• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಪಂಪ್ ವೆಲ್ ಫ್ಲೈಒವರ್ ಕಾಮಗಾರಿ ಮುಗಿದ ಮೇಲೆ ನಳಿನ್ ಗೆ ಏಕಿಲ್ಲ ಶಬ್ಬಾಸ್ ಗಿರಿ.?

Hanumantha Kamath Posted On January 30, 2020
0


0
Shares
  • Share On Facebook
  • Tweet It

ಪಂಪ್ ವೆಲ್ ಪ್ಲೈ ಒವರ್ ಕ್ಲೈಮೆಕ್ಸ್ ಹಂತಕ್ಕೆ ಬಂತು ಎನ್ನುವಷ್ಟರಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಅದಕ್ಕೊಂದು ವಿನೂತನ ಟ್ವಿಸ್ಟ್ ಕೊಟ್ಟು ಬಿಟ್ಟರು. ಇನ್ನು ಪಂಪ್ ವೆಲ್ ಪ್ಲೈ ಒವರ್ ಕೆಲಸವನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ನೋಡಿಕೊಳ್ಳಬೇಕು ಎಂದು ಬಿಟ್ಟರು. ಅವರು ಹಾಗೆ ಹೇಳುವಾಗ ಪಂಪ್ ವೆಲ್ ಮೇಲ್ಸೆತುವೆ ಕೆಲಸ 90 ಶೇಕಡಾ ಮುಗಿದಿತ್ತು. ಸರಿ, ಎಂದುಕೊಂಡು ಜಿಲ್ಲಾಧಿಕಾರಿಗಳು ಕೆಲಸದ ಪ್ರಗತಿಯ ಸಭೆ ನಡೆಸಿದರು. ನಳಿನ್ ಹಾಗೆ ಹೇಳಿದ ಒಂದೇ ತಿಂಗಳಲ್ಲಿ ಮೇಲ್ಸೆತುವೆ ರೆಡಿಯಾಗಿ ಹೋಗಿದೆ. ಇನ್ನು ಉದ್ಘಾಟನೆ ಮಾತ್ರ ಬಾಕಿ. ಇಷ್ಟರಲ್ಲಿ ರಾಜ್ಯದಲ್ಲಿಯೂ, ರಾಷ್ಟ್ರದಲ್ಲಿಯೂ ಫ್ರೀ ಇರುವ ಕಾಂಗ್ರೆಸ್ ವಿಧಾನಪರಿಷತ್ ಸದಸ್ಯರಾದ ಐವನ್ ಡಿಸೋಜಾ ಹಾಗೂ ಹರೀಶ್ ಕುಮಾರ್ ಮೊನ್ನೆ ಸಂಜೆ ಚಾ ಕುಡಿದು ಒಂದು ವಾಕಿಂಗ್ ಹೋಗಿ ಬರೋಣ ಎಂದು ಪಂಪ್ ವೆಲ್ ಪ್ಲೈ ಒವರ್ ಮೇಲೆ ನಡೆದು ಹೋಗಿದ್ದಾರೆ. ಹೋಗುವಾಗ ತಮ್ಮ ಪ್ರೀತಿಯ ಕ್ಯಾಮೆರಾಗಳನ್ನು ಕರೆದುಕೊಂಡು ಹೋಗಿದ್ದಾರೆ. ಪಂಪ್ ವೆಲ್ ಮೇಲ್ಸೇತುವೆ ಆಗಲು ಕಾರಣ ಜಿಲ್ಲಾಧಿಕಾರಿಯವರು ಎಂದು ಹೇಳಿ ಇದರ ಕ್ರೆಡಿಟ್ ಅವರಿಗೆ ಹೋಗಬೇಕು ಎಂದು ಹೇಳಿ ಅತೀ ಬುದ್ಧಿವಂತಿಕೆಯನ್ನು ತೋರಿಸಿದ್ದಾರೆ. “ಏನ್ ತಲೆ ಸರ್ ನೀವ್ದು, ನೀವು ಸೂಪರ್ ಸರ್” ಎಂದು ತಮ್ಮದೇ ಚಾ ಗಿರಾಕಿಗಳಿಂದ ಚಪ್ಪಾಳೆ ತಟ್ಟಿಸಿಕೊಂಡು ಮಲ್ಲಿಕಟ್ಟೆ ಕಚೇರಿಗೆ ಹಿಂತಿರುಗಿದ್ದಾರೆ. ಒಂದು ವೇಳೆ ಒಂದು ತಿಂಗಳು ಉಸ್ತುವಾರಿ ನೋಡಿದ ಜಿಲ್ಲಾಧಿಕಾರಿಗಳಿಗೆ ಇದರ ಕ್ರೆಡಿಟ್ ಹೋಗುವುದಾದರೆ ಹತ್ತು ವರ್ಷ ಲೇಟ್ ಮಾಡಿದ ಕ್ರೆಡಿಟ್ ಕಾಂಗ್ರೆಸ್ ಹಾಗೂ ಗುತ್ತಿಗೆದಾರರಿಗೆ ಹೋಗಬೇಕು ಎಂದು ಯಾವ ಮೂರನೇ ಕ್ಲಾಸ್ ಓದಿದವನಿಗೂ ಗೊತ್ತಾಗುತ್ತದೆ ಅಲ್ಲವಾ?

ನಾನು ಮೊದಲಿನಿಂದ ಡಿಟೇಲ್ ಆಗಿ ಹೇಳಲು ಹೋಗುವುದಿಲ್ಲ. ಯಾಕೆಂದರೆ 2009 ರಲ್ಲಿ ದೇಶದಲ್ಲಿ ಕಾಂಗ್ರೆಸ್ ಇತ್ತು. ನೀವು ನಕ್ಷೆ ಬದಲಾವಣೆಯಿಂದ ಹಿಡಿದು ಕಲಶ ಶಿಫ್ಟ್ ಮಾಡಲು ಕೊಟ್ಟ ತೊಂದರೆ ಎಲ್ಲವನ್ನು ವಿವರವಾಗಿ ಬರೆಯುವ ಅಗತ್ಯ ನನಗೆ ಇಲ್ಲ. 2009 ರಲ್ಲಿ ಮಂಜೂರಾದ ಮೇಲ್ಸೆತುವೆಗೆ ಅಡ್ಡಲಾದ ಒಂದು ಕಲಶವನ್ನು 2016 ರಲ್ಲಿ ಶಿಫ್ಟ್ ಮಾಡಲಾಯಿತು ಎನ್ನುವ ಒಂದು ವಾಕ್ಯವೇ ಸಾಕು. ನಿಮ್ಮ ಮುಖಕ್ಕೆ ಕನ್ನಡಿ ಹಿಡಿಯಬಲ್ಲದು. ಬಿಡಿ, ಆಯಾ ಪಕ್ಷಗಳು ಅವರವರ ತಪ್ಪನ್ನು ಹಂಚಿಕೊಂಡು ಬಿಟ್ಟರೆ ಆಗ ಇದರಲ್ಲಿ ದೊಡ್ಡ ಆನೆಕುದುರೆ ಮಾಡುವಂತದ್ದು ಏನೂ ಉಳಿದಿರುವುದಿಲ್ಲ. ಆದರೆ ಕಾಂಗ್ರೆಸ್ ಗೆ ಹಿಂದಿನ ಲೋಕಸಭಾ ಚುನಾವಣೆ ಬಂದಾಗ ಜಿಲ್ಲೆಯಲ್ಲಿ ನಳಿನ್ ವಿರುದ್ಧ ಬಿಡಲು ಸರಿಯಾದ ಬಾಣಗಳೇ ಇರಲಿಲ್ಲ. ರಾಷ್ಟ್ರದಲ್ಲಿ ರಾಹುಲ್ ಗಾಂಧಿ(!) ರಫೇಲ್ ಹಿಡಿದು ನೇತಾಡಿದರೆ ಇಲ್ಲಿನ ರಾಹುಲ್ ಕಸಿನ್ಸ್ ಪಂಪ್ ವೆಲ್ ಮೇಲ್ಸೆತುವೆಗೆ ನೇತಾಡಿದರು. ಎರಡೂ ಟೂಸ್ ಪಟಾಕಿ ಆಗಿ ಹೋದವು ಎನ್ನುವುದನ್ನು ಬೇರೆ ಹೇಳಬೇಕಾಗಿಲ್ಲ. ಆದರೆ ಕೊನೆಗೆ ಜನ ಪಂಪ್ ವೆಲ್ ಪ್ಲೈ ಒವರ್ ನಿಂದ ತೊಂದರೆ ಅನುಭವಿಸಿದರೂ ಮೋದಿಗೆ ಮತ ನೀಡಿದರು. ಅದೆಲ್ಲವೂ ಆಗಿ ಈಗ ಪಂಪ್ ವೆಲ್ ಪ್ಲೈ ಒವರ್ ರೆಡಿಯಾಗಿದೆ.

ಬಹುಶ: ನಳಿನ್ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನವನ್ನಾದರೂ ಹೇಗಾದರೂ ನಿಭಾಯಿಸಬಲ್ಲೆನು. ಆದರೆ ಪಂಪ್ ವೆಲ್ ವಿಷಯ ಒಮ್ಮೆ ಮುಗಿದರೆ ಸಾಕು ಎಂದು ಅನಿಸಿರಬಹುದು. ಆದರೆ ಕ್ರೆಡಿಟ್ ಯಾರು ತೆಗೆದುಕೊಳ್ಳುವುದು ಎನ್ನುವ ವಿಷಯ ಬಂದಿರುವುದರಿಂದ ನಳಿನ್ ಕುಮಾರ್ ಕಟೀಲ್ ನಾಡಿದ್ದು ಉದ್ಘಾಟನೆ ಮಾಡಿದ ನಂತರ ಮಾತನಾಡುವಾಗ ಹೀಗೆ ಹೇಳಿದರೆ ಚೆನ್ನಾಗಿರುತ್ತದೆ ಎನ್ನುವುದು ನನ್ನ ಅನಿಸಿಕೆ. ” ಪಂಪ್ ವೆಲ್ ಪ್ಲೈ ಒವರ್ ಇದರ ಕ್ರೆಡಿಟ್ ಕಾಂಗ್ರೆಸ್ ಮುಖಂಡರು ಹೇಳಿದ ಹಾಗೆ ಜಿಲ್ಲಾಧಿಕಾರಿಯವರಿಗೆ ಹೋಗಬೇಕು. ಯಾಕೆಂದರೆ ಕಾಂಗ್ರೆಸ್ಸಿನವರು ಹತ್ತು ವರ್ಷ ಸತತವಾಗಿ ಕಿರುಕುಳ, ಅಸಹಕಾರ ಮಾಡಿದರೂ ಎದೆಗುಂದದೆ ಈ ಮೇಲ್ಸೆತುವೆ ಪೂರ್ಣಗೊಳಿಸಿದ್ದಾರೆ. ಬೇರೆ ಅಧಿಕಾರಿಗಳಾದರೆ ಇಷ್ಟೋತ್ತಿಗೆ ಕಾಂಗ್ರೆಸ್ಸಿನ ಸಹವಾಸವೇ ಬೇಡಾ ಎಂದು ಟ್ರಾನ್ಸಫರ್ ತೆಗೆದುಕೊಂಡು ಹೋಗುತ್ತಿದ್ದರು. ಈಗಿನ ಜಿಲ್ಲಾಧಿಕಾರಿಯವರು ಕೇವಲ ಒಂದು ತಿಂಗಳಲ್ಲಿ ಈ ಕಾಮಗಾರಿಯನ್ನು ಮುಗಿಸಿಕೊಟ್ಟಿದ್ದಾರೆ. ಗುತ್ತಿಗೆದಾರರಾಗಿರುವ ಜಗನ್ ಮೋಹನ್ ರೆಡ್ಡಿಯವರ ಮೇಲೆ ಐಟಿ ದಾಳಿ ಮಾಡಿ ಕಾಂಗ್ರೆಸ್ ಅವರನ್ನು ಆಂಧ್ರಪ್ರದೇಶದಲ್ಲಿ ರಾಜಕೀಯವಾಗಿ ಮುಗಿಸಲು ಹೊರಟರು. ಮಾಲೀಕರೇ ಜೈಲಿಗೆ ಹೋದ ಕಾರಣ ಅವರ ಕಂಪೆನಿಯ ಆರ್ಥಿಕ ವ್ಯವಹಾರಕ್ಕೆ ಏಟು ಬಿದ್ದಾಗ ಅವರಿಗೆ ಕೆಲಸ ಮುಗಿಸಲು ಬ್ಯಾಂಕುಗಳಿಂದ 56 ಕೋಟಿ ಸಾಲ ಕೊಟ್ಟಿದ್ದು ಯಾರು ಎನ್ನುವುದನ್ನು ಕಾಂಗ್ರೆಸ್ಸಿಗರು ಹೇಳಲಿ. ಅವರಾ, ನಾನಾ?. ಏನೇ ಆದರೂ ಜನರಿಗೆ ಈಗ ಅನುಕೂಲಕರವಾಗಿದೆ. ನಮಗೆ ಅಷ್ಟೇ ಬೇಕಾದದ್ದು. ಜನ ರಾಜ್ಯದಲ್ಲಿಯೂ, ಕೇಂದ್ರದಲ್ಲಿಯೂ ನಮಗೆ ಸಾಕಷ್ಟು ಕ್ರೆಡಿಟ್ ಕೊಟ್ಟಾಗಿದೆ. ಈಗ ಅದರ ಅವಶ್ಯಕತೆ ಇರುವುದು ಕಾಂಗ್ರೆಸ್ಸಿಗೆ. ಬೇಕಾದರೆ ಅವರೇ ಜಿಲ್ಲಾಧಿಕಾರಿಯವರಿಗೆ ದಂಬಾಲು ಬಿದ್ದು ತೆಗೆದುಕೊಳ್ಳಲಿ” ಎಂದು ಇಷ್ಟು ಹೇಳಿ ಭಾಷಣ ಮುಗಿಸಬಹುದು. ನಂತರ ಇದೇ ಗಮ್ಮತ್ತು!

0
Shares
  • Share On Facebook
  • Tweet It




Trending Now
7.25 ಕೋಟಿ ವೆಚ್ಚದಲ್ಲಿ ಸೊಳ್ಳೆ ನಿಯಂತ್ರಣಕ್ಕೆ ರಾಜ್ಯ ಸರಕಾರ ಸಜ್ಜು!
Hanumantha Kamath July 12, 2025
ತರಗತಿಯಲ್ಲಿ ಲಾಸ್ಟ್ ಬೆಂಚ್ ಎನ್ನುವುದು ಕೇರಳದಲ್ಲಿ ಇನ್ನು ಇಲ್ಲ!
Hanumantha Kamath July 12, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • 7.25 ಕೋಟಿ ವೆಚ್ಚದಲ್ಲಿ ಸೊಳ್ಳೆ ನಿಯಂತ್ರಣಕ್ಕೆ ರಾಜ್ಯ ಸರಕಾರ ಸಜ್ಜು!
    • ತರಗತಿಯಲ್ಲಿ ಲಾಸ್ಟ್ ಬೆಂಚ್ ಎನ್ನುವುದು ಕೇರಳದಲ್ಲಿ ಇನ್ನು ಇಲ್ಲ!
    • ಧರ್ಮಸ್ಥಳದಲ್ಲಿ ಗೌಪ್ಯವಾಗಿ ಹೆಣಗಳನ್ನು ವಿಲೇವಾರಿ ಮಾಡುತ್ತಿದ್ದೆ ಎಂದು ಹೇಳಿಕೊಂಡಿರುವ ಮಾಜಿ ಸ್ವಚ್ಚತಾ ಸಿಬ್ಬಂದಿ ನ್ಯಾಯಾಲಯಕ್ಕೆ ಹಾಜರು!
    • ಗಣೇಶೋತ್ಸವ ಇನ್ನು ಮಹಾರಾಷ್ಟ್ರದ ರಾಜ್ಯ ಹಬ್ಬ ಎಂದು ಸರಕಾರ ಘೋಷಣೆ!
    • ನಾಯಕರು 75 ಆಗುತ್ತಿದ್ದಂತೆ ಅಧಿಕಾರದಿಂದ ಕೆಳಗಿಳಿದು ಬೇರೆಯವರಿಗೆ ದಾರಿ ಮಾಡಿಕೊಡಲಿ - ಮೋಹನ್ ಭಾಗವತ್!
    • ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಕದ್ರಿ ಸಂಚಾರ ಪೊಲೀಸ್ ಕಾನ್‌ಸ್ಟೆಬಲ್ ತಸ್ಲೀಮ್ …!
    • ಬೀದಿನಾಯಿಗಳಿಗೆ ನಿತ್ಯ ಚಿಕನ್, ಮೊಟ್ಟೆ ನೀಡಲು ಬಿಬಿಎಂಪಿ ನಿರ್ಧಾರ!
    • ಜನಸಾಮಾನ್ಯರ ಕೈಗೆಟಕುತ್ತಿಲ್ಲ ತೆಂಗಿನಕಾಯಿ ದರ... ಪುತ್ತೂರಿನಲ್ಲಿ ಹೆಚ್ಚಿದ ಕಳವು!
    • ವಿಎಚ್ ಪಿ ಶರಣ್, ನವೀನ್ ಗೆ ರಿಲೀಫ್: ಅರುಣ್ ಶ್ಯಾಮ್ ವಾದ
    • ಯುಕೆ ಪ್ರಧಾನಿ ಪದದಿಂದ ಇಳಿದ ಬಳಿಕ ಖಾಸಗಿ ಉದ್ಯೋಗಕ್ಕೆ ಮರಳಿದ ರಿಶಿ ಸುನಾಕ್!
  • Popular Posts

    • 1
      7.25 ಕೋಟಿ ವೆಚ್ಚದಲ್ಲಿ ಸೊಳ್ಳೆ ನಿಯಂತ್ರಣಕ್ಕೆ ರಾಜ್ಯ ಸರಕಾರ ಸಜ್ಜು!
    • 2
      ತರಗತಿಯಲ್ಲಿ ಲಾಸ್ಟ್ ಬೆಂಚ್ ಎನ್ನುವುದು ಕೇರಳದಲ್ಲಿ ಇನ್ನು ಇಲ್ಲ!
    • 3
      ಧರ್ಮಸ್ಥಳದಲ್ಲಿ ಗೌಪ್ಯವಾಗಿ ಹೆಣಗಳನ್ನು ವಿಲೇವಾರಿ ಮಾಡುತ್ತಿದ್ದೆ ಎಂದು ಹೇಳಿಕೊಂಡಿರುವ ಮಾಜಿ ಸ್ವಚ್ಚತಾ ಸಿಬ್ಬಂದಿ ನ್ಯಾಯಾಲಯಕ್ಕೆ ಹಾಜರು!
    • 4
      ಗಣೇಶೋತ್ಸವ ಇನ್ನು ಮಹಾರಾಷ್ಟ್ರದ ರಾಜ್ಯ ಹಬ್ಬ ಎಂದು ಸರಕಾರ ಘೋಷಣೆ!
    • 5
      ನಾಯಕರು 75 ಆಗುತ್ತಿದ್ದಂತೆ ಅಧಿಕಾರದಿಂದ ಕೆಳಗಿಳಿದು ಬೇರೆಯವರಿಗೆ ದಾರಿ ಮಾಡಿಕೊಡಲಿ - ಮೋಹನ್ ಭಾಗವತ್!

  • Privacy Policy
  • Contact
© Tulunadu Infomedia.

Press enter/return to begin your search