ಬೊಮ್ಮಾಯಿ ಧೈರ್ಯ ಮಾಡಿ ಲೌಡ್ ಸ್ಪೀಕರ್ ತೆಗೆಯಲು ಹೇಳಿದ್ದಾರೆ!!
ಇನ್ನು 15 ದಿನಗಳಲ್ಲಿ ಕರ್ನಾಟಕ ರಾಜ್ಯದಲ್ಲಿರುವ ಮಸೀದಿಗಳ ಅನಧಿಕೃತ ಲೌಡ್ ಸ್ಪೀಕರ್ ಗಳನ್ನು ತೆಗೆಯಲು ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಯಿಯವರು ರಾಜ್ಯದ ಉನ್ನತ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅದರೊಂದಿಗೆ ಅದು ಹಿಂದೂ ದೇವಾಲಯಗಳಿಗೂ ಅನ್ವಯವಾಗುತ್ತದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಇದನ್ನು ಮಸೀದಿಗಳು ಎಷ್ಟರಮಟ್ಟಿಗೆ ಅನುಷ್ಟಾನಕ್ಕೆ ತರುತ್ತವೆ ಎನ್ನುವುದನ್ನು ಕಾದು ನೋಡಬೇಕು. ಯಾಕೆಂದರೆ ಇದು ಇವತ್ತು, ನಿನ್ನೆಯ ಆದೇಶವಲ್ಲ. ಸುಪ್ರೀಂಕೋರ್ಟ್ ಇದನ್ನು 2005, ಜುಲೈನಲ್ಲಿ ತೀರ್ಪು ನೀಡಿದೆ. ಅದೇನೆಂದರೆ ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಮಾತ್ರ ಇಂತಿಷ್ಟೆ ಡೆಸಿಬಲ್ ನಲ್ಲಿ ಧ್ವನಿವರ್ಧಕ ಬಳಸಬಹುದು. ಧಾರ್ಮಿಕ ಕೇಂದ್ರಗಳಲ್ಲಿ ಬೆಳಿಗ್ಗೆ 55 ಡೆಸಿಬಲ್ ಮತ್ತು ರಾತ್ರಿ 45 ಡೆಸಿಬಲ್ ಶಬ್ದಗಿಂತ ಹೆಚ್ಚು ಕೇಳಿಸುವಂತಿಲ್ಲ ಎಂದು ಸ್ಪಷ್ಟ ಸೂಚನೆ ನೀಡಿದೆ. ಆದರೆ ಭಾರತದ ಧಾರ್ಮಿಕ ಕೇಂದ್ರಗಳಲ್ಲಿ ಇದು 110 ಡೆಸಿಬಲ್ ತನಕ ಹೋಗುತ್ತದೆ. ಈ ಶಬ್ದ ಮಾಲಿನ್ಯದ ತೊಂದರೆ ಭಾರತದಲ್ಲಿ ಒಂದು ಬೃಹತ್ ಸಮಸ್ಯೆ ಎಂದು ಇಲ್ಲಿಯ ತನಕ ಪರಿಗಣಿಸಲಾಗಲೇ ಇಲ್ಲ. ಹಾಗಂತ ಸೌದಿ ಅರೇಬಿಯಾದಲ್ಲಿ ಈ ಕಿರಿಕಿರಿಯನ್ನು ಬೇಗನೆ ಅರ್ಥ ಮಾಡಿಕೊಂಡಿರುವ ಅಲ್ಲಿನ ಆಡಳಿತಗಾರರು ಅಜಾನ್ ಶಬ್ದವನ್ನು ಬಹಳ ಹಿಂದೆನೆ ಕಡಿಮೆ ಮಾಡಿದ್ದಾರೆ. ಅಪ್ಪಟ ಕರ್ಮಟ ರಾಷ್ಟ್ರವಾಗಿರುವ ಸೌದಿ ಅರೇಬಿಯಾದಲ್ಲಿ ಇದು ಮಾಡಲು ಸಾಧ್ಯವಾಗುತ್ತದೆ ಎಂದರೆ ಮತ್ತು ಅಲ್ಲಿನ ಸರಕಾರ ತಮ್ಮ ಧರ್ಮದ ಆಚಾರ, ವಿಚಾರಗಳ ಮೇಲೆ ಅಂಕುಶ ಹಾಕಲು ಹಿಂದೆ ಮುಂದೆ ನೋಡುವುದಿಲ್ಲ ಎಂದಾದರೆ ನಮ್ಮಲ್ಲಿ ಯಾಕೆ ಆಗಲ್ಲ?
ಹಾಗಂತ ಹೀಗೆ ನಮ್ಮ ಸರಕಾರಗಳು ಹೇಳಿದ ಕೂಡಲೇ ಇದು ನಮ್ಮ ಧಾರ್ಮಿಕ ಹಕ್ಕುಗಳ ಮೇಲಿನ ದೌರ್ಜನ್ಯ ಎಂದು ಮುಸ್ಲಿಮರು ಹೇಳಬಹುದು. ನಮಗೆ ಸಂವಿಧಾನದಲ್ಲಿ ಇದಕ್ಕೆ ಅವಕಾಶ ನೀಡಲಾಗಿದೆ ಎಂದು ಕೂಡ ವಾದಿಸಬಹುದು. ನಮ್ಮ ಸಂವಿಧಾನ ಧಾರ್ಮಿಕ ಆರಾಧನೆ, ಪ್ರಚಾರದ ಸ್ವಾತಂತ್ರ್ಯವನ್ನು ಎಲ್ಲಾ ಪ್ರಜೆಗಳಿಗೆ ನೀಡಿರಬಹುದು. ಆದರೆ ನಿಮ್ಮ ಆಚರಣೆ ಇನ್ನೊಬ್ಬ ಪ್ರಜೆಯ ಸ್ವಾತಂತ್ರ್ಯಕ್ಕೆ ದಕ್ಕೆ ತರಬಾರದು ಎಂದು ಕೂಡ ಸ್ಪಷ್ಟವಾಗಿ ಹೇಳಿದೆ. ಈಗ ನಮ್ಮಲ್ಲಿ ಈ ಆಜಾನ್ ಶಬ್ದ ಎಷ್ಟರಮಟ್ಟಿಗೆ ಇದೆ ಎಂದರೆ ಸುಪ್ರೀಂಕೋರ್ಟ್ ನಿಗದಿಪಡಿಸಿದ ಡೆಸಿಬಲ್ ಗಿಂತ ಎರಡು ಪಟ್ಟು ಹೆಚ್ಚಾಗಿದೆ. ಇನ್ನು ಆಜಾನ್ ಕೂಗುವುದು ಇಸ್ಲಾಂವಿನ ಅವಿಭಾಜ್ಯ ಅಂಗ ಎಂದು ಕೆಲವರು ಪ್ರತಿಪಾದಿಸಬಹುದು. ಇರಬಹುದು, ಆದರೆ ಲೌಡ್ ಸ್ಪೀಕರ್ ಬಳಸಿ ಆಜಾನ್ ಕೂಗುವುದು ಅನಿವಾರ್ಯ ಅಲ್ಲ ಎನ್ನುವುದು ಅವರಿಗೂ ಗೊತ್ತಿರಬೇಕು. ಯಾಕೆಂದರೆ ಇಸ್ಲಾಂ ಹೆಚ್ಚೆಂದರೆ 1300 ವರ್ಷಗಳ ಹಳೆಯ ಮತವಾಗಿದೆ. ಆದರೆ ಲೌಡ್ ಸ್ಪೀಕರ್ ಕಂಡುಹಿಡಿದಿರುವುದು ಹೆಚ್ಚೆಂದರೆ 130 ವರ್ಷಗಳ ಹಿಂದೆ. ಹಾಗಾದರೆ ಆರಂಭದ 1200 ವರ್ಷ ಮುಲ್ಲಾಗಳು, ಮೌಲ್ವಿಗಳು ಲೌಡ್ ಸ್ಪೀಕರ್ ಇಲ್ಲದೆ ಆಜಾನ್ ನಡೆಸಿರಲಿಲ್ಲವೇ? ಮಾಡಿದ್ದರು. ಎಲ್ಲಿಯ ತನಕ ಎಂದರೆ ಲೌಡ್ ಸ್ಪೀಕರ್ ಅವಿಷ್ಕಾರ ಆದಾಗ ಎಷ್ಟೋ ದಶಕಗಳ ತನಕ ಅದರ ಮೂಲಕ ಆಜಾನ್ ಕೂಗುವುದನ್ನು ಮುಸ್ಲಿಂ ಗುರುಗಳು ಒಪ್ಪುತ್ತಿರಲಿಲ್ಲ. ಅದನ್ನು ಹರಾಮ್ ಎಂದೇ ಪರಿಗಣಿಸಲಾಗಿತ್ತು. ಯಾಕೆಂದರೆ ಆಧುನಿಕ ತಂತ್ರಜ್ಞಾನವನ್ನು ಬಳಸಿ ಆಜಾನ್ ಕೂಗುವುದನ್ನು ಮುಸ್ಲಿಂ ಗುರುಗಕೇ ಒಪ್ಪುತ್ತಿರಲಿಲ್ಲ. ಆದರೆ ಕಾಲಾಂತರದಲ್ಲಿ ಇದನ್ನು ಮಸೀದಿಗಳಲ್ಲಿ ಅಳವಡಿಸಲಾಯಿತು. ಅದರ ಧ್ವನಿ ಆರಂಭದಲ್ಲಿ ಕಡಿಮೆ ಇತ್ತು. ನಂತರ ಅದನ್ನು ಹೆಚ್ಚಿಸುತ್ತಾ ಬಂದು ಈಗ ಬೆಳಿಗ್ಗೆ 5 ಗಂಟೆಯ ಆಸುಪಾಸಿನಲ್ಲಿ ಕೇಳುವ ಆಜಾನ್ ಶಬ್ದ ನೀವು ಮಸೀದಿಯ ಆಸುಪಾಸಿನ ಪ್ರದೇಶದವರಾದರೆ ನಿಮ್ಮ ಬೆಳಗಿನ ಸಕ್ಕರೆ ನಿದ್ರೆಯನ್ನು ಕೆಡಿಸಬಲ್ಲದು. ಹಾಗಾದರೆ ಇಲ್ಲಿಯ ತನಕ ಹಿಂದೂ ಸಮಾಜ ಯಾಕೆ ಸಹಿಸಿಕೊಂಡಿತ್ತು. ಈಗ ಆಗಲ್ಲ ಎಂದರೆ ಹೇಗೆ? ಎನ್ನುವ ಮಾತನ್ನು ಕೆಲವು ಮೂಲಭೂತವಾದಿಗಳು ಕೇಳುತ್ತಿದ್ದಾರೆ. ಇಲ್ಲಿಯ ತನಕ ಸಹಿಸಿಕೊಂಡದ್ದೇ ದೊಡ್ದದು. ಆದರೆ ಯಾವಾಗ ಹೈಕೋರ್ಟಿನ ಹಿಜಾಬ್ ತೀರ್ಪನ್ನು ವಿರೋಧಿಸಿ ಮುಸ್ಲಿಮರು ಅಸಹಕಾರ ತೋರಿಸುತ್ತಾ ರಾಜ್ಯ ಬಂದ್ ಮಾಡಿದರೋ ಅದರ ನಂತರ ನಿಜಕ್ಕೂ ಜಾಗೃತಿ ಮೂಡಿದೆ. ಇದು ಒಂದು ಆಯಾಮವಾದರೆ ಶಬ್ದ ಮಾಲಿನ್ಯದಿಂದ ಏನಾಗುತ್ತದೆ ಎಂದು ಭಾರತೀಯರು ನಿರ್ಲಕ್ಷ್ಯ ಮಾಡಿದ ಕಾರಣ ಇವತ್ತು ಎಷ್ಟೋ ಮೆಟ್ರೋ ಸಿಟಿಗಳಲ್ಲಿ ಈ ಶಬ್ದ ಮಾಲಿನ್ಯದಿಂದ ಕಿವುಡರಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಾ ಹೋಗುತ್ತಿದೆ. ನೀವು ದೆಹಲಿ, ಮುಂಬೈಯಲ್ಲಿ ವಾಸಿಸುವವರಾದರೆ ಗಲ್ಲಿಗೆ ಒಂದೆರಡು ಮಸೀದಿಗಳು ಇರುತ್ತವೆ. ಅವುಗಳ ಆಜಾನ್ ಆ ಪರಿಸರದಲ್ಲಿ ವಾಸಿಸುವ ಜನರ ಎದೆಬಡಿತ, ರಕ್ತದ ಒತ್ತಡ, ಕಿವುಡು ಸಹಿತ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅದರಲ್ಲಿಯೂ ಹಿರಿಯರ, ಮಕ್ಕಳ ಆರೋಗ್ಯದ ಮೇಲೆ ಗಂಭೀರ ತೊಂದರೆಯನ್ನು ಒಡ್ಡುತ್ತದೆ. ಇನ್ನು ಹಿಂದೂಗಳು ಕೂಡ ನವರಾತ್ರಿ, ಚೌತಿ, ಅಷ್ಟಮಿಗೆ ಧ್ವನಿವರ್ಧಕಗಳನ್ನು ಬಳಸಲ್ವಾ, ಅದು ಸರಿಯಾ ಎಂದು ಕೆಲವರು ಕೇಳುತ್ತಾರೆ. ಹಿಂದೂಗಳ ಹಬ್ಬಗಳನ್ನು ಎಲ್ಲಾ ಸೇರಿಸಿದರೂ ಧ್ವನಿವರ್ಧಕ ಬಳಸುವ ಹಬ್ಬಗಳ ಒಟ್ಟು ದಿನಗಳು ಹೆಚ್ಚೆಂದರೆ ಹತ್ತು ಆಗಬಹುದು. ಆದರೆ 365 ದಿನ ಕೂಡ ಆಜಾನ್ ಕೂಗಲಾಗುತ್ತದೆ. ಸದ್ಯ ಉತ್ತರ ಪ್ರದೇಶ ಕಠಿಣ ನಿರ್ಧಾರ ಕೈಗೊಂಡು ತಮ್ಮ ರಾಜ್ಯದ ಸಾವಿರಾರು ಧಾರ್ಮಿಕ ಕೇಂದ್ರಗಳ ಧ್ವನಿವರ್ಧಕಗಳನ್ನು ತೆಗೆದುಹಾಕಿದೆ. ಈಗ ಕರ್ನಾಟಕದ ಸರದಿ. ಆಗುತ್ತಾ, ಕಾಲವೇ ಉತ್ತರಿಸಬೇಕು!
Leave A Reply