• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಗೋಡ್ಸೆಯ ವಿಷಯದಲ್ಲಿ ನಿಜವಾಗಿ ಚರ್ಚೆಯಾಗಬೇಕಾದದ್ದು ಆಗಿಯೇ ಇಲ್ಲ!!

Tulunadu News Posted On May 21, 2019
0


0
Shares
  • Share On Facebook
  • Tweet It

ನಾನು ಪ್ರಾರಂಭದಲ್ಲಿಯೇ ಒಂದು ವಿಷಯ ಸ್ಪಷ್ಟಪಡಿಸುತ್ತೇನೆ. ನಾನು ಹತ್ಯೆಗಳನ್ನು ಬೆಂಬಲಿಸುವುದಿಲ್ಲ. ಭಯೋತ್ಪಾದಕರನ್ನು, ದೇಶದ್ರೋಹಿಗಳನ್ನು ಬಿಟ್ಟು ಬೇರೆ ಯಾವುದೇ ಹತ್ಯೆಗಳನ್ನು ಖಂಡಿತವಾಗಿಯೂ ತಪ್ಪು ಎನ್ನುವವ ನಾನು. ಹಾಗಂತ ಹತ್ಯೆ ಮಾಡಿದವರಿಗೆ ಅದಕ್ಕೆ ಅವರದ್ದೇ ಕಾರಣಗಳಿರಬಹುದು. ಅದನ್ನು ಅವರು ಸಮರ್ಥಿಸಲೂಬಹುದು. ಹಾಗಂತ ಪ್ರತಿ ಹಂತಕರ ನಿಲುವನ್ನು ಒಪ್ಪಿಕೊಳ್ಳುತ್ತಾ ಹೋದರೆ ಪ್ರಜಾಪ್ರಭುತ್ವಕ್ಕೆ ಅರ್ಥ ಉಳಿಯುವುದಿಲ್ಲ. ನಾಥೂರಾಂ ಗೋಡ್ಸೆಯ ವಿಚಾರದಲ್ಲಿಯೂ ಅಷ್ಟೇ ಆಗಬೇಕಿದೆ. ತಾನು ಗಾಂಧೀಜಿಯನ್ನು ಯಾಕೆ ಕೊಂದೆ ಎನ್ನುವುದನ್ನೇ ಗೋಡ್ಸೆ ವಿವರಿಸುತ್ತಾ ಹೋಗುತ್ತಾರೆ. ಅಲ್ಲಿ ಸಮರ್ಥನೆಗಳಿವೆ. ಗಾಂಧಿಯವರು ಮುಸ್ಲಿಮರನ್ನು ಸಿಕ್ಕಾಪಟ್ಟೆ ಪ್ರೀತಿಸುತ್ತಿದ್ದರು. ಪಾಕಿಸ್ತಾನದ ವಿಭಜನೆಗೆ ಜಿನ್ನಾರೊಂದಿಗೆ ಕೈಜೋಡಿಸಿದ್ದರು. ಅದರಿಂದ ಅಖಂಡ ಭಾರತ ತುಂಡಾಯಿತು ಎಂದು ನಾಥೂರಾಂ ಬರೆಯುತ್ತಾ ಹೋಗುತ್ತಾರೆ. ಇತಿಹಾಸಕಾರರು ಬರೆದಿರುವುದನ್ನು ನೋಡಿದರೆ ಗೋಡ್ಸೆ ಗಾಂಧಿಜಿಯವರನ್ನು ಕೊಲ್ಲುವ ತಮ್ಮ ಕಾರ್ಯದಲ್ಲಿ ಯಶಸ್ವಿಯಾಗುವುದಕ್ಕಿಂತ ಮೊದಲೇ ಒಂದು ಬಾರಿ ಗಾಂಧೀ ಹತ್ಯೆಗೆ ವಿಫಲ ಯತ್ನ ಮಾಡಿದ್ದರು.

ಗಾಂಧಿಯವರ ಹತ್ಯೆಗೆ ಸಂಚು…

ಒಂದು ದಿನ ತುಂಬಾ ಟೆನ್ಷನ್ ನಲ್ಲಿದ್ದ ಗೋಡ್ಸೆ ಬಳಿ ದೊಡ್ಡ ನಾಯಕರೊಬ್ಬರು ಬಂದು ಗಾಂಧಿಜಿಯವರನ್ನು ಕೊಲ್ಲಲು ಸುಫಾರಿ ಕೊಟ್ಟಿದ್ದರು ಎಂದೇ ಹೇಳುವವರಿದ್ದಾರೆ. ಆ ವ್ಯಕ್ತಿ ಯಾರೆಂದು ಸರ್ದಾರ್ ವಲ್ಲಭಬಾಯ್ ಪಟೇಲ್ ಅವರಿಗೆ ಗೊತ್ತಿತ್ತು. ಆ ವ್ಯಕ್ತಿಯ ಹೆಸರನ್ನು ನ್ಯಾಯಾಲಯದಲ್ಲಿ ಹೇಳಿ ಬಿಡು, ಶಿಕ್ಷೆಯ ಪ್ರಮಾಣ ಕಡಿಮೆಯಾಗಬಹುದು ಎಂದು ಪಟೇಲ್ ಗೋಡ್ಸೆಗೆ ಹೇಳಿದ್ದರು. ಆದರೆ ಗೋಡ್ಸೆ ನೇಣುಗಂಬಕ್ಕೆ ಏರಿ ಕೊನೆಯ ಉಸಿರನ್ನು ಎಳೆದುಕೊಳ್ಳುವ ತನಕ ಆ ವ್ಯಕ್ತಿಯ ಹೆಸರನ್ನು ಹೇಳಲೇ ಇಲ್ಲ. ಒಂದು ವೇಳೆ ಆ ವ್ಯಕ್ತಿಯ ಹೆಸರು ಹೊರಗೆ ಬಂದಿದ್ದರೆ ಏನಾಗುತ್ತಿತ್ತು ಎನ್ನುವುದು ಆಗಿನ ತಲೆಮಾರಿಗೆ ಗೊತ್ತಿದೆ. ಆ ಬಗ್ಗೆ ತನಿಖೆಯಾಗಬೇಕು. ಅದನ್ನು ನಮ್ಮ ಸಂಸದರುಗಳು ಒತ್ತಾಯಿಸಬೇಕು. ಅದನ್ನು ಬಿಟ್ಟು ಇಂದಿರಾಗಾಂಧಿಯವರ ಹತ್ಯೆಯಾದಾಗ ಸಾವಿರಾರು ಸಿಖ್ಖರ ಹತ್ಯೆಯಾಯಿತು, ಕಸಬ್ ನಿಂದ ನೂರಾರು ಅಮಾಯಕರ ಹತ್ಯೆಯಾಯಿತು ಎಂದು ಬರೆದು ಗೋಡ್ಸೆಯಿಂದ ಆದದ್ದು ಒಬ್ಬರದ್ದೇ ಹತ್ಯೆ ಎಂದು ಬರೆದು ಬಿಟ್ಟರೆ ಅಂಕಿ ಅಂಶ ಕೊಡಬಹುದೇ ವಿನ: ಇತಿಹಾಸವನ್ನು ಕೆದಕಿದಂತೆ ಆಗುವುದಿಲ್ಲ. ಸದ್ಯಕ್ಕೆ ಆಗಬೇಕಿರುವುದು ಇತಿಹಾಸದ ಆಳದ ಪರಿಚಯ. ರಾಜೀವ್ ಗಾಂಧಿ ತಮ್ಮ ಕುಟುಂಬದ ಜೊತೆ ಭಾರತದ ಯುದ್ಧನೌಕೆಯನ್ನು ರಜಾದಿನಗಳಲ್ಲಿ ಮೋಜು ಮಾಡಲು ಬಳಸಿದ್ದರು ಎಂದು ಸಂಶೋಧನೆ ನಡೆದು ಫೋಟೋ ಹೊರಗೆ ಬಂದಂತೆ ಮಹಾತ್ಮ ಗಾಂಧಿಯವರ ಹತ್ಯೆಯ ಹಿಂದೆ ಗೋಡ್ಸೆಯೊಂದಿಗೆ ಭಾರತದ ಆಗಿನ ಅತ್ಯಂತ ಪ್ರಭಾವಿ ವ್ಯಕ್ತಿಯೊಬ್ಬರು ನಿಂತಿದ್ದರು, ಅವರು ಗೋಡ್ಸೆಯನ್ನು ಬಳಸಿದ್ದಾರಾ ಎನ್ನುವ ಬಗ್ಗೆ ಚರ್ಚೆಯಾಗಬೇಕು.

ಆಲದ ಮರ ಬಿದ್ದಾಗ..

ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಗುಣಾತ್ಮಕ ಮತ್ತು ಋಣಾತ್ಮಕ ಅಂಶಗಳು ಎರಡೂ ಇರುತ್ತವೆ. ಕೇವಲ ಪ್ಲಸ್ ಮಾತ್ರ ಇದ್ದರೆ ಆತ ದೇವರು ಆಗುತ್ತಾನೆ. ಅದರಂತೆ ಮೋಹನದಾಸ ಕರಮಚಂದ್ರ ಗಾಂಧಿಯವರಲ್ಲಿಯೂ ಗುಣಾತ್ಮಕ ಮತ್ತು ಋಣಾತ್ಮಕ ಅಂಶಗಳು ಎರಡೂ ಇದ್ದವು. ಗೋಹತ್ಯಾ ನಿಷೇಧವನ್ನು ಗಾಂಧಿ ಪ್ರತಿಪಾದಿಸಿದ್ದರು. ರಾಮನನ್ನು ಮರ್ಯಾದಾ ಪುರುಷೋತ್ತಮ ಎಂದು ಕೊಂಡಾಡುತ್ತಿದ್ದರು. ಅದನ್ನು ಕಾಂಗ್ರೆಸ್ಸಿನವರು ಯಾಕೆ ತಮ್ಮ ಸಿದ್ಧಾಂತದಲ್ಲಿ ಅಳವಡಿಸಿಲ್ಲ. ಗೋವಿನ ಹತ್ಯೆಯನ್ನು ಕಾಂಗ್ರೆಸ್ ಯಾಕೆ ವಿರೋಧಿಸಲ್ಲ. ಶ್ರೀರಾಮಚಂದ್ರ ದೇವರಿಗೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಯಾಕೆ ಬಿಜೆಪಿಯೊಂದಿಗೆ ಕೈ ಜೋಡಿಸಲ್ಲ. ಅದು ಕೂಡ ಚರ್ಚೆಯಾಗಬೇಕು. ಅದನ್ನು ಮಾತನಾಡದ ಕಾಂಗ್ರೆಸ್ಸಿಗರು ಸಂಸದರಾದ ಅನಂತ ಕುಮಾರ್ ಹೆಗ್ಡೆ, ನಳಿನ್ ಕುಮಾರ್ ಕಟೀಲು ಅವರು ಟ್ವಿಟ್ ಮಾಡಿದ್ದ ವಿಷಯವನ್ನು ದೊಡ್ಡದು ಮಾಡಿ ಪ್ರತಿಭಟನೆ ಮಾಡಿದೆ. ಗಾಂಧೀಜಿಯವರನ್ನು ಸ್ವಾತಂತ್ರ್ಯದ ಪಿತಾಮಹಾ ಎಂದು ಕರೆಯಲಾಗುತ್ತದೆ. ಅದಕ್ಕೆ ನನ್ನ ಆಕ್ಷೇಪವಿಲ್ಲ. ಹಾಗಂತ ದೇಶಕ್ಕೆ ಸ್ವಾತಂತ್ರ್ಯ ಬರಲು ಸಾವಿರಾರು ಜನ ಮಹಾತ್ಮಾ ಗಾಂಧಿಯವರಂತೆ ಕೆಲಸ ಮಾಡಿದ್ದಾರೆ. ಅವರ್ಯಾರು ಮಹಾತ್ಮ, ಪಿತಾಮಹಾ ಆಗಿಲ್ಲ. ಇಂದಿರಾ ಗಾಂಧಿಯವರ ಹತ್ಯೆಯನ್ನು ಇಬ್ಬರು ಸಿಖ್ ಭದ್ರತಾ ಯೋಧರು ಮಾಡಿದಾಗ ಅದಕ್ಕೆ ಪ್ರತಿಯಾಗಿ ಸಾವಿರಾರು ಸಿಖ್ಖರ ಹತ್ಯೆಯಾಯಿತು. ಆಗ ರಾಜೀವ್ ಗಾಂಧಿ ಹೇಳಿದ್ದು “ದೊಡ್ಡ ಆಲದ ಮರ ಬಿದ್ದಾಗ ಭೂಮಿ ಒಂದಿಷ್ಟು ಅದರುತ್ತದೆ”

ಈಗ ಅವರ ಬೆಂಬಲಿಗರು ಗೋಡ್ಸೆಯ ವಿಷಯದಲ್ಲಿ ನಡೆದಿರುವ ಟ್ವೀಟ್ ಅನ್ನು ಮಹಾನ್ ಅಪರಾಧವೆಂಬಂತೆ ಚಿತ್ರಿಸುತ್ತಿದ್ದಾರೆ. ಇಲ್ಲಿ ಇಬ್ಬರೂ ಸಂಸದರ ಸಹಿತ ಸಾಧ್ವಿ ಪ್ರಜ್ಞಾ ಸಿಂಗ್ ಅವರಿಂದ ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಅಮಿತ್ ಶಾ ತಪ್ಪು ಒಪ್ಪಿಸಿಕೊಂಡಿದ್ದಾರೆ. ಆದರೆ ದೊಡ್ಡ ಆಲದ ಮರ ಬಿದ್ದಾಗ ಸಿಖ್ಖರ ನರಮೇಧ ನಡೆಯಿತಲ್ಲ ಅದಕ್ಕೆ ಯಾವ ಕಾಂಗ್ರೆಸ್ಸಿಗ ತಪ್ಪು ಒಪ್ಪಿಕೊಂಡಿದ್ದಾನೆ. ಹಾಗಾದರೆ ನಾಯಕರು ಸತ್ತರೆ ಮಾತ್ರ ನಷ್ಟ, ಉಳಿದವರು ಸತ್ತರೆ ನಾಯಿ ಸತ್ತ ಹಾಗೆ ಎನ್ನುವ ಅರ್ಥನಾ?

0
Shares
  • Share On Facebook
  • Tweet It




Trending Now
ಜಾಂಡಿಸ್ ಬಂದ ಮಗುವಿಗೆ ಆಧುನಿಕ ಚಿಕಿತ್ಸೆ ನೀಡಲು ಹೆತ್ತವರ ನಕಾರ: ಪ್ರಾಣ ಬಿಟ್ಟ ಒಂದು ವರ್ಷದ ಹಸುಳೆ!
Tulunadu News July 1, 2025
ಜನರು ರಸ್ತೆಬದಿ ಕಸ ಹಾಕುವುದನ್ನು ತಡೆಯಲು ಭಾರತ ಮಾತೆ, ದೇವರ ಫೋಟೋ! ಪುನೀತ್ ಕೆರೆಹಳ್ಳಿ ಆಕ್ರೋಶ!
Tulunadu News July 1, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಜಾಂಡಿಸ್ ಬಂದ ಮಗುವಿಗೆ ಆಧುನಿಕ ಚಿಕಿತ್ಸೆ ನೀಡಲು ಹೆತ್ತವರ ನಕಾರ: ಪ್ರಾಣ ಬಿಟ್ಟ ಒಂದು ವರ್ಷದ ಹಸುಳೆ!
    • ಜನರು ರಸ್ತೆಬದಿ ಕಸ ಹಾಕುವುದನ್ನು ತಡೆಯಲು ಭಾರತ ಮಾತೆ, ದೇವರ ಫೋಟೋ! ಪುನೀತ್ ಕೆರೆಹಳ್ಳಿ ಆಕ್ರೋಶ!
    • ಉಡುಪಿ: ದನದ ಕಳೇಬರ ಪತ್ತೆ ಪ್ರಕರಣ: ಆರು ಮಂದಿಯನ್ನು ಬಂಧಿಸಿದ ಉಡುಪಿ ಪೊಲೀಸರು
    • ಫೈರ್ ಬ್ರಾಂಡ್ ನಾಯಕ, ಶಾಸಕ ಬಿಜೆಪಿಗೆ ರಾಜೀನಾಮೆ!
    • ಹೃದಯಾಘಾತ ಫೈನ್ ಅಂಡ್ ಫಿಟ್ ಇದ್ದ ತರುಣ, ತರುಣಿಯರಿಗೂ ಬರುತ್ತಿದೆ, ಹೇಗೆ?
    • ಸಂವಿಧಾನದಿಂದ "ಜಾತ್ಯಾತೀತತೆ" ಮತ್ತು "ಸಮಾಜವಾದ" ಶಬ್ದಗಳನ್ನು ತೆಗೆಯುವ ಬಗ್ಗೆ ಚರ್ಚೆ ನಡೆಯಲಿ - ಆರ್ ಎಸ್ ಎಸ್
    • PFI ಟಾರ್ಗೆಟ್- 950 ಜನರ ಹಿಟ್ ಲಿಸ್ಟ್ ರೆಡಿ! NIA ಕೋರ್ಟ್ ನಲ್ಲಿ ವಕೀಲರಿಂದ ಮಾಹಿತಿ...
    • ಎಮರ್ಜೆನ್ಸಿ ದಿನಗಳಲ್ಲಿ ಮೋದಿಯವರ ಅನುಭವ ಕಥನ "ದಿ ಎಮರ್ಜೆನ್ಸಿ ಡೈರಿಸ್"!
    • ಬಾಹ್ಯಕಾಶಕ್ಕೆ ಜಿಗಿಯುವ ಮೊದಲು ಪತ್ನಿಗೆ ಭಾವನಾತ್ಮಕ ಸಂದೇಶ: "ನೀನಿಲ್ಲದೆ..... " ಶುಭಾಂಶು ಹೇಳಿದ್ದೇನು?
    • ಪಹಲ್ಗಾಮ್ ಉಗ್ರರಿಗೆ ಆಹಾರ, ಆಶ್ರಯ: ಸ್ಥಳೀಯರಿಬ್ಬರ ಬಂಧನ!
  • Popular Posts

    • 1
      ಜಾಂಡಿಸ್ ಬಂದ ಮಗುವಿಗೆ ಆಧುನಿಕ ಚಿಕಿತ್ಸೆ ನೀಡಲು ಹೆತ್ತವರ ನಕಾರ: ಪ್ರಾಣ ಬಿಟ್ಟ ಒಂದು ವರ್ಷದ ಹಸುಳೆ!
    • 2
      ಜನರು ರಸ್ತೆಬದಿ ಕಸ ಹಾಕುವುದನ್ನು ತಡೆಯಲು ಭಾರತ ಮಾತೆ, ದೇವರ ಫೋಟೋ! ಪುನೀತ್ ಕೆರೆಹಳ್ಳಿ ಆಕ್ರೋಶ!
    • 3
      ಉಡುಪಿ: ದನದ ಕಳೇಬರ ಪತ್ತೆ ಪ್ರಕರಣ: ಆರು ಮಂದಿಯನ್ನು ಬಂಧಿಸಿದ ಉಡುಪಿ ಪೊಲೀಸರು
    • 4
      ಫೈರ್ ಬ್ರಾಂಡ್ ನಾಯಕ, ಶಾಸಕ ಬಿಜೆಪಿಗೆ ರಾಜೀನಾಮೆ!
    • 5
      ಹೃದಯಾಘಾತ ಫೈನ್ ಅಂಡ್ ಫಿಟ್ ಇದ್ದ ತರುಣ, ತರುಣಿಯರಿಗೂ ಬರುತ್ತಿದೆ, ಹೇಗೆ?

  • Privacy Policy
  • Contact
© Tulunadu Infomedia.

Press enter/return to begin your search