• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured

ಅನಧಿಕೃತ ನಿರ್ಮಾಣಗಳಿಗೆ ಗತಿಕಾಣಿಸಲಿರುವ ಅಕ್ಷಯ್ ಶ್ರೀಧರ್!!

Tulunadu News Posted On November 7, 2020
0


0
Shares
  • Share On Facebook
  • Tweet It


ಒಬ್ಬ ಅಧಿಕಾರಿ ಒಂದೇ ಸರಕಾರಿ ಕಚೇರಿಯಲ್ಲಿ 30 ವರ್ಷಗಳಿಂದ ಗೂಟ ಹೊಡೆದು ಕೂತಿದ್ದರೆ ಅಂತವರ ಬೇರುಗಳು ನೆಲದ ಆಳಕ್ಕೆ ಇಳಿದು ಅದರ ರೆಂಬೆ ಕೊಂಬೆಗಳಲ್ಲಿ ಪಕ್ಷಿಗಳು ಗೂಡು ಕಟ್ಟಿಕೊಳ್ಳುತ್ತವೆ. ಹಾವುಗಳು ಹುತ್ತ ಕಟ್ಟಿ ಬಿಲ ಸೇರಿಕೊಂಡಿರುತ್ತವೆ. ಇರುವೆಗಳು ಗೆದ್ದಲು ಮಾಡಿಕೊಂಡಿರುತ್ತವೆ. ಆದ್ದರಿಂದ ಒಂದೇ ಅಧಿಕಾರಿಯನ್ನು ಹೆಚ್ಚು ವರ್ಷ ಒಂದೇ ಕಡೆಯಲ್ಲಿ ಬಿಟ್ಟರೆ ಅವರು ತಾವು ಹಾಳಾಗುವುದಲ್ಲದೆ ಸುತ್ತಲಿನ ಪರಿಸರ ಮತ್ತು ಜನರನ್ನು ಕೂಡ ಹಾಳು ಮಾಡಿಬಿಡುತ್ತಾರೆ. ಸದ್ಯಕ್ಕೆ ಇದಕ್ಕೆ ಜೀವಂತ ಉದಾಹರಣೆ ಮಂಗಳೂರು ಮಹಾನಗರ ಪಾಲಿಕೆಯ ನಗರ ಯೋಜನಾ ಅಧಿಕಾರಿ ಬಾಲಕೃಷ್ಣ ಗೌಡ. ಯಾವ ಸರಕಾರ ಬೇಕಾದರೂ ಬರಲಿ, ದೇಶವೇ ಅಲ್ಲೋಲ ಕಲ್ಲೋಲ ಆಗಲಿ ಇವರು ಪಾಲಿಕೆಯ ಒಳಗಿನಿಂದ ವರ್ಗಾವಣೆ ಆಗಿಲ್ಲ.

ಯಾವಾಗ ಒಬ್ಬ ಅಧಿಕಾರಿ ಮೂರು ದಶಕಗಳಿಗಿಂತಲೂ ಹೆಚ್ಚು ವರ್ಷದಿಂದ ಒಂದೇ ಕಡೆ ಜಿಡ್ಡುಗಟ್ಟಿದ್ದಂತೆ ಇರುತ್ತಾರೋ ನಂತರ ಅವರನ್ನು ತಿಕ್ಕಲು ಯಾರೂ ಹೋಗಲ್ಲ. ಅವರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಹೋಗುತ್ತಾರೆ. ಎಲ್ಲಾ ಬಿಲ್ಡರ್ಸ್, ಉದ್ದಿಮೆದಾರರು ಅವರೊಂದಿಗೆ ಚೆನ್ನಾಗಿ ಇದ್ದು ಬಿಡುತ್ತಾರೆ. ರಾಜಕಾರಣಿಗಳು ಕೂಡ ಅಡ್ಜೆಸ್ಟ್ ಆಗಿ ಹೋಗುತ್ತಾರೆ. ಯಾರೂ ಅಲುಗಾಡಿಸಲಾಗದವರನ್ನು ನಾವು ಕೂಡ ಏನೂ ಮಾಡಲಾಗುವುದಿಲ್ಲ ಎಂದು ಹೆದರಿ ಕೈಲಾಗದವರಂತೆ ಅಂತಹ ಅಧಿಕಾರಿಗಳನ್ನು ಅದೇ ಸ್ಥಾನದಲ್ಲಿ ಮುಂದುವರೆಯಲು ಬಿಡುತ್ತಾರೆ. ಇದರಿಂದ ಜನರಿಗೆ ತೊಂದರೆ ಏನು ಎಂದು ನಿಮಗೆ ಅನಿಸಬಹುದು. ನೀವು ಈಗ ಅನುಭವಿಸುತ್ತಿರುವ ನಗರದ ಬಹುತೇಕ ತೊಂದರೆಗಳಿಗೆ ಇಂತಹ ಅಧಿಕಾರಿಗಳೇ ಕಾರಣ. ಅದು ಹೇಗೆ?
ಮೊದಲನೇಯದಾಗಿ ಪಾರ್ಕಿಂಗ್ ಇಲ್ಲದ ಕಟ್ಟಡಗಳು. ಒಂದು ನಗರ ವೈಜ್ಞಾನಿಕವಾಗಿ ಬೆಳೆಯಬೇಕಾದರೆ ಉತ್ತಮ ಪಾರ್ಕಿಂಗ್ ಇರುವ ಕಟ್ಟಡಗಳು, ರಸ್ತೆ ಅಗಲೀಕರಣಕ್ಕೆ ಸ್ಥಳಾವಕಾಶ ಬಿಟ್ಟಿರುವ ನಿರ್ಮಾಣಗಳು, ಫುಟ್ ಪಾತ್ ಮೇಲೆ ಅನಧಿಕೃತವಾಗಿ ಕಟ್ಟದ ಅಂಗಡಿಗಳು ಇರಬೇಕು. ಆದರೆ ಯಾವಾಗ ಬುಡದಲ್ಲಿ ಅಂಟು ಹಾಕಿ ಕುಳಿತಿರುವ ಅಧಿಕಾರಿಗಳು ಇದ್ದಾಗ ನಗರ ಅವೈಜ್ಞಾನಿಕವಾಗಿ ಬೆಳೆಯುವುದರಲ್ಲಿ ಯಾವುದೇ ಸಂಶಯವಿಲ್ಲ. ಬಹುತೇಕ ಕಡೆ ಯಾವುದೇ ಹೊಸ ಕಟ್ಟಡದಲ್ಲಿ ಪಾರ್ಕಿಂಗ್ ಇರುವುದೇ ಇಲ್ಲ. ಇದ್ದರೂ ತಿಮಿಂಗಿಲದಂತಹ ಕಟ್ಟಡಕ್ಕೆ ಬೆಂಕಿಪೆಟ್ಟಿಗೆಯಂತಹ ಜಾಗ ಪಾರ್ಕಿಂಗ್ ಗೆ ಬಿಟ್ಟಿರುತ್ತಾರೆ. ಇದರಿಂದ ಏನಾಗುತ್ತದೆ? ಆ ಕಟ್ಟಡಕ್ಕೆ ಬರುವಂತಹ ವಾಹನಗಳು ರಸ್ತೆಬದಿಯಲ್ಲಿಯೇ ನಿಂತಿರುತ್ತವೆ. ಎಲ್ಲರೂ ನಮ್ಮದು ಒಂದೇ ಕಾರು ಅಲ್ವಾ, ಅಂತಹುದು ಏನೂ ಆಗುವುದಿಲ್ಲ ಎಂದುಕೊಂಡೇ ರಸ್ತೆಬದಿಯಲ್ಲಿ ಬಿಟ್ಟು ಒಳಗೆ ಹೋಗಿರುತ್ತಾರೆ. ಹೀಗೆ ಅಂದುಕೊಂಡ ಹತ್ತನೆ ಕಾರಿನವನು ಒಳಗೆ ಹೋದ ನಂತರ ಆ ರಸ್ತೆಯಲ್ಲಿ ಒಂದು ಬೈಕ್ ಕೂಡ ಆರಾಮವಾಗಿ ಹೋಗಲು ಕಷ್ಟವಾಗುತ್ತದೆ. ನಗರದೊಳಗೆ ಅನೇಕ ರಸ್ತೆಗಳ ಪರಿಸ್ಥಿತಿ ಇವತ್ತು ಹೀಗೆ ಇದೆ. ಯಾವ ಕಟ್ಟಡ ಕಟ್ಟುವ ಮೊದಲು ಪೇಪರ್ ನಲ್ಲಿ ಸ್ಕೆಚ್ ತೋರಿಸುವಾಗ ಹೇಗಿರುತ್ತೋ, ಕಟ್ಟಡ ಕಟ್ಟಿ ಮುಗಿದ ನಂತರ ಅದು ಒಂಭತ್ತು ತಿಂಗಳ ಬಸುರಿಯ ಲೆವೆಲ್ಲಿಗೆ ಬಂದು ಬಿಡುತ್ತದೆ. ನಂತರ ಏನೂ ಮಾಡಲು ಆಗುವುದಿಲ್ಲ. ಇನ್ನು ಹಲವು ಕಡೆ ಫುಟ್ ಪಾತ್ ಮೇಲೆ ಅನಧಿಕೃತ ನಿರ್ಮಾಣಗಳಿವೆ. ಆ ಫುಟ್ ಪಾತ್ ಮೇಲೆ ನಡೆಯುವ ಪಾದಚಾರಿ ಅಂತಹ ಅಂಗಡಿ ಬಂದಾಗ ಫುಟ್ ಪಾತ್ ನಿಂದ ಇಳಿದು ರಸ್ತೆಯಲ್ಲಿ ನಡೆಯಬೇಕು. ರಸ್ತೆಯಲ್ಲಿ ಆ ಅಂಗಡಿದ್ದೇ ನಾಲ್ಕೈದು ಬೈಕ್, ಸ್ಕೂಟರ್ ನಿಂತಿರುತ್ತದೆ. ಪೀಕ್ ಹವರ್ ನಲ್ಲಿ ವಯಸ್ಸಾದವರು ಇಂತಹ ಫುಟ್ ಪಾತ್ ನಲ್ಲಿ ಸಿಲುಕಿಕೊಂಡು ಸುರಕ್ಷಿತವಾಗಿ ಮನೆಗೆ ಬಂದರೆ ದೇವರ ದಯೆಯಿಂದ ಆಯುಷ್ಯ ಗಟ್ಟಿ ಇದೆ ಎಂದೇ ಅರ್ಥ. ಅಲ್ಲಿಯೇ ಫೆಕ್ಸ್, ಅನಧಿಕೃತ ಹೋರ್ಡಿಂಗ್ಸ್ ಇದ್ದರೆ ಅಂತು ಮುಗಿಯಿತು. ಅವು ಜೋರು ಮಳೆಗೆ ಯಾವಾಗ ರಸ್ತೆಗೆ ಅಡ್ಡಲಾಗಿ ಬೀಳುತ್ತೆ ಎನ್ನುವುದು ವರುಣದೇವನಿಗೆ ಮಾತ್ರ ಗೊತ್ತು.
ಇನ್ನು ಕೆಲವು ಬಿಲ್ಡರ್ ಗಳು ಒಂದು ಹೆಜ್ಜೆ ಮುಂದೆ ಹೋಗಿ ಮಾಡುವ ಅವಾಂತರಗಳದ್ದೇ ಇನ್ನೊಂದು ಕಥೆ. ಹೊಸ ಕಟ್ಟಡ ಕಟ್ಟುವಾಗ ಕಾನೂನು ಪ್ರಕಾರ ರಸ್ತೆಗೆ ಜಾಗ ಬಿಡಬೇಕು. ಕಟ್ಟಡ ಕಟ್ಟಲು ಲೈಸೆನ್ಸ್ ಫೀಸ್ ಕಟ್ಟಬೇಕು. ಇದೆಲ್ಲ ಯಾಕೆ ಎಂದುಕೊಂಡು ಜಾಗ ಬಿಡದೆ ಅಥವಾ ನಿರ್ದಿಷ್ಟವಾಗಿ ಎಷ್ಟು ಬಿಡಬೇಕೋ ಅಷ್ಟು ಬಿಡದೆ ಕ್ಯಾರಂ ಬೋರ್ಡಿನಷ್ಟು ಜಾಗ ಬಿಟ್ಟು ದೊಡ್ಡ ಬಿಲ್ಡಿಂಗ್ ಎಬ್ಬಿಸಿರುತ್ತಾರೆ. ಇದೆಲ್ಲ ನೋಡಬೇಕಾದ ನಗರ ಯೋಜನಾ ಅಧಿಕಾರಿಗಳ ಕಿಸೆ ಯಾವತ್ತೂ ಭಾರವಾಗಿಯೇ ಇರುವುದರಿಂದ ಹೊರಗೆ ಇಣುಕಿ ನೋಡುವಷ್ಟು ಕೆಲಸವನ್ನು ಕೂಡ ಮಾಡುವುದಿಲ್ಲ. ಇಂತಹ ಅವ್ಯವಸ್ಥೆ ಇರುವ ನಮ್ಮ ಪಾಲಿಕೆಗೆ ಐಎಎಸ್ ಆಯುಕ್ತರು ಬಂದಿದ್ದಾರೆ. ಐಎಎಸ್ ಗಳಿಗೆ ಇಲ್ಲಿ ಎಷ್ಟು ದಿನ ಇರುತ್ತೇವೆ ಎನ್ನುವ ಐಡಿಯಾ ಇರುವುದಿಲ್ಲ. ಯಾರ ಹಂಗೂ ಮೊದಲೇ ಇಲ್ಲ. ಹೀಗಿರುವಾಗ ಅವರು ಇದ್ದಷ್ಟು ದಿನ ರಫ್ ಅಂಡ್ ಟಫ್ ಆಗಿ ಇರುತ್ತಾರೆ. ದಕ್ಷ ಆಯುಕ್ತ ಅಕ್ಷಯ್ ಶ್ರೀಧರ್ ಹೊಸ ಆದೇಶವನ್ನು ಹೊರಡಿಸಿದ್ದಾರೆ. ಪಾಲಿಕೆ ವ್ಯಾಪ್ತಿಯೊಳಗೆ ರಸ್ತೆ ಫುಟ್ ಪಾತ್ ಗಳನ್ನು ಅತಿಕ್ರಮಿಸಿರುವ ಅನಧಿಕೃತ ನಿರ್ಮಾಣಗಳನ್ನು ತೆರವುಗೊಳಿಸಲು ಆದೇಶ ಮಾಡಿದ್ದಾರೆ. ಬಹಳ ಉತ್ತಮ ಕಾರ್ಯ. ಅವರು ಇದರಲ್ಲಿ ಯಶಸ್ವಿಯಾಗಲಿ ಎಂದು ಹಾರೈಕೆ. ಆದರೆ ನಮ್ಮ ಪಾಲಿಕೆಯ ಒಳಗಿರುವ ಹೆಗ್ಗಣಗಳ ಬಗ್ಗೆ ಇವರಿಗೆ ಅರಿವಿಲ್ಲ. ಹೆಪ್ಸಿಬಾ ಕೊರ್ಲಪಾಟಿ ಎನ್ನುವ ಐಎಎಸ್ ಆಯುಕ್ತರು ಹೀಗೆ ಕಠಿಣ ನಿರ್ಧಾರ ತೆಗೆದುಕೊಳ್ಳುತ್ತಿದ್ದರು ಎನ್ನುವ ಕಾರಣಕ್ಕೆ ಪಕ್ಷಾತೀತವಾಗಿ ಒಟ್ಟಾಗಿ ಅವರನ್ನು ಇಲ್ಲಿಂದ ಓಡಿಸಿದ ಹೆಗ್ಗಳಿಗೆ ಪಾಲಿಕೆಗೆ ಇದೆ. ಆದರೆ ಆಗ ಕಾಂಗ್ರೆಸ್ ಆಡಳಿತದಲ್ಲಿತ್ತು. ಈಗ ಬಿಜೆಪಿ ಆಡಳಿತದಲ್ಲಿದೆ. ಇಂತಹ ದಕ್ಷ ಅಧಿಕಾರಿಗಳು ಕೆಲವು ವರ್ಷಗಳು ಇಲ್ಲಿಯೇ ಇದ್ದರೆ ಎಲ್ಲವೂ ಸರಿಯಾಗುತ್ತದೆ. ಬಿಜೆಪಿಯವರು ಇಂತಹ ದಕ್ಷ ಆಯುಕ್ತರನ್ನು ಇಲ್ಲಿಯೇ ಉಳಿಸುತ್ತಾರೆ ಎಂದು ಅಂದುಕೊಂಡಿದ್ದೇನೆ!
0
Shares
  • Share On Facebook
  • Tweet It




Trending Now
ಮುಗಿಯದ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ; ಬಿಜೆಪಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ
Tulunadu News September 16, 2025
ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
Tulunadu News September 16, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಮುಗಿಯದ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ; ಬಿಜೆಪಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ
    • ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
    • ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!
    • ಹಿಮಾಚಲ ಪ್ರವಾಹ ಪೀಡಿತರಿಗೆ 5 ಕೋಟಿ ನೆರವು – ಸಿಎಂ ಸಿದ್ದರಾಮಯ್ಯ ನಿರ್ಧಾರಕ್ಕೆ ಬಿಜೆಪಿ ಆಕ್ರೋಶ
    • ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
    • ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
    • ಮದ್ದೂರು ಗಣೇಶ ಗಲಾಟೆಗೆ ಪೂರ್ತಿ ಮುಸ್ಲಿಮರೇ ಕಾರಣ: ಸಚಿವ ಚೆಲುವರಾಯ ಸ್ವಾಮಿ
    • ಹೆದ್ದಾರಿ ಸಮಸ್ಯೆ ನೋಡಬೇಕಾದ ಸಂಸದರು, ಶಾಸಕರು ಏನು ಮಾಡುತ್ತಿದ್ದಾರೆ- ಹೆಗ್ಡೆ
    • ಮೋದಿಯಂತಹ ಪ್ರಧಾನಿ ನಮಗೆ ಸಿಕ್ಕಿದ್ರೆ ನಾವು ಅಭಿವೃದ್ಧಿಯಾಗುತ್ತಿದ್ವಿ - ನೇಪಾಳಿ ಪ್ರತಿಭಟನಾಕಾರ
    • ನಂಗೆ ಸ್ವಲ್ಪ ವಿಷ ಕೊಡಿ ಎಂದು ನ್ಯಾಯಾಧೀಶರ ಮುಂದೆ ಕಣ್ಣೀರಿಟ್ಟ ದರ್ಶನ್ ಗೆ ಅಗತ್ಯ ಸೌಕರ್ಯ ನೀಡುವಂತೆ ನ್ಯಾಯಾಲಯ ಆದೇಶ!
  • Popular Posts

    • 1
      ಮುಗಿಯದ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ; ಬಿಜೆಪಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ
    • 2
      ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
    • 3
      ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!
    • 4
      ಹಿಮಾಚಲ ಪ್ರವಾಹ ಪೀಡಿತರಿಗೆ 5 ಕೋಟಿ ನೆರವು – ಸಿಎಂ ಸಿದ್ದರಾಮಯ್ಯ ನಿರ್ಧಾರಕ್ಕೆ ಬಿಜೆಪಿ ಆಕ್ರೋಶ
    • 5
      ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!

  • Privacy Policy
  • Contact
© Tulunadu Infomedia.

Press enter/return to begin your search