• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ನಾಗನ ಕಲ್ಲುಗಳ ಪವರ್ ಗೊತ್ತಾಗಿದೆ, ತಪ್ಪು ಮಾಡಿದವರು ಒಪ್ಪಿಕೊಂಡಿದ್ದಾರೆ!!

Hanumantha Kamath Posted On November 28, 2021


  • Share On Facebook
  • Tweet It

ಬಹುಶ: ಎಷ್ಟು ಕಠಿಣ ಶಬ್ದಗಳನ್ನು ಬಳಸಿ ಅಂತವರನ್ನು ಬೈಯಬೇಕು ಎನ್ನುವುದು ಗೊತ್ತಾಗುತ್ತಿಲ್ಲ. ಆದರೂ ಸಭ್ಯರೂ ಕೂಡ ಈ ಸಾಮಾಜಿಕ ಜಾಲತಾಣಗಳನ್ನು ಓದುತ್ತಾರೆ ಎನ್ನುವ ಕಾರಣಕ್ಕೆ ಮನಸ್ಸಿನಲ್ಲಿಯೇ ಕೋಪ ನುಂಗಿ ಅಂತವರನ್ನು ದೇವರೇ ನೋಡಿಕೊಳ್ಳುತ್ತಾರೆ ಎಂದು ಬಿಡುವ ಪರಂಪರೆ ನಮ್ಮದು. ಹೌದು. ಕೊನೆಗೂ ನಮ್ಮ ಪವಿತ್ರ ನಾಗನ ಕಲ್ಲುಗಳನ್ನು ಎತ್ತಿ ಬಿಸಾಡಿದ್ದ ಪಾಪಿಗಳನ್ನು ಕಂಬಿಗಳ ಹಿಂದೆ ಪೊಲೀಸರು ನಿಲ್ಲಿಸಿದ್ದಾರೆ. ಅದರಲ್ಲಿ ಇಬ್ಬರು ಮುಸ್ಲಿಮರು. ಅವರು ಒಬ್ಬ ಕ್ರೈಸ್ತ ಧರ್ಮಿಯನ ಜೊತೆ ಡೀಲ್ ಮಾಡಿ ಡ್ರಗ್ಸ್ ಜಾಲದ ಸಿಲುಕಿದ್ದ ಹಿಂದೂಗಳನ್ನು ಬಳಸಿ ಈ ಪಾಪ ಕೃತ್ಯಗಳನ್ನು ನಡೆಸಿದ್ದರು. ಈ ಮೂಲಕ ಸಮಾಜದಲ್ಲಿ ಶಾಂತಿ ಕದಡುವ ಕೆಲಸಕ್ಕೆ ಕೈ ಹಾಕಿದ್ದರು. ಇವರನ್ನು ಬಂಧಿಸಲೇಬೇಕು ಎಂದು ಹಿಂದೂಪರ ಸಂಘಟನೆಗಳು ಪೊಲೀಸರ ಮೇಲೆ ಪ್ರತಿಭಟನೆ ಮೂಲಕ ಒತ್ತಡ ಹಾಕಿದ್ದವು. ಜನಪ್ರತಿನಿಧಿಗಳು ಕೂಡ ಸಾಕಷ್ಟು ಶ್ರಮ ವಹಿಸಿ ಪೊಲೀಸರ ಜೊತೆ ಕಾಲಕಾಲಕ್ಕೆ ಫಾಲೋ ಅಪ್ ಮಾಡಿ ಈ ತನಿಖೆ ಶೀಘ್ರ ದಡ ಸೇರುವಂತೆ ನೋಡಿಕೊಂಡಿದ್ದಾರೆ. ಪಾಪಿಗಳು ಕಂಬಿಗಳ ಹಿಂದೆ ಹೋಗಲು ಕಾರಣೀಕರೃ ಪೊಲೀಸ್ ಅಧಿಕಾರಿಗಳಿಗೆ, ಸಿಬ್ಬಂದಿಗಳಿಗೆ, ಸಂಘಟನೆಗಳಿಗೆ, ರಾಜಕಾರಣಿಗಳಿಗೆ ಎಲ್ಲರಿಗೂ ಅಭಿನಂದನೆಗಳು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ ಸರಣಿ ಕಳ್ಳತನಗಳು ನಡೆಯುತ್ತಿದ್ದವು. ಇದು ಪೊಲೀಸರಿಗೆ ಸವಾಲಾಗಿತ್ತು. ಪೊಲೀಸರ ಕಳ್ಳರ ಹಿಂದೆ ಬಿದ್ದಿದ್ದರು. ಇಂತಹ ಸಮಯದಲ್ಲಿ ಆಗುತ್ತಿರುವ ನಿರಂತರ ಕಳ್ಳತನದಿಂದ ಪೊಲೀಸರ ಚಿತ್ತ ಬೇರೆಡೆ ಹೋಗುವಂತೆ ಮಾಡಲು ಆರೋಪಿಗಳು ಈ ನಾಗನ ಕಲ್ಲುಗಳನ್ನು ಹಾಳು ಮಾಡುವ, ಎಲ್ಲೆಲ್ಲಿಗೂ ತೆಗೆದುಕೊಂಡು ಹೋಗಿ ಹಾಕುವ ಸಂಚು ಮಾಡಿದ್ದರು. ನಾಗನ ಕಲ್ಲುಗಳನ್ನು ಧ್ವಂಸ ಮಾಡುವುದು ಸುಲಭ ಎಂದು ಇವರು ಯಾಕೆ ಅಂದುಕೊಂಡಿದ್ದರು ಎಂದರೆ ಇದಕ್ಕೆ ಯಾವುದೇ ಗುಡಿ, ಗೋಪುರ ಕಟ್ಟುವ ಪ್ರಕ್ರಿಯೆ ನಮ್ಮಲ್ಲಿ ಕಡಿಮೆ. ಹೆಚ್ಚಾಗಿ ನಾಗನ ಕಲ್ಲುಗಳು ಇರುವ ಜಾಗ ಎಲ್ಲಿಯಾದರೂ ದೂರದಿಂದಲೇ ಕಾಣುವಂತೆ ಇರುತ್ತದೆ. ಅಲ್ಲಿ ರಾತ್ರಿ ಹೊತ್ತಿನಲ್ಲಿ ಯಾರೂ ಹೋಗುವುದಿಲ್ಲವಾದ್ದರಿಂದ ಅದಕ್ಕೆ ದೊಡ್ಡ ದೊಡ್ಡ ಲೈಟುಗಳನ್ನು ಹಾಕುವ ವ್ಯವಸ್ಥೆ ಕೂಡ ನಮ್ಮಲ್ಲಿ ಇಲ್ಲ. ಇನ್ನು ನಾಗಬನಕ್ಕೆ ಬೀಗ ಹಾಕುವುದು ಅಪರೂಪ. ಅಲ್ಲಿ ಕದಿಯುವಂತದ್ದು ಏನೂ ಇರುವುದಿಲ್ಲವಾದ್ದರಿಂದ ಅದಕ್ಕೆ ಸಿಸಿಟಿವಿ ವ್ಯವಸ್ಥೆ ಕೂಡ ಇರುವುದನ್ನು ನಾನು ನೋಡಿಲ್ಲ. ಇನ್ನು ಹೆಚ್ಚಿನ ನಾಗಬನಗಳು ಒಂದಿಷ್ಟು ಅಜ್ಞಾತ ಸ್ಥಳಗಳಲ್ಲಿ ಇರುತ್ತದೆ. ಆದ್ದರಿಂದ ಅದನ್ನು ಹಾಳು ಮಾಡುವುದು ಸುಲಭ. ಅದನ್ನು ಹಾಳು ಮಾಡುವುದು ಮತ್ತು ಇದರಿಂದ ಉಂಟಾಗುವ ಅಹಿತಕರ ಘಟನೆಗಳನ್ನು ದೂರದಲ್ಲಿ ಕುಳಿತು ಮಜಾ ನೋಡುವುದು ಇವರ ಪ್ಲಾನ್ ಆಗಿತ್ತು. ಆದರೆ ಒಂದಂತೂ ನಿಜ. ನಾಗನ ಕಲ್ಲುಗಳು ಎಷ್ಟೇ ಅಜ್ಞಾತ ಸ್ಥಳದಲ್ಲಿ ಇರಲಿ, ಸುರಕ್ಷತೆ, ಕಾವಲು ಅಷ್ಟೇನೂ ಇಲ್ಲದಿರಲಿ, ನಾಗನ ಕಲ್ಲುಗಳಿಗೆ ತಮ್ಮದೇ ಆಗಿರುವ ಪವರ್ ಇದೆ. ಅದನ್ನು ಕೆಟ್ಟ ಮನಸ್ಸಿನಿಂದ ಅಲ್ಲಾಡಿಸುವುದು ಕೂಡ ಅಷ್ಟು ಸುಲಭವಲ್ಲ. ನಾಗನ ಕಲ್ಲುಗಳನ್ನು ನಾಶ ಮಾಡಲು ಹೊರಟವನಿಗೆ ಬುದ್ಧಿ ಇರುತ್ತೋ ಇಲ್ವೋ, ಆದರೆ ಗುಂಡಿಗೆ ಮಾತ್ರ ಯಾವಾಗ ಬೇಕಾದರೂ ನಿಂತು ಹೋಗುವ ಸಾಧ್ಯತೆ ಇದೆ. ಆತ ಹೆಚ್ಚು ಕಾಲ ಬದುಕುತ್ತಾನೆ ಎಂದು ಹೇಳಲು ಆಗುವುದಿಲ್ಲ. ಅದನ್ನು ಈ ಕೃತ್ಯ ಮಾಡಿದ ಆರೋಪಿಗಳು ಕೂಡ ಒಪ್ಪಿಕೊಂಡಿದ್ದಾರೆ. ಮೊದಲನೇಯದಾಗಿ ಬಂಧಿತರಾದ ಎಂಟು ಜನ ಆರೋಪಿಗಳಲ್ಲಿ ಒಬ್ಬ ಈ ಕೃತ್ಯ ಮಾಡಿದ ನಂತರ ರಿಕ್ಷಾ ಚಾಲನೆ ಮಾಡುವಾಗ ರಿಕ್ಷಾ ಪಲ್ಟಿ ಆಗಿ ಅಪಘಾತವಾಗಿದೆ. ಇನ್ನು ಒಬ್ಬನಿಗೆ ನಿದ್ರೆಯಲ್ಲಿ ಕೂಡ ನಾಗದೇವರು ಬಂದು ಕಾಣಿಸಿಕೊಳ್ಳುತ್ತಿದ್ದರು ಎಂದು ಹೇಳಿದ್ದಾನೆ. ಇನ್ನು ಒಬ್ಬನಿಗೆ ಆ ನಾಗದೇವರ ಕಲ್ಲುಗಳನ್ನು ಎತ್ತುವಾಗ ಕೈಕಾಲುಗಳಿಗೆ ನಡುಕ ಉಂಟಾಗಿ ಅಲ್ಲಿಯೇ ಬಿಸಾಡಿ ಓಡಿ ಹೋಗಿದ್ದೆ ಎಂದು ಕೂಡ ಹೇಳಿದ್ದಾನೆ. ಒಟ್ಟಿನಲ್ಲಿ ನಾಗದೇವರ ಕಲ್ಲುಗಳನ್ನು ಮುಟ್ಟುವುದು ಅಷ್ಟು ಸುಲಭವಲ್ಲ ಎಂದು ಎಲ್ಲಾ ಆರೋಪಿಗಳಿಗೆ ಗೊತ್ತಾಗಿದೆ. ಅದನ್ನು ಅವರು ಪೊಲೀಸರ ಮುಂದೆ ಹೇಳಿ ಪ್ರಾಯಶ್ಚಿತ್ತ ಮಾಡಿಕೊಂಡಿದ್ದಾರೆ.

ಇಲ್ಲಿ ವಿಷಯ ಏನೆಂದರೆ ಒಂದು ಧರ್ಮದ ಆರಾಧ್ಯ ದೇವರ ವಿಗ್ರಹ ಅಥವಾ ಕಲ್ಲುಗಳನ್ನು ಭಂಜಿಸಬೇಕು ಎಂದು ಯಾವ ಧರ್ಮದವರಾದರೂ ಯಾಕೆ ಅಂದುಕೊಳ್ಳಬೇಕು. ಬೇರೆಯವರಿಗೆ ಅದು ಕೇವಲ ಕಲ್ಲು ಆಗಿರಬಹುದು. ಆದರೆ ನಮಗೆ ಅದು ಪೂಜನೀಯ ವಿಷಯ. ಇನ್ನು ನಾಸ್ತಿಕರಿಗೆ ಅಥವಾ ಡ್ರಗ್ಸ್ ಜಾಲಕ್ಕೆ ಬಲಿಯಾದವರಿಗೆ ಅಥವಾ ಅನ್ಯಕೋಮಿನವರಿಗೆ ಅದು ಕೇವಲ ಕಲ್ಲಾಗಿರಬಹುದು. ಆದರೆ ಅದರಲ್ಲಿ ಶಕ್ತಿ ಇದೆ ಎಂದು ನಮಗೆ ಮಾತ್ರ ಗೊತ್ತು. ಒಂದು ಕಲ್ಲಿಗೆ ಶಕ್ತಿ ಭರಿಸುವಂತಹ ಕೆಲಸ ಹಿಂದೂ ಧರ್ಮದಲ್ಲಿ ಆಗುತ್ತದೆ. ಅದಕ್ಕೆ ಅನೇಕ ವಿಧಿವಿಧಾನಗಳಿವೆ. ಅದರಲ್ಲಿಯೂ ದೈವ, ದೇವರನ್ನು ನಂಬುವ, ಆರಾಧಿಸುವ ಈ ನೆಲದಲ್ಲಿ ನಾಗನಕಲ್ಲುಗಳಿಗೆ ವಿಶೇಷ ಪ್ರಾಶಸ್ತ್ಯ ಇದೆ. ಇಡೀ ಭಾರತದಲ್ಲಿ ನಾಗನ ಕಲ್ಲುಗಳನ್ನು ಪೂಜಿಸುವ ಸಂಸ್ಕೃತಿ ಇರುವುದು ಕರಾವಳಿಯ ಅವಿಭಜಿತ ಜಿಲ್ಲೆಗಳಲ್ಲಿ ಮಾತ್ರ. ಇಂತಹ ನೆಲದಲ್ಲಿಯೇ ಕೆಲವರು ಯಾರದ್ದೋ ಕುಮ್ಮಿಕ್ಕಿನಿಂದ ಹೀಗೆ ಮಾಡುತ್ತಾರೆ, ಪುಡಿಗಾಸಿಗೆ ಇಂತಹ ಸಂಚು ಹೂಡುತ್ತಾರೆ ಎಂದರೆ ಅಂತವರನ್ನು ದೇವರೇ ನೋಡಿಕೊಳ್ಳುತ್ತಾರೆ ಎನ್ನುವುದು ಇಲ್ಲಿ ಚಾಲ್ತಿಯಲ್ಲಿರುವ ನಂಬಿಕೆ. ಅದು ನಿಜವಾಗುತ್ತದೆ ಕೂಡ. ಹೀಗೆ ನಾಗನ ಕಲ್ಲುಗಳ ಜೊತೆ ಆಡಿದ ದುರುಳರ ಮುಂದಿನ ಜೀವನ ದುಸ್ತರವಾಗಲಿದೆ. ಬೇಕಿದ್ದರೆ ನೋಡಿ!

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Hanumantha Kamath May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Hanumantha Kamath May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search