• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಚಕ್ರತೀರ್ಥರ ಪರವಾಗಿ ಎಷ್ಟು ಬಲಪಂಥಿಯ ಲೇಖಕರು ಬ್ಯಾಟಿಂಗ್ ಮಾಡಿದ್ದಾರೆ!!

Hanumantha Kamath Posted On June 3, 2022


  • Share On Facebook
  • Tweet It

ಮಕ್ಕಳ ಮನಸ್ಸು ಹಸಿಗೋಡೆ ಇದ್ದಂತೆ. ಅಲ್ಲಿ ಆರಂಭದಲ್ಲಿ ಏನು ಅಂಟಿಸಲಾಗುತ್ತದೆಯೋ ಅದೇ ಶಾಶ್ವತವಾಗಿ ಇರುತ್ತವೆ ಎನ್ನುವುದು ಒಂದು ನಂಬಿಕೆ. ಹಾಗಂತ ಇದು ಸಿದ್ಧಾಂತಗಳ ವಿಷಯ ಬಂದಾಗ ಅವರು ಬೆಳೆದು ದೊಡ್ಡವರಾದ ಮೇಲೆಯೂ ಹಾಗೆ ಉಳಿಯುತ್ತದೆ ಎಂದು ಹೇಳಲು ಆಗಲ್ಲ. ಸಿದ್ಧಾಂತಗಳು ನಮ್ಮ ನಂಬಿಕೆ, ಆದ ಪ್ರಯೋಜನಗಳು ಮತ್ತು ಲಾಭ-ನಷ್ಟದ ದೃಷ್ಟಿಯಲ್ಲಿ ಬದಲಾಗುತ್ತಿರುತ್ತದೆ. ಇಲ್ಲದಿದ್ದರೆ 25 ವರ್ಷ ಕಾಂಗ್ರೆಸ್ಸಿನ ಪರವಾಗಿ ಬಡಿದಾಡಿದವರು, ಹುಟ್ಟಿದಾಗಲೇ ಕಾಂಗ್ರೆಸ್ ಪಡಸಾಲೆಯಲ್ಲಿ ಹುಟ್ಟಿದವರು ಯಾವುದೋ ಒಂದು ದಿನ ಕಾಂಗ್ರೆಸ್ಸನ್ನು ತಿರಸ್ಕರಿಸಿ ಇನ್ಯಾವುದೋ ಪಕ್ಷದ ಚೊಂಗು ಹಿಡಿದು ಹೋಗುತ್ತಾರೆ ಎಂದರೆ ಸಿದ್ಧಾಂತಗಳು ಬೇರೆ, ವಾಸ್ತವ ಬೇರೆ ಎಂದೇ ಅರ್ಥ. ಆದ್ದರಿಂದ ಮಕ್ಕಳಿಗೆ ಸಿದ್ಧಾಂತ ಬೋಧಿಸುತ್ತವೆ ಎಂದು ಹೊರಡುವುದು ಬಾಲಿಶತನ. ಅದು ಸಾಧ್ಯವೂ ಇಲ್ಲ. ಆದರೆ ಸತ್ಯ ಬೋಧಿಸಬೇಕು. ಅದು ಬುದ್ಧಿವಂತರ ಲಕ್ಷಣ. ಅದು ಸಾಧ್ಯ. ಚಿಕ್ಕವರಿದ್ದಾಗ ಮೈಸೂರು ಪ್ರವಾಸಕ್ಕೆ ಹೋಗಿ ಮೈಸೂರು ಅರಮನೆಗೆ ಕಾಲಿಟ್ಟಾಗ ಒಡೆಯರ್ ಅವರ ಸಾಮ್ರಾಜ್ಯದ ಬೆರಗನ್ನು ನೋಡಿ ಅವರ ಬಗ್ಗೆ ಹೆಮ್ಮೆಪಟ್ಟ ನಮಗೆ ಅವರ ಬಗ್ಗೆ ಮೊದಲೇ ಪಾಠದಲ್ಲಿ ಯಾಕೆ ತುಂಬಾ ಮಾಹಿತಿ ಇಲ್ಲವಲ್ಲ ಎಂದು ಅನಿಸಿರಲಿಲ್ಲ. ಯಾಕೆಂದರೆ ಅದು ಏನೂ ತಿಳಿಯದ ವಯಸ್ಸು. ಅಕ್ಬರ್ ದಿ ಗ್ರೇಟ್ ಎಂದು ಓದುತ್ತಾ ಅದನ್ನು ಪರೀಕ್ಷೆಯಲ್ಲಿ ಬರೆದ ನಮಗೆ ಪೃರ್ಥಿರಾಜ್ ಚೌಹಾಣ್ ಎಂಬ ರಾಜ ಮೊಹಮ್ಮದ್ ಘೋರಿಯನ್ನು 16 ಸಲ ಸೋಲಿಸಿ, 17 ನೇ ಸಲ ಶರಣಾಗತಿ ಕೋರಿ ಬಂದವನನ್ನು ಅಪ್ಪಿಕೊಂಡಾಗ ಮೋಸದಿಂದ ಸಾಯಿಸಲ್ಪಟ್ಟರು ಎಂದು ಯಾಕೆ ವಿವರಿಸಲಿಲ್ಲ. ಟಿಪ್ಪು ಮೈಸೂರಿನ ಹುಲಿ ಎಂದು ನಾವು ಓದಿದ್ದು ಯಾವ ಆಧಾರದ ಮೇಲೆ. ಅವರು ನೆತ್ತರಕೆರೆ, ಕೊಡಗು ಸಹಿತ ಅನೇಕ ಕಡೆ ಕ್ರೈಸ್ತರ, ಹಿಂದೂಗಳ ಮಾರಣಹೋಮ ನಡೆಸಿದ್ದು ಯಾಕೆ ಪಠ್ಯಪುಸ್ತಕದಲ್ಲಿ ಪ್ರಿಂಟ್ ಮಾಡಿರಲಿಲ್ಲ. ಯಾಕೆಂದರೆ ಆಗ ಇದ್ದ ಮನಸ್ಥಿತಿಯವರು ಪುಸ್ತಕವನ್ನು ರಚಿಸಿದ್ದರು. ಆಗ ಶಾಲೆಯಲ್ಲಿ ಸೇವಾದಳ ಇತ್ತು. ಅಲ್ಲಿ ಗಾಂಧಿ-ನೆಹರೂ ಕುಟುಂಬದ ಬಗ್ಗೆ ಬೋಧಿಸಲಾಗುತ್ತಿತ್ತು. ಸೇವಾದಳ ಕಾಂಗ್ರೆಸ್ಸಿನ ಅಂಗ ಎಂದು ಚಿಕ್ಕಮಕ್ಕಳಿಗೆ ಎಲ್ಲಿ ಗೊತ್ತಿತ್ತು. ಹಾಗಾದರೆ ಅದೇ ಶಾಲೆಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶಾಖೆ ಯಾಕೆ ಇರಲಿಲ್ಲ. ಸೇವಾದಳ ಇದ್ದಿದ್ದರೆ, ಆರ್ ಎಸ್ ಎಸ್ ಕೂಡ ಇರಬೇಕಿತ್ತಲ್ಲ. ಹೀಗೆ ಮಕ್ಕಳಿಗೆ ಚರಿತ್ರೆಯಿಂದ ಹಿಡಿದು ದೇಶದ ಇತಿಹಾಸ ಪುರುಷರ, ಪೌರಾಣಿಕ ವ್ಯಕ್ತಿಗಳ ಬಗ್ಗೆ ತಿಳಿಸುವಾಗ ಏಕಪಕ್ಷೀಯವಾಗಿ ಯಾಕೆ ತಿಳಿಸಲಾಗುತ್ತಿತ್ತು. ಯಾಕೆಂದರೆ ಆಗ ಇದ್ದ ಸರಕಾರಗಳು.

ಆಗ ನಿರಂತರವಾಗಿ ಒಂದೇ ಪಕ್ಷದ ಆಳ್ವಿಕೆ ಇದ್ದ ಕಾರಣ ಅವರು ಮೊಗಲರನ್ನು ವೈಭವಿಕರಿಸಿದವು, ಭೈರಪ್ಪನವರನ್ನು ಪಠ್ಯಪುಸ್ತಕ ಸಮಿತಿಗೆ ಸೇರಿಸಿ ಸತ್ಯ ಹೇಳುತ್ತೇನೆ ಎಂದದ್ದಕ್ಕೆ ಹೊರಗೆ ಇಟ್ಟವು, ಟಿಪ್ಪು ಹುಲಿಯಾದರು ಹೀಗೆ ತಮಗೆ ಬೇಕಾದ ಹಾಗೆ ಪಠ್ಯಪುಸ್ತಕಗಳ ರಚನೆಯಾಯಿತು. ಹಾಗೆಂದು ಅದನ್ನು ಕಲಿತವರಲ್ಲ ದೊಡ್ಡವರಾದ ಮೇಲೆ ಕಾಂಗ್ರೆಸ್ಸಿಗರಾಗಲಿಲ್ಲ, ಕಮ್ಯೂನಿಸ್ಟರಾಗಲಿಲ್ಲ. ಆದರೆ ಸತ್ಯ ಮಾತ್ರ ಇತಿಹಾಸದ ಗರ್ಭದಲ್ಲಿ ಅಡಗಿಹೋಯಿತು. ಈಗ ಅದನ್ನು ತಿಳಿಸುವ ಪ್ರಯತ್ನವನ್ನು ಮಾಡಲಾಗುತ್ತಿದೆ. ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯ ರಚನೆ ಮಾಡಿ ಅದಕ್ಕೆ ರೋಹಿತ್ ಚಕ್ರತೀರ್ಥ ಅವರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಚಕ್ರತೀರ್ಥ ತಾವೇ ಹೇಳಿಕೊಂಡ ಹಾಗೆ ಸಂಘದ ಕಾರ್ಯಕರ್ತರಲ್ಲ. ಹಾಗಂತ ಅವರ ಲೇಖನಗಳು, ಅಂಕಣಗಳು ಹೇಗಿರುತ್ತವೆ ಎಂದರೆ ಸಂಘದವರೇ ಒಂದು ಕ್ಷಣ ರೋಮಾಂಚಿತರಾಗಿಬಿಡುವಷ್ಟು ಮಾಹಿತಿಗಳಿರುತ್ತವೆ. ಸಮರ್ಥರು, ಬುದ್ಧಿವಂತರು, ಪ್ರಸಿದ್ಧರು ಮತ್ತು ಸಮಾಜದ ಮೇಲೆ ಪ್ರಭಾವ ಬೀರಬಲ್ಲಂತಹ ವ್ಯಕ್ತಿಗಳು ಎಲ್ಲಿದ್ದರೂ ಅವರನ್ನು ತಮ್ಮ ಕ್ಯಾಂಪಿಗೆ ಸೇರಿಸುವುದು ಭಾರತೀಯ ಜನತಾ ಪಾರ್ಟಿಯ ಚಿಂತಕರ ಚಾವಡಿಯ ಹಳೆ ಶೈಲಿ. ಅಂತಹ ಹಲವಾರು ಬುದ್ಧಿವಂತರು ಸಂಘ ಪರಿವಾರದ ಹೆಬ್ಬಾಗಿಲ ಹೊಸ್ತಿಲಲ್ಲಿ ಕುಳಿತಿರುತ್ತಾರೆ. ವಿವಾದ ಆದರೆ ತಾವು ಸಂಘ ಅಲ್ಲ ಎಂದೋ, ಚೆನ್ನಾಗಿ ಹೋದರೆ ಸ್ಥಾನಮಾನ ಸಿಕ್ಕಿದ ಖುಷಿಯಲ್ಲಿ ಕೆಲಸ ಮಾಡುವ ಯೋಗವನ್ನು ಪಡೆದುಕೊಂಡಿರುತ್ತಾರೆ. ಆದರೆ ಬಲಪಂಥಿಯ ಲೇಖಕರಿಗೂ, ಎಡಪಂಥಿಯ ಬರಹಗಾರರಿಗೂ ಒಂದು ವ್ಯತ್ಯಾಸವನ್ನು ಈ ಬಾರಿಯ ವಿವಾದದಲ್ಲಿ ನೋಡುವಂತಾಗಿದೆ. ರೋಹಿತ್ ಚಕ್ರತೀರ್ಥ ಅವರನ್ನು ಸಮಿತಿಯಿಂದ ತೆಗೆದು ಹಾಕಬೇಕು ಎಂದು ಎಡಪಂಥಿಯ 32 ಬರಹಗಾರರು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರಿಗೆ ಪತ್ರ ಬರೆದು ಭೇಟಿಯಾಗಿ ಮನವಿ ಸಲ್ಲಿಸಿದ್ದರು. ಅದೇ ರೋಹಿತ್ ಪರವಾಗಿ ಎಷ್ಟು ಮಂದಿ ಬಲಪಂಥಿಯ ಲೇಖಕರು ಸರಕಾರಕ್ಕೆ ಪತ್ರ ಬರೆದಿದ್ದಾರೆ. ಹೆಚ್ಚೆಂದರೆ ಒಬ್ಬರು ಸೂಲಿಬೆಲೆಯವರನ್ನು ಬಿಟ್ಟು ಯಾರೂ ರೋಹಿತ್ ಪರ ಬ್ಯಾಟಿಂಗ್ ಮಾಡಿಲ್ಲ. ಪ್ರತಾಪಸಿಂಹ, ಅಶ್ವಥ್ ನಾರಾಯಣ್ ಸಹಿತ ಬಿಜೆಪಿ ಸಂಸದರು, ಸಚಿವರು ಮಾಡಿರಬಹುದು. ಆದರೆ ಲೇಖಕರು ಎಲ್ಲಿದ್ದಾರೆ? ಯಾಕೆಂದರೆ ಬಲಪಂಥಿಯ ಲೇಖಕರಲ್ಲಿ ಒಗ್ಗಟ್ಟಿನ ಕೊರತೆ ಇದೆ. ಅವರನ್ನು ಒಂದು ವೇದಿಕೆಯಡಿ ತರಲು ಆಗಿಲ್ಲ. ಆದ್ದರಿಂದ ತುಂಬಾ ಒತ್ತಡ ಆದರೆ ಮುಖ್ಯಮಂತ್ರಿಗಳು ಏನು ಕ್ರಮ ತೆಗೆದುಕೊಳ್ಳಲಿದ್ದಾರೆ ಎನ್ನುವುದರ ಮೇಲೆ ಮಕ್ಕಳ ಪಠ್ಯದ ಭವಿಷ್ಯ ಅಡಗಿದೆ. ಆದರೆ ಚರ್ಚೆಗೆ ತಾವು ಸಿದ್ಧ ಎಂದು ಚಕ್ರತೀರ್ಥ ಎಷ್ಟೇ ಹೇಳಿಕೊಂಡರೂ ಎಲ್ಲರೂ ಕಿಟಕಿಯಿಂದ ಕಲ್ಲು ಬಿಸಾಡುವವರೇ ಇದ್ದಾರೆ ಹೊರತು ಮುಖ್ಯದ್ವಾರದಿಂದ ಒಳಗೆ ಬಂದು ಕುಳಿತು ಮಾತನಾಡೋಣ ಎನ್ನುವ ಎಡಪಂಥಿಯರು ಯಾರೂ ಇಲ್ಲ. ಮಾತನಾಡಿದರೆ ತಮ್ಮ ಗದ್ಯ, ಕವನ ಹಾಕೋದು ಬೇಡಾ ಎನ್ನುತ್ತಾರೆ. ಯಾರ ಕವಿತೆ, ಗದ್ಯ ಮಕ್ಕಳು ಕಲಿಯಲು ಸೂಕ್ತ ಅಲ್ಲವೋ ಅವು ಬೇಡಾ ಎಂದವರದ್ದು ತಕ್ಷಣ ತೆಗೆಯುವುದು ಸೂಕ್ತ.!

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Hanumantha Kamath May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Hanumantha Kamath May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search