• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಅಕ್ರಮ ಕಟ್ಟಡಗಳ ಮಾಲೀಕರು ಸಣ್ಣ ಕುಳಗಳಲ್ಲ.

Hanumantha Kamath Posted On October 9, 2020


  • Share On Facebook
  • Tweet It

ಒಬ್ಬ ಸಿಟಿ corporation ಕಮೀಷನರ್ ಅವರ ಆದೇಶಕ್ಕೆ ಬೆಲೆ ಇಲ್ಲದಿದ್ದ ಮೇಲೆ ಅಲ್ಲಿ ಒಳ್ಳೆಯ ಆಡಳಿತವನ್ನು ತಾನೇ ಹೇಗೆ ನಿರೀಕ್ಷಿಸಬಹುದು ಎನ್ನುವುದು ಗೊತ್ತಾಗುತ್ತಿಲ್ಲ. ಯಾರನ್ನು ದೂರುವುದು ತಿಳಿಯುತ್ತಿಲ್ಲ. ಹಿಂದಿನ ಶಾಸಕರಿಂದ ಹಿಡಿದು ಪಾಲಿಕೆ ಯಲ್ಲಿ ಆಗ ಆಡಳಿತದಲ್ಲಿರುವ ಸದಸ್ಯರನ್ನು ಸೇರಿಸಿಕೊಂಡು ಗಟ್ಟಿ ಗುಂಡಿಗೆಯ ವಿಪಕ್ಷ ಇಲ್ಲದೇ ಇದ್ದಾಗ ಪಾಲಿಕೆಯ ಅಂಗಣದಲ್ಲೆ ಒಂದು ಅಕ್ರಮ ಕಟ್ಟಡ ಎದ್ದು ನಿಂತರೂ ಇವರಿಗೆ ಕಾಣಿಸಲಿಕ್ಕಿಲ್ಲ. ಕಟ್ಟುವವನು ನಮಗೆ ಕೊಡಬೇಕಾದದ್ದು ಕೊಟ್ಟಿದ್ದಾನಾ ಎಂದು ಕೇಳಿಸಿ ತಲೆಯ ಮೇಲೆ ಟವೆಲ್ ಹಾಕಿ ಪಕ್ಕದ ರಸ್ತೆಯಿಂದ ಹೊರಟುಹೋಗುವಷ್ಟು ಮಹಾ ಫಟಿಂಗರು ಅಲ್ಲಿ ಇದ್ದಾರೆ. ಇಲ್ಲದೆ ಹೋದರೆ ಆಯುಕ್ತರಾಗಿದ್ದ ಡಾ|ಹರೀಶ್ ಕುಮಾರ್ ಅವರು 176 ಅಕ್ರಮ ಕಟ್ಟಡಗಳು ಎಂದು ಗುರುತಿಸಿದ್ದರೂ ಅದನ್ನು ಮುಟ್ಟಲೂ ಇವರು ಹೋಗಿರಲಿಲ್ಲ. ಅದರಲ್ಲಿ 55 ಕಟ್ಟಡದವರನ್ನು ಬಿಟ್ಟು ಉಳಿದವರು ನ್ಯಾಯಾಲಯದ ಮೊರೆ ಹೋಗಿ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡಿದ್ದಾರೆ. ಅದು ಬೇರೆ ವಿಷಯ. ಅದನ್ನು ನ್ಯಾಯಾಲಯವೇ ನಿರ್ಧರಿಸುತ್ತದೆ. ಅವರಿಗೆ ಜಯ ಸಿಗುತ್ತಾ ಇಲ್ಲವಾ ಬೇರೆ ವಿಷಯ. ಆದರೆ ನ್ಯಾಯಾಲಯದ ಕಟಕಟೆ ಏರಿದವರು ಮಾತ್ರ ಸಣ್ಣ ಕುಳಗಳಲ್ಲ. ಅವರ ಹಣದ ತಾಕತ್ತಿನ ಎದುರು ಅವರು ಜಯವನ್ನು ಪಡೆದುಕೊಂಡೇ ಬರಬಹುದು. ಯಾಕೆಂದರೆ ನ್ಯಾಯಾಲಯಕ್ಕೆ ಹೋದ ಬಿಲ್ಡರ್ಸ್ ಗಳಲ್ಲಿ ರೋಹನ್ ಮೊಂತೆರೊ, , ಭಂಡಾರಿ ಬಿಲ್ಡರ್ಸ್, ಅಪೂರ್ವ ಬಿಲ್ಡರ್ಸ್ , ಗಣೇಶ್ ಶೆಟ್ಟಿ, ಸೋಮಯಾಜಿ, ರೇವಣಕರ್ ಸಹಿತ ಅನೇಕ ದಿಗ್ಗಜ ಬಿಲ್ಡರ್ಸ್ ಇದ್ದಾರೆ. ಇವರ ಬೆನ್ನ ಹಿಂದೆ ಮಂಗಳೂರು ಮಹಾನಗರ ಪಾಲಿಕೆಯ ಕೆಲವು ಫುಲ್ ಟೈಮ್ ವೈಟ್ ಎಂಡ್ ವೈಟ್ ಸದಸ್ಯರು ಇದ್ದಾರೆ. ಆದ್ದರಿಂದ ಅಂತಹ ಬಲಿಷ್ಟ ಬಿಲ್ಡರ್ಸ್ ಯಾವ ಅಲೆ ಬಂದರೂ ಅದರಿಂದ ನುಸುಳಿ ಹೋಗುವಷ್ಟು ಚಾಣಾಕ್ಷತನವನ್ನು ಹೊಂದಿರುತ್ತಾರೆ. ಆದ್ದರಿಂದ ಯಾವ ಕಮೀಷನರ್ ಬಂದರೂ ಕೆಲವು ನುರಿತ ಬಿಲ್ಡರ್ಸ್ ಗಳನ್ನು ರಕ್ಷಿಸಲು ಅವರ ಕೃಪಾಪೋಷಿತ ಸದಸ್ಯರು ಟೊಂಕ ಕಟ್ಟಿ ನಿಲ್ಲುತ್ತಾರೆ. ಇರಲಿ, ಅದು ಅವರ ಬದುಕುವ ಕಲೆ. ಆದರೆ ನ್ಯಾಯಾಲಯದ ಬಾಗಿಲ ಕಡೆಗೂ ಮುಖ ಮಾಡದ ಉಳಿದ 55 ಕಟ್ಟಡಗಳು ಹಾಗೇ ಇದ್ದಾವಲ್ಲ, ಅವುಗಳನ್ನು ಯಾಕೆ ಮುಟ್ಟಲು ಯಾರು ಮನಸ್ಸು ಮಾಡಿಲ್ಲ. ನ್ಯಾಯಾಲಯದಲ್ಲಿ ಪಾಲಿಕೆ ಗೆದ್ದಿರುವ ಕಟ್ಟಡಗಳ ಮೇಲೆ ಯಾಕೆ ಜೆ ಸಿ ಬಿ ಬಿಡಲಿಲ್ಲ?

ಅಷ್ಟಕ್ಕೂ ನ್ಯಾಯಾಲಯದಲ್ಲಿ ಹೋರಾಡಲು ಹಣವಿಲ್ಲದೆ ಆ 55 ಕಟ್ಟಡಗಳ ಮಾಲೀಕರು ಸುಮ್ಮನೆ ಕುಳಿತದ್ದಲ್ಲ. ಅದರಲ್ಲಿ ಇರುವವರೆಲ್ಲ ವಿದ್ಯಾವಂತರೇ. ಸಾಕಷ್ಟು ಹಣ ಮಾಡಿ ಅದನ್ನು ಹೇಗೆ ಖರ್ಚು ಮಾಡುವುದು ಎಂದು ಗೊತ್ತಾಗದೆ ಕಟ್ಟಡ constructionಕ್ಕೆ ಹಣ ಹೂಡಿ ಲಾಭ ಮಾಡಿಕೊಳ್ಳಲು ಮನಸ್ಸು ಮಾಡಿದ ವೈದ್ಯರ, ವಕೀಲರ ಕಟ್ಟಡಗಳು ಅದರಲ್ಲಿ ಸೇರಿವೆ. ತಾವು ನ್ಯಾಯಾಲಯಕ್ಕೆ ಹೋದರೆ ನ್ಯಾಯಾಲಯದ ಫೀಸನ್ನು ವೇಸ್ಟ್ ಮಾಡುವುದಲ್ಲದೆ ಒಂದು ಗರಿಕೆ ಹುಲ್ಲು ಕೂಡ ಹುಟ್ಟುವುದಿಲ್ಲ, ತಮ್ಮ ಕಟ್ಟಡ ಗೋವಿಂದ ಎಂದು ಅವರಿಗೆ ಗೊತ್ತೇ ಇದೆ. ಆದ್ದರಿಂದ ಅವರು ಅಕ್ರಮ-ಸಕ್ರಮ ಸಮಿತಿಯ ಮುಂದೆ ಕೂಡ ತಮ್ಮ ಮನವಿಯನು ಸಲ್ಲಿಸಿಲ್ಲ. ಒಂದು ವಾಸಕ್ಕೆ ಯೋಗ್ಯವಾದ ಕಟ್ಟಡ 50% ಅಕ್ರಮ constructionದಿಂದ ಇದ್ದರೆ ಮತ್ತು ಒಂದು ವಾಣಿಜ್ಯ ಕಟ್ಟಡ 25% ಅಕ್ರಮ construction ಹೊಂದಿದ್ದರೆ ಆಗ ಮಾತ್ರ ಅದನ್ನು ಅಕ್ರಮ-ಸಕ್ರಮ ಸಮಿತಿಯವರು ಪರಿಶೀಲಿಸಲು ಮುಂದಾಗುತ್ತಾರೆ. ಒಂದು ನಿರ್ದಿಷ್ಟ ದಂಡವನ್ನು ವಿಧಿಸಿ ಅಂತಹ ಕಟ್ಟಡಗಳನ್ನು ಸಕ್ರಮಗೊಳಿಸಲಾಗುತ್ತದೆ. ಆದರೆ ಅದಕ್ಕಿಂತ ದೊಡ್ಡ ಅಕ್ರಮ constructionವಾಗಿದ್ದಲ್ಲಿ ಅದನ್ನು ಸಕ್ರಮಗೊಳಿಸಲು ಸಾಧ್ಯವಿಲ್ಲ. ಆಗ ಕಟ್ಟಡವನ್ನು ಧರಾಶಾಯಿಗೊಳಿಸಲೇಬೇಕು. ಅದು ಗೊತ್ತಿರುವುದರಿಂದ 55 ಅಕ್ರಮ ಕಟ್ಟಡಗಳ ಮಾಲೀಕರು ಏನೂ ಮಾಡದೆ ಸುಮ್ಮನೆ ಕುಳಿತುಕೊಂಡಿದ್ದಾರೆ.

ಎಲ್ಲಿಯ ತನಕ ಅಂದರೆ ಅಕ್ರಮ ಕಟ್ಟಡಗಳ ಪಟ್ಟಿಯಲ್ಲಿ ಕಾಂಗ್ರೆಸ್ ಶಾಸಕರೊಬ್ಬರ ಕಟ್ಟಡವೂ ಇದೆ. ನೀವು ಮಂಗಳೂರಿನ ಠಾಗೋರ್ parkಗೆ ಹೋಗುವ ದಾರಿಯಲ್ಲಿ ಹಂಪನಕಟ್ಟೆಯಿಂದ ಮುಂದೆ ಸುಂದರ್ ರಾಮ್ ಶೆಟ್ಟಿ ರಸ್ತೆಯಲ್ಲಿ ಪ್ರಯಾಣಿಸುತ್ತಿರಲ್ಲ, ಆಗ ಬಲಭಾಗಕ್ಕೆ kasturba ಮೆಡಿಕಲ್ ಕಾಲೇಜು ಸಿಗುತ್ತದೆ. ಅದರ ಸರಿಯಾಗಿ ಎದುರು ಒಂದು ಹಳೆ ಕಟ್ಟಡ ಇದೆ. ಅದರ ಹೆಸರು ಇಂದ್ರಪ್ರಸ್ಥ . ಆ ಅಕ್ರಮ ಕಟ್ಟಡವನ್ನು ಡಾ|ಹರೀಶ್ ಕುಮಾರ್ ತಮ್ಮ ಕೆಡವುವ ಪಟ್ಟಿಯಲ್ಲಿ ಸೇರಿಸಿಕೊಂಡಿದ್ದರು. ಆ ಕಟ್ಟಡದ ಮಾಲೀಕರು ಯಾರು ಗೊತ್ತಾ, ಬೆಂಗಳೂರು ನಗರದ ಪವರ್ ಫುಲ್ ಶಾಸಕರಲ್ಲಿ ಒಬ್ಬರಾಗಿರುವ ,ಇತ್ತೀಚೆಗೆ ಮಗನಿಂದ ಖ್ಯಾತಿ ಗಳಿಸಿದ ಎ.ಹ್ಯಾರಿಸ್. ಕಾಂಗ್ರೆಸ್ ಶಾಸಕರಾಗಿರುವ ಹ್ಯಾರಿಸ್ ಅವರ ಮಂಗಳೂರು ಕಟ್ಟಡವನ್ನು ಕೆಡವಲು ಹರೀಶ್ ಕುಮಾರ್ ಮುಂದಾಗಿದ್ದರು. ನಂತರ ಹರೀಶ್ ಕುಮಾರ್ ಅವರನ್ನು ಇಲ್ಲಿಂದ ಬೇರೆಡೆ ಕಳುಹಿಸಿಕೊಡಲಾಯಿತು. ಉಳಿದದ್ದು ನಿಮಗೆ ಅರ್ಥವಾಗಿರಬಹುದು. ಆವತ್ತೇ ಬಿಲ್ಡರ್ಸ್ ಗಳ ಮೇಲೆ ಕಠಿಣ ಕ್ರಮ ತೆಗೆದುಕೊಂಡಿದ್ದಲ್ಲಿ ಮಂಗಳೂರಿನಲ್ಲಿ ಹೀಗೆ ರಾಜಾರೋಷವಾಗಿ ಅಡ್ಡಾದಿಡ್ಡಿ, ಬೇಕಾಬಿಟ್ಟಿ ಕಟ್ಟಡಗಳ construction ಅಗುತ್ತಿರಲಿಲ್ಲ. ಆದರೆ ಕಠಿಣ ಕ್ರಮ ತೆಗೆದುಕೊಳ್ಳುವ ಧೈರ್ಯ ಯಾರಲ್ಲೂ ಕಾಣಿಸುತ್ತಿಲ್ಲ!

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Hanumantha Kamath May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Hanumantha Kamath May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search