• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಪೆಟ್ರೋಲ್, ಡಿಸೀಲ್ ದರ ಹತ್ತು ರೂಪಾಯಿ ಇಳಿಸಿ ಬೇರೆ ರಾಜ್ಯಕ್ಕೆ ಕರ್ನಾಟಕ ಮಾದರಿಯಾಗಬಹುದಲ್ಲ!!

Hanumantha Kamath Posted On February 18, 2021


  • Share On Facebook
  • Tweet It

ಇತ್ತೀಚೆಗೆ ಯಾರೋ ತಮಾಷೆಗೆ ಹೇಳುತ್ತಿದ್ದರು. “ನಾವು ನೂರು ರೂಪಾಯಿ ಪೆಟ್ರೋಲ್ ಹಾಕುವುದು. ಆದ್ದರಿಂದ ಪೆಟ್ರೋಲ್ ಎಷ್ಟು ಜಾಸ್ತಿ ಆದ್ರೂ ಗೊತ್ತಾಗಲ್ಲ.” ಇದು ವ್ಯಂಗ್ಯನೂ ಇರಬಹುದು ಅಥವಾ ಮೋದಿ ಮೇಲಿನ ಪ್ರೀತಿನೂ ಇರಬಹುದು. ಆದರೆ ಹಿಂದೆ ನೂರು ರೂಪಾಯಿ ಪೆಟ್ರೋಲ್ ಹಾಕಿದ್ದವರಿಗೆ ಮೂರು ದಿನ ಅದು ಧಾರಾಳವಾಗಿ ಸಾಕಾಗುತ್ತಿದ್ದರೆ ಈಗ ಎರಡು ದಿನಕ್ಕೆ ಮುಗಿಯುತ್ತಿದೆ. ಒಂದು ಕಾಲದಲ್ಲಿ ಬಸ್ಸಿನಲ್ಲಿ ಹೋಗುತ್ತಿದ್ದ ಮಧ್ಯಮ ವರ್ಗದ ನಾಗರಿಕ ಪೆಟ್ರೋಲ್ ಬೆಲೆ 70 ರ ಒಳಗೆ ಇದ್ದಾಗ ಒಂದು ಟೂ ವೀಲ್ಲರ್ ಖರೀದಿಸಿ ಸಂತೋಷ ಪಟ್ಟಿದ್ದ. ಅದರಿಂದ ಅವನಿಗೆ ಅವನ ಉದ್ಯೋಗಕ್ಕೆ ಹೋಗಿ ಬರಲು ಸಮಯ ಉಳಿತಾಯವಾಗುತ್ತಿತ್ತು. ಗಂಡ, ಹೆಂಡತಿ, ಪುಟ್ಟ ಮಗು ಇದ್ದರೆ ಮಾರ್ಕೆಟಿಗೋ ಅಥವಾ ಪಾರ್ಕಿಗೋ, ಬೀಚಿಗೋ ಅದರಲ್ಲಿಯೇ ಸುತ್ತಾಡಿ ಬರಲು ಅನುಕೂಲವಾಗುತ್ತಿತ್ತು. ಆದರೆ ಈಗ? ಇನ್ನು ಸಬ್ಸಿಡಿ ಇರುವ ಗ್ಯಾಸ್ ಬೆಲೆ ಕೂಡ ಸಿಲೆಂಡರಿಗೆ ಕೆಲವೇ ದಿನಗಳಲ್ಲಿ 135 ರೂಪಾಯಿ ಹೆಚ್ಚಳವಾಗಿದೆ. ಬೆಂಕಿಯೇ ಇಲ್ಲದೆ ಪೆಟ್ರೋಲ್, ಡಿಸೀಲ್ ಹಾಗೂ ಅಡುಗೆ ಅನಿಲದ ದರ ನಮ್ಮ ನಿಮ್ಮ ಜೇಬು ಸುಡುತ್ತಿದೆ.
ಹೀಗೆ ಹೇಳಿದ ಕೂಡಲೇ ಮೋದಿ ಭಕ್ತರಿಗೆ ಕೋಪ ಬರಬಹುದು. ಸಮರ್ಥನೆ ಏನೂ ಕೊಡಬಹುದು. 70 ರೂಪಾಯಿ ಪೆಟ್ರೋಲಿಗೆ ಇದ್ದಾಗ ಸಂಬಳ ಹತ್ತು ಸಾವಿರ ಇದ್ದವರಿಗೆ ಈಗ 12 ಸಾವಿರ ಆಗಿದೆ ಎನ್ನಬಹುದು. ಹಿಂದೆ ಒಂದು ಜಿಬಿ ಇಂಟರನೆಟ್ಟಿಗೆ 250 ಇದ್ದದ್ದು ಈಗ ಮೂರು ಮುಕ್ಕಾಲು ರೂಪಾಯಿಗೆ ಬರುತ್ತಿರುವುದು ಸಾಧನೆ ಅಲ್ವಾ ಎನ್ನಬಹುದು. ಬಿಯರ್ ಒಂದು ಬಾಟಲಿಗೆ 70 ರೂಪಾಯಿ ಇತ್ತು. ಈಗ ಅದು 250 ಆಗಿದೆ. ಯಾರೂ ಮಾತನಾಡುತ್ತಿಲ್ಲ ಎನ್ನಬಹುದು. ಇಲ್ಲಿ ವಿಷಯ ಇರುವುದು ಮೊದಲನೇಯದಾಗಿ ಸಂಬಳದ ಹೆಚ್ಚಳದ ಬಗ್ಗೆ ಇರುವ ಸಮರ್ಥನೆ. ಪೆಟ್ರೋಲಿನ ಬೆಲೆ ಒಂದು ವರ್ಷದ ಮೊದಲು ಹೆಚ್ಚಳ ಆಗುವಾಗ ಈ ಸಮಜಾಯಿಷಿಕೆ ಸರಿ ಇದೆ ಎನಿಸುತ್ತಿತ್ತು. ಆದರೆ ಲಾಕ್ ಡೌನ್ ನಂತರ ಹೀಗೆ ಕಡಿವಾಣ ಇಲ್ಲದೆ ಹೆಚ್ಚಳವಾಗುತ್ತಿರುವುದು ನಿಜಕ್ಕೂ ಮೋದಿಗೆ ಓಟು ಹಾಕಿದವರು ಕೂಡ ಒಳಗೊಳಗೆ ಬೇಸರ ಮಾಡಿಕೊಳ್ಳುತ್ತಿದ್ದಾರೆ. ಯಾಕೆಂದರೆ ಹಿಂದೆ ಒಂದು ಮನೆಗೆ ತಿಂಗಳ ಖರ್ಚು 15000 ಬರುತ್ತಿದ್ದರೆ ಈಗ 18000 ಬರುತ್ತಿದೆ. ಆದರೆ ಸಂಬಳ ಹೆಚ್ಚಾಗಿರುವುದು ಕೇಂದ್ರ ಹಾಗೂ ರಾಜ್ಯ ಸರಕಾರದ ನೌಕರರಿಗೆ ಮಾತ್ರ. ಅವರಿಗೆ ಸರಕಾರಗಳು ಭತ್ಯೆ ಹೆಚ್ಚಳ ಮಾಡಿವೆ ಬಿಟ್ಟರೆ ಅವರೇ ಇಡೀ ದೇಶವಲ್ಲವಲ್ಲ. ಕೊರೊನಾದ ಬಳಿಕ ಅನೇಕ ಕುಟುಂಬಗಳಲ್ಲಿ ಒಬ್ಬಿಬ್ಬರಿಗೆ ಕೆಲಸ ಹೋಗಿರುವುದು ಇದೆ. ಕೆಲವರಿಗೆ ಪೂರ್ಣ ಪ್ರಮಾಣದ ಕೆಲಸ ಇಲ್ಲ.
ಇನ್ನು ಕೆಲಸ ಉಳಿದುಕೊಂಡವರಿಗೆ ಒಂದು ರೂಪಾಯಿ ಸಂಬಳ ಜಾಸ್ತಿ ಮಾಡಲು ಅವರ ಯಜಮಾನರು ಹೋಗುವುದಿಲ್ಲ. ಹಾಗಿರುವಾಗ ಇಂಧನದ ಬೆಲೆ ಜಾಸ್ತಿ ಆದರೆ ಅವರು ಗಾಡಿಯನ್ನು ಪಕ್ಕಕ್ಕೆ ಇಟ್ಟು ಬಸ್ಸಿನಲ್ಲಿಯೇ ಹೋಗಬೇಕು. ಆದ್ದರಿಂದ ಅವರು ಮೊದಲು ಎಲ್ಲಿಂದ ಆರಂಭಿಸಿದರೋ ಅಲ್ಲಿಗೆ ಬಂದು ತಲುಪಿದ್ದಾರೆ. ಇನ್ನು ಗಂಡ ತಿಂಗಳಿಗೆ ಮನೆಯ ದಿನಸಿ, ಗ್ಯಾಸ್, ಹಾಲು, ತರಕಾರಿಗೆ ಎಂದು ಹೆಂಡತಿಗೆ ಇಂತಿಷ್ಟು ಕೊಡುತ್ತಿದ್ದ ಕಡೆ ಅದರಲ್ಲಿ ಒಂದಿಷ್ಟು ಹಣ ಉಳಿತಾಯ ಆಗುವಾಗ ಪತ್ನಿ ಮನೆಗೆ ಏನಾದರೂ ತೆಗೆದುಕೊಳ್ಳಲು ಆ ಹಣ ಬಳಸುತ್ತಿದ್ದರು. ಈಗ ಕೊಡುವ ಹಣದಲ್ಲಿ ಏನೂ ಉಳಿತಾಯ ಆಗುವುದಿಲ್ಲ. ಇದರಿಂದ ಅವಳಿಗೂ ಬೇಸರ. ಇದೆಲ್ಲವೂ ಮೋದಿಗೆ ಮೈನಸ್ ಆಗಿ ಅವರು ಸೋತು ಮುಂದಿನ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಎಂದು ಯಾವ ರಾಜಕೀಯ ಪಂಡಿತರೂ ಹೇಳುವುದಿಲ್ಲ. ಯಾಕೆಂದರೆ ನಡು ಮುರಿದು ಬಿದ್ದಿರುವ ಕಾಂಗ್ರೆಸ್ ಗೋಡೆಗೆ ಕೈ ಕೊಟ್ಟು ಏಳುವ ಪ್ರಯತ್ನ ಮಾಡುವಷ್ಟರಲ್ಲಿ ರಾಜ್ಯದಲ್ಲಿ ಸಿದ್ದು ಅಂತವರು ಅಯೋಧ್ಯೆಯ ರಾಮ ಮಂದಿರ ನಿರ್ಮಾಣದ ಬಗ್ಗೆ ಹಗುರವಾಗಿ ಮಾತನಾಡಿ ಕಾಂಗ್ರೆಸ್ಸನ್ನು ಮತ್ತೆ ವಿಧಾನಸೌಧದ ಮೆಟ್ಟಿಲಲ್ಲಿಯೇ ಮಲಗಿಸಿಬಿಡುತ್ತಿದ್ದಾರೆ. ಹಾಗಂತ ಮಧ್ಯಮ ವರ್ಗದವರನ್ನು ಲೈಟಾಗಿ ತೆಗೆದುಕೊಂಡು ಹಟ ಸಾಧಿಸಿದರೆ ಯಾವ ಪಕ್ಷವೂ ತುಂಬಾ ದಿನ ಅಧಿಕಾರದಲ್ಲಿ ಕನಿಷ್ಟ ರಾಜ್ಯದಲ್ಲಿ ಉಳಿಯುವುದು ಕಷ್ಟವಾಗಬಹುದು. ಹಾಗಂತ ಏನು ಮಾಡಬಹುದು. ಕ್ರೂಡ್ ಆಯಿಲ್, ಪ್ರಾಸೆಸಿಂಗ್ ವೆಚ್ಚ ಮಾತ್ರವೇ ತೆಗೆದುಕೊಂಡರೆ ಅದು ಲೀಟರಿಗೆ 37 ರೂಪಾಯಿ ಖರ್ಚು ಬರಬಹುದು. ಪಂಪ್ ಕಮೀಷನ್, ಟ್ರಾನ್ಸಪೋರ್ಟ್ ಹೀಗೆ ಪೆಟ್ರೋಲಿಯಂನಿಂದ ಪೆಟ್ರೋಲ್ ಮತ್ತು ಡಿಸೀಲ್ ಆಗಲು ಇಂತಿಷ್ಟು ಖರ್ಚು ಇದ್ದೇ ಇರುತ್ತದೆ ಎಂದು ಜನಸಾಮಾನ್ಯನಿಗೆ ಗೊತ್ತಿರುತ್ತದೆ. ಉದಾಹರಣೆಗೆ ಅದು ಲೀಟರಿಗೆ ಹೆಚ್ಚೆಂದರೆ ಎಲ್ಲವೂ ಸೇರಿ 45 ರೂಪಾಯಿ ಬರಬಹುದು. ಹಾಗಾದರೆ ಉಳಿದ 50% ಹಣ ಇದೆಯಲ್ಲ, ಅದು ಕೇಂದ್ರ ಮತ್ತು ರಾಜ್ಯದ ತೆರಿಗೆ. ಜನ ನಿರೀಕ್ಷೆ ಮಾಡುತ್ತಿರುವುದು ಅದನ್ನು ಇಳಿಸಿ ಪುಣ್ಯ ಕಟ್ಟಿಕೊಳ್ಳಿ. ಹಿಂದೆ ರಾಜ್ಯ ಮತ್ತು ಕೇಂದ್ರದಲ್ಲಿ ಬೇರೆ ಬೇರೆ ಪಕ್ಷಗಳು ಅಧಿಕಾರದಲ್ಲಿ ಇದ್ದಾಗ ಪರಸ್ಪರ ಆರೋಪ, ಬೆರಳು ತೋರಿಸುವುದರಲ್ಲಿ ಎಲ್ಲವೂ ನಡೆಯುತ್ತಿತ್ತು. ಆದರೆ ಈಗ ಹಾಗಲ್ಲ. ಎರಡೂ ಕಡೆ ಬಿಜೆಪಿಯದ್ದೇ ದರ್ಬಾರ್. ಮೋದಿಜಿ, ಮೇ  ಥೋಡಾ ಕಮ್ ಕರೂ ಕ್ಯಾ ಎಂದು ಯಡ್ಡಿ ಒಂದು ಫೋನ್ ಮಾಡಿ ಮಾದರಿ ನೀತಿಯನ್ನು ಅಳವಡಿಸಬಹುದಿತ್ತು. ಆದರೆ ಹಾಗೆ ಮಾಡಿಲ್ಲ. ಬೇಕಾದ್ರೆ ಇದರಲ್ಲಿ ಹತ್ತು ರೂಪಾಯಿ ಇಳಿಸಿ,  ಆ ಕೊರತೆಯನ್ನು ಮದ್ಯದಲ್ಲಿ ಸರಿ ತೂಗಿಸಲಿ. ಯಾರು ಬೇಡಾ ಎಂದವರು. ಆಗುತ್ತಾ!
  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Hanumantha Kamath May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Hanumantha Kamath May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search