• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured

ರಾಹುಲ್ ಮಜಾ ಹೊಸದಲ್ಲ ಕಾಂಗ್ರೆಸ್ಸಿಗೆ!!

Hanumantha Kamath Posted On May 4, 2022
0


0
Shares
  • Share On Facebook
  • Tweet It

ರಾಹುಲ್ ನೇಪಾಲದ ಪಬ್ ಒಂದರಲ್ಲಿ ಪತ್ತೆಯಾಗಿದ್ದಾರೆ. ಅಲ್ಲಿ ಅವರೊಂದಿಗೆ ಒಬ್ಬಳು ಯುವತಿಯೂ ಇರುವುದು ಮತ್ತು ಅವರು ಒಂದಿಷ್ಟು ಆಪ್ತ ಸಮಾಲೋಚನೆ ಮಾಡುತ್ತಿರುವುದು ದೃಶ್ಯದಲ್ಲಿ ಕಂಡುಬರುತ್ತದೆ. ಹಾಗೆ ಕಾಣಿಸಿಕೊಂಡಿರುವ ಯುವತಿಯನ್ನು ಚೀನಾದ ರಾಜತಾಂತ್ರಿಕ ಅಧಿಕಾರಿಣಿಯೆಂದು ಗುರುತಿಸಲಾಗುತ್ತಿದೆ. ಇದೀಗ ಇದು ಸಾಕಷ್ಟು ಸುದ್ದಿಯಾಗುತ್ತಿದೆ. ರಾಹುಲ್ ಮಾಡುತ್ತಿರುವುದು ಸರಿಯಾ ಎಂದು ಕೆಲವರು ಪ್ರಶ್ನಿಸುತ್ತಿದ್ದಾರೆ. ಒಬ್ಬ ರಾಜಕಾರಣಿಗೆ ಖಾಸಗಿ ಬದುಕು ಇರಬಾರದು ಎಂದೆನಿಲ್ಲ. ಅವರು ವಿದೇಶಕ್ಕೆ ಹೋಗಿ ಸುತ್ತಾಡಿ ಬರಬಾರದು ಎಂದೆನಲ್ಲ. ಪ್ರಪಂಚದ ಬೇರೆ ರಾಷ್ಟ್ರಗಳ ರಾಜಕಾರಣಿಗಳು ವರ್ಷದಲ್ಲಿ ಇಂತಿಷ್ಟೇ ದಿನವನ್ನು ಮೋಜು-ಮಸ್ತಿಗಾಗಿ ಮೀಸಲಾಗಿಡುತ್ತಾರೆ. ಮೈಂಡ್ ಫ್ರೆಶ್ ಮಾಡಿಕೊಂಡು ಮತ್ತೆ ರಾಜಕಾರಣಕ್ಕೆ ಮರಳುತ್ತಾರೆ. ಆದರೆ ಭಾರತದ ರಾಜಕಾರಣದಲ್ಲಿ ಅದರಲ್ಲಿಯೂ ರಾಷ್ಟ್ರದ ನೇತೃತ್ವ ವಹಿಸಿಕೊಳ್ಳಬೇಕು ಎಂದು ಕನಸು ಕಾಣುವ ಅಥವಾ ನಮ್ಮ ನಾಯಕ ಪ್ರಧಾನಿಯಾಗಬೇಕು ಎಂದು ಬಯಸುವ ಅವರ ಕೋಟ್ಯಾಂತರ ಮತದಾರರಿಗೆ ಈ ವಿಕೇಂಡ್ ಮಜಾ ಅಥವಾ ಪಬ್, ಡ್ರಿಂಕ್ಸ್ ಸಂಸ್ಕೃತಿಯನ್ನು ಅಷ್ಟು ಸುಲಭವಾಗಿ ಅರಗಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಚುನಾವಣೆ ಇದ್ದಾಗ ಅಥವಾ ಸಮಾವೇಶಗಳಲ್ಲಿ ಜುಬ್ಬಾ, ಕುರ್ತಾ ಧರಿಸಿ ಕಾಣಿಸಿಕೊಳ್ಳುವ ರಾಜಕಾರಣಿಗಳು ಇದ್ಯಾವುದೂ ಇಲ್ಲದೇ ಇದ್ದಾಗ ಟೀಶರ್ಟ್, ಜೀನ್ಸ್ ನಲ್ಲಿ ಮದ್ಯದಂಗಡಿಯಲ್ಲಿ ಯುವತಿಯೊಡನೆ ಗಪ್ ಚಪ್ ಮಾಡುವುದು ಇಲ್ಲಿ ಒಗ್ಗಿಕೊಳ್ಳುವ ಸಂಪ್ರದಾಯ ಇಲ್ಲ.

ಇಲ್ಲಿ ಏನಿದ್ದರೂ ಒಬ್ಬ ಜನಪ್ರತಿನಿಧಿ ಎಂದರೆ ಆತ 24*7 ಜನಪ್ರತಿನಿಧಿ. ಅದರಲ್ಲಿಯೂ ದೇಶದ ದೊಡ್ಡ ಫ್ಯಾಮಿಲಿಯೊಂದರ ಭವಿಷ್ಯದ ಪಿಎಂ ಕ್ಯಾಂಡಿಡೇಟ್ ಆಗಿರುವವರು ಎಷ್ಟು ಜಾಗೃತೆಯಾಗಿ ಇರುತ್ತಾರೋ ಅಷ್ಟು ಒಳ್ಳೆಯದು. ರಾಹುಲ್ ನಂತೆ ಅವರ ತಾತನಿಗೂ ಕೆಲವು ಹವ್ಯಾಸಗಳು ಇದ್ದವು. ಸಿಗರೇಟ್, ಮಾನಿನಿಯರ ಸಂಗ ಅವರಿಗೂ ಇತ್ತೆಂದು ಅವರ ಆಪ್ತ ವಲಯ ಹೇಳುತ್ತದೆ. ನೆಹರೂ ತಮ್ಮ ಬದುಕಿನುದ್ದಕ್ಕೂ ರಂಗುರಂಗಾಗಿ ಬದುಕಿದವರು. ಇಷ್ಟೆಲ್ಲ ಇದ್ದರೂ ನೆಹರೂ ಪ್ರಧಾನಿಯಾಗಿ ದೇಶವನ್ನು ಮುನ್ನಡೆಸಲು ಮುಖ್ಯ ಕಾರಣ ಆಗ ಮಾಧ್ಯಮಗಳ ಸಂಚಲನ ಇಷ್ಟು ಇರಲಿಲ್ಲ. ಟಿವಿಗಳು ಈ ದೇಶದಲ್ಲಿ ಬರಲು ಎರಡ್ಮೂರು ದಶಕಗಳ ಮೊದಲೇ ನೆಹರೂ ರಾಜಕೀಯ ಮುಗಿದಿತ್ತು. ಪತ್ರಿಕೆಗಳು ಅಷ್ಟಾಗಿ ಇದನ್ನು ಬರೆಯಲು ಹೋಗುತ್ತಿರಲಿಲ್ಲ. ಬರೆದರೂ ಅದು ದೇಶವ್ಯಾಪಿ ತಲುಪುತ್ತಿರಲಿಲ್ಲ. ಸಾಮಾಜಿಕ ಜಾಲತಾಣಗಳು ಎನ್ನುವುದು ಒಂದು ಇರುತ್ತದೆ ಎಂದು ಜನ ಕನಸು, ನನಸಿನಲ್ಲಿಯೂ ಯೋಚಿಸದ ದಿನಗಳವು. ಆದ್ದರಿಂದ ರಾಜಕಾರಣಿಗಳು ಇಂತದ್ದು ಮಾಡಿದರೂ ಅದು ನಡೆದು ಹೋಗುತ್ತಿತ್ತು. ಆದರೆ ರಾಹುಲ್ ರಾಜಕೀಯ ಮಾಡುತ್ತಿರುವ ಕಾಲ ಹಾಗಿಲ್ಲ. ಇಲ್ಲಿ ಈಗ ರಾಜಕಾರಣ ಮಾಡುವವರು ಎಷ್ಟು ಶುದ್ಧರಾಗಿರುತ್ತಾರೋ ಅಷ್ಟು ಜನ ನಿಮ್ಮನ್ನು ಸ್ವೀಕರಿಸುತ್ತಾರೆ. ಒಂದು ಸಲ ದಾರಿ ತಪ್ಪಿದರೆ ನೀವು ಜನರ ದೃಷ್ಟಿಯಲ್ಲಿ ಕೇವಲವಾಗುತ್ತೀರಿ. ಇದು ರಾಹುಲ್ ಗೆ ಗೊತ್ತಿಲ್ಲ ಎಂದಲ್ಲ. ಇಡೀ ಕಾಂಗ್ರೆಸ್ ಪಕ್ಷ ತಮ್ಮ ಹೆಗಲ ಮೇಲೆ ಇದೆ ಎಂದು ಅವರಿಗೆ ಗೊತ್ತಿರಬೇಕಿತ್ತು. ತಾಯಿಗೆ ವಯಸ್ಸಾಗಿದೆ. ಅನಾರೋಗ್ಯ ಆಗಾಗ ಬಾಧಿಸುತ್ತದೆ. ಸಹೋದರಿ ಎಷ್ಟೆಂದರೂ ಇವರಿಗೆ ಬೆಂಬಲವಾಗಿ ನಿಲ್ಲಬಹುದೇ ಇಡೀ ಪಕ್ಷವನ್ನು ಆಕೆಯ ಕಂಕುಳಲ್ಲಿ ಕುಳ್ಳಿರಿಸಿ ಆಡಿಸು ಎನ್ನಲು ಆಗುವುದಿಲ್ಲ. ಆದ್ದರಿಂದ ಇಂತಹ ಒಂದು ಜಾಗದಲ್ಲಿ ಕಾಣಿಸಿಕೊಳ್ಳುವಾಗ ರಾಹುಲ್ ನಂತವರು ಎಚ್ಚರಿಕೆ ವಹಿಸಬೇಕು. ಇದನ್ನು ಈಗ ನೇಪಾಳದ ಮದುವೆಯ ಸಮಾರಂಭದಲ್ಲಿ ರಾಹುಲ್ ಭಾಗಿಯಾಗಿದ್ದರು ಎಂದು ಕಾಂಗ್ರೆಸ್ಸಿನ ಕೆಲವು ಫುಡಾರಿಗಳು ತಿಪ್ಪೆ ಸಾರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಹಾಗಾದರೆ ಪ್ರಶಾಂತ್ ಕಿಶೋರ್ ಕಾಂಗ್ರೆಸ್ಸಿನೊಂದಿಗೆ ಸಂಬಂಧ ಜೋಡಿಸುವ ಕೊನೆ ಕ್ಷಣದಲ್ಲಿ ರಾಹುಲ್ ಗೆ ಶಿಸ್ತಿಲ್ಲ ಎಂದು ಯಾಕೆ ಹೇಳಿ ಹೊರಗೆ ಬಂದರು. ಗಾಂಧಿ ಕುಟುಂಬದ ತ್ರಿಮೂರ್ತಿಗಳಾದ ಸೋನಿಯಾ, ಪ್ರಿಯಾಂಕಾ ಮತ್ತು ರಾಹುಲ್ ಜೊತೆ ನಿರ್ಣಾಯಕ ಸಭೆ ನಿಗದಿಯಾಗಿರುವಾಗ ಸಭೆಗೆ ತಾನು ಬರಲ್ಲ, ವಿದೇಶಕ್ಕೆ ಹೋಗಲು ಇದೆ ಎಂದು ರಾಹುಲ್ ಹೇಳಿದ್ದನ್ನು ಕೇಳಿ ಪಿಕೆ ಯಾಕೆ ಕೋಪಗೊಂಡರು. ಯಾಕೆಂದರೆ ಪಾತಾಳಕ್ಕೆ ಸೇರಿದ ಪಕ್ಷವೊಂದನ್ನು ಎತ್ತಲು ಮಹತ್ವರ ಸಭೆ ನಡೆಯುವಾಗ ರಾಹುಲಿಗೆ ಅದಕ್ಕಿಂತ ಮಿಗಿಲಾದ ಯಾವ ಕೆಲಸ ಇರಲು ಸಾಧ್ಯ? ಪಕ್ಷದ ಪುನಶ್ಚೇತನಕ್ಕಿಂತ ವಿದೇಶಿ ಪ್ರವಾಸ ರಾಹುಲ್ ಗೆ ಮುಖ್ಯವಾಯಿತೇ? ಹಾಗಾದರೆ ಅವರು ತಾನು ಚುನಾವಣೆಗೆ ಅಗತ್ಯ ಇದ್ದಾಗ, ಫ್ರೀಯಾಗಿ ಇದ್ದಾಗ ಮಾತ್ರ ರಾಜಕಾರಣ ಮಾಡುವುದು ಎಂದು ಹೊರಜಗತ್ತಿಗೂ ತೋರ್ಪಡಿಸುತ್ತಿದ್ದಾರಾ? ಇಂತಹ ಒಬ್ಬ ಅಸಮರ್ಥ ಮಗನನ್ನು ಹೊಂದಿರುವ ಕಾರಣಕ್ಕೆ ತಾವು ಏನೂ ಮಾಡಲಾಗದೇ ಸೋನಿಯಾ ಪರಿತಪಿಸುತ್ತಿದ್ದಾರಾ? ಪಕ್ಷವನ್ನು ಮುನ್ನಡೆಸಲು ಆಗದೇ, ಪಿತ್ರಾರ್ಪಣ ಮಾಡಲು ಆಗದೇ ಗಾಂಧಿ ಕುಟುಂಬ ತ್ರಿಶಂಕು ಸ್ಥಿತಿಗೆ ತಲುಪಿದೆಯಾ? ಬೇರೆಯವರಿಗೆ ಅಧ್ಯಕ್ಷಗಿರಿ ಕೊಡಲು ಮನಸ್ಸು ಕೇಳದೇ, ತಾವು ಕೂಡ ಇಟ್ಟುಕೊಳ್ಳುವಷ್ಟು ಸಾಮರ್ತ್ಯ ಇಲ್ಲದೆ ಗಾಂಧಿ ಮನೆತನ ಇಕ್ಕಟ್ಟಿಗೆ ಸಿಲುಕಿದೆಯಾ? ನಿತ್ಯ ಒಂದಲ್ಲ, ಒಂದು ರಾಜ್ಯದಲ್ಲಿ ಪಕ್ಷ ವೀಕ್ ಆಗುತ್ತಿರುವಾಗ ರಾಹುಲ್ ಏನು ಮಾಡಬೇಕಿತ್ತು? ಇದನ್ನು ಕಾಂಗ್ರೆಸ್ ಅರ್ಥ ಮಾಡಿಕೊಳ್ಳಬೇಕು. ಆದರೆ ಇದ್ಯಾವುದೂ ಅಗತ್ಯವಿಲ್ಲದ ರಾಹುಲ್ ಐನಾತಿ ಸಮಯದಲ್ಲಿ ಪಕ್ಷಕ್ಕೆ ಕೈಕೊಡುತ್ತಿರುವುದು ಪಕ್ಷದ ದುರಂತದ ಪರಮಾವಧಿ!

0
Shares
  • Share On Facebook
  • Tweet It




Trending Now
ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
Hanumantha Kamath November 1, 2025
ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
Hanumantha Kamath October 31, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
    • ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
    • ಸಿಎಂ ಚರ್ಚೆ- ದಲಿತರನ್ನು ಸಿಎಂ ಮಾಡುವಂತೆ ಒತ್ತಡ ಹಾಕುವ ಕೈ ನಾಯಕರ ಚಿಂತನೆ ಫಲ ಕೊಡುತ್ತಾ?
    • ರಾಜ್ಯ ಸರಕಾರ ತಂದಿದ್ದ "ಅಂಕುಶ"ದ ನಿಯಮ! ಹೈಕೋರ್ಟ್ ತಡೆ.
    • ಭಿಕ್ಷುಕರ ಕಲ್ಯಾಣಕ್ಕೆ ಸೆಸ್ ಆಗಿ ಸಾವಿರಾರು ಕೋಟಿ ಸಂಗ್ರಹ! ಎಲ್ಲಿ ಹೋಯ್ತು ಹಣ!
    • ಮುಸ್ತಫಾಬಾದ್ ಇನ್ನು ಕಬೀರ್ ಧಾಮ್! ಮುಸ್ಲಿಮರೇ ಇಲ್ಲದ ಊರದು!
    • ಕಾಂತಾರಾ ಚಾಪ್ಟರ್ 1 ಒಟಿಟಿಯಲ್ಲಿ ರಿಲೀಸ್! ದಿನ ಫಿಕ್ಸ್!
    • ಜಿಎಸ್ಟಿ ಇಳಿಕೆ ಪರಿಣಾಮ- ದೀಪಾವಳಿಗೆ 6.05 ಲಕ್ಷ ಕೋಟಿ ವಸ್ತು ಮಾರಾಟ!
    • ಪುತ್ತೂರು: ಅಕ್ರಮ ಗೋಸಾಗಾಟ, ಪೊಲೀಸರಿಂದ ಫೈರಿಂಗ್!
    • ದೀಪಾವಳಿ ಬೋನಸ್ ಕಡಿಮೆ ಕೊಟ್ಟಿದ್ದಕ್ಕೆ ಟೋಲ್ ಸಿಬ್ಬಂದಿಗಳು ಮಾಡಿದ್ದೇನು?
  • Popular Posts

    • 1
      ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
    • 2
      ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!

  • Privacy Policy
  • Contact
© Tulunadu Infomedia.

Press enter/return to begin your search