• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ರಸ್ತೆಯ ಮೇಲೆ ಬಾಕಿಯಾದ ಮಣ್ಣು, ಮರಳು ಕೃತಕ ನೆರೆಯ ಸಂಬಂಧಿಗಳು!!

Tulunadu News Posted On March 5, 2021


  • Share On Facebook
  • Tweet It

ಒಬ್ಬ ವೈದ್ಯ ಶಸ್ತ್ರಚಿಕಿತ್ಸೆ ಮಾಡಿದ ನಂತರ ಎಷ್ಟು ನೀಟಾಗಿ ಪೋಸ್ಟ್ ಸರ್ಜರಿ ಕ್ರಿಯೆಗಳನ್ನು ಮಾಡುತ್ತಾನೆ ಎನ್ನುವುದು ನಮಗೆ ಗೊತ್ತಿದೆ. ಹೊಲಿಗೆ ಹಾಕಬೇಕಾದರೆ ಅದು ಹಾಕಿ, ಬ್ಯಾಂಡೆಂಜ್ ಮಾಡಿ ರೋಗಿಗೆ ಶಸ್ತ್ರಚಿಕಿತ್ಸೆ ಆದ ಒಂದು ಸಣ್ಣ ಕುರುಹು ಕೂಡ ಉಳಿಯದೇ ಕೆಲಸ ಮುಗಿಸುವುದು ವೈದ್ಯನ ಕಲೆ. ಅದನ್ನು ಒಬ್ಬ ನುರಿತ ಗುತ್ತಿಗೆದಾರ ಕೂಡ ಮಾಡಿ ತೋರಿಸಬೇಕು. ಆದರೆ ಮಂಗಳೂರಿನಲ್ಲಿ ಹೇಳುವವರು ಕೇಳುವವರು ಇಲ್ಲದೆ ಇರುವುದರಿಂದ ಕಾಂಕ್ರೀಟ್ ರಸ್ತೆಗಳನ್ನು ಕಟ್ ಮಾಡುವುದು, ಅಲ್ಲಿ ಒಳಗೆ ಕೇಬಲ್ ಹೂಳುವುದು, ನಂತರ ಅಗೆದು ಮೇಲೆ ಹಾಕಿದ ಮಣ್ಣು ಮತ್ತೆ ಸುರಿಯುವುದು, ಮರಳು ತಂದಿದ್ರೆ ಅದನ್ನು ಹಾಕಿ ತೇಪೆ ಮಾಡಿ ಬಿಡುವುದು ಮತ್ತು ಆ ರಸ್ತೆ ಕಡೆ ಮುಖ ಮಾಡಿ ಮಲಗದೇ ಇರುವುದು ಇದು ಇತ್ತೀಚಿಗೆ ಮಂಗಳೂರಿಗೆ ಬಂದಿರುವ ಹೊಸ ವರ್ಕಿಂಗ್ ಶೈಲಿ.

ಇವರು ರಸ್ತೆ ಅಗೆದು ಮೇಲೆ ಹಾಕಿದ ಮಣ್ಣಿನಲ್ಲಿ ನಸೀಬು ಇರುವ ಮಣ್ಣು ಮತ್ತೆ ಕೆಳಗೆ ಹೋಗುತ್ತದೆ. ಉಳಿದ ಮಣ್ಣು ಅಲ್ಲಿಯೇ ಉಳಿಯುತ್ತದೆ. ಒಂದಿಷ್ಟು ಮಣ್ಣು ಅಲ್ಲಿಯೇ ಪಕ್ಕದಲ್ಲಿರುವ ಚರಂಡಿಯನ್ನು ಸೇರುತ್ತದೆ. ಇನ್ನು ಒಂದಿಷ್ಟು ಮಣ್ಣು ರಸ್ತೆ ಹಾಗೂ ಫುಟ್ ಪಾತ್ ನಡುವೆ ಇರುವ ಜಾಲಿಯಲ್ಲಿ ಹೋಗಿ ಸುಮ್ಮನೆ ಕುಳಿತುಬಿಡುತ್ತದೆ. ಇನ್ನಷ್ಟು ಮಣ್ಣು ತಮ್ಮ ಶಾಪ ವಿಮೋಚನೆಗಾಗಿ ಮಳೆಯನ್ನು ಕಾಯುತ್ತದೆ. ಮಳೆ ಬಂದಾಗ ಕೃತಕ ನೆರೆ ಉದ್ಭವವಾಗುತ್ತದೆ ಮತ್ತು ನಾವು ಪಾದಚಾರಿಗಳು, ದ್ವಿಚಕ್ರ ವಾಹನದವರು ಅನುಭವಿಸುತ್ತೇವೆ. ಇದು ನಡೆದುಕೊಂಡು ಬಂದಿರುವ ಹೊಸ ಸಂಪ್ರದಾಯ. ಈಗ ಮೆಸ್ಕಾಂನವರು ಕೇಬಲ್ ಗಳನ್ನು ನೆಲದಡಿ ಅಳವಡಿಸುವ ಪ್ರಕ್ರಿಯೆಯಿಂದ ಮಾತ್ರ ಈ ಸಮಸ್ಯೆ ಉದ್ಭವಿಸಿರುವುದಿಲ್ಲ. ಈಗ ಟ್ರಾನ್ಸಫಾರಮ್ ಇದು ಕೂಡ ನೆಲದಡಿ ಅಳವಡಿಸಲಾಗುತ್ತಿದೆ. ಅದಕ್ಕಾಗಿ ರಸ್ತೆ ಅಗೆದು ಕೆಳಗೆ ಅದನ್ನು ಹೇಗೆ ಬೇಕೋ ಹಾಗೆ ವ್ಯವಸ್ಥೆ ಮಾಡಿ ಅಳವಡಿಸಲಾಗುತ್ತಿದೆ. ಆದರೆ ಸಮಸ್ಯೆ ಮಾತ್ರ ಅದೇ. ಮರಳು, ಮಣ್ಣು ನೆಲದ ಮೇಲೆ ಹಾಗೆ ಅಷ್ಟಿಷ್ಟು ಅಲ್ಲಿಯೇ ಬಾಕಿ ಆಗುತ್ತಿದೆ. ಇದರಿಂದ ಏನು ಆಗುತ್ತದೆ ಎಂದು ಈಗ ಅನಿಸಬಹುದು. ವಿವರಿಸುತ್ತೇನೆ, ಓದಿ. ನೀವು ಒಂದು ಮೀಟರ್ ಅಗಲದ ಹೊಸದಾಗಿ ಅಭಿವೃದ್ಧಿಗೊಂಡ ಚರಂಡಿ ಅಥವಾ ತೋಡನ್ನು ಸ್ವಲ್ಪ ಹತ್ತಿರದಿಂದ ಗಮನಿಸಿ. ತೋಡಿಗೆ ಕಾಂಕ್ರೀಟ್ ಹಾಕಿ ಚೆಂದ ಮಾಡಿರುತ್ತಾರೆ. ತೋಡಿನಲ್ಲಿ ಅಲ್ಲಲ್ಲಿ ನಿರ್ದಿಷ್ಟ ಅಂತರದಲ್ಲಿ ರಂಧ್ರವನ್ನು ಸಾಧಾರಣ ಸೈಜಿನದ್ದು ಮಾಡಿರುತ್ತಾರೆ. ಈಗ ಈ ಮಣ್ಣು, ಮರಳು ತೋಡಿಗೆ ಇಳಿದರೆ ಈ ರಂಧ್ರಗಳು ಮುಚ್ಚಿ ಹೋಗುತ್ತವೆ. ಅದರಿಂದ ಸಮಸ್ಯೆ ಗ್ಯಾರಂಟಿ. ಇನ್ನು ರಸ್ತೆ ಹಾಗೂ ಫುಟ್ ಪಾತ್ ನಡುವೆ ಇರುವ ಜಾಲಿಯಾಕಾರದ ವ್ಯವಸ್ಥೆಯಲ್ಲಿ ಈಗಾಗಲೇ ಮಣ್ಣು, ಮರಳು, ಪಾನ್ ಪರಾಗ್ ಪ್ಯಾಕೇಟುಗಳು ತುಂಬಿವೆ. ಅದನ್ನು ತೆಗೆದು ಸ್ವಚ್ಚಗೊಳಿಸಲಾಗುತ್ತಿಲ್ಲ. ಈ ಜಾಲಿಯ ನಿರ್ಮಾಣ ಹೇಗಿರುತ್ತೆ ಎಂದರೆ ರಸ್ತೆಯಿಂದ ನೀರು ಇದರಲ್ಲಿ ಇಳಿದಾಗ ಮೊದಲು ಪೈಪಿನ ಮೂಲಕ ಚರಂಡಿಯನ್ನು ಸೇರುತ್ತದೆ. ಆ ನೀರಿನಲ್ಲಿದ್ದ ಮಣ್ಣು, ಮರಳು ಇತರ ಅನುಪಯುಕ್ತ ವಸ್ತುಗಳು ಜಾಲಿಯಲ್ಲಿ ಕೆಳಗೆ ಇಳಿದು ಅಲ್ಲಿಯೇ ಬಾಕಿಯಾಗುತ್ತದೆ. ಇದನ್ನು ಮಳೆಗಾಲದ ಮೊದಲು ತೆಗೆದು ಪರಿಶೀಲಿಸಿ ಕ್ಲೀನ್ ಮಾಡಬೇಕು. ಅದು ಮಾಡದೇ ಇದ್ದರೆ ಆ ಭಾಗದಲ್ಲಿ ಕೃತಕ ನೆರೆ ಬರದೇ ಇನ್ನೇನು ಬರಲು ಸಾಧ್ಯ? ಇನ್ನು ಹಳೆ ಬಂದರು ಪ್ರದೇಶದಲ್ಲಿ ಒಳಚರಂಡಿ ಹಾಗೂ ರಸ್ತೆ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಆ ಪ್ರದೇಶವನ್ನು ಸೇರಿಸಿಕೊಂಡು ಕೆಳರಥಬೀದಿ, ಕುದ್ರೋಳಿ ಭಾಗಗಳು ತಗ್ಗುಪ್ರದೇಶವನ್ನು ಹೊಂದಿದೆ. ಹಳೆಬಂದರು ಪ್ರದೇಶದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ಬೇಗ ಮುಗಿಯದಿದ್ದರೆ ಈ ಮಳೆಗಾಲದಲ್ಲಿ ಅಲ್ಲಿ ಬೃಹತ್ ಕೃತಕ ನೆರೆ ಮಾತ್ರವಲ್ಲ ಕೆರೆ ಸೃಷ್ಟಿಯಾಗುವುದು ಬಹುತೇಕ ನಿಶ್ಚಯ. ಇದನ್ನು ನೋಡಬೇಕಾದವರು ಯಾರು? ನಮ್ಮ ಮಂಗಳೂರು ಮಹಾನಗರ ಪಾಲಿಕೆಯವರು. ಆದರೆ ಅವರಿಗೆ ಈ ಮೆಸ್ಕಾಂನವರು ಮಾಡುತ್ತಿರುವ ಕಾಮಗಾರಿಯಾಗಲಿ, ಸ್ಮಾರ್ಟ್ ಸಿಟಿಯವರು ಮಾಡುತ್ತಿರುವ ಕಾಮಗಾರಿಯಾಗಲಿ ಎಲ್ಲಿ, ಏನು, ಎತ್ತ ಎನ್ನುವ ಸಮರ್ಪಕವಾದ ಮಾಹಿತಿಯೇ ಇಲ್ಲ. ಸೂಕ್ತ ಸಮನ್ವಯದ ಕೊರತೆ ಇರುವುದರಿಂದ ಹೀಗೆ ಅರ್ಧಂಬರ್ಧ ಕೆಲಸ ಮಾಡಿ ಹೋದರೂ ಪಾಲಿಕೆಯಿಂದ ಕೇಳುವವರಿಲ್ಲದ ಪರಿಸ್ಥಿತಿ ಇದೆ. ಒಂದು ವೇಳೆ ಮೆಸ್ಕಾಂನವರು ಕಾಂಕ್ರೀಟ್ ರಸ್ತೆ ಅಗೆದರೆ ಮೊದಲಿದ್ದ ಹಾಗೆ ರಸ್ತೆಗೆ ಕಾಂಕ್ರೀಟ್ ಹಾಕಬೇಕು. ಅದೇ ಡಾಮರು ರಸ್ತೆ ಅಗೆದರೆ ಡಾಮರು ಹಾಕಿಯೇ ಮುಗಿಸಬೇಕು. ಒಂದು ಸಮನ್ವಯ ಇದ್ದಿದ್ರೆ ಹಾಗೆ ಬೇರೆ ಇಲಾಖೆಯವರು ಜನರಿಗೆ ಉಪದ್ರವ ಆಗುವ ಹಾಗೆ ಕಾಮಗಾರಿ ಮುಗಿಸಿದ್ರೆ ಆ ಗುತ್ತಿಗೆದಾರರ ಕಿವಿ ಹಿಂಡುವ ಅವಕಾಶ ಪಾಲಿಕೆಗೆ ಇದೆ. ಇದೆಲ್ಲವನ್ನು ಯಾಕೆ ಹೇಳಬೇಕಾಗಿದೆ ಎಂದರೆ ಹೊಸ ಮೇಯರ್ ಬಂದಿದ್ದಾರೆ. ಅವರು ಈ ಬಗ್ಗೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲೇಬೇಕು. ಹೇಗೂ ಯುವ ಕಮೀಷನರ್ ಪಾಲಿಕೆಯಲ್ಲಿ ಇದ್ದಾರೆ. ಇಬ್ಬರೂ ಸೇರಿ ಈ ಸಮಸ್ಯೆಯನ್ನು ಪರಿಹರಿಸಿದರೆ ಜನರು ಈ ಮಳೆಗಾಲವನ್ನು ನೆಮ್ಮದಿಯಿಂದ ಕಳೆಯಬಹುದು. ಇಲ್ಲದಿದ್ದರೆ ಇಷ್ಟು ವರ್ಷಗಳಿಗಿಂತ ಈ ಬಾರಿ ದೊಡ್ಡ ಮಟ್ಟದಲ್ಲಿ ಕೃತಕ ನೆರೆಯ ಸವಾಲು ಅವರನ್ನು ಸ್ವಾಗತಿಸಲಿದೆ.!

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Tulunadu News May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Tulunadu News May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search