ಬಿಜೆಪಿ ಸರಕಾರಕ್ಕೆ “ಅದು” ಇದ್ದರೆ ಸಂದೇಶ್ ನಿದ್ರೆಯಲ್ಲಿಯೂ ಹೆದರಬೇಕು, ಹಾಗೆ ಮಾಡಿ!
ಮಂಗಳೂರಿನ ಬಜ್ಪೆ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಸಂದೇಶ್ ಎನ್ನುವ ವ್ಯಕ್ತಿಗೆ ಕಾನೂನಿನ ಮೇಲೆ ಹೆದರಿಕೆ ಇಲ್ಲದಿರುವುದು ಮತ್ತು ರಾಜ್ಯದಲ್ಲಿರುವ ಭಾರತೀಯ ಜನತಾ ಪಾರ್ಟಿಯ ಸರಕಾರ ತನ್ನ ಕೂದಲನ್ನು ಕೂಡ ಕೊಂಕಲು ಸಾಧ್ಯವಿಲ್ಲ ಎನ್ನುವ ಅಹಂಕಾರ ಎರಡೂ ಸೇರಿರುವುದರಿಂದ ಆತ ಆ ಕೆಲಸ ಮಾಡಿದ್ದಾನೆ. ಇಲ್ಲದಿದ್ದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅದು ಕೂಡ ಹಿಂದೂತ್ವ ಎನ್ನುವುದು ಇಲ್ಲಿ ಉಸಿರಾಡಿದಷ್ಟೇ ಸಾಮಾನ್ಯ ಎನ್ನುವ ಪ್ರದೇಶದಲ್ಲಿ ಆ ಮನುಷ್ಯ ಹಿಂದೂ ಕಾರ್ಯಕರ್ತರನ್ನು ಠಾಣೆಗೆ ಎಳೆದುಕೊಂಡು ಹೋಗಿ ಕಾಲು ಮುರಿದು ಹಾಕುತ್ತಾನೆ ಎಂದರೆ ಅವನಿಗೆ ಗೃಹ ಸಚಿವರಿಗೆ “ಧಮ್” ಇಲ್ಲ ಎನ್ನುವುದು ಸ್ಪಷ್ಟವಾಗಿ ಗೊತ್ತಿದೆ. ಇವತ್ತಿಗೂ ನನಗೆ ಆಶ್ಚರ್ಯವಾಗುವುದು ಬಿಜೆಪಿ ಸರಕಾರದಲ್ಲಿ ಪೊಲೀಸ್ ಇಲಾಖೆ ಸರಕಾರದ ಮಾತನ್ನು ಕೇಳುವುದಿಲ್ಲ. ಒಂದು ವೇಳೆ ಕಾಂಗ್ರೆಸ್ ಸರಕಾರ ಇದ್ದು, ಒಬ್ಬ ಮುಸ್ಲಿಂ ವ್ಯಕ್ತಿಯ ಕಾಲರ್ ಹಿಡಿದು ಬೆಳಿಗ್ಗೆಯಿಂದ ಸಂಜೆ ತನಕ ಹಿಂದೂಗಳ ಕೈಯಿಂದ ಹೊಡೆಯಲು ಯಾವ ಪೊಲೀಸ್ ಅಧಿಕಾರಿಗೆ ತಾನೆ ಧೈರ್ಯ ಇರುತ್ತದೆ? ಇಲ್ಲ, ಸಾಧ್ಯವೇ ಇಲ್ಲ. ಯಾಕೆಂದರೆ ಕಾಂಗ್ರೆಸ್ ಸರಕಾರ ಇದ್ದರೆ ಪೊಲೀಸ್ ಠಾಣೆಗಳಿಗೆ ಸಚಿವರು ಅಥವಾ ಶಾಸಕರೇ ಕರೆ ಮಾಡಿ ತಮ್ಮವರಿಗೆ ಹೊಡೆಯುತ್ತಿದ್ದೀರಾ ಎಂದು ಜೋರು ಮಾಡಬೇಕಿಲ್ಲ. ಕಾಂಗ್ರೆಸ್ ಶಾಸಕರ ಪುಟಗೋಸಿ ಬೆಂಬಲಿಗ ಕೂಡ ಪೊಲೀಸ್ ಠಾಣೆಗೆ ಫೋನ್ ಮಾಡಿ ಜೋರು ಮಾಡಬಲ್ಲ. ಅವನದ್ದೂ ಕೂಡ ನಡೆಯುತ್ತದೆ. ಆದರೆ ಬಿಜೆಪಿಯಲ್ಲಿ ಹಾಗಲ್ಲ, ಹಳೆ ಪಿಕ್ಚರ್ ನಲ್ಲಿ ಎಲ್ಲವೂ ಮುಗಿದ ಬಳಿಕ ಪೊಲೀಸರು ಬರುತ್ತಿದ್ದರಲ್ಲ, ಹಾಗೆ ಬಿಜೆಪಿ ಮುಖಂಡರು ಪೊಲೀಸ್ ಠಾಣೆಗೆ ಕಾಲ್ ಮಾಡುವಾಗ ಪೊಲೀಸರಿಂದ ಹಲ್ಲೆಗೆ ಒಳಗಾದವನು ಆಸ್ಪತ್ರೆಯಲ್ಲಿ ದಾಖಲಾಗಿ ಅರ್ಧ ದಿನ ಆಗಿರುತ್ತದೆ. ಇದು ಬಿಜೆಪಿಗೂ, ಕಾಂಗ್ರೆಸ್ಸಿಗೂ ಇರುವ ವ್ಯತ್ಯಾಸ. ಬಿಜೆಪಿ ಸರಕಾರ ಇದ್ದು ಕೂಡ ಒಬ್ಬ ಯಕಶ್ಚಿತ್ ಪೊಲೀಸ್ ಇನ್ಸಪೆಕ್ಟರಿಗೆ ಅಮಾನತು ಮಾಡಲು ನೂರಾರು ಮಂದಿ ಕೇಸರಿ ಯುವಕರು ಸೇರಿ ಪ್ರತಿಭಟನೆ ಮಾಡಬೇಕಾಗುತ್ತದೆ. ಕಾಂಗ್ರೆಸ್ ಸರಕಾರ ಇದ್ದರೆ ಹಾಗಲ್ಲ, ಪೊಲೀಸ್ ವರಿಷ್ಟಾಧಿಕಾರಿಯನ್ನೇ ಸಚಿವರು ಗೆಸ್ಟ್ ಹೌಸಿಗೆ ಕರೆಸಿ ಛೀ, ಥೂ ಎಂದು ಬೈದು ಇನ್ನು ನಮ್ಮವರನ್ನು ಮುಟ್ಟಿದರೆ ಜೋಕೆ ಎಂದು ಹೇಳಿ ಕಳುಹಿಸುತ್ತಾರೆ. ಬಿಜೆಪಿ ಸರಕಾರ ಇದ್ದಾಗ ಹೀಗೆ ಆದರೆ ಹೆಚ್ಚೆಂದರೆ ಆತ ಕೆಲವು ದಿನ ಅಮಾನತು ಆಗುತ್ತಾನೆ. ಪಕ್ಷದ ಕಾರ್ಯಕರ್ತರು ತಮ್ಮ ನಾಯಕರಿಗೆ ಜಯಕಾರ ಹಾಕುತ್ತಾರೆ. ಆ ಪೊಲೀಸ್ ಅಧಿಕಾರಿ ಕೆಲವು ದಿನಗಳ ನಂತರ ಮತ್ತೆ ಒಳ್ಳೆಯ ಕಡೆ ಪೋಸ್ಟಿಂಗ್ ಮಾಡಿಸಿಕೊಳ್ಳುತ್ತಾನೆ. ಕಾರ್ಯಕರ್ತರು ಮುಖ ಮುಖ ನೋಡಿಕೊಳ್ಳುತ್ತಾರೆ. ಅದೇ ಕಾಂಗ್ರೆಸ್ ಸರಕಾರ ಇದ್ರೆ ಆ ಅಧಿಕಾರಿ ಟಾಯ್ಲೆಟಿಗೂ ನೀರಿಗೆ ಪರದಾಡಬೇಕಾದ ಜಾಗಕ್ಕೆ ಎತ್ತಂಗಡಿಯಾಗಿರುತ್ತಾನೆ. ಇದು ವ್ಯತ್ಯಾಸ.
ಬಿಜೆಪಿಯ ಗೃಹ ಸಚಿವರು ಹೇಳಿಕೆಗಳನ್ನು ಕೊಡುತ್ತಾರೆ. ಆದರೆ ಏನೂ ಮಾಡುವುದಿಲ್ಲ. ಕಾಂಗ್ರೆಸ್ಸಿನ ಗೃಹ ಸಚಿವರು ಹೇಳಿಕೆ ಕೊಡುವುದಿಲ್ಲ. ಅವರು ಕೊಡುವ ಟಾರ್ಚರ್ ಗೆ ಆ ಪೊಲೀಸ್ ಅಧಿಕಾರಿ ಆತ್ಮಹತ್ಯೆ ಮಾಡಿಕೊಳ್ಳಬೇಕು, ಹಾಗೆ ಮಾಡಿಬಿಡುತ್ತಾರೆ. ಇದು ಇಲ್ಲಿಯ ತನಕ ನಡೆದುಕೊಂಡು ಬಂದ ಸಂಪ್ರದಾಯ. ಇರಲಿ, ಇಷ್ಟು ದಿನ ಹೇಗೋ ಕಳೆದು ಹೋಯಿತು. ಇನ್ನು ಮುಂದೆ ಗೃಹ ಸಚಿವರ ಅಧೀನದಲ್ಲಿ ಬರುವ ಈ ಪೊಲೀಸ್ ಇಲಾಖೆಯ ಮೇಲೆ ಸರಕಾರಕ್ಕೆ ಕಟ್ಟುನಿಟ್ಟಿನ ನಿಯಂತ್ರಣ ಬರಬೇಕಾದರೆ ಏನು ಮಾಡಬೇಕು ಎಂದರೆ ಹೀಗೆ ಹಾಡುಹಗಲೇ ಅಮಾಯಕರನ್ನು ಕರೆದು ಚಿತ್ರಹಿಂಸೆ ಕೊಟ್ಟ ಪೊಲೀಸ್ ಅಧಿಕಾರಿಗೆ ಖಡಕ್ “ಸಂದೇಶ” ಕೊಡಬೇಕು. ಆತ ನಿದ್ರೆಯಲ್ಲಿಯೂ ಬಿಜೆಪಿ ಸರಕಾರದ ಗೃಹ ಸಚಿವರನ್ನು ನೆನೆಸಿಕೊಂಡು ಹಾಸಿಗೆ ಒದ್ದೆ ಮಾಡಬೇಕು. ಉದಾಹರಣೆಗೆ ಒಬ್ಬ ವ್ಯಕ್ತಿಗೆ ನಾನು ಹೊಡೆದರೆ ನನ್ನ ಮೇಲೆ ಎಫ್ ಐ ಆರ್ ಆಗುತ್ತಾ ಇಲ್ವಾ? ತುಂಬಾ ಹೊಡೆದರೆ ಕೊಲೆಯತ್ನದ ಪ್ರಕರಣ ದಾಖಲಾಗುತ್ತಾ ಇಲ್ವಾ? ಹಾಗಾದರೆ ಬಜ್ಪೆ ಠಾಣಾ ಇನ್ಸಪೆಕ್ಟರ್ ಸಂದೇಶ್ ಅವರಿಗೆ ಕೇವಲ ಅಮಾನತು ಮಾಡಿ ರಜೆ ಮೇಲೆ ಕಳುಹಿಸುವುದೇ ಶಿಕ್ಷೆಯಾ? ಅವರ ಮೇಲೆ ಐಪಿಸಿ 307 ಪ್ರಕರಣ ದಾಖಲಾಗಬೇಕು. ಹಿಂದೂ ಕಾರ್ಯಕರ್ತರಿಗೆ ಕೇವಲ ಹೊಡೆದದ್ದು ಮಾತ್ರವಲ್ಲ, ನಿನ್ನ ತಂಗಿಯನ್ನು ನನ್ನ ಪಕ್ಕದಲ್ಲಿ ಮಲಗಿಸು ಎಂದು ಹೇಳಿ, ಅದರ ಮುಂದೆ ಸಭ್ಯ ನಾಗರಿಕರು ಕೇಳಬಾರದ ಪದ ಬಳಸಿದ ಇನ್ಸಪೆಕ್ಟರ್ ಮತ್ತೆ ಎಲ್ಲಿಯಾದರೂ ಬಿಜೆಪಿ ಸರಕಾರ ಇರುವಾಗಲೇ ಡ್ಯೂಟಿಗೆ ಸೇರಿದರೆ ಆಗ ಈ ಸರಕಾರಕ್ಕೆ “ಅದು” ಇಲ್ಲ ಎಂದೇ ಅಂದುಕೊಳ್ಳಬೇಕಾಗುತ್ತದೆ. ಉತ್ತರ ಕರ್ನಾಟಕ ಕಡೆ ಒಂದು ಗಾದೆ ಇದೆ. ಕೈಲಾಗದವರಿಗೆ ” ಮದುವೆ ಆದ ಗಂಡಸಿಗೆ ಅದೇ ಇಲ್ಲ” ಎನ್ನುತ್ತಾರೆ. ಒಂದು ವೇಳೆ ಬಿಜೆಪಿ ಕಾರ್ಯಕರ್ತರಿಗೆ ಖುಷಿ ಮಾಡಲು ನೀವು ಸಂದೇಶ ಅವರಿಗೆ ನಾಲ್ಕು ದಿನ ಅಮಾನತು ಮಾಡಿ ಸ್ವಲ್ಪ ದಿನಗಳ ನಂತರ ಬೇರೆ ಕಡೆ ಪೋಸ್ಟಿಂಗ್ ಕೊಡುತ್ತೇವೆ ಎಂದು ಹೇಳಿದ್ದರೆ ನೀವು ಬಿಜೆಪಿ ಕಾರ್ಯಕರ್ತರ ಗೋರಿಯ ಮೇಲೆ ಸರಕಾರ ನಿಲ್ಲಿಸಿದ್ದೀರಿ ಎಂದೇ ಅರ್ಥ. ಅಂತಹ ತಪ್ಪನ್ನು ಬಿಜೆಪಿ ಸರಕಾರ ಮಾಡಲ್ಲ ಎನ್ನುವ ನಂಬಿಕೆ ಕಾರ್ಯಕರ್ತರಿಗೆ ಇದೆ!
Leave A Reply