ನಾವು ಸರಿಯಾಗಿ ಬಿಲ್ ಕಟ್ಟುತ್ತೇವೆ, ಕರೆಂಟ್ ಕಳ್ಳರಲ್ಲ. ಮತ್ಯಾಕೆ ನಮಗೆ ವಿದ್ಯುತ್ ದರ ಏರಿಕೆಯ ಬರೆ?
Posted On June 10, 2021

ಕರೆಂಟ್ ಯೂನಿಟ್ ದರ ಹೆಚ್ಚಳ ಮಾಡಲು ತಕ್ಷಣ ಕ್ರಮ ಕೈಗೊಂಡಿದೆ. ಎಲ್ಲರಿಗೂ ಬೇಕಾಗಿರುವ ವಿದ್ಯುತ್ ದರ ಹೆಚ್ಚಳ ಮಾಡಿದೆ ಇತ್ತೀಚೆಗಷ್ಟೇ ವಿದ್ಯುತ್ ದರ ಪರಿಷ್ಕರಣೆಯ ಕುರಿತು ಜಿಲ್ಲಾಧಿಕಾರಿ ಕಚೇರಿಯಲ್ಲಿ ಈ ಬಗ್ಗೆ ಸಾರ್ವಜನಿಕರೊಂದಿಗೆ ಸಭೆ ನಡೆಸಿತ್ತು ಒಂದೇ ವಾಕ್ಯದಲ್ಲಿ ನಿಮಗೆ ಮತ್ತೇ ನೆನಪಿಸುತ್ತಿದ್ದೇನೆ. ನಾವು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯವರು ಇಡೀ ರಾಜ್ಯದಲ್ಲಿ 98% ದಷ್ಟು ಸರಿಯಾಗಿ ವಿದ್ಯುತ್ ಬಿಲ್ ಪಾವತಿಸುತ್ತಿದ್ದೇವೆ. ಇನ್ನೂ ಸರಿಯಾಗಿ ಹೇಳಬೇಕೆಂದರೆ ನಮ್ಮನ್ನು ನಂಬಿಯೇ ನೀವು ವಿದ್ಯುತ್ ಖರೀದಿಸುವ ವಾತಾವರಣ ಇದೆ. ಬೇರೆ ಯಾವ ಜಿಲ್ಲೆಯವರೂ ಕೂಡ ನಮ್ಮಷ್ಟು ಪ್ರಾಮಾಣಿಕವಾಗಿ ಕರೆಂಟ್ ಬಿಲ್ ಕಟ್ಟಲ್ಲ. ನಾವು ಮರ್ಯಾದೆಗೆ ಅಂಜುವ ಜನ. ಬಿಲ್ ಕಟ್ಟದಿದ್ದರೆ ಮೆಸ್ಕಾಂನವರು ಫ್ಯೂಸ್ ತೆಗೆದುಕೊಂಡು ಹೋಗುತ್ತಾರೆ, ಅದರಿಂದ ಅಕ್ಕಪಕ್ಕದ ಮನೆಯವರ ಎದುರು ಮರ್ಯಾದೆ ಹೋಗುತ್ತದೆ ಎಂದು ಹೆದರಿ ನಾವು ಓಡಿ ಹೋಗಿ ಬಿಲ್ ಕಟ್ಟುತ್ತೇವೆ. ಕಾರಣ ಏನೇ ಇರಲಿ, ನಾವು ಬಿಲ್ ಕಟ್ಟುತ್ತೇವೆ ತಾನೆ, ಆದ್ದರಿಂದ ನಮ್ಮ ಒಳ್ಳೆಯತನಕ್ಕೆ ಮರ್ಯಾದೆ ಬೇಡ್ವೇ.
ಸರಿಯಾಗಿ ಬಿಲ್ ಕಟ್ಟುವವರಿಗೆ ರಾಜ್ಯ ವಿದ್ಯುತ್ ನಿಯಂತ್ರಣ ಆಯೋಗ ಒಂದಿಷ್ಟು ಬೆನ್ನು ತಟ್ಟುವುದು ಬೇಡ್ವೇ. ಬೆನ್ನು ತಟ್ಟುವುದು ಎಂದರೆ ನೀವು ಈ ಋತುವಿನಲ್ಲಿ ಸರಿಯಾಗಿ ಬಿಲ್ ಕಟ್ಟಿ ನಿಗದಿತ ಗುರಿ ಮುಟ್ಟಿದ್ದೀರಿ. ಆದ್ದರಿಂದ ನಿಮಗೆ ಈ ಬಾರಿಯ ವಿದ್ಯುತ್ ಹೆಚ್ಚಳ ಇಲ್ಲ.ಇದರೊಂದಿಗೆ ನಾವು ಇಡೀ ರಾಜ್ಯದಲ್ಲಿಯೇ ವಿದ್ಯುತ್ ಕಳವು ಮಾಡುವುದರಲ್ಲಿ ಹಿಂದೆ ಇದ್ದೇವೆ. ಅದರರ್ಥ ನಾವು ಕಳ್ಳರಲ್ಲ. ಒಂದು ಒಳ್ಳೆಯ ಮಾತು ಬೇಡ್ವಾ? ಒಳ್ಳೆಯ ಮಾತು ಎಂದರೆ ಮೈಕ್ ನಲ್ಲಿ ರಾಜಕಾರಣಿಗಳ ತರಹ ಹೊಗಳುವುದು ಬೇಡಾ. ಹೊಗಳಿಕೆಯನ್ನು ಉಪ್ಪು, ಖಾರ ಹಾಕಿ ತೆಕ್ಕರೆಯಂತೆ ತಿನ್ನುವುದಕ್ಕಾ? ಈ ಬಾರಿ ಉಡುಪಿ-ದಕ್ಷಿಣ ಕನ್ನಡದವರಿಗೆ ವಿದ್ಯುತ್ ದರ ಹೆಚ್ಚಳ ಇಲ್ಲಾ ಎನ್ನಬಹುದಿತ್ತು ವಿದ್ಯುತ್ ನಿಯಂತ್ರಣ ಆಯೋಗದ ಆಯುಕ್ತ ಶಂಕರಲಿಂಗೇ ಗೌಡರು. ನಮ್ಮ ದೇಶದಲ್ಲಿ ಸರಿಯಾಗಿ ತೆರಿಗೆ ಕಟ್ಟುವವನಿಗೆ, ಸರಿಯಾಗಿ ಬಿಲ್ ಪಾವತಿಸುವವನಿಗೆ ಗೌರವ ಕೊಡುವ ವಾತಾವರಣ ಸರಕಾರಗಳಿಂದ ಎಲ್ಲಿಯವರೆಗೆ ನಿರ್ಮಾಣ ಆಗುವುದಿಲ್ಲವೋ ಅಲ್ಲಿಯತನಕ ಹೀಗೆ ಅಧಿಕಾರಿಗಳು, ಜನಪ್ರತಿನಿಧಿಗಳು ಇಂತಹ ಮಾತುಗಳಿಗೆ ನಗುತ್ತಲೇ ಇರುತ್ತಾರೆ. ಇದೇ ಮಾತನ್ನು ಬಿಜೆಪಿಯವರಿಗೆ ಹೇಳಿದರೂ,ವಿಪಕ್ಷ ಕಾಂಗ್ರೆಸ್ ನವರಿಗೆ ಹೇಳಿದರೂ ಅವರು ಹೀಗೆ ನಗಬಹುದು. ಯಾಕೆಂದರೆ ಯಾರೂ ಕೂಡ ವಿಭಿನ್ನವಾಗಿ ಯೋಚಿಸಲ್ಲ. ರಾಜ್ಯದಲ್ಲಿ ಬೆಸ್ಕಾಂ, ಚೆಸ್ಕಾಂ, ಮೆಸ್ಕಾಂ ಸಹಿತ ಯಾವುದೇ ಸ್ಕಾಂಗಳಲ್ಲಿ ಅತೀ ಹೆಚ್ಚು ಲಾಭದಲ್ಲಿರುವುದು ಒಂದೇ ಒಂದು ಅದು ಮೆಸ್ಕಾಂ. ಬೇರೆ ಸ್ಕಾಂಗಳಿಗೂ ನಮಗೂ ಒಂದೇ ರೀತಿಯಲ್ಲಿ ದರ ಹೆಚ್ಚಳ ಮಾಡಿರುವುದರಿಂದ ನಮಗೆ ಏನೂ ಸಿಕ್ಕಿತು. ಸಿಕ್ಕಿದ್ದು ಇಷ್ಟೇ, ನೀವು ಮರ್ಯಾದೆಗೆ ಹೆದರಿ ಓಡಿ ಹೋಗಿ ಬಿಲ್ ಕಟ್ಟುತ್ತೀರಿ, ಬೇರೆ ಜಿಲ್ಲೆಗಳಲ್ಲಿ ಬಿಲ್ ಕೇಳಲು ಹೋದರೆ ಹೊಡೆದು ಓಡಿಸುತ್ತಾರೆ ಎನ್ನುವ ಸಂದೇಶ ತಾನೇ ಆದರೆ ನನ್ನ ಹಿತೈಷಿ ಓದುಗರಲ್ಲಿ ನನ್ನದೊಂದು ವಿನಂತಿ. ನಿಮಗೆ ಕರೆಂಟ್ ಬಿಲ್ ಬರುತ್ತದೆಯಲ್ಲ, ಅದರಲ್ಲಿ ನೀವು ನೋಡುವುದು ಕೊನೆಯ ಕಾಲಂ ಮಾತ್ರ. ಅಂದರೆ ಒಟ್ಟು ಬಿಲ್ ಎಷ್ಟು ಕಟ್ಟಬೇಕು? ನಾನು ನಿಮ್ಮ ಹತ್ತಿರ ಕೇಳುವುದಿಷ್ಟೇ. ಅದರಲ್ಲಿ ಇನ್ನೊಂದು ಕಾಲಂ ಇದೆ. ಅದರಲ್ಲಿ ನಿಮ್ಮ ಒಟ್ಟು ಬಿಲ್ ಮೇಲೆ ಇಷ್ಟು ಶೇಕಡಾ ಎಂದು ಪ್ರತ್ಯೇಕ ಹಣ ಹಾಕಿರುತ್ತಾರೆ. ಅದನ್ನು ಯಾಕೆ ಹಾಕುತ್ತಾರೆ? ಅದನ್ನು ನಾವು ಯಾಕೆ ಕಟ್ಟಬೇಕು? ಆ ಹಣ ಯಾವುದಕ್ಕೆ ಹಾಕುತ್ತಾರೆ? ನಾವು ಯಾಕೆ ಇಷ್ಟು ದಿನ ಅದನ್ನು ನೋಡಿಲ್ಲ, ಬಿಲ್ ಸರಿಯಾಗಿ ನೋಡಿದ್ದೀರಾ, ಇಲ್ಲದಿದ್ದರೆ ಈಗ ಫ್ರೀ ಇದ್ದೀರಿ,ತಾನೆ ನೋಡಿ.
- Advertisement -
Leave A Reply