• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಹೇಮಂತ್ ನಿಂಬಾಲ್ಕರ್ ಬಗ್ಗೆ ಬಿಜೆಪಿ ಸರಕಾರಕ್ಕೆ ಯಾಕೆ ಕರುಣೆ!!

Tulunadu News Posted On December 31, 2020


  • Share On Facebook
  • Tweet It

ಕರ್ನಾಟಕ ರಾಜ್ಯದ ಇಬ್ಬರು ಹಿರಿಯ ಐಪಿಎಸ್ ಅಧಿಕಾರಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಬಹಿರಂಗವಾಗಿ ಶೀತಲ ಸಮರ ಸಾರಿದ್ದಾರೆ. ಹೇಮಂತ್ ನಿಂಬಾಲ್ಕರ್ ಎನ್ನುವ ಹೆಚ್ಚುವರಿ ಪೊಲೀಸ್ ಆಯುಕ್ತ (ಆಡಳಿತ) ವಿರುದ್ಧ ಲೇಡಿ ಸಿಂಗಂ ಎಂದೇ ರಾಜ್ಯದಲ್ಲಿ ಖ್ಯಾತಿಗೊಳಗಾಗಿರುವ ರೂಪಾ ಅವರು ಒಂದು ಟೆಂಡರ್ ಕುರಿತಂತೆ ಪರಸ್ಪರ ಆರೋಪ ಪ್ರತ್ಯಾರೋಪವನ್ನು ನಡೆಸುತ್ತಿದ್ದಾರೆ. ಇತ್ತೀಚೆಗೆ ರೂಪಾ ಅವರು ವೇದಿಕೆಯೊಂದರಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದಾಗ ಒಂದು ಹಾಡು ಹಾಡಿ ಪರೋಕ್ಷವಾಗಿ ಹೇಮಂತ್ ನಿಂಬಾಳ್ಕರ್ ಅವರಿಗೆ ಕೆಟ್ಟ ಕಾಲ ಬರುತ್ತಿದೆ ಎಂದು ಸೂಚ್ಯವಾಗಿ ಹಾಡಿನ ಮೂಲಕ ತಿಳಿಸಿದ್ದಾರೆ. ಅಷ್ಟಕ್ಕೂ ಹೇಮಂತ್ ನಿಂಬಾಳ್ಕರ್ ಅವರಿಗೆ ಕೆಟ್ಟ ಕಾಲ ಯಾವತ್ತೋ ಬಂದಿದೆ. ಡಿವೈಎಸ್ ಪಿ ಗಣಪತಿ ಅಂತಹ ಪ್ರಾಮಾಣಿಕ, ದಕ್ಷ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡಾಗ ತಮಗೆ ವಿಪರೀತ ಮಾನಸಿಕ ಹಿಂಸೆ ನೀಡುತ್ತಿದ್ದ ಅಧಿಕಾರಿಗಳಲ್ಲಿ ಹೇಮಂತ್ ನಿಂಬಾಲ್ಕರ್ ಅವರ ಹೆಸರು ಹೇಳಿದ್ದರು. ಆದರೆ ಆಗ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದ ಕಾರಣ ಹೇಮಂತ್ ನಿಂಬಾಳ್ಕರ್ ಗೆ ಏನೂ ಆಗಿರಲಿಲ್ಲ. ನಿಂಬಾಲ್ಕರ್ ಪತ್ನಿ ಬೆಳಗಾವಿಯ ಥಾನಾಪುರದ ಶಾಸಕಿಯಾಗಿದ್ದಾರೆ. ಕಾಂಗ್ರೆಸ್ ಪಕ್ಷದ ವಿವಿಧ ಹುದ್ದೆಗಳಲ್ಲಿ ಇದ್ದಾರೆ. ಅವರ ಹೆಸರು ಡಾ. ಅಂಜಲಿ. ಆದ್ದರಿಂದ ಕಾಂಗ್ರೆಸ್ ಪಕ್ಷ ಇರುವಾಗ ಹೇಮಂತ್ ನಿಂಬಾಳ್ಕರ್ ಅವರಿಗೆ ಯಾರೂ ಏನೂ ಮಾಡಲು ಹೋಗುತ್ತಿರಲಿಲ್ಲ. ಅದರ ನಂತರ ರಾಜ್ಯದಲ್ಲಿಯೇ ಅತ್ಯಂತ ದೊಡ್ಡ ಪ್ರಕರಣ ದಾಖಲಾದದ್ದು ಐಎಂಎ ಪ್ರಕರಣ. ಅದು ಕೋಟ್ಯಾಂತರ ರೂಪಾಯಿಯ ದೊಡ್ಡ ಅವ್ಯವಹಾರ. ಅದರಲ್ಲಿ ರಾಜ್ಯದ ಉನ್ನತ ಪೊಲೀಸ್ ಹಾಗೂ ಸಿವಿಲ್ ಸರ್ವಿಸ್ ಅಧಿಕಾರಿಗಳ ಹೆಸರು ಕೇಳಿಬಂದಿತ್ತು. ಆ ಪ್ರಕರಣದ ತನಿಖೆಯನ್ನು ಸಿಬಿಐ ವಹಿಸಿಕೊಂಡು ವಿಚಾರಣೆ ನಡೆಸಿ ಚಾರ್ಜ್ ಶೀಟ್ ಸಲ್ಲಿಸಿದೆ. ಅದರಲ್ಲಿ 34 ನೇ ಆರೋಪಿಯಾಗಿ ಹೇಮಂತ್ ನಿಂಬಾಳ್ಕರ್ ಹೆಸರಿದೆ. ಒಬ್ಬ ಅಧಿಕಾರಿಯಾಗಿ ಕೋಟ್ಯಾಂತರ ರೂಪಾಯಿಯ ದೊಡ್ಡ ಹಗರಣದಲ್ಲಿ ಸಿಲುಕಿಕೊಳ್ಳುವುದು ನಿಜಕ್ಕೂ ನಾಚಿಕೆಗೇಡು. ಈ ಪ್ರಕರಣದಲ್ಲಿ ಸಿಲುಕಿಕೊಂಡಿದ್ದ ಐಎಎಸ್ ಅಧಿಕಾರಿ ವಿಜಯ ಶಂಕರ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಯಾವ ಅಧಿಕಾರಿಗೂ ಅದು ದೊಡ್ಡ ಅಸಹ್ಯಕರ ಸಂಗತಿ. ಆದರೆ ಹೇಮಂತ್ ನಿಂಬಾಳ್ಕರ್ ಅಂತವರಿಗೆ ಆ ಬಳಿಕ ದೊಡ್ಡ ಹುದ್ದೆ ಸಿಕ್ಕಿತು ವಿನ: ಬೇರೆ ಏನೂ ಆಗಿಲ್ಲ. ಇಂತಹ ಸಂದರ್ಭದಲ್ಲಿ ಒಂದು ಜವಾಬ್ದಾರಿಯುತ ಸರಕಾರ ಏನು ಮಾಡಬೇಕೆಂದರೆ ದೊಡ್ಡ ದೊಡ್ಡ ಹಗರಣಗಳಲ್ಲಿ ಸಿಲುಕಿಕೊಂಡಿರುವ ಅಧಿಕಾರಿಗಳನ್ನು ಸೈಲೆಂಟಾಗಿ ನಾನ್ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ವರ್ಗಾಯಿಸಿಬಿಡಬೇಕು. ಆಗ ಅವರು ತನಿಖೆಯಲ್ಲಿ ಕೈ ಆಡಿಸಲು ಆಗುವುದಿಲ್ಲ ಹಾಗೂ ದೊಡ್ಡ ಹುದ್ದೆ ಸದ್ಯ ಇಲ್ಲ ಎಂದು ಪರೋಕ್ಷವಾಗಿ ಹೇಳಿದಂತೆ ಆಗುತ್ತದೆ. ಆದರೆ ನಮ್ಮ ರಾಜ್ಯ ಸರಕಾರ ಏನು ಮಾಡಿತು ಎಂದರೆ ಇದೇ ಹೇಮಂತ್ ನಿಂಬಾಳ್ಕರ್ ಕೈಗೆ ಸೇಫ್ ಸಿಟಿ ಪ್ರಾಜೆಕ್ಟ್ ನೀಡಿತು. ಅದು 619 ಕೋಟಿ ರೂಪಾಯಿಯ ಬೃಹತ್ ಪ್ರಾಜೆಕ್ಟ್. ಮಹಿಳೆಯರ ಸುರಕ್ಷತೆಗಾಗಿ ಏನೆಲ್ಲ ಕ್ರಮಗಳನ್ನು ತೆಗೆದುಕೊಳ್ಳಬಹುದೋ ಅದನ್ನೆಲ್ಲಾ ಈ ಅನುದಾನದಲ್ಲಿ ತೆಗೆದುಕೊಳ್ಳಬಹುದಾಗಿರುವ ಅವಕಾಶ ಇರುವ ಪ್ರಾಜೆಕ್ಟ್. ಅದರಲ್ಲಿ ಸಿಸಿಟಿವಿ ನಗರದ ಆಯಕಟ್ಟಿನ ಜಾಗಗಳಲ್ಲಿ ಅಳವಡಿಸುವ ಟೆಂಡರ್ ಕೂಡ ಸೇರಿದೆ. ಈ ಟೆಂಡರ್ ಕೊಡುವ ಅವಕಾಶ ಹೇಮಂತ್ ನಿಂಬಾಳ್ಕರ್ ಅವರಿಗೆ ಇತ್ತು. ಅವರು ತಮಗೆ ಬೇಕಾದವರಿಗೆ ಈ ಟೆಂಡರ್ ನೀಡುವ ಮೂಲಕ ಭ್ರಷ್ಟಾಚಾರ ನಡೆಸಿದ್ದಾರೆ ಎನ್ನುವ ಆರೋಪ ಈಗ ರಾಜ್ಯ ಗೃಹ ಕಾರ್ಯದರ್ಶಿ ರೂಪಾ ಅವರಿಂದ ಕೇಳಿ ಬರುತ್ತಿದೆ. ಈ ಸಿಸಿಟಿವಿ ಟೆಂಡರ್ ಕೊಡುವುದಿದೆಯಲ್ಲ, ಅದೇ ದೊಡ್ಡ ಭ್ರಷ್ಟಾಚಾರದ ಹಗರಣವಾಗಿ ಮಾರ್ಪಡುವುದು ಸಾಮಾನ್ಯ. ಇಲ್ಲಿ ಆರಂಭದಲ್ಲಿ ಸಿಸಿಟಿವಿ ಅಳವಡಿಸಿ ನಿರ್ದಿಷ್ಟ್ಯ ಸಮಯದವರೆಗೆ ನಿರ್ವಹಿಸುವ ಗುತ್ತಿಗೆಯನ್ನು ಯಾವುದಾದರೂ ಸಂಸ್ಥೆಗೆ ಕೊಡಲಾಗುತ್ತದೆ. ಅದಕ್ಕಾಗಿ ಆ ಗುತ್ತಿಗೆದಾರ ಸಂಸ್ಥೆಗೆ ಕೋಟ್ಯಾಂತರ ರೂಪಾಯಿ ಸರಕಾರ ಪಾವತಿಸಬೇಕು. ಆ ಗುತ್ತಿಗೆಯ ಅವಧಿಯ ನಂತರ ಆ ಗುತ್ತಿಗೆದಾರರು ಸಿಸಿಟಿವಿಗೂ ತಮಗೂ ಸಂಬಂಧವೇ ಇಲ್ಲದಂತೆ ಹೊರಟುಬಿಡುತ್ತಾರೆ. ಮೊದಲು ಹಾಕಿದ ಹಣ ಹೇಗೂ ವೇಸ್ಟ್. ನಂತರ ಅದನ್ನು ಕೇಳುವವರು ಕೂಡ ಇರುವುದಿಲ್ಲ. ಇದು ಬಹುತೇಕ ಸರಕಾರಿ ವ್ಯವಸ್ಥೆಯ ಪ್ರಸ್ತುತ ಕಥೆ. ಇಲ್ಲಿ ಹಣ ಮಾಡುವುದು ಗುತ್ತಿಗೆದಾರ ಮತ್ತು ಅವರಿಗೆ ಗುತ್ತಿಗೆ ಕೊಟ್ಟವರು ಮಾತ್ರ.
ಹೇಮಂತ್ ನಿಂಬಾಳ್ಕರ್ ವಿಷಯದಲ್ಲಿ ನಾವು ನೋಡಬೇಕಾದ ವಿಷಯವೇನೆಂದರೆ ಇಂತವರು ಯಾವ ಪಕ್ಷ ಅಧಿಕಾರದಲ್ಲಿ ಇದ್ದರೂ ಆರಾಮವಾಗಿ ಇರುತ್ತಾರೆ. ಡಿವೈಎಸ್ ಪಿ ಗಣಪತಿ ಆತ್ಮಹತ್ಯೆಯ ವಿಷಯ ಇಟ್ಟುಕೊಂಡು ಹೋರಾಡಿದ್ದು ಬಿಜೆಪಿ. ಐಎಂಎ ವಿಷಯದಲ್ಲಿ ಕಾಂಗ್ರೆಸ್ ಗೆ ಹಿನ್ನಡೆ ಆಗುವಂತೆ ಹೋರಾಡಿದ್ದು ಬಿಜೆಪಿ. ಇಷ್ಟಾಗಿಯೂ ಈ ಎರಡು ಪ್ರಕರಣಗಳಲ್ಲಿ ಕಾಣಿಸಿಕೊಂಡ ಮುಖ ಹೇಮಂತ್ ನಿಂಬಾಳ್ಕರ್ ಕೈಗೆ ಬಹುಕೋಟಿ ಪ್ರಾಜೆಕ್ಟ್. ಇದು ಏನು ಸೂಚಿಸುತ್ತದೆ. ಅದೇ ಮತ್ತೊಂದೆಡೆ ಐಪಿಎಸ್ ರೂಪಾ ಎಂತಹ ಧೀರ ಹೆಣ್ಣುಮಗಳನ್ನು ಎಂದರೆ ಕೊರೊನಾ ಲಾಕ್ ಡೌನ್ ಅವಧಿಯಲ್ಲಿ ಜನರಿಂದ ಸಿಕ್ಕಾಪಟ್ಟೆ ಸುಲಿಗೆ ಮಾಡುತ್ತಿದ್ದ ಖಾಸಗಿ ಆಸ್ಪತ್ರೆಗಳ ಮೇಲೆ ರೇಡ್ ಮಾಡಿ ಆಸ್ಪತ್ರೆಗಳಿಂದ ಜನರ ಹಣವನ್ನು ಕಕ್ಕಿಸಿದ್ದರು. ರಸ್ತೆಗಳಲ್ಲಿ ಹೊಂಡ ಬಿದ್ದು ವಾಹನ ಸವಾರರಿಗೆ ಅಪಾಯ ಆದರೆ ಗುತ್ತಿಗೆದಾರರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಜನರಿಗೆ ಸಲಹೆ ನೀಡಿದವರು. ತಮ್ಮ ಟ್ವಿಟರ್ ನಲ್ಲಿ ಸಕ್ರಿಯವಾಗಿರುವ ರೂಪಾ ಅವರು ಜನರ ಪ್ರೀತಿ ಗಳಿಸಿದ್ದಾರೆ. ಹೇಮಂತ್ ನಿಂಬಾಳ್ಕರ್ ಅವರ ಬಂಡವಾಳ ಜನರ ಮುಂದೆ ಬಿಚ್ಚಿಟ್ಟಿದ್ದಾರೆ. ರಾಜ್ಯ ಸರಕಾರ ಮೌನವಾಗಿದೆ. ಕೇಳಬೇಕಾದವರಿಗೆ ಸರಿಯಾಗಿ ಕಿವಿ ಕೇಳಿಸದಿದ್ದರೆ ಇನ್ನೇನಾಗುತ್ತದೆ!
  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Tulunadu News May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Tulunadu News May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search