾನೂನು ತಜ್ಞರ ಜೊತೆ ಸಮಾಲೋಚನೆ ನಡೆಸಿ ಮುಂದಿನ ಕಾನೂನು ರೀತಿಯ ಹೋರಾಟ ಕೈಗೊಳ್ಳಲಾಗಿರುವುದು ಎಂದು ಜಿ.ಎಸ್.ಬಿ. ಟೆಂಪಲ್ ಅಸೋಸಿಯೇಶನ್ ಅಧ್ಯಕ್ಷರು, ಲೆಕ್ಕಪರಿಶೋಧಕರಾದ ಶ್ರಿ ಜಗನ್ನಾಥ್ ಕಾಮತ್ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುತ್ತಾರೆ.

0
Shares
  • Share On Facebook
  • Tweet It




Trending Now
ಜಾಂಡಿಸ್ ಬಂದ ಮಗುವಿಗೆ ಆಧುನಿಕ ಚಿಕಿತ್ಸೆ ನೀಡಲು ಹೆತ್ತವರ ನಕಾರ: ಪ್ರಾಣ ಬಿಟ್ಟ ಒಂದು ವರ್ಷದ ಹಸುಳೆ!
Tulunadu News July 1, 2025
ಜನರು ರಸ್ತೆಬದಿ ಕಸ ಹಾಕುವುದನ್ನು ತಡೆಯಲು ಭಾರತ ಮಾತೆ, ದೇವರ ಫೋಟೋ! ಪುನೀತ್ ಕೆರೆಹಳ್ಳಿ ಆಕ್ರೋಶ!
Tulunadu News July 1, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಜಾಂಡಿಸ್ ಬಂದ ಮಗುವಿಗೆ ಆಧುನಿಕ ಚಿಕಿತ್ಸೆ ನೀಡಲು ಹೆತ್ತವರ ನಕಾರ: ಪ್ರಾಣ ಬಿಟ್ಟ ಒಂದು ವರ್ಷದ ಹಸುಳೆ!
    • ಜನರು ರಸ್ತೆಬದಿ ಕಸ ಹಾಕುವುದನ್ನು ತಡೆಯಲು ಭಾರತ ಮಾತೆ, ದೇವರ ಫೋಟೋ! ಪುನೀತ್ ಕೆರೆಹಳ್ಳಿ ಆಕ್ರೋಶ!
    • ಉಡುಪಿ: ದನದ ಕಳೇಬರ ಪತ್ತೆ ಪ್ರಕರಣ: ಆರು ಮಂದಿಯನ್ನು ಬಂಧಿಸಿದ ಉಡುಪಿ ಪೊಲೀಸರು
    • ಫೈರ್ ಬ್ರಾಂಡ್ ನಾಯಕ, ಶಾಸಕ ಬಿಜೆಪಿಗೆ ರಾಜೀನಾಮೆ!
    • ಹೃದಯಾಘಾತ ಫೈನ್ ಅಂಡ್ ಫಿಟ್ ಇದ್ದ ತರುಣ, ತರುಣಿಯರಿಗೂ ಬರುತ್ತಿದೆ, ಹೇಗೆ?
    • ಸಂವಿಧಾನದಿಂದ "ಜಾತ್ಯಾತೀತತೆ" ಮತ್ತು "ಸಮಾಜವಾದ" ಶಬ್ದಗಳನ್ನು ತೆಗೆಯುವ ಬಗ್ಗೆ ಚರ್ಚೆ ನಡೆಯಲಿ - ಆರ್ ಎಸ್ ಎಸ್
    • PFI ಟಾರ್ಗೆಟ್- 950 ಜನರ ಹಿಟ್ ಲಿಸ್ಟ್ ರೆಡಿ! NIA ಕೋರ್ಟ್ ನಲ್ಲಿ ವಕೀಲರಿಂದ ಮಾಹಿತಿ...
    • ಎಮರ್ಜೆನ್ಸಿ ದಿನಗಳಲ್ಲಿ ಮೋದಿಯವರ ಅನುಭವ ಕಥನ "ದಿ ಎಮರ್ಜೆನ್ಸಿ ಡೈರಿಸ್"!
    • ಬಾಹ್ಯಕಾಶಕ್ಕೆ ಜಿಗಿಯುವ ಮೊದಲು ಪತ್ನಿಗೆ ಭಾವನಾತ್ಮಕ ಸಂದೇಶ: "ನೀನಿಲ್ಲದೆ..... " ಶುಭಾಂಶು ಹೇಳಿದ್ದೇನು?
    • ಪಹಲ್ಗಾಮ್ ಉಗ್ರರಿಗೆ ಆಹಾರ, ಆಶ್ರಯ: ಸ್ಥಳೀಯರಿಬ್ಬರ ಬಂಧನ!
  • Popular Posts

    • 1
      ಜಾಂಡಿಸ್ ಬಂದ ಮಗುವಿಗೆ ಆಧುನಿಕ ಚಿಕಿತ್ಸೆ ನೀಡಲು ಹೆತ್ತವರ ನಕಾರ: ಪ್ರಾಣ ಬಿಟ್ಟ ಒಂದು ವರ್ಷದ ಹಸುಳೆ!
    • 2
      ಜನರು ರಸ್ತೆಬದಿ ಕಸ ಹಾಕುವುದನ್ನು ತಡೆಯಲು ಭಾರತ ಮಾತೆ, ದೇವರ ಫೋಟೋ! ಪುನೀತ್ ಕೆರೆಹಳ್ಳಿ ಆಕ್ರೋಶ!
    • 3
      ಉಡುಪಿ: ದನದ ಕಳೇಬರ ಪತ್ತೆ ಪ್ರಕರಣ: ಆರು ಮಂದಿಯನ್ನು ಬಂಧಿಸಿದ ಉಡುಪಿ ಪೊಲೀಸರು
    • 4
      ಫೈರ್ ಬ್ರಾಂಡ್ ನಾಯಕ, ಶಾಸಕ ಬಿಜೆಪಿಗೆ ರಾಜೀನಾಮೆ!
    • 5
      ಹೃದಯಾಘಾತ ಫೈನ್ ಅಂಡ್ ಫಿಟ್ ಇದ್ದ ತರುಣ, ತರುಣಿಯರಿಗೂ ಬರುತ್ತಿದೆ, ಹೇಗೆ?

  • Privacy Policy
  • Contact
© Tulunadu Infomedia.

Press enter/return to begin your search