ಮುಗ್ರೋಡಿಯಲ್ಲಿ ಜೀರ್ಣಾವಸ್ಥೆಯಲ್ಲಿರುವ ಮನೆ ವೀಕ್ಷಿಸಿದ ಶಾಸಕ ಕಾಮತ್
ಮಂಗಳೂರು ಮಹಾನಗರ ಪಾಲಿಕೆಯ ಪದವು ಶಕ್ತಿನಗರ ವಾರ್ಡ್ ನಿವಾಸಿ ಶಾಂಭವಿಯವರ ಮನೆ ಜೀರ್ಣಾವಸ್ಥೆಯಲ್ಲಿ ಇದ್ದು ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಭೇಟಿ ನೀಡಿ ಪರಿಶೀಲಿಸಿದರು.
ಮುಗ್ರೋಡಿ ನಿವಾಸಿಯಾಗಿರುವ ಮದರ ಎಂಬುವವರ ಮಗಳು ಶಾಂಭವಿ ತಮ್ಮ ಸಹೋದರಿಯೊಂದಿಗೆ ವಾಸವಾಗಿರುವ ಮನೆ ಕುಸಿದು ಬೀಳುವ ಹಂತದಲ್ಲಿದ್ದು ಆ ಕುಟುಂಬ ಸಂಕಷ್ಟದಲ್ಲಿದೆ ಎಂದು ಇತ್ತೀಚೆಗೆ ಮಾಧ್ಯಮಗಳು ವರದಿ ಮಾಡಿದ್ದವು. ಅದು ಶಾಸಕರ ಗಮನಕ್ಕೆ ಬಂದ ಕೂಡಲೇ ಅಲ್ಲಿಗೆ ಭೇಟಿ ನೀಡಿದ ಶಾಸಕ ಕಾಮತ್ ಮನೆಯನ್ನು ವೀಕ್ಷಿಸಿದ್ದಾರೆ. ಆ ನಂತರ ಮಾತನಾಡಿದ ಶಾಸಕರು ಮನೆ ಸಂಪೂರ್ಣ ಕುಸಿಯುವ ಹಂತದಲ್ಲಿದ್ದು ಇಬ್ಬರು ಹೆಣ್ಣುಮಕ್ಕಳು ಸಂಕಷ್ಟದಲ್ಲಿ ದಿನದೂಡುತ್ತಿದ್ದಾರೆ.
ಈ ಮನೆಯನ್ನು ಸರಿ ಮಾಡಬೇಕಾದ ಅವಶ್ಯಕತೆ ಇದ್ದು ಮನೆಯಿರುವ ಜಾಗದ ದಾಖಲೆಗಳು ಸರಿಯಾದ ಕೂಡಲೇ ಇದೇ ಜಾಗದಲ್ಲಿ ಮನೆಯನ್ನು ನೂತನವಾಗಿ ನಿರ್ಮಿಸುವ ಪ್ರಯತ್ನ ಮಾಡಲಾಗುವುದು. ಅದಕ್ಕೆ ಕೇಂದ್ರ ಸರಕಾರದ ಅಟಲ್ ಆವಾಸ್ ಯೋಜನೆ ಅನುದಾನ ಮತ್ತು ರಾಜ್ಯ ಮತ್ತು ಪಾಲಿಕೆಯ ಸಹಕಾರದೊಂದಿಗೆ ಮತ್ತು ಸ್ಥಳೀಯ ಬಿಜೆಪಿ ಮುಖಂಡರ, ಕಾರ್ಯಕರ್ತರು ಕೂಡ ಕೈಜೋಡಿಸಲಿದ್ದಾರೆ ಎಂದು ತಿಳಿಸಿದರು. ಶಾಂಭವಿ ಕುಟುಂಬದ ಕಣ್ಣೀರನ್ನು ಒರೆಸುವ ಕೆಲಸವನ್ನು ಮಾಧ್ಯಮಗಳು ಮಾಡಿದ್ದು ಸಮಾಜಮುಖಿ ಚಿಂತನೆಗಳ ವರದಿಗಾರಿಕೆಯಿಂದ ಜನಪ್ರತಿನಿಧಿಗಳ ಕಣ್ಣು ತೆರೆಯುತ್ತದೆ. ನಾವು ಅಭಿವೃದ್ಧಿ ಕಾರ್ಯಗಳನ್ನು ಮಾಡುವಾಗ ಮಾಧ್ಯಮಗಳು ನಮಗೆ ದಾರಿದೀಪವಾಗುತ್ತದೆ ಎಂದು ತಿಳಿಸಿದರು. ಶಾಸಕರೊಂದಿಗೆ ಮಾಜಿ ಉಪಮೇಯರ್ ಶಕಿಲಾಕಾವ, ಬಿಜೆಪಿ ಮುಖಂಡರಾದ ಪ್ರಸಾದ್, ರವಿಚಂದ್ರ, ಅಶೋಕ್ ನಾಯಕ್, ಗೋಪಾಲ್, ಪದ್ಮನಾಭ ಮತ್ತಿತ್ತರರು ಉಪಸ್ಥಿತರಿದ್ದರು .
Leave A Reply