ಮಂಗಳೂರು ವಿವಿ ಮತ್ತೊಂದು ಜೆಎನ್ ಯು?
ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಭೈರಪ್ಪನವರು ತಮ್ಮ ಅಧಿಕಾರಾವಧಿಯ ಕೊನೆಯ ವರ್ಷದಲ್ಲಿ ಎಷ್ಟು ಸಾಧ್ಯವೋ ಅಷ್ಟು ಪ್ರಮಾಣದಲ್ಲಿ ವಿವಿಯ ಸಂಪತ್ತನ್ನು ದೋಚಲು ಹೊಂಚು ಹಾಕಿರುವ ರೀತಿ ಕುತೂಹಲಕಾರಿಯಾಗಿದೆ. ಹಿಂದಿನ ರಾಜ್ಯಪಾಲ ಹಂಸರಾಜ್ ಬಾರಧ್ವಾಜ್ ಅವರಿಗೆ 5 ಕೋಟಿ ಕೊಟ್ಟು ಅಧಿಕಾರ ಪಡೆದುಕೊಂಡ ಭೈರಪ್ಪ ಅವರು ಅದರ ಹತ್ತರಷ್ಟನ್ನು ಈಗಾಗಲೇ ಮಾಡಿಕೊಂಡಿರುವುದು ಅವರ ಹತ್ತಿರದಲ್ಲಿರುವವರಿಗೆ ಗೊತ್ತಿದೆ.
ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಆಪ್ತನಾಗಿ, ಹಿಂದಿನ ಅಡ್ವೋಕೇಟ್ ಜನರಲ್ ಪ್ರೋ| ರವಿವರ್ಮ ಶಿಷ್ಯನಾಗಿರುವ ಭೈರಪ್ಪ ಮೈಸೂರಿನ ಕಾಂಗ್ರೆಸ್ಸಿಗರಾಗಿರುವುದರಿಂದ ರಾಜ್ಯ ಸರಕಾರದಿಂದ ತಮಗೆ ಬೇಕಾದ ಆದೇಶಗಳನ್ನು ಯಾವುದೇ ಕ್ಷಣದಲ್ಲಿ ತರಲು ಸಮರ್ಥರಾಗಿದ್ದಾರೆ. ಒಂದು ಕಡೆ ತನ್ನ ಮಾತನ್ನು ಕೇಳುವ, ಪಕ್ಕಾ ಕಮ್ಯೂನಿಸ್ಟ್ ಚಿಂತನೆಯ ಜನರನ್ನು ವಿವಿಯ ಆಯಾಕಟ್ಟಿನ ಜಾಗದಲ್ಲಿ ಕುಳ್ಳಿರಿಸಿರುವ ಭೈರಪ್ಪ, ಅದೇ ಸಮಯಕ್ಕೆ ತನ್ನ ಸಿದ್ಧಾಂತಕ್ಕೆ ವಿರುದ್ಧವಾಗಿರುವವರನ್ನು ನೀರು, ಗಾಳಿಯಿಲ್ಲದ ಕಡೆ ಎತ್ತಿ ಬಿಸಾಡುವುದರಲ್ಲಿಯೂ ಸಮರ್ಥರು. ಎಲ್ಲಾ ಹಿರಿಯರನ್ನು ಕಡೆಗಣಿಸಿ ಇವರು 45 ವರ್ಷದ ಎಎಂ ಖಾನ್ ರನ್ನು ಪರೀಕ್ಷಾಂಗ ವಿಭಾಗದ ಕುಲಸಚಿವರನ್ನಾಗಿಸಿದ್ದಾರೆ. ಎಡಪಂಥಿಯ ಉಗ್ರ ಧೋರಣೆಯ ಕಮ್ಯೂನಿಸ್ಟ್ ಎಸ್ ಆರ್ ಲೋಕೇಶ್, ಕೆಂಪರಾಜ್ ಅವರನ್ನು ರಿಜಿಸ್ಟಾರ್ ಆಗಿ ನೇಮಿಸಿದ್ದಾರೆ. ಮಾತ್ರವಲ್ಲದೇ ಇಡೀ ವಿಶ್ವವಿದ್ಯಾನಿಲಯದ ಆಡಳಿತವನ್ನು ಕಮ್ಯೂನಿಸ್ಟ್ ಫ್ರೋಫೆಸರ್ ಗಳಿಗೆ ನೀಡಿದ್ದು, ಕಮ್ಯೂನಿಸ್ಟರ ಸಲಹೆ ಪ್ರಕಾರ ವಿಶ್ವವಿದ್ಯಾನಿಲಯದ ಎಲ್ಲಾ ಕೆಲಸಗಳು ನಡೆಯುತ್ತಿರುವುದು. ಅದಕ್ಕೆ ಸಾಕ್ಷ್ಯವಾಗಿ ಬರಗೂರು ರಾಮಚಂದ್ರಪ್ಪನವರು ಯುದ್ಧ ಮತ್ತು ಒಂದು ಉದ್ದಿಮೆ ತರಹದ ಸೈನಿಕರನ್ನು ಹೀಯಾಳಿಸುವ, ಅವರು ಅತ್ಯಾಚಾರಿಗಳು ಎಂದು ಬಿಂಬಿಸುವ, ಅವರು ಕಡಿಮೆ ಬೆಲೆಗೆ ಮದ್ಯ ಖರೀದಿಸುತ್ತಾರೆ ಎಂದು ಹಂಗಿಸುವ, ಅವರ ಹೆಂಡತಿಯರು ಏಕಾಂತದಲ್ಲಿ ಏನು ಮಾಡುತ್ತಾರೋ ಎಂದು ಅಸಭ್ಯವಾಗಿ ಚಿಂತಿಸುವ ಬರಹಗಳು ಈಗ ಪಠ್ಯಗಳಾಗುತ್ತಿವೆ ಎಂದರೆ ಭೈರಪ್ಪನವರು ತಮ್ಮ ಆಡಳಿತವನ್ನು ಯಾವ ರೀತಿಯಲ್ಲಿ ನಡೆಸುತ್ತಿದ್ದಾರೆ ಎಂದು ತಿಳಿಯಲು ಕಷ್ಟವಲ್ಲ. ಅದೇ ಸಮಯಕ್ಕೆ ಎಬಿವಿಪಿಯವರು ಪ್ರತಿಭಟನೆ ಮಾಡಿದರೆ, ಬದಲಾದ ರಾಜ್ಯಪಾಲರು ಕೋಪಗೊಂಡರೆ ಯಾವುದಕ್ಕೂ ಸೇಫ್ ಗೆ ಇರಲಿ ಎಂದು ತನ್ನೊಂದಿಗೆ ಸಂಘಪರಿವಾರದ ಹಿನ್ನಲೆಯ ವ್ಯಕ್ತಿಯೊಬ್ಬರನ್ನು ಇಟ್ಟುಕೊಂಡು ಭೈರಪ್ಪ ಎಲ್ಲಾ ಕಡೆ ಸಲ್ಲುವವರಂತೆ ಆಟವಾಡಲು ನಿಂತಿರುವ ಶೈಲಿಗೆ ವಿವಿ ದಂಗಾಗಿದೆ.
ಭೈರಪ್ಪನವರು ಮಂಗಳೂರು ವಿವಿಯನ್ನು ಮೂರು ರೀತಿಯಲ್ಲಿ ಬಳಸಿಕೊಳ್ಳುತ್ತಿದ್ದಾರೆ. ಒಂದು ಸೈದ್ಧಾಂತಿವಾಗಿ, ಇನ್ನೊಂದು ತಮ್ಮ ಆರ್ಥಿಕ ಅನುಕೂಲಕ್ಕಾಗಿ ಮತ್ತು ಮೂರನೇಯದ್ದು ತಮ್ಮ ಸ್ವಪ್ರತಿಷ್ಟೆಯನ್ನು ಹೆಚ್ಚಿಸುವುದಕ್ಕಾಗಿ. ವಿಶೇಷ ಎಂದರೆ ಅವರು ಈ ಮೂರರಲ್ಲಿಯೂ ಯಶಸ್ವಿಯಾಗಿದ್ದಾರೆ. ಕಾಂಗ್ರೆಸ್ ಕೃಪೆಯಿಂದ ಅಧಿಕಾರ ಸಿಕ್ಕಿದ ಋಣ ತೀರಿಸುವುದಕ್ಕಾಗಿ ಬಡ ವಿದ್ಯಾರ್ಥಿಗಳು ಕಟ್ಟಿದ ಫೀಸ್ ಹಣದಲ್ಲಿ 9 ಲಕ್ಷ ರೂಪಾಯಿ ಖರ್ಚು ಮಾಡಿ ನೆಹರೂ 125 ಎನ್ನುವ ಕಾರ್ಯಕ್ರಮ ಮಾಡುತ್ತಾರೆ. ಅಲ್ಲಿ ಕಾಂಗ್ರೆಸ್ಸಿನ ಹಿರಿಕಿರಿಯ ನಾಯಕರನ್ನು ಕರೆಸಿ ನರೇಂದ್ರ ಮೋದಿ, ಸಂಘ ಪರಿವಾರ, ಬಿಜೆಪಿಯನ್ನು ಬೈಯುವ ಕೆಲಸ ಮಾಡುತ್ತಾರೆ. ಮಕ್ಕಳಲ್ಲಿ ವಿಷ ಬೀಜ ಬಿತ್ತುವಲ್ಲಿ ಯಶಸ್ವಿ ಪ್ರಯತ್ನ ಕೂಡ ಮಾಡಿದ್ದಾರೆ. ಅಲ್ಲಿಗೆ ಕಾಂಗ್ರೆಸ್ ಹೈಕಮಾಂಡ್ ಖುಷ್, ಭೈರಪ್ಪ ಕಳೆದುಕೊಂಡದ್ದು ಕೂಡ ಏನೂ ಇಲ್ಲ. ಖರ್ಚು ಮಾಡಿದ್ದು ಮಕ್ಕಳ ಹಣ. ಹೆಸರು ಮಾತ್ರ ಇವರಿಗೆ. ಇನ್ನು ಹುಡುಕಿ ಹುಡುಕಿ ಸಂಘ ಪರಿವಾರವನ್ನು ಬೈಯುವ ವಾಗ್ಮಿಗಳನ್ನು ತಂದು ಮಕ್ಕಳಿಗೆ ಅವರಿಂದ ಭೋದನೆ ಮಾಡಿಸುತ್ತಾರೆ. ಚಕ್ರವರ್ತಿ ಸೂಲಿಬೆಲೆಯವರು ಬರುತ್ತಾರೆ ಎಂದು ಗೊತ್ತಾದರೆ ಕಾರ್ಯಕ್ರಮಕ್ಕೆ ಅಡ್ಡಗಾಲು ಹಾಕುತ್ತಾರೆ. ಯಾಕೆಂದರೆ ಸೂಲಿಬೆಲೆ ಭಾಷಣ ಮಾಡಿದರೆ ಕಾಂಗ್ರೆಸ್ ನಾಯಕರ ಕಣ್ಣಿನಲ್ಲಿ ಭೈರಪ್ಪ ವಿಲನ್ ಆಗುತ್ತಾರೆ. ಅದು ಇವರಿಗೆ ಬೇಕಾಗಿಲ್ಲ. ರಾಣಿ ಅಬ್ಬಕ್ಕ ಕಾರ್ಯಕ್ರಮಕ್ಕೆ ಅಮಿತ್ ಶಾ ಬಂದಾಗ ಹಾಲ್ ನ ಬಾಡಿಗೆ ಪಡೆಯುತ್ತಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಒಂದು ಸಲ ಬಂದು ಹೋಗಲಿ, ಯಾವ ಖರ್ಚು ಕೂಡ ಮಾಡಲು ಸಿದ್ಧ ಎಂದು ಕಂಡಕಂಡವರ ಕೈಕಾಲು ಹಿಡಿಯುತ್ತಾರೆ.
ಜಿಲ್ಲೆ, ರಾಜ್ಯ, ದೇಶದಿಂದ ಗಣ್ಯರನ್ನು ಕರೆಸಿ ಭಾಷಣ ಮಾಡಿಸುತ್ತಾರೆ. ಅವರಿಗೆ ಫೈವ್ ಸ್ಟಾರ್ ಔತಣ ಕೊಡಲಾಗುತ್ತದೆ. ಅವರಿಗೆ ಸಕಲ ಸೌಲಭ್ಯಗಳು ವಿವಿ ಹಣದಲ್ಲಿ ಸಂದಾಯವಾಗುತ್ತದೆ. ಕೊಡಿಸಿದ್ದು ತಾನು ಎಂದು ಭೈರಪ್ಪ ಫೋಸ್ ಕೊಡುತ್ತಾರೆ. ಅವರು ಭೈರಪ್ಪನವರನ್ನು ಅಂತರಾಷ್ಟ್ರೀಯ ವಿಜ್ಞಾನಿ ಎಂದು ಹಾಡಿಹೊಗಳಿ ಹೋಗುತ್ತಾರೆ. ಮಾತನಾಡಿದರೆ ತಾನು ಮೂರು ಸಾವಿರ ಸಂಶೋಧನಾ ಲೇಖನ ಬರೆದಿದ್ದೇನೆ ಎಂದು ಬೊಗಳೆ ಬಿಡುವ ಭೈರಪ್ಪ ಬದುಕಿನುದ್ದಕ್ಕೂ ಆಡಳಿತಾತ್ಮಕ ಹುದ್ದೆಯಲ್ಲಿಯೇ ಇದ್ದವರು ಮತ್ತು ವಿವಿ ಹಣದಲ್ಲಿ ದೇಶವಿದೇಶ ಸುತ್ತುವವರು. ಅಷ್ಟು ಸಂಶೋಧನೆ ಹೇಗೆ ಮಾಡಿದ್ರು ಎಂದು ಉಳಿದ ಪ್ರೊಫೆಸರ್ಸ್ ಕಿಸಕ್ಕನೆ ನಗುತ್ತಾರೆ. ಹೀಗೆ ಎರಡು ತೆವಲುಗಳನ್ನು ತೀರಿಸಿಕೊಳ್ಳುವ ಭೈರಪ್ಪನವರು ಹಣದ ವಿಷಯದಲ್ಲಿಯೂ ಬಹಳ ಮುಂದು.
ಮೊದಲನೇಯದಾಗಿ ಅಂಕಪಟ್ಟಿ ಅಕ್ರಮ: ಅಂಕಪಟ್ಟಿ/ಕೋಡಿಂಗ್, ಡಿಕೋಡಿಂಗ್, ಟ್ಯಾಬುಲೇಶನ್ ಈ ಕೆಲಸ ನಿರ್ವಹಿಸುತ್ತಿದ್ದವರು ಮಣಿಪಾಲದ ಸಂಸ್ಥೆಯವರು. ಬಹುಕೋಟಿ ವ್ಯವಹಾರವನ್ನು ಮಂಡ್ಯದವರಿಗೆ ನೀಡಿದರು. ಇವರ ಜೇಬು ತುಂಬಿತು. ಮಕ್ಕಳ ಅಂಕಪಟ್ಟಿಯ ಲೋಪ ಇಡೀ ವರ್ಷ ಚರ್ಚೆಯಾಯಿತು. ಯುಜಿಸಿಯಿಂದ ಮಾನ್ಯತೆ ಕಳೆದುಕೊಂಡ ಕೆಎಸ್ ಒಯುವಿನಂತೆ ಮಂಗಳೂರು ವಿವಿ ದೂರ ಶಿಕ್ಷಣ ನಿರ್ದೇಶನಾಲಯವನ್ನು ದುರುಪಯೋಗಪಡಿಸಿಕೊಂಡು ಅನಾವಶ್ಯಕವಾಗಿ ಬೆಂಗಳೂರಿನಲ್ಲಿ ಕೇಂದ್ರ ತೆರೆದು ಕಂಡವರಿಗೆಲ್ಲ ಪದವಿ ಪ್ರಮಾಣ ಪತ್ರ ಮಾರಾಟ ಮಾಡುವ ಕಾರ್ಯ ಭರದಿಂದ ಸಾಗುತ್ತಿದೆ.
ಇನ್ನೂ ಸಾಕಷ್ಟು ಭ್ರಷ್ಟಾಚಾರದ ಅಧ್ಯಾಯಗಳು ಕಂತೆಕಂತೆಗಳಾಗಿ ಇವೆ. ಎಲ್ಲವನ್ನು ಒಂದೊಂದಾಗಿ ಹೇಳಲಿದ್ದೇವೆ. ಅದರೊಂದಿಗೆ ಭೈರಪ್ಪನವರಿಗೆ ಸಾಥ್ ಕೊಟ್ಟು ಈ ಭ್ರಷ್ಟಾಚಾರದ ವಿಚಾರಗಳನ್ನು ಮಾಧ್ಯಮಗಳು ಹೊರಗೆ ತರದಂತೆ ಕೆಲಸ ಮಾಡುವ “ಹರಿ”ಕಥೆ ದಾಸರ ಕಥೆ ಕೂಡ ಸದ್ಯದಲ್ಲಿ ಹೊರಬೀಳಲಿದೆ.
Leave A Reply