ಕೆಲಸಕ್ಕಿದ್ದ ಯುವತಿಯನ್ನು ಇಸ್ಲಾಂಗೆ ಮತಾಂತರ ಮಾಡಿ ಮದುವೆ ಮಾಡಿಸುವ ಆಮಿಷ ಇತ್ತು!!
ಮಂಗಳೂರಿನಲ್ಲಿ ಗಂಡನೊಬ್ಬ ಹೆಂಡತಿ ಮತ್ತು ತನ್ನ ಇಬ್ಬರು ಪುಟ್ಟ ಮಕ್ಕಳಿಗೆ ವಿಷವುಣಿಸಿ ತಾನು ಕೂಡ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗೆ ಬೇರೆಯದ್ದೇ ತಿರುವು ಸಿಕ್ಕಿದೆ. ಇದೊಂದು ಮತಾಂತರದ ಒತ್ತಡದಿಂದ ಆದ ಆತ್ಮಹತ್ಯೆಗಳು ಎಂದು ಹಿಂದೂ ಸಂಘಟನೆಗಳು ಎಷ್ಟೇ ಹೇಳಿದರೂ ಆರಂಭದಲ್ಲಿ ಪೊಲೀಸ್ ಕಮೀಷನರ್ ಕೇಳಿರಲಿಲ್ಲ. ಅಷ್ಟೇ ಅಲ್ಲದೆ ಸ್ವತ: ಆಕೆಯ ಗಂಡನೇ ಪೊಲೀಸ್ ಅಧಿಕಾರಿಗಳಿಗೆ ಕೆಲವು ಅಡಿಯೋ ಮತ್ತು ಡೆತ್ ನೋಟ್ ಕೂಡ ಬರೆದು ತನ್ನ ಪತ್ನಿಯ ಮೇಲೆ ಮತಾಂತರ ಆಗಲು ಒತ್ತಡವಿದೆ ಎಂದು ಸಾಕ್ಷ್ಯ ಕೊಟ್ಟಿದ್ದ. ಆದರೂ ಪೊಲೀಸರು ಇದನ್ನು ಮತಾಂತರಕ್ಕೆ ಸಂಬಂಧಪಟ್ಟ ಪ್ರಕರಣ ಎಂದು ತೆಗೆದುಕೊಳ್ಳಲು ಮುಂದೆ ಬರಲಿಲ್ಲ. ಆದರೆ ಕೊನೆಗೆ ಶನಿವಾರ ನಾಲ್ಕು ಜನ ಅಮಾಯಕರ ಸಾವಿಗೆ ಕಾರಣರಾದ ಹೆಂಗಸೊಬ್ಬಳ ಬಂಧನವಾಗಿದೆ. ಆಕೆಯ ಹೆಸರು ನೂರ್ ಜಹಾನ್. ಈ ಒಟ್ಟು ಪ್ರಕರಣದಲ್ಲಿ ನೂರ್ ಜಹಾನ್ ಪಾತ್ರ ಏನು ಎಂಬುದನ್ನು ನೋಡುವಾಗ ಹಿಂದೂ ಧರ್ಮಕ್ಕೆ ಎಲ್ಲ ಕಡೆಯಿಂದ ಮತಾಂತರದ ಬೆದರಿಕೆ ಇರುವುದು ಸ್ಪಷ್ಟವಾಗುತ್ತಿದೆ.
ನೂರ್ ಜಹಾನ್ ಮೊದಲಿಗೆ ತಲೆಕೆಡಿಸಿದ್ದು ವಿಜಯಲಕ್ಷ್ಮಿಯದ್ದು. ನೀನು ನಿನ್ನ ಗಂಡನಿಗೆ ವಿಚ್ಚೇದನ ನೀಡು, ನಂತರ ನಿನ್ನನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿ ನಮ್ಮ ಧರ್ಮದಲ್ಲಿ ಒಳ್ಳೆಯ ಕಡೆ ಮದುವೆ ಮಾಡಿಸುತ್ತೇನೆ ಎಂದು ಅವಳಿಗೆ ಆಮಿಷ ಒಡ್ಡಲಾಗಿತ್ತು. ಹಿಂದೆ ಕ್ರೈಸ್ತರಲ್ಲಿರುವ ಒಂದು ಗುಂಪು ಮಾತ್ರ ಮತಾಂತರದಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುತ್ತಿತ್ತು. ಮುಸ್ಲಿಮ್ ಯುವಕರು ಹಿಂದೂ ಯುವತಿಯರನ್ನು ಪ್ರೇಮದ ಬಲೆಗೆ ಬೀಳಿಸಿ ನಂತರ ಮದುವೆಯಾಗಿ ಆ ಬಳಿಕ ಮತಾಂತರ ಮಾಡುತ್ತಿದ್ದರು. ಆದರೆ ಮುಸ್ಲಿಮರು ನೇರವಾಗಿ ಹೀಗೆ ಮತಾಂತರ ಮಾಡುತ್ತಿದ್ದದ್ದು ಹೊರಜಗತ್ತಿಗೆ ಗೊತ್ತಾಗುತ್ತಿದ್ದದ್ದು ಬಹಳ ಕಡಿಮೆ. ಈಗ ನೇರವಾಗಿ ಮುಸ್ಲಿಂ ಮಹಿಳೆಯರು ಕೂಡ ಮತಾಂತರ ಮಾಡುವ ಕೆಲಸದಲ್ಲಿ ಭಾಗಿಯಾಗುತ್ತಿರುವುದು ಹಿಂದೂ ಸಮಾಜಕ್ಕೆ ಎಚ್ಚರಿಕೆ ಗಂಟೆ. ಬಡ, ಮಧ್ಯಮ ವರ್ಗದ, ಕೂಲಿಗೀಲಿ ಮಾಡುವ ಕುಟುಂಬಗಳನ್ನು ಗುರುತಿಸಿ, ಗಂಡ ಕುಡಿಯುತ್ತಾನೆ ಎನ್ನುವ ವಿಷಯ ಎತ್ತಿಕಟ್ಟಿ ಅಲ್ಲಿನ ಮಹಿಳೆಯರಿಗೆ ಉತ್ತಮ ಜೀವನದ ಆಶೆಯನ್ನು ತೋರಿಸಿ ಮತಾಂತರ ಆಗು, ನಿನಗೆ ಸ್ವರ್ಗ ತೋರಿಸುತ್ತೇವೆ ಎಂದು ಆಮಿಷ ತೋರಿಸುವ ಚಾಳಿ ಶುರುವಾಗಿದೆ. ಆದರೆ ಈ ಪ್ರಕರಣದಲ್ಲಿ ಗಂಡ ಒಪ್ಪಲಿಲ್ಲ. ವಿಚ್ಚೇದನ ಕೊಡುವ ಅಗತ್ಯ ಏನು ಎಂದು ಪ್ರಶ್ನಿಸಿದ್ದಾನೆ. ಆದರೆ ವಿಜಯಲಕ್ಷ್ಮಿ ಎಷ್ಟು ಮೈಂಡ್ ವಾಶ್ ಆಗಿದ್ದಳು ಎಂದರೆ ಗಂಡನಿಗೂ, ಮಕ್ಕಳಿಗೂ ಏನಾದರೂ ಮಾಡಿ ಮನೆ ಬಿಟ್ಟು ಹೋಗುವ ಲೆವೆಲ್ಲಿಗೆ ಬಂದಿದ್ದಳು. ಹೆಂಡತಿಯ ಬದಲಾಗುತ್ತಿರುವ ಹಾವಭಾವ ಮತ್ತು ಮತಾಂತರ ಆಗಿಯೇ ಆಗುತ್ತೇನೆ ಎನ್ನುವ ಧಮ್ಕಿ ಮತ್ತು ನಿತ್ಯ ಗಂಡನೊಂದಿಗೆ ಜಗಳ ನೋಡಿ ನೋಡಿ ಗಂಡ ನಾಗೇಶನಿಗೂ ಸಾಕುಸಾಕಾಗಿತ್ತು. ಇದನ್ನು ಹೀಗೆ ಬಿಡಬಾರದೆಂದು ಅವನು ಒಂದು ನಿರ್ಧಾರಕ್ಕೆ ಬಂದಿದ್ದ. ಹಾಗಂತ ಅವನು ಸುಮ್ಮನೆ ಸಾಯಲಿಲ್ಲ. ತನ್ನ ಆತ್ಮಹತ್ಯೆ ಮತ್ತು ಹೆಂಡತಿ, ಮಕ್ಕಳು ಕೂಡ ಸುಮ್ಮನೆ ಸತ್ತು ಹೋದರೆ ಇದರ ಹಿಂದಿನ ಸತ್ಯ ಯಾರಿಗೂ ಗೊತ್ತಾಗದೇ ನಿಜವಾದ ಅಪರಾಧಿಗಳು ಕಾನೂನಿನ ಬಲೆಯಿಂದ ಹೊರಗೆ ಉಳಿಯುತ್ತಾರೆ ಎಂದು ಅನಿಸಿದ್ದ ಕಾರಣ ಆತ ಸಾಕ್ಷ್ಯ ಬಿಟ್ಟೇ ಪ್ರಾಣ ತ್ಯಜಿಸಿದ್ದಾನೆ. ಇದರಿಂದಲೇ ಇವತ್ತು ನೂರ್ ಜಹಾನ್ ಒಳಗೆ ಹೋಗಿರುವುದು. ಇಲ್ಲಿ ನಾಲ್ಕು ಜನರ ಸಾವಿಗೆ ಪರೋಕ್ಷ ಕಾರಣರಾಗಿರುವ ನೂರ್ ಜಹಾನ್ ಗೆ ಶಿಕ್ಷೆ ಆಗುತ್ತೋ, ಇಲ್ವೋ ಅದು ಬೇರೆ ವಿಷಯ. ಅದರೆ ಹೀಗೆ ಒಂದು ಸಂಚು ಹಿಂದೂ ಧರ್ಮವನ್ನು ಒಳಗಿಂದ ಒಳಗೆ ಒಡೆಯಲು ಪ್ಲಾನ್ ನಡೆಯುತ್ತಿದೆ ಎನ್ನುವುದು ಹೊರಗಿನ ಪ್ರಪಂಚಕ್ಕೆ ಗೊತ್ತಾಗಿದೆ. ಇನ್ನಾದರೂ ನಮ್ಮ ಮಹಿಳೆಯರು ಎಚ್ಚರಿಕೆ ವಹಿಸಬೇಕು.
ಇದೆಲ್ಲವನ್ನು ನೋಡುವಾಗ ಮತಾಂತರ ಕಾಯ್ದೆ ಜಾರಿಗೆ ಬರಲೇಬೇಕಾಗಿದೆ. ಬೇಡಾ ಎಂದು ಹೇಳುವವರು ತಮ್ಮ ಆತ್ಮಸಾಕ್ಷಿ ಮುಟ್ಟಿ ನೋಡಿಕೊಳ್ಳಲಿ. ಯಾಕೆಂದರೆ ನೂರ್ ಜಹಾನ್ ಮಾಡಿರುವ ಕುಕೃತ್ಯ ಚಿಕ್ಕದ್ದಲ್ಲ. ಇದರ ಹಿಂದೆ ಕೇವಲ ಒಬ್ಬಳೇ ನೂರ್ ಜಹಾನ್ ಇರುವ ಸಾಧ್ಯತೆ ಇಲ್ಲ. ಅವಳಿಂದ ಯಾರು ಇಂತಹ ಕೃತ್ಯ ಮಾಡಿಸುತ್ತಿದ್ದಾರೆ ಎನ್ನುವುದು ಕೂಡ ಹೊರಗೆ ಬರಲಿ. ಸರಿಯಾದ ತನಿಖೆ ನಡೆದರೆ ಅದು ಕೂಡ ಪೊಲೀಸರಿಗೆ ಗೊತ್ತಾಗುತ್ತದೆ. ಮೇಲ್ನೋಟಕ್ಕೆ ಈ ಪ್ರಕರಣದಲ್ಲಿ ಗಂಡ ಮೂವರಿಗೆ ವಿಷ ಉಣಿಸಿ ಕೊಂದದ್ದು ಕೊಲೆನೆ ಆಗಿರಬಹುದು. ಆತ ಆತ್ಮಹತ್ಯೆ ಮಾಡಿಕೊಂಡದ್ದು ಅವನದ್ದೇ ಕೃತ್ಯವಾಗಿರುವುದರಿಂದ ಇಲ್ಲಿ ಪ್ರಕರಣ ಮುಚ್ಚಿಹೋಗುತ್ತದೆ. ಯಾಕೆಂದರೆ ಇದರಲ್ಲಿ ಯಾರೂ ಬದುಕಿಲ್ಲ ಮತ್ತು ಯಾರ ಪರ, ವಿರುದ್ಧ ತನಿಖೆ ಆಗುವಂತದ್ದು ಸಾಧ್ಯವಿಲ್ಲ. ಆದರೆ ನೂರ್ ಜಹಾನ್ ನಂತವರು ಈ ನಡುವೆ ಸುಲಭವಾಗಿ ತಪ್ಪಿಸಿಕೊಂಡು ಹೋಗುವಂತೆ ಆಗಬಾರದು. ಯಾಕೆಂದರೆ ಅವರಿಗೆ ವಿಜಯಲಕ್ಷ್ಮಿ ಅಂತವರು ಬದುಕಿದ್ದರೂ ಲಾಭವಿತ್ತು, ಸತ್ತರೂ ಲಾಭ ಇದೆ. ಯಾಕೆಂದರೆ ಸತ್ತರೆ ಹಿಂದೂ ಧರ್ಮದ ನಾಲ್ಕು ಜನ ಕಡಿಮೆ ಆದರು. ಬದುಕಿದರೆ ಅವಳು ಇಸ್ಲಾಂಗೆ ಮತಾಂತರ ಆಗುತ್ತಿದ್ದಳು. ಅವಳಿಂದ ಇನ್ನಷ್ಟು ಮಕ್ಕಳು ಆಗುತ್ತಿತ್ತು. ಅವರ ಸಂಖ್ಯೆ ವೃದ್ಧಿಯಾಗುತ್ತಿತ್ತು. ಆದ್ದರಿಂದ ಪೊಲೀಸರು ಈ ಬಗ್ಗೆ ಕೂಲಂಕುಶ ತನಿಖೆ ಮಾಡಬೇಕು. ಸತ್ಯ ಸಾಯಬಾರದು. ಹಾಗೆ ನೋಡಿದರೆ ಮಂಗಳೂರಿನಲ್ಲಿ ಇತ್ತೀಚೆಗೆ ಅಪರಾಧಿಕ ಕೃತ್ಯಗಳು ದಿನನಿತ್ಯ ಹೆಚ್ಚಾಗುತ್ತಿವೆ. ಆತ್ಮಹತ್ಯೆಯನ್ನು ಪೊಲೀಸರು ತಡೆಯಲು ಸಾಧ್ಯವಿಲ್ಲವಾದರೂ ಈ ಮತಾಂತರದ ಒತ್ತಡ ಹಾಕುತ್ತಿರುವುದು ಆತ ಬರೆದ ಡೆತ್ ನೋಟ್ ನಲ್ಲಿ ಆತನೇ ಬರೆದಿರುವುದು ಗೊತ್ತಾಗಿದೆ. ತಲವಾರು ಕಾಳಗ, ಗೋಕಳ್ಳತನ ಹೆಚ್ಚಾಗುತ್ತಿರುವುದು ಪೊಲೀಸ್ ಕಮೀನರೇಟ್ ವ್ಯಾಪ್ತಿಯಲ್ಲಿ ಒಳ್ಳೆಯ ಬೆಳವಣಿಗೆ ಅಲ್ಲ.!
Leave A Reply