ಎಲ್ಲಾ ನಾಯಕರನ್ನು ಒಂದು ಕೋಣೆಯೊಳಗೆ ಹಾಕಿ ಪರಸ್ಪರ ಮುಖ ನೋಡಿಕೊಳ್ಳಲು 10 ನಿಮಿಷ ಕೊಡಿ!
ಬೆಳಿಗ್ಗೆ ಪೇಪರ್ ತೆಗೆದರೆ, ರಾತ್ರಿ ಟಿವಿ ಆನ್ ಮಾಡಿದರೆ ಅದೇ ಆರೋಪ, ಪ್ರತ್ಯಾರೋಪಗಳು. ಇವರು ಅವರಿಗೆ ಬೈಯುವುದು, ಅವರುಇವರಿಗೆಬೈಯುವುದು.ಕೊರೋನ ಮಹಾಮಾರಿ ವ್ಯಾಪಕವಾಗಿ ಹಬ್ಬಿದೆ ರಾಜ್ಯ ಸರಕಾರ ಏನೂ ಮಾಡುದಿಲ್ಲ ಖಾಸಗಿ ಅಸ್ಪತ್ರೆಗಳು ನೆಗೆಟಿವನು ಪಾಸಿಟಿವ್ ಮಾಡಿ ಲೂಟಿ ಮಾಡುತ್ತಿದ್ದಾರೆ. ಈಗ ಯಾಕೆ ಲಾಕ್ ಡೌನ್ ಮಾಡುವುದಿಲ್ಲ ಎಂಬ ವಿಷಯವೇ ಹೆಚ್ಚಿನ ಪತ್ರಿಕೆಗಳ ಅರ್ಧದಷ್ಟು ಸ್ಥಳೀಯ ಪುಟಗಳಲ್ಲಿ ಇದೇ ವಾದ, ವಿವಾದದ ಹೇಳಿಕೆಗಳಲ್ಲಿ ತುಂಬಿ ತುಳುಕುತ್ತಿದೆ. ಎಲ್ಲವೂ ಫಿಕ್ಸಡ್ ಹೇಳಿಕೆಗಳು. ಯಾರು ಏನು ಹೇಳಿದ್ದಾರೆ ಎಂದು ಮೊದಲ ವಾಕ್ಯದಿಂದಲೇ ಗೊತ್ತಾಗುತ್ತದೆ. ಇಡೀ ನ್ಯೂಸ್ ನೋಡಬೇಕಿಲ್ಲ. ಮೊದಲ 10 ಸೆಕೆಂಡ್ ಗಳಲ್ಲಿಯೇ ಅವರು ಏನು ಹೇಳುತ್ತಾರೆ ಎಂದು ಗೊತ್ತಾಗುತ್ತದೆ. ಇವರ ಬೈಟ್ ತೆಗೆದುಕೊಳ್ಳಲು ಟಿವಿ ರಿಪೋಟರ್ಸ್ ಗಳಲ್ಲಿ ನೂಕು ನುಗ್ಗಲು. ಸರದಿಯಲ್ಲಿ ಬೈಟ್ ತೆಗೆದುಕೊಳ್ಳುವ ಭರದಲ್ಲಿ ಒಬ್ಬ ವರದಿಗಾರ ಸ್ಪಲ್ಪ ಹೆಚ್ಚು ಮಾತನಾಡಿಸಿದರೂ ಕ್ಯೂ ನಲ್ಲಿ ನಿಂತ ಮತ್ತೊಬ್ಬ ವರದಿಗಾರನಿಂದ ಬೇಗ ಮುಗಿಸಲು ಒತ್ತಾಯ. ಮೊನ್ನೆ ಒಂದು ಚಾನಲ್ ನೋಡುವಾಗ ಓಪನ್ ಆಗಿ ಒಬ್ಬ ಟಿವಿ ವರದಿಗಾರ ಮತ್ತೊಬ್ಬನಿಗೆ ಬೇಗ ಮುಗಿಸಲು ಕೈಸನ್ನೆ ಮೂಲಕ ಒತ್ತಡ ಹಾಕುತ್ತಿದ್ದ. ಎಲ್ಲಾ ವಾಹಿನಿಗಳಲ್ಲಿಯೂ ಒಂದೇ ಲೆಕ್ಕದ ಸ್ಟಿರಿಯೋ ಟೈಪ್ ಹೇಳಿಕೆಗಳು. ಕೇವಲ ಟಿವಿ ಚಾನಲ್ ಮಾತ್ರ ಬೇರೆ. ಎಲ್ಲಾ ರಾಜಕಾರಣಿಗಳ ಮುಖ ನೋಡಿ ಹೇಳಿಕೆ ಅಂದಾಜು ಮಾಡುವ ಕಾಲ ಕರಾವಳಿಯಲ್ಲಿ ಮೂಡಿದೆ. ಇದನ್ನೆಲ್ಲ ನೋಡಿದರೆ ಯಾರೂ ಕೂಡ ಪೂರ್ವಾಗ್ರಹ ಪೀಡಿತರಾಗಿಲ್ಲ ಎಂದು ಹೇಗೆ ಹೇಳುವುದು?
ಇನ್ನು ಎರಡು ರಾಷ್ಟ್ರೀಯ ಪಕ್ಷಗಳ ನಾಯಕರ ಹೇಳಿಕೆಗಳ ನಡುವೆ ನಮ್ಮದು ಇರಲಿ ಎಂದು ಪ್ರಾದೇಶಿಕ ಪಕ್ಷಗಳು ಕೂಡ ಮಂಗಳೂರಿನಲ್ಲಿ ತಮ್ಮ ಹೇಳಿಕೆಗಳನ್ನು ಪತ್ರಿಕೆಗಳಿಗೆ ಬಿಡುಗಡೆ ಮಾಡಿ ಅವರದ್ದು ತಪ್ಪು, ಇವರದ್ದು ತಪ್ಪು ಎಂದು ತಮ್ಮ ಅಸ್ತಿತ್ವವನ್ನು ತೋರಿಸುತ್ತಿವೆ. ಅದರ ಬದಲು ಇವರೆಲ್ಲ ಒಂದು ನಿಧರ್ಾರ ಮಾಡಿ ಒಂದು ಚಿಕ್ಕ ಸಭಾಂಗಣದಲ್ಲಿ ಸೇರಬೇಕು. ಅಲ್ಲಿ ಯಾವುದೇ ಟಿವಿ, ಪೇಪರಿನವರು ಇರಬಾರದು. ಯಾಕೆಂದರೆ ಮಾಧ್ಯಮದವರು ಇದ್ದಾರೆ ಎಂದರೆ ಇವರೆಲ್ಲರ ಆವೇಶ ಹೆಚ್ಚಾಗಿರುತ್ತದೆ. ಅದರ ಬದಲು ಒಂದೊಂದು ಪಕ್ಷದಿಂದಲೂ ಇಬ್ಬಿಬ್ಬರು ಅಥವಾ ಮೂವರು ಸೇರಬೇಕು. ಅದರೊಂದಿಗೆ ನೇರ ನುಡಿಯ ಯಾವುದೇ ಪಕ್ಷಕ್ಕೂ ಸೇರದ ಮೂರ್ನಾಕು ಜನರನ್ನು ಅಲ್ಲಿ ಆಹ್ವಾನಿಸಬೇಕು. ಎಲ್ಲಾ ರಾಜಕಾರಣಿಗಳು ಹತ್ತತ್ತು ನಿಮಿಷ ಪರಸ್ಪರ ಪಕ್ಷದವರ ಮುಖ ನೋಡಬೇಕು. ಆಗ ಅಲ್ಲಿಯೇ ಅರ್ಧದಷ್ಟು ಸಮಸ್ಯೆ ನಿವಾರಣೆಯಾಗುತ್ತದೆ.
ನಮ್ಮಲ್ಲಿ ಅರ್ಧ ಸಮಸ್ಯೆಗಳು ಆಗುವುದೇ ಸಂವಹನ ಕೊರತೆಯಿಂದಾಗಿ. ಇನ್ನರ್ಧ ಸಮಸ್ಯೆಗಳು ಆಗುವುದು ಬೆಂಬಲಿಗರನ್ನು ಖುಷಿ ಮಾಡಲು ಕೊಡುವ ಹೇಳಿಕೆಗಳಿಂದ. ಕೆಲವೊಮ್ಮೆ ಆಯಾ ನಾಯಕ/ನಾಯಕಿಯರ ಹಿಂಬಾಲಕರೇ ಟಿವಿಯವರಿಗೆ ಫೋನ್ ಮಾಡಿ ನಮ್ಮ ಮುಖಂಡರನ್ನು ಮಾತನಾಡಿಸಿ ಎಂದು ದಂಬಾಲು ಬೀಳುತ್ತಾರೆ. ಒಟ್ಟಿನಲ್ಲಿ ಒಂದು ಹೆಣ ಬಿದ್ದರೆ ಮುಖಂಡ/ಮುಖಂಡೆಯರಿಗೂ, ಮಾಧ್ಯಮದವರಿಗೂ, ಪಕ್ಷದ ಹಿಂಬಾಲಕರಿಗೂ ಫುಲ್ ಕೆಲಸ.
ಅದರ ಬದಲಿಗೆ ನಾನು ಆಗ ಹೇಳಿದ ಹಾಗೆ ಹತ್ತು ನಿಮಿಷ ಪರಸ್ಪರ ಮುಖ ನೋಡಿ ನಂತರ ಈ ಗಲಾಟೆ ಯಾರು ಶುರು ಮಾಡಿದರು ಎಂದು ಒಂದು ಪ್ರಶ್ನೆಯನ್ನು ಯಾರಾದರೂ ಒಬ್ಬ ನ್ಯೂಟ್ರಲ್ ವ್ಯಕ್ತಿ ಕೇಳಬೇಕು.ನಮ್ಮ ಜಿಲ್ಲೆಯಲ್ಲಿ ಕೊರೋನ ಮಹಾ ಮಾರಿ ತಡೆಗಟ್ಟಲು ಯಾವ ರೀತಿಯಲ್ಲಿ ಜಿಲ್ಲಾಡಳಿತ ಕೆಲಸ ಮಾಡಬೇಕು ಈಗಿನ ಪರಿಸ್ಥಿತಿಯಲ್ಲಿ ಲಾಕ್ ಡೌನ್ ಅಗತ್ಯ ವಿದೆ ಯಾವ ರೀತಿಯಲ್ಲಿ ಮಾಡುವುದು ಎಂಬ ಎಲ್ಲ ಪಕ್ಷದವರು ಒಮ್ಮತಕ್ಕೆ ಬಂದು ಜಿಲ್ಲಾ ಅಧಿಕಾರಿಗಳ ಬಳಿ ಎಲ್ಲರೂ ಒಟ್ಟಾಗಿ ಹೋಗಲಿ. ಯಾವುದೇ ಟಿವಿ ನಿರೂಪಕರಿಗೆ ಇದಕ್ಕೆ ಮಧ್ಯಸ್ಥಿಕೆ ವಹಿಸಲು ಕರೆಯುವ ಅಗತ್ಯ ಇಲ್ಲ.
ಪ್ರತಿಯೊಂದು ಗಲಾಟೆಗೂ ಒಂದು ಆರಂಭ ಎಂದು ಇರುತ್ತದೆ. ಕಲ್ಲು ಬಿಸಾಡುವವ ರಸ್ತೆಯಲ್ಲಿ ಹೋಗುತ್ತಿರುವಾಗ ಸಡನ್ನಾಗಿ ಹುಚ್ಚನ ಹಾಗೆ ಕಲ್ಲು ಎತ್ತಿ ಯಾರ ಮೇಲೆಯೂ ಬಿಸಾಡುವುದಿಲ್ಲ. ಹಾಗೆ ಬಿಸಾಡಿದರೆ ಅವನು ಹುಚ್ಚನೇ ಆಗಿರಬೇಕು. ಇಲ್ಲದಿದ್ರೆ ಹೆಚ್ಚಿನ ಸಂದರ್ಭದಲ್ಲಿ ಗಲಾಟೆಗೆ ಇಳಿಯುವವರಿಗೆ ಒಂದು ಪ್ರೇರಣೆ ಇರುತ್ತದೆ. ಎಲ್ಲಾ ಪಕ್ಷಗಳ ಮುಖಂಡರು ತಮ್ಮ ಬೆಂಬಲಿಗರಿಗೆ ಪ್ರೇರಣೆ ಕೊಡುತ್ತಾರೆ. ಕೆಲವರು ನರೇಂದ್ರ ಮೋದಿಯವರ ಪ್ರೇರಣೆಯಂತೆ ಒಳ್ಳೆಯ ಕೆಲಸಗಳನ್ನು ಮಾಡಬಹುದು. ಇನ್ನು ಕೆಲವರು ಕಾಶ್ಮೀರದ ಪ್ರತ್ಯೇಕತಾವಾದಿಗಳ ಪ್ರೇರಣೆಯನ್ನು ತೆಗೆದುಕೊಂಡು ಕಲ್ಲು ಬಿಸಾಡುವ ಪ್ರಾಕ್ಟೀಸ್ ಮಾಡಬಹುದು.
ಗಲಾಟೆ ಶುರು ಮಾಡಿದ್ದು ಕೈ ಪಕ್ಷದವರಾದರೆ ” ಯಾಕೆ ಸ್ವಾಮಿ, ಯಾಕೆ ಹಾಗೆ ಮಾಡಿದ್ರಿ” ಎಂದು ಸಭೆಯಲ್ಲಿದ್ದ ಯಾರೂ ಬೇಕಾದರೂ ಕೇಳಲಿ. ರೌಂಡ್ ಟೇಬಲ್ ಮಾತುಕತೆಯಿರಲಿ. ಸ್ಟೇಜ್ ಅದೆಲ್ಲಾ ಬೇಡಾ. ಯಾಕೆಂದರೆ ಅಲ್ಲಿ ಬರುವ ಪ್ರತಿಯೊಬ್ಬರು ನಾಯಕರೇ ಆಗಿರುವುದರಿಂದ ಅಹಂಗೆ ಪೆಟ್ಟಾಗಬಹುದು. ಒಂದು ವೇಳೆ ಕಮಲದಿಂದ ಕೆಸರು ಚಿಮ್ಮಿದ್ದು ಮೊದಲಾಗಿದ್ದರೆ ಅದಕ್ಕೂ ಉತ್ತರ ಸಿಗಲಿ. ಕೊನೆಗೆ ಎಲ್ಲರೂ ಒಂದು ಡಿಸೈಡ್ ಮಾಡಲಿ. ನಾವು ನಮ್ಮ ಬೆಂಬಲಿಗರ ಖುಷಿಗಾಗಿ ಹೇಳಿಕೆ ಕೊಡಲ್ಲ, ನಾವು ವೋಟಿನ ರಾಜಕೀಯಕ್ಕಾಗಿ ಹೇಳಿಕೆ ಕೊಡಲ್ಲ. ನಾವು ನಮ್ಮ ಜಿಲ್ಲೆಯಲ್ಲಿ ಯಾರಾದರೂ ಶಾಂತಿ ಕದಡಿದರೆ ಅವನನ್ನು ಕರೆದು ಬುದ್ಧಿ ಹೇಳುತ್ತೇವೆ. ಅವನ ಧರ್ಮ, ಜಾತಿ ನೋಡದೆ ಹೋರಾಟ ಮಾಡುತ್ತವೆ ಒಟ್ಟಾಗಿ ಅಲ್ಲಿಗೆ ಹೋಗಿ ಅದನ್ನು ಅಲ್ಲಿಯೇ ಸುಧಾರಿಸುತ್ತೇವೆ. ಎಲ್ಲಕ್ಕಿಂತ ಹೆಚ್ಚಾಗಿ ನಾವು ರಾಜಕೀಯಕ್ಕೆ ಬಂದದ್ದು ಜಿಲ್ಲೆಯ ಅಭಿವೃದ್ಧಿ ಮಾಡಲು, ಹೊಟ್ಟೆಪಾಡಿಗಲ್ಲ ಎಂದು ಮನಸ್ಸಿನಲ್ಲಿ ನಿತ್ಯ ಬೆಳಿಗ್ಗೆ ಹೇಳಿಯೇ ಹೊರಡುತ್ತೇವೆ ಎಂದು ಇವರೆಲ್ಲ ನಿಶ್ಚಯ ಮಾಡಿದರೆ ಭವಿಷ್ಯದಲ್ಲಿ ಯಾವ ಗಲಾಟೆನೂ ಆಗುವುದಿಲ್ಲ. ನನ್ನನು ರಾಜಕೀಯವಾಗಿ ಬೆಳೆಸಿದ ಈ ಜಿಲ್ಲೆಗೆ ಕೊರೋನ ಮಾಹಾಮಾರಿ ಹರಡಿರುವಈ ಸಮಯದಲ್ಲಿ ನಾವು ಪಕ್ಷ ಬೇದ ಮರೆತು ನನ್ನ ಜಿಲ್ಲೆಯ ರಕ್ಷಣೆಗೆ ನಾವು ಕಟ್ಟಬದ್ದರು ಎಂದು ಬೇಕಾದರೆ ಒಮ್ಮೆ ಮಾಡಿ ನೋಡೋಣ. ಒಂದೇ ದೇಶ, ಒಂದೇ ತೆರಿಗೆ ಇದ್ದ ಹಾಗೆ.ನಮಗೆ ಒಂದೇ ಗುರಿ, ಕೊರೋನ ರೋಗ ತಡೆಗಟ್ಟುವುದು ನಮ್ಮವರಿಗೆ ಉತ್ತಮ ವೈದ್ಯಕೀಯ ಚಿಕಿತ್ಸೆ ದೊರಕುವಂತೆ ನೋಡಿ ಕೊಳ್ಳುತ್ತವೆ ಎಂದು ಒಂದಾಗಲಿ.
Leave A Reply