• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured

ಕರ್ನಾಟಕದ ಮುಂದಿನ ಸಿಎಂ ಮುಖ್ಯ ಅರ್ಹತೆಯೇ ಅವರ ಜಾತಿನಾ?

Hanumantha Kamath Posted On July 26, 2021
0


0
Shares
  • Share On Facebook
  • Tweet It

ಪಕ್ಷ, ರಾಜ್ಯ, ದೇಶ ಮತ್ತು ನಾಗರಿಕರ ಕಾಳಜಿಗಿಂತ ಜಾತಿ ದೊಡ್ಡದು ಎನ್ನುವುದು ಕರ್ನಾಟಕ ರಾಜ್ಯದಲ್ಲಿ ಮತ್ತೆ ಮತ್ತೆ ಸಾಬೀತಾಗುತ್ತಿದೆ. ಅದಕ್ಕೆ ರಾಜಕೀಯವಾಗಿ ಕಾಂಗ್ರೆಸ್ಸಿನ ಮಾಜಿ ಸಚಿವರೂ, ಹಾಲಿ ಶಾಸಕರೂ ಆಗಿರುವ ಶ್ಯಾಮನೂರು ಶಿವಶಂಕರಪ್ಪ ಹಾಗೂ ಎಂಬಿ ಪಾಟೀಲ್ ಅಂತವರು ಸಾಕ್ಷಿಗಳಾಗುತ್ತಿದ್ದಾರೆ. ವಿಧಾನಸಭೆಯಲ್ಲಿ ಒಳಗೆ ಮತ್ತು ಹೊರಗೆ ಇದೇ ಎಂಬಿ ಪಾಟೀಲ್ ಅವರು ಯಡ್ಡಿ ವಿರುದ್ಧ ಮಾತನಾಡುತ್ತಾರೆ. ಭ್ರಷ್ಟರು ಎಂದು ಜರೆಯುತ್ತಾರೆ, ತಮ್ಮ ಸರಕಾರವನ್ನು ಬೀಳಿಸಿದವರು ಎಂದು ದೂಷಿಸುತ್ತಾರೆ. ಸ್ವಜನ ಪಕ್ಷಪಾತ, ಸಿಎಂ ಕುಟುಂಬದ ಹಸ್ತಕ್ಷೇಪದ ವಿರುದ್ಧ ಆರೋಪ ಹಾಕುತ್ತಾರೆ. ಕೊರೊನಾ ಸಮಯದಲ್ಲಿ ನಾಗರಿಕರಿಗೆ ಸರಿಯಾದ ವ್ಯವಸ್ಥೆ ಮಾಡಲಿಲ್ಲ, ಸರಕಾರ ವೈಫಲ್ಯ ಕಂಡಿದೆ ಎಂದು ಬೊಬ್ಬೆ ಹೊಡೆಯುತ್ತಾರೆ. ಹೀಗೆ ಮಾತನಾಡುತ್ತಾ ಇದ್ದ ಹಾಗೆ ಯಡ್ಡಿಯವರನ್ನು ಸಿಎಂ ಸ್ಥಾನದಿಂದ ಇಳಿಸುತ್ತಾರೆ ಎನ್ನುವ ವದಂತಿ ಬರುತ್ತಿದ್ದ ಹಾಗೆ ನೇರವಾಗಿ ಸಿಎಂ ಮನೆಗೆ ಹೋಗಿ ಅಲ್ಲಿ ಅವರಿಗೆ ಹೂಗುಚ್ಚ ಕೊಟ್ಟು ಯಾವುದೇ ಕಾರಣಕ್ಕೂ ನೀವು ಸಿಎಂ ಸ್ಥಾನದಿಂದ ಇಳಿಯಬಾರದು ಎಂದು ವಿನಂತಿಸುತ್ತಾರೆ.

ಹಾಗಾದರೆ ಮೊನ್ನೆಯವರೆಗೆ ಕೆಟ್ಟವರಾಗಿದ್ದ ಯಡ್ಡಿ ಇಳಿಯುತ್ತಿದ್ದ ಹಾಗೆ ತಮ್ಮ ಜಾತಿಯವರು ಎನ್ನುವ ಕಾರಣಕ್ಕೆ ಎಂಬಿ ಪಾಟೀಲ್ ಅವರಿಗೆ ಒಳ್ಳೆಯವರಾಗಿ ಕಾಣಿಸಿದ್ರಾ? ಇನ್ನು ಶ್ಯಾಮನೂರು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು. ಯಡ್ಡಿ ಬದಲಾವಣೆಯಂತೆ ಎನ್ನುವ ಗಾಳಿಸುದ್ದಿ ಬರುತ್ತಿದ್ದಂತೆ ಎಲ್ಲಿಂದಲೋ ಎದ್ದು ಸಿಎಂ ಮನೆಗೆ ಬಂದು ಟಿಫಿನ್ ಮಾಡುತ್ತಾ ಆರಾಮವಾಗಿ ಕುಳಿತೆದ್ದು ಹೊರಗೆ ಬಂದು ಯಡ್ಡಿಗೆ ಬೆಂಬಲ ಸೂಚಿಸಲು ಬಂದೆ ಎನ್ನುತ್ತಾರೆ. ಅತ್ತ ಕೆಲವು ರಾಜ್ಯಗಳಲ್ಲಿ ಲಿಂಗಾಯತ ಕಾಂಗ್ರೆಸ್ ಮತ್ತು ಜಾತ್ಯಾತೀತ ಜನತಾ ದಳದ ಶಾಸಕರು ತಮ್ಮ ಬೆಂಬಲಿಗರನ್ನು ಬಿಟ್ಟು ಯಡ್ಡಿ ಪರ ಪ್ರತಿಭಟನೆ ಮಾಡುತ್ತಿದ್ದಾರೆ. ಈಗ ಜನರಿಗೆ ಅನಿಸುತ್ತಿದೆ, ಇಂದೆಂತಹ ನಾಟಕ. ಇದರಿಂದಲೇ ಒಂದು ವಿಷಯ ಸ್ಪಷ್ಟವಾಗುತ್ತಿದೆ. ಅದೇನೆಂದರೆ ಜಾತಿ ಬಿಟ್ಟು ಬೇರೆ ರಾಜಕೀಯವೇ ಇಲ್ಲ. ಒಂದು ಕ್ಷೇತ್ರದಲ್ಲಿ ಒಂದು ರಾಜಕೀಯ ಪಕ್ಷದಿಂದ ತನ್ನ ಅಭ್ಯರ್ಥಿಯನ್ನು ನಿಲ್ಲಿಸುವಾಗ ಆತನ ಅಥವಾ ಆಕೆಯ ಜಾತಿ ನೋಡಿಯೇ ಟಿಕೇಟ್ ನೀಡಲಾಗಿರುತ್ತದೆ. ಚುನಾವಣೆಯ ಸಂದರ್ಭದಲ್ಲಿ ಆ ಅಭ್ಯರ್ಥಿ ತನ್ನ ಪಕ್ಷದ ಚಿನ್ನೆಯನ್ನು ತೋರಿಸಿ ಪ್ರಚಾರ ಮಾಡಿರುತ್ತಾನೆ. ಅದರ ನಂತರ ಗೆದ್ದರೆ ಮತ್ತೆ ಅವನಿಗೆ ಸಚಿವಗಿರಿ ಕೊಡುವಾಗಲು ಜಾತಿ ಪ್ರಾಮುಖ್ಯ ವಹಿಸುತ್ತದೆ. ಆ ಬಳಿಕ ಸಿಎಂ ಆಗಲು ಕೂಡ ಜಾತಿಯೇ ಪ್ರಮುಖ ಅಸ್ತ್ರವಾಗುತ್ತದೆ. ಹಾಗಾದರೆ ಒಂದು ಪಕ್ಷದಲ್ಲಿ ಪ್ರಾದೇಶಿಕ ಸಮತೋಲನ ಎನ್ನುವ ಕಾರಣಕ್ಕೆ ಎಲ್ಲಾ ಜಾತಿಯವರಿಗೆ ಸಚಿವ ಸ್ಥಾನ ಕೊಡಬೇಕು ಎಂದು ಸಬೂಬು ಹೇಳಿದರೂ ಅಲ್ಲಿ ಕೂಡ ಆ ಶಾಸಕನ ಸಾಮರ್ತ್ಯವನ್ನು ಅಳೆಯುವುದು ಅವನ ಬುದ್ಧಿವಂತಿಕೆಯಿಂದ ಅಲ್ಲ. ಅವನ ಜಾತಿಯಿಂದ ಎನ್ನುವುದು ಈಗ ಎಲ್ಲರಿಗೂ ಗೊತ್ತಿರುವ ಸಂಗತಿ.

ಈಗ ದಲಿತ ಸಿಎಂ ವಿಷಯ ಮುನ್ನಲೆಗೆ ಬರುತ್ತಿದೆ. ಪರಮೇಶ್ವರ್ 2013 ರಲ್ಲಿ ಕಾಂಗ್ರೆಸ್ ರಾಜ್ಯಾಧ್ಯಕ್ಷರಾಗಿದ್ದಾಗ ಚುನಾವಣೆಯಲ್ಲಿ ಗೆದ್ದಿದ್ದರೆ ಅವರೇ ಸಿಎಂ. ಆದರೆ ಅವರನ್ನು ಸೋಲಿಸಿದವರು ಯಾರು? ಅಖಂಡ ಶ್ರೀನಿವಾಸ್ ಮನೆಗೆ ಬೆಂಕಿ ಬಿದ್ದಾಗ ಅವರ ಪಕ್ಷದವರು ಯಾಕೆ ಬೆಂಬಲಕ್ಕೆ ನಿಲ್ಲಲಿಲ್ಲ. ಹೀಗೆ ಕಾಂಗ್ರೆಸ್ಸಿಗೆ ಸಾಕಷ್ಟು ಹಿನ್ನಲೆ ಇದ್ದರೂ ಈಗ ಯಡ್ಡಿ ನಂತರ ಯಾರಾದರೂ ದಲಿತರನ್ನು ಮುಂದಿನ ಸಿಎಂ ಮಾಡಿ ಎಂದು ಸಿದ್ದು ಭಾರತೀಯ ಜನತಾ ಪಾರ್ಟಿಗೆ ಸವಾಲು ಹಾಕಿದ್ದಾರೆ. ಅದಕ್ಕೆ ಸರಿಯಾಗಿ ಬಿಜೆಪಿ ಕೂಡ ರಾಷ್ಟ್ರಪತಿಯವರಿಂದ ಹಿಡಿದು ಅನೇಕ ಕೇಂದ್ರ ಸಚಿವರ ಹಿನ್ನಲೆಯನ್ನು ನೆನಪಿಸಿ ಕಾಂಗ್ರೆಸ್ಸಿಗೆ ತಿರುಗೇಟು ನೀಡಿದೆ. ಇಲ್ಲಿ ಈಗ ಇರುವುದು ಲಿಂಗಾಯಿತರು ಸಿಎಂ ಆಗಬೇಕೋ, ದಲಿತರು ಸಿಎಂ ಆಗಬೇಕೋ ಎನ್ನುವುದಲ್ಲ. ಈಗ ತಕ್ಷಣ ಆಗಬೇಕಾಗಿರುವುದು ರಾಜ್ಯಕ್ಕೆ ಉತ್ಸಾಹಿ ಶಕ್ತಿ ಯಾರಾದರೂ ಸಿಎಂ ಆಗಲಿ ಎನ್ನುವುದು ಮಾತ್ರ. ಹಾಗಿರುವಾಗ ಯಡ್ಡಿ ಸ್ಥಾನಕ್ಕೆ ಮತ್ತೊಬ್ಬ ಲಿಂಗಾಯಿತರೇ ಬರಲಿ, ಸಂಖ್ಯಾವಾರು ಕಡಿಮೆ ಇರುವುದರಿಂದ ಬ್ರಾಹ್ಮಣರು ಬೇಡಾ, ಮುಂದಿನ ಚುನಾವಣೆಗೆ ಕಷ್ಟವಾಗುತ್ತದೆ ಎನ್ನುವ ಲಾಜಿಕ್ ಅಸಂಬದ್ಧವಾಗಿದೆ. ರಾಮಕೃಷ್ಣ ಹೆಗ್ಡೆ, ಗುಂಡೂರಾವ್ ಸಿಎಂ ಆಗಿ ಸಾಕಷ್ಟು ನೆನಪಿನಲ್ಲಿ ಇರುವ ಕೆಲಸ ಮಾಡಿದ್ದಾರೆ. ಆದರೆ ಪ್ರಬಲ ಜಾತಿಯವರೇ ಬೇಕು, ಇಲ್ಲದಿದ್ದರೆ ಮುಂದಿನ ಚುನಾವಣೆಯಲ್ಲಿ ಆ ಜಾತಿಯ ಮತದಾರರು ಬುದ್ಧಿ ಕಲಿಸುತ್ತಾರೆ ಎನ್ನುವ ವಾತಾವರಣ ನಿರ್ಮಾಣ ಆಗುವುದೇ ತಪ್ಪು. ಜನರಿಗೆ ಉತ್ತಮ ಆಡಳಿತ ನೀಡುವವರು ಬೇಕೋ ಅಥವಾ ತಮ್ಮ ಜಾತಿಯವನು ಸಿಎಂ ಆದರೆ ಸಾಕೋ, ಆತ ಹೇಗೆ ಬೇಕಾದರೂ ಇರಲಿ, ಎಷ್ಟು ಭ್ರಷ್ಟಾಚಾರ ಬೇಕಾದರೂ ಮಾಡಲಿ ಎನ್ನುವ ಧೋರಣೆ ಇದೆಯಾ ಎನ್ನುವ ಅನುಮಾನ ಬರುತ್ತದೆ.
ಇನ್ನು ಸ್ವಾಮೀಜಿಗಳು ಪ್ರತಿಭಟನೆ ಮಾಡುವುದು ಬೇಡಾ ಬೇಡಾ ಎಂದು ಯಡ್ಡಿ ಬಹಿರಂಗವಾಗಿ ಹೇಳಿದರೂ ಮತ್ತೆ ಮತ್ತೆ ಅರಮನೆ ಮೈದಾನ ಅಲ್ಲಿ ಇಲ್ಲಿ ಸೇರಿ ಪ್ರತಿಭಟನೆ ಮಾಡುತ್ತಿದ್ದಾರೆ. ಯಡ್ಡಿ ಇಳಿಯುವ ಮೊದಲು ತಮ್ಮ ಜಾತಿಗೆ ಆ ಮೀಸಲಾತಿ ಕೊಡಿ, ಈ ಮೀಸಲಾತಿ ಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಯಡ್ಡಿ ಇಳಿಯುವ ಮೊದಲು ತಮ್ಮದೇ ಜಾತಿಯ ಬೇರೆ ಬೇರೆ ಸ್ವಾಮೀಜಿಗಳಿಗೆ ಅನುಕೂಲ ಮಾಡಿಕೊಡಲು ಬೇರೆ ಬೇರೆ ಅನುದಾನ ಕೊಡಿಸುತ್ತಿದ್ದಾರೆ. ಎಂಬಿ ಪಾಟೀಲ್ ಯಡ್ಡಿಯವರನ್ನು ಭೇಟಿ ಮಾಡಿರುವುದು ಅವರ ವೈಯಕ್ತಿಕ ವಿಚಾರ ಎಂದು ಕಾಂಗ್ರೆಸ್ ಹೇಳಿದೆ. ಆದರೆ ಇದರಲ್ಲಿಯೂ ಏನಾದರೂ ರಾಜಕೀಯ ಅಡಗಿದೆ ಎನ್ನುವುದು ಜನಸಾಮಾನ್ಯರ ಅನಿಸಿಕೆ!

0
Shares
  • Share On Facebook
  • Tweet It




Trending Now
ಜಾಂಡಿಸ್ ಬಂದ ಮಗುವಿಗೆ ಆಧುನಿಕ ಚಿಕಿತ್ಸೆ ನೀಡಲು ಹೆತ್ತವರ ನಕಾರ: ಪ್ರಾಣ ಬಿಟ್ಟ ಒಂದು ವರ್ಷದ ಹಸುಳೆ!
Hanumantha Kamath July 1, 2025
ಜನರು ರಸ್ತೆಬದಿ ಕಸ ಹಾಕುವುದನ್ನು ತಡೆಯಲು ಭಾರತ ಮಾತೆ, ದೇವರ ಫೋಟೋ! ಪುನೀತ್ ಕೆರೆಹಳ್ಳಿ ಆಕ್ರೋಶ!
Hanumantha Kamath July 1, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಜಾಂಡಿಸ್ ಬಂದ ಮಗುವಿಗೆ ಆಧುನಿಕ ಚಿಕಿತ್ಸೆ ನೀಡಲು ಹೆತ್ತವರ ನಕಾರ: ಪ್ರಾಣ ಬಿಟ್ಟ ಒಂದು ವರ್ಷದ ಹಸುಳೆ!
    • ಜನರು ರಸ್ತೆಬದಿ ಕಸ ಹಾಕುವುದನ್ನು ತಡೆಯಲು ಭಾರತ ಮಾತೆ, ದೇವರ ಫೋಟೋ! ಪುನೀತ್ ಕೆರೆಹಳ್ಳಿ ಆಕ್ರೋಶ!
    • ಉಡುಪಿ: ದನದ ಕಳೇಬರ ಪತ್ತೆ ಪ್ರಕರಣ: ಆರು ಮಂದಿಯನ್ನು ಬಂಧಿಸಿದ ಉಡುಪಿ ಪೊಲೀಸರು
    • ಫೈರ್ ಬ್ರಾಂಡ್ ನಾಯಕ, ಶಾಸಕ ಬಿಜೆಪಿಗೆ ರಾಜೀನಾಮೆ!
    • ಹೃದಯಾಘಾತ ಫೈನ್ ಅಂಡ್ ಫಿಟ್ ಇದ್ದ ತರುಣ, ತರುಣಿಯರಿಗೂ ಬರುತ್ತಿದೆ, ಹೇಗೆ?
    • ಸಂವಿಧಾನದಿಂದ "ಜಾತ್ಯಾತೀತತೆ" ಮತ್ತು "ಸಮಾಜವಾದ" ಶಬ್ದಗಳನ್ನು ತೆಗೆಯುವ ಬಗ್ಗೆ ಚರ್ಚೆ ನಡೆಯಲಿ - ಆರ್ ಎಸ್ ಎಸ್
    • PFI ಟಾರ್ಗೆಟ್- 950 ಜನರ ಹಿಟ್ ಲಿಸ್ಟ್ ರೆಡಿ! NIA ಕೋರ್ಟ್ ನಲ್ಲಿ ವಕೀಲರಿಂದ ಮಾಹಿತಿ...
    • ಎಮರ್ಜೆನ್ಸಿ ದಿನಗಳಲ್ಲಿ ಮೋದಿಯವರ ಅನುಭವ ಕಥನ "ದಿ ಎಮರ್ಜೆನ್ಸಿ ಡೈರಿಸ್"!
    • ಬಾಹ್ಯಕಾಶಕ್ಕೆ ಜಿಗಿಯುವ ಮೊದಲು ಪತ್ನಿಗೆ ಭಾವನಾತ್ಮಕ ಸಂದೇಶ: "ನೀನಿಲ್ಲದೆ..... " ಶುಭಾಂಶು ಹೇಳಿದ್ದೇನು?
    • ಪಹಲ್ಗಾಮ್ ಉಗ್ರರಿಗೆ ಆಹಾರ, ಆಶ್ರಯ: ಸ್ಥಳೀಯರಿಬ್ಬರ ಬಂಧನ!
  • Popular Posts

    • 1
      ಜಾಂಡಿಸ್ ಬಂದ ಮಗುವಿಗೆ ಆಧುನಿಕ ಚಿಕಿತ್ಸೆ ನೀಡಲು ಹೆತ್ತವರ ನಕಾರ: ಪ್ರಾಣ ಬಿಟ್ಟ ಒಂದು ವರ್ಷದ ಹಸುಳೆ!
    • 2
      ಜನರು ರಸ್ತೆಬದಿ ಕಸ ಹಾಕುವುದನ್ನು ತಡೆಯಲು ಭಾರತ ಮಾತೆ, ದೇವರ ಫೋಟೋ! ಪುನೀತ್ ಕೆರೆಹಳ್ಳಿ ಆಕ್ರೋಶ!
    • 3
      ಉಡುಪಿ: ದನದ ಕಳೇಬರ ಪತ್ತೆ ಪ್ರಕರಣ: ಆರು ಮಂದಿಯನ್ನು ಬಂಧಿಸಿದ ಉಡುಪಿ ಪೊಲೀಸರು
    • 4
      ಫೈರ್ ಬ್ರಾಂಡ್ ನಾಯಕ, ಶಾಸಕ ಬಿಜೆಪಿಗೆ ರಾಜೀನಾಮೆ!
    • 5
      ಹೃದಯಾಘಾತ ಫೈನ್ ಅಂಡ್ ಫಿಟ್ ಇದ್ದ ತರುಣ, ತರುಣಿಯರಿಗೂ ಬರುತ್ತಿದೆ, ಹೇಗೆ?

  • Privacy Policy
  • Contact
© Tulunadu Infomedia.

Press enter/return to begin your search