• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured

ಸುಪ್ರೀಂಕೋರ್ಟ್ ಆದೇಶದಂತೆ ಪ್ರತಿಭಟನೆಗೆ ಜಿಲ್ಲಾಡಳಿತ ಸೂಕ್ತ ಸ್ಥಳ ಸೂಚಿಸಲಿ!!

Hanumantha Kamath Posted On October 8, 2020
0


0
Shares
  • Share On Facebook
  • Tweet It

ನಿಮಗೆ ಶಾಹಿನ್ ಭಾಗ್ ಘಟನೆ ನೆನಪಿರಬಹುದು. ಸಿಎಎ ವಿರುದ್ಧ ಒಂದಿಷ್ಟು ಮಹಿಳೆಯರು ದಕ್ಷಿಣ ದೆಹಲಿಯ ಪ್ರಮುಖ ಜಂಕ್ಷನ್ ಶಾಹಿನ್ ಭಾಗ್ ನಲ್ಲಿ ಡಿಸೆಂಬರ್ 15 ರಿಂದ ಮೂರು ತಿಂಗಳ ತನಕ ರಸ್ತೆ ಬ್ಲಾಕ್ ಮಾಡಿ ಪ್ರತಿಭಟನೆಗೆ ಕುಳಿತಿದ್ದರು. ಯಾರು ಏನು ಮಾಡಿದರೂ ಅವರು ಏಳಲೇ ಇಲ್ಲ. ಒಬ್ಬ ಪ್ರತಿಭಟನೆಯ ವೇದಿಕೆಯಿಂದ 50 ಮೀಟರ್ ದೂರದಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿದ್ದ. ಕೆಲವು ಆಗಂತುಕರು ಬಂದು ಪೆಟ್ರೋಲ್ ಬಾಂಬ್ ಎಸೆಯುವ ದುಸ್ಸಾಹಸ ಮಾಡಿದ್ದರು. ಯಾವುದೇ ಸಾವು, ನೋವು ಸಂಭವಿಸಿಲ್ಲವಾದರೂ ದೆಹಲಿಯ ನಾಗರಿಕರು ಮಾತ್ರ ಪ್ರಮುಖ ರಸ್ತೆಯೊಂದು ನಿರಂತರವಾಗಿ ಬ್ಲಾಕ್ ಆಗಿರುವಾಗ ಸುತ್ತು ಬಳಸಿ ಹೋಗಿ ಸಾಕಷ್ಟು ಸಮಯ ಮತ್ತು ಪೆಟ್ರೋಲ್, ಡಿಸೀಲ್ ವೇಸ್ಟ್ ಮಾಡಿದ್ದರು. ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆಯ ಹಕ್ಕು ಪ್ರತಿಯೊಬ್ಬ ನಾಗರಿಕನೂ ಇದ್ದೇ ಇದೆ. ಹಾಗಂತ ಆ ಹಕ್ಕಿನ ನೆಪದಲ್ಲಿ ಬೇರೆ ನಾಗರಿಕರಿಗೆ ತೊಂದರೆ ಉಂಟಾಗುವ ಹಾಗೆ ನಡೆದುಕೊಳ್ಳಬಾರದು ಎಂದು ಸುಪ್ರೀಂ ಕೋರ್ಟ್ ಇದರ ತ್ರಿಸದಸ್ಯ ಪೀಠದ ನ್ಯಾಯಮೂರ್ತಿಗಳಾದ ಎಸ್ ಕೆ ಕೌಲ್, ಕೃಷ್ಣ ಮುರಾರಿ, ಹೃಷಿಕೇಶ್ ರಾಯ್ ತಮ್ಮ ತೀರ್ಪಿನಲ್ಲಿ ಬುಧವಾರ ಹೇಳಿದ್ದಾರೆ. ಸಭ್ಯತೆ ಮತ್ತು ಪ್ರಜಾಪ್ರಭುತ್ವ ಪರಸ್ಪರ ಜೊತೆಯಾಗಿ ಸಾಗಬೇಕು. ಪ್ರತಿಭಟನೆ ಮಾಡಲು ಆಯಾ ಆಡಳಿತಗಳು ನಿಗದಿತ ಸ್ಥಳವನ್ನು ಕಾಯ್ದಿರಿಸಬೇಕು ಎಂದು ಹೇಳಿದ್ದಾರೆ.

ಇದು ನಿಜಕ್ಕೂ ಉತ್ತಮ ಆದೇಶ. ನಮ್ಮ ಮಂಗಳೂರಿನಲ್ಲಿ ಕೂಡ ಯಾವುದೇ ಪ್ರಮುಖ ಪ್ರತಿಭಟನೆ ಮಾಡುವುದಾದರೆ ಅದು ಜಿಲ್ಲಾಧಿಕಾರಿ ಕಚೇರಿಯ ಹೊರಗೆ ಎನ್ನುವಂತಹ ಮಾತಿದೆ. ನಾಲ್ಕೈದು ಜನ ಒಂದು ಶಾಮಿಯಾನ ಹಾಕಿ ತಮ್ಮ ಪಾಡಿಗೆ ಕುಳಿತುಕೊಂಡರೆ ಅಥವಾ ಮೈಕಿನಲ್ಲಿ ಮಾತನಾಡುತ್ತಿದ್ದರೆ ಏನೂ ತೊಂದರೆ ಇಲ್ಲ. ಆದರೆ ಕೆಲವೊಮ್ಮೆ ನೂರಾರು ಜನ ಸೇರುತ್ತಾರೆ. ಅವರು ಅಲ್ಲಲ್ಲಿ ಗುಂಪುಗೂಡಿ ನಿಂತಿರುತ್ತಾರೆ. ಅವರ ವಾಹನಗಳನ್ನು ಅಲ್ಲಲ್ಲಿ ಅಡ್ಡಾದಿಡ್ಡಿ ನಿಲ್ಲಿಸಿರುತ್ತಾರೆ. ಇದು ಜಿಲ್ಲಾಧಿಕಾರಿ ಕಚೇರಿಗೆ ಹೋಗಿ ಬರುವವರಿಗೆ ಮಾತ್ರವಲ್ಲ, ಸ್ಟೇಟ್ ಬ್ಯಾಂಕ್ ಸಮೀಪ ಕೆಲಸ ಇರುವವರಿಗೂ ಕಿರಿಕಿರಿ ಉಂಟು ಮಾಡುತ್ತದೆ. ಇದು ಯಾವುದೇ ಜಾತಿ, ಧರ್ಮ, ಪಕ್ಷಕ್ಕೆ ಸೀಮಿತವಾಗಿ ನಾನು ಹೇಳುತ್ತಿಲ್ಲ. ಯಾವುದೇ ಸಂಘಟನೆ ಇರಲಿ, ತಮ್ಮ ಹೋರಾಟದ ಹೆಸರಿನಲ್ಲಿ ಬೇರೆಯವರಿಗೆ ತೊಂದರೆ ಅಡ್ಡಿಪಡಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಟವಾಗಿ ಹೇಳಿರುವುರಿಂದ ಇದು ಮಂಗಳೂರಿಗೂ ಅನ್ವಯವಾಗುತ್ತದೆ.

ಹಾಗಾದ್ರೆ ಏನು ಮಾಡಬೇಕು? ಮಂಗಳೂರಿನಲ್ಲಿ ಪ್ರತಿಭಟನೆಗೆಂದೇ ಒಂದು ಜಾಗವನ್ನು ಮೀಸಲಿಡಬೇಕು. ಇನ್ನು ಮುಂದೆ ಜಿಲ್ಲಾಧಿಕಾರಿ ಕಚೇರಿಯ ಗೇಟಿನ ಬಳಿ ಅಥವಾ ಮಂಗಳೂರು ಮಹಾನಗರ ಪಾಲಿಕೆಯ ಮುಂಭಾಗದಲ್ಲಿ ಪ್ರತಿಭಟನೆ ಮಾಡುವುದಕ್ಕೆ ಪೂರ್ಣ ವಿರಾಮ ಹಾಕಬೇಕು. ಅದರ ಬದಲು ಕೇಂದ್ರ ಅಥವಾ ನೆಹರೂ ಮೈದಾನದ ಒಂದು ಕಾರ್ನರ್ ನಲ್ಲಿ ಪ್ರತಿಭಟನೆಗೆಂದು ಜಾಗ ಮೀಸಲಿಡಬೇಕು. ಬೇಕಾದರೆ ಸಣ್ಣ ವೇದಿಕೆ ನಿರ್ಮಿಸಲಿ. ಸಾಧ್ಯವಾದರೆ ಒಂದು ತಗಡಿನ ಚಪ್ಪರವನ್ನು ವೇದಿಕೆಗೆ ಹಾಕಲಿ. ಎದುರಿಗೆ ಗಾಂಧಿಯೋ, ನೆಹರೋ ಪ್ರತಿಮೆ ಇದ್ದರೂ ಪರವಾಗಿಲ್ಲ. ಅದೇ ಜಾಗದಲ್ಲಿ ಪ್ರತಿಭಟನೆ ಮಾಡಿ ಎಂದು ಜಿಲ್ಲಾಡಳಿತ ಸೂಚನೆ ನೀಡಲಿ. ಗಂಟಲು ಚೀರುವ ತನಕ ಬೇಕಾದರೆ ಪ್ರತಿಭಟನಾಕಾರರ ಮುಖಂಡರು ಮಾತನಾಡಲಿ. ಬೇಕಾದರೆ ಮೀಡಿಯಾದವರಿಗೆ ಚಿತ್ರೀಕರಣ ಮಾಡಲು ಒಂದು ಸರಿಯಾದ ಜಾಗದಲ್ಲಿ ಕ್ಯಾಮೆರಾ ಇಡುವ ವ್ಯವಸ್ಥೆ ಕೂಡ ಮಾಡಲಿ. ಯಾಕೆಂದರೆ ಕೆಲವು ನಾಯಕರಿಗೆ ಮೀಡಿಯಾದವರ ಕ್ಯಾಮೆರಾ ಬರದೆ ಆಸಕ್ತಿ ಬರುವುದಿಲ್ಲ. ಮೀಡಿಯಾ ಸ್ಟ್ಯಾಂಡ್ ನೋಡಿದಾಗ ಅಲ್ಲಿ ಮೂರ್ನಾಕು ಕ್ಯಾಮೆರಾ ಇದ್ರೆ ಉಮ್ಮೇದು ಆಟೋಮೇಟಿಕ್ ಆಗಿ ಬರುತ್ತದೆ. ನಂತರ ಐದು ಜನ ಮುಖಂಡರು ಪಾದಯಾತ್ರೆಯ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಅರ್ಪಿಸಲಿ. ಇದರಿಂದ ಪ್ರತಿಭಟನೆಯೂ ಆಯಿತು, ಯಾರಿಗೂ ತೊಂದರೆಯೂ ಆಗಲಿಲ್ಲ. ಈಗ ಶಾಹೀನ್ ಭಾಗ್ ಪ್ರಕರಣದಲ್ಲಿ ಭಾರತದ ಸರ್ವೋಚ್ಚ ನ್ಯಾಯಾಲಯ ತೀರ್ಪು ನೀಡಿದ ನಂತರ ನಮ್ಮ ಜಿಲ್ಲಾಡಳಿತ ಕೂಡ ತಕ್ಷಲ್ಲಿಂತಹ ಒಂದು ನಿರ್ಧಾರಕ್ಕೆ ಬರಬೇಕು.

ಇನ್ನು ಇಂತಹ ತೀರ್ಮಾನ ಯಾವತ್ತೋ ಆಗಬೇಕಿತ್ತು. ಶಾಹಿನ್ ಭಾಗ್ ನಲ್ಲಿ ಪ್ರತಿಭಟನಾಕಾರರು ನಿರಂತರ ಪ್ರತಿಭಟನೆ ಮಾಡಿ ರಸ್ತೆ ಬ್ಲಾಕ್ ಮಾಡಿದಾಗ ಕೆಲವರು ಸುಪ್ರೀಕೋರ್ಟಿಗೆ ಸಾರ್ವಜನಿಕ ಹಿತಾಸಕ್ತಿ ದಾವೆ ಹಾಕಿದ್ದರು. ಆಗ ಸುಪ್ರೀಂಕೋರ್ಟ್ ತ್ರಿಸದಸ್ಯ ಸಮಿತಿ ಮಾಡಿ ಪ್ರತಿಭಟನಾಕಾರರೊಂದಿಗೆ ಸಂಧಾನಕ್ಕೆ ಕಳುಹಿಸಿತ್ತು. ಆದರೆ ಪ್ರತಿಭಟನಾಕಾರರು ಯಾವುದೇ ರಾಜಿಗೆ ಸಿದ್ಧರಿರಲಿಲ್ಲ. ಅದರ ನಂತರ ಕೋವಿಡ್ 19 ಕಾರಣದಿಂದ ಲಾಕ್ ಡೌನ್ ಆಗುವ ಸಂದರ್ಭ ಬಂದಾಗ ಆಗ ಅನಿವಾರ್ಯವಾಗಿ ಶಾಹಿನ್ ಭಾಗ್ ಖಾಲಿಯಾಗಿತ್ತು. ನಾವು ಸರಿಯಾದ ದಾರಿಗೆ ಬರದಿದ್ದರೆ ಪ್ರಕೃತಿಯೇ ನಮ್ಮನ್ನು ದಾರಿಗೆ ತರುತ್ತಾಳೆ ಎನ್ನುವುದು ಸಾಬೀತಾಯಿತು!

0
Shares
  • Share On Facebook
  • Tweet It




Trending Now
ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ಬೆನ್ನಲ್ಲೇ ದೇವೇಗೌಡರಿಂದ ಲೋಕಲ್ ಮೈತ್ರಿ ಕಟ್ ಘೋಷಣೆ!
Hanumantha Kamath December 27, 2025
ಶಾಲೆಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ ಕಡ್ಡಾಯಗೊಳಿಸಿ ಉತ್ತರಾಖಂಡ ಸಿಎಂ ಸೂಚನೆ!
Hanumantha Kamath December 23, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ಬೆನ್ನಲ್ಲೇ ದೇವೇಗೌಡರಿಂದ ಲೋಕಲ್ ಮೈತ್ರಿ ಕಟ್ ಘೋಷಣೆ!
    • ಶಾಲೆಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ ಕಡ್ಡಾಯಗೊಳಿಸಿ ಉತ್ತರಾಖಂಡ ಸಿಎಂ ಸೂಚನೆ!
    • ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದ ತಿರುವನಂತಪುರಂ ಪಾಲಿಕೆಯ ಬಿಜೆಪಿ ಸದಸ್ಯ!
    • ಭಾರತ ಒಂದು ‘ಹಿಂದೂ ರಾಷ್ಟ್ರ’ – ಸಂವಿಧಾನಿಕ ಮಾನ್ಯತೆ ಅಗತ್ಯವಿಲ್ಲ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್
    • ಸೋನಿಯಾ ಗಾಂಧಿ ಕುರಿತು ರೇವಂತ್ ರೆಡ್ಡಿ ಹೇಳಿಕೆ: ಬಿಜೆಪಿ ತೀವ್ರ ಟೀಕೆ
    • ಬಾಂಡ್ ರದ್ದಾದ ಬಳಿಕ ರಾಜಕೀಯ ಪಕ್ಷಗಳಿಗೆ ಬಂದ 3811 ಕೋಟಿಯಲ್ಲಿ ಬಿಜೆಪಿಯ ಪಾಲು 82%!
    • ಭಕ್ತಿಗೀತೆ ಹಾಡುತ್ತಿದ್ದ ಗಾಯಕಿಯ ಮೇಲೆ ದರ್ಪ! ಜಾತ್ಯಾತೀತ ಗೀತೆ ಹಾಡಲು ಒತ್ತಾಯ!
    • ರೈತರ ಮಕ್ಕಳನ್ನು ಮದುವೆಯಾಗುವ ಹೆಣ್ಮಕ್ಕಳಿಗೆ 10 ಲಕ್ಷ ನೀಡಿ - ಸರಕಾರಕ್ಕೆ ಶಾಸಕ ಆಗ್ರಹ!
    • ವಿಡಿಯೋ ಕಾಲ್ ನಲ್ಲಿ ನಿಶ್ಚಿತಾರ್ಥ-ಎಲ್ ಇಡಿ ಸ್ಕ್ರೀನ್ ಗೆ ಆರತಿ!
    • ಅಜಾನ್ ಚರ್ಚೆಯ ಸಂದರ್ಭದಲ್ಲಿ ದೀಪಾವಳಿ ಪಟಾಕಿ ವಿಷಯ ಎತ್ತಿದ ಸಚಿವ!
  • Popular Posts

    • 1
      ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ಬೆನ್ನಲ್ಲೇ ದೇವೇಗೌಡರಿಂದ ಲೋಕಲ್ ಮೈತ್ರಿ ಕಟ್ ಘೋಷಣೆ!

  • Privacy Policy
  • Contact
© Tulunadu Infomedia.

Press enter/return to begin your search