ವಾರದಲ್ಲಿ ಶುಕ್ರವಾರ ಮಾತ್ರ ಒಣಕಸ, ಉಳಿದ ದಿನಗಳಲ್ಲಿ ಬರೀ ಹಸಿಕಸ, ಮನಪಾ ಮಾತ್ರ ಎಲ್ಲವನ್ನು ಒಟ್ಟಿಗೆ ನುಂಗುತ್ತದೆ!
ಮನಪಾ ವ್ಯಾಪ್ತಿಯಲ್ಲಿ ನಿಮ್ಮ ಮನೆಯ ಕಸವನ್ನು ಯಾರು ಸಂಗ್ರಹ ಮಾಡುವುದು ಎಂದು ನಿಮಗೆ ಚೆನ್ನಾಗಿ ಗೊತ್ತಿದೆ. ಎಷ್ಟೋ ಸಲ ನಾನೇ ಈ ಅಂಕಣಗಳಲ್ಲಿ ಆ ಬಗ್ಗೆ ಪ್ರಸ್ತಾಪಿಸಿದ್ದೇನೆ. ಇನ್ನೂ ಧ್ವನಿಮುದ್ರಿತ ವ್ಯವಸ್ಥೆಯ ಮೂಲಕ ನಿಮ್ಮ ಮನೆಬಾಗಿಲಿಗೆ ಒಂದು ವಾಹನ ಬರುತ್ತದಲ್ಲ, ಅದರ ಪರಿಚಯ ನಿಮಗೆ ಆಗಿರುತ್ತದೆ. ಆ ತ್ಯಾಜ್ಯ ಸಂಗ್ರಹಿಸುವ ಹೊಣೆ ಹೊತ್ತಿರುವ ಆಂಟೋನಿ ವೇಸ್ಟ್ ಮ್ಯಾನೇಜ್ ಮೆಂಟಿನವರೊಂದಿಗೆ ಪಾಲಿಕೆ ಮಾಡಿರುವ ಒಡಂಬಡಿಕೆ ಎನು? ಜನರಿಂದ ಆರು ದಿನ ಹಸಿಕಸ ಮತ್ತು ಒಂದು ದಿನ ಒಣಕಸ ಸಂಗ್ರಹ ಮಾಡಬೇಕು. ಆದರೆ ಜನ ಈಗ ಏನು ಮಾಡುತ್ತಿದ್ದಾರೆ? ಎಲ್ಲವನ್ನು ಒಟ್ಟಿಗೆ ಹಾಕಿ ತಮ್ಮ ಮನೆಯ ಕಂಪೌಂಡಿನ ಹೊರಗೆ ಇಡುತ್ತಾರೆ. ಲಾರಿಯವರು ಅದನ್ನು ಹಾಗೆ ತೆಗೆದುಕೊಂಡು ಹೋಗುತ್ತಾರೆ. ಇದರ ಬದಲಿಗೆ ಪಾಲಿಕೆ ಪ್ರತಿಮನೆಗೆ ಎರಡು ಸಣ್ಣಪ್ರಮಾಣದ ಬಾಕ್ಸ್ ನೀಡಬೇಕು. ಒಂದು ಬಣ್ಣದ ಒಂದು ಬಾಕ್ಸ್ ಹಸಿಕಸಕ್ಕಾಗಿ ಮತ್ತು ಇನ್ನೊಂದು ಬಣ್ಣದ ಬಾಕ್ಸ್ ಒಣಕಸಕ್ಕಾಗಿ ನಿಗದಿಗೊಳಿಸಬೇಕು. ಶುಕ್ರವಾರ ಮಾತ್ರ ಒಣಕಸ, ಶುಕ್ರವಾರ ಸೇರಿ ಉಳಿದ ದಿನಗಳಲ್ಲಿ ಎಲ್ಲ ಹಸಿಕಸ. ಇದರಿಂದ ವಾರದಲ್ಲಿ ಆರು ದಿನ ಒಂದು ಬಣ್ಣದ ಬಾಕ್ಸ್ ಮಾತ್ರ ಮನೆಗಳ ಹೊರಗೆ ಕಂಡುಬರುತ್ತದೆ. ಯಾರಾದರೂ ಇನ್ನೊಂದು ಬಣ್ಣದ ಬಾಕ್ಸಿನಲ್ಲಿ ಕಸ ತಂದರೆ ಅದು ಗೊತ್ತಾಗುತ್ತದೆ. ಆದರೆ ಪಾಲಿಕೆ ಹಣ ಉಳಿಸುವುದರಲ್ಲಿ ಬಝಿಯಾಗಿದೆ ವಿನ: ಅದನ್ನು ಸದ್ವಿನಿಯೋಗ ಮಾಡುವುದರಲ್ಲಿ ಅಲ್ಲ ಎಂದು ನಾನು ಪುನ: ಮೊದಲಿನಿಂದ ಹೇಳಬೇಕಾಗಿಲ್ಲ,
Leave A Reply