ಕೊರೋನ ವೈರಸ್ ತಡೆಯಲು ಆಯುರ್ವೇದಿಕ್ ಔಷಧ
ಅನಾದಿಕಾಲದಿಂದಲೂ ಮಾನವ ತನ್ನ ದೇಹವನ್ನು ರೋಗರುಜಿನಗಳಿಂದ ರಕ್ಷಿಸಿಕೊಳ್ಳಲು ಆಯುರ್ವೇದ ಔಷಧಿಗಳ ಮೊರೆ ಹೋಗುತ್ತಿದ್ದದ್ದು ಪ್ರಾಚೀನ ಗ್ರಂಥಗಳಿಂದ ತಿಳಿದು ಬರುತ್ತದೆ. ಕೋರೋನ ವೈರಸ್ ನಮ್ಮ ದುರ್ಬಲವಾದ ರೋಗ ನಿರೋಧಕ ಶಕ್ತಿಯಿಂದ ದೇಹದಲ್ಲಿ ಬೆಳೆಯುತ್ತದೆ. ಹಾಗಾಗಿ ನಮ್ಮ ರೋಗನಿರೋಧಕ ಶಕ್ತಿಯನ್ನು ವೃದ್ಧಿಸುವ ಆಹಾರ ವಿಹಾರ ಮತ್ತು ಮನೆಮದ್ದು ಪಾಲಿಸಿದರೆ ಉತ್ತಮ. ಖ್ಯಾತ ಆಯುರ್ವೇದ ತಜ್ಞ ಡಾ.ಶ್ರೀವತ್ಸ ಭಾರದ್ವಾಜ ಅವರು ಈ ವಿವಿಧ ಗಿಡಮೂಲಿಕೆ ಮತ್ತು ಆಹಾರಪದಾರ್ಥಗಳ ಸಂಯೋಗದೊಂದಿಗೆ ಉತ್ಪತ್ತಿಯಾಗುವ ಔಷಧಗಳನ್ನು ಸೇವಿಸುವ ಮೂಲಕ ದೇಹಕ್ಕೆ ಹೇಗೆ ಆರೋಗ್ಯಕವಚ ಸೃಷ್ಟಿಸಬಹುದು ಎಂದು ತಿಳಿಸಿದ್ದಾರೆ.
ಐದು ಕೂಡಿ ಕಿರಾತ ಕಡ್ಡಿ, ನೆಲನೆಲ್ಲಿ, ನಾಲ್ಕು ಇಂಚು ಅಮೃತಬಳ್ಳಿ ಮತ್ತು ಒಂದು ಚಮಚ ಜೀರಿಗೆಯನ್ನು ನಾಲ್ಕು ಲೋಟ ನೀರಿಗೆ ಹಾಕಿ ಕುದಿಸಿ ಒಂದು ಲೋಟಕ್ಕೆ ಬತ್ತಿಸಿದ ಕಷಾಯವನ್ನು ವೈದ್ಯರ ಸಲಹೆಯ ಮೇರೆಗೆ ಪ್ರತಿನಿತ್ಯ ಸೇವಿಸಿದರೆ ದೇಹದಲ್ಲಿ ರೋಗ ನಿರೋಧಕ ಶಕ್ತಿಯು ವೃದ್ಧಿಸುತ್ತದೆ.
ಪ್ರತಿನಿತ್ಯ ಜೀರಿಗೆ ನೀರನ್ನು ಕುಡಿಯಲು ಬಳಸುವುದು ಮತ್ತು 1/4 ಚಮಚ ಶುಂಠಿ ರಸವನ್ನು ಚಿಟಿಕಿ ಉಪ್ಪಿನೊಂದಿಗೆ ಸೇವಿಸುವುದು ಒಳ್ಳೆಯದು. ಚಳಿಗಾಲದಲ್ಲಿ ದಿನನಿತ್ಯ 1 ಚಮಚ ಚ್ಯವನಪ್ರಾಶ ಲೇಹವನ್ನು ಬಿಸಿನೀರಿನಲ್ಲಿ ಹಸಿಹೊಟ್ಟೆಯಲ್ಲಿ ಸೇವಿಸುವುದು. ಮನೆಯೊಳಗೆ ಪ್ರತಿನಿತ್ಯ ಅರಶಿಣದ ಧೂಪವನ್ನು ಹಾಕಿದರೆ ದೇಹಕ್ಕೂ, ಮನಸ್ಸಿಗೂ ಶ್ರೇಯಸ್ಕರ. ಕಾಫಿ, ಚಹಾ ಬದಲಿಗೆ ಒಳ್ಳೆಮೆಣಸು, ಮೆಂತೆ, ಜೀರಿಗೆ, ಶುಂಠಿ ಬಳಸಿ ತಯಾರಿಸಿದ ವಿವಿಧ ಕಷಾಯಗಳನ್ನು ಸೇವಿಸುವುದು ದೇಹದ ಆರೋಗ್ಯಕ್ಕೆ ಉತ್ತಮ ವಿಧಾನ ಎಂದು ಡಾ. ಶ್ರೀವತ್ಸ ಭಾರದ್ವಾಜ ಅವರು ತಿಳಿಸಿದ್ದಾರೆ. ಈ ಉತ್ಪನ್ನಗಳನ್ನು ಮನೆಯಲ್ಲಿ ತಯಾರಿಸಬಹುದು ಅಥವಾ ಪ್ರಖ್ಯಾತ ಆಯುರ್ವೇದ ಔಷಧಗಳ ರಖಂ ಮತ್ತು ಬಿಡಿ ಮಾರಾಟ ಮಳಿಗೆಯಾಗಿರುವ ವಿವೇಕ್ ಟ್ರೇಡರ್ಸ್ ಇದರ ಮಂಗಳೂರಿನ ಕೊಡಿಯಾಲ್ ಬೈಲ್ ಸಮೀಪದ ವಿ.ಟಿ.ರಸ್ತೆಯ ಧನ್ವಂತರಿ ನಗರದಲ್ಲಿರುವ ವಿವೇಕ್ ಟ್ರೇಡರ್ಸ್ ಮಳಿಗೆ ಅಥವಾ ಹಂಪನಕಟ್ಟೆ ಸರಕಾರಿ ವಿಶ್ವವಿದ್ಯಾನಿಲಯ ಕಾಲೇಜು ಎದುರಿಗೆ ಇರುವ ಆಯುರ್ ವಿವೇಕ್ ಮಳಿಗೆಯಲ್ಲಿ ಪಡೆದುಕೊಳ್ಳಬಹುದು. ದೂರವಾಣಿ ಸಂಖ್ಯೆ- 0824-2443501.
Leave A Reply