ಚುನಾವಣೆಯ ಹೊಸ್ತಿಲಲ್ಲಿ ಗೋರಿ, ದರ್ಗಾಗಳಿಗೆ ಗತಿ ಕಾಣಿಸಿದ ಗುಜರಾತ್!!
ಕೆಲವು ಮುಸ್ಲಿಮರು ಹೆದರುತ್ತಿರುವುದೇ ಈ ಕಾರಣಕ್ಕೆ. ಭಾರತೀಯ ಜನತಾ ಪಾರ್ಟಿಯ ಸರಕಾರ ಕೇಂದ್ರದಲ್ಲಿ ಬಲಿಷ್ಟವಾದಂತೆ ನಮ್ಮ ಅಕ್ರಮತೆಗಳನ್ನು ಅವರು ಕೆಡವುತ್ತಾರೆ ಎನ್ನುವುದೇ ಕೆಲವು ಮೂಲಭೂತವಾದಿ ಅಲ್ಪಸಂಖ್ಯಾತರಿಗೆ ಇರುವ ನಿಜವಾದ ಹೆದರಿಕೆ. ಮೋದಿ ತಾವು ಹಿಂದೂತ್ವದ ರಕ್ಷಕ ಎಂದು ಬೇರೆಯವರಂತೆ ಬೊಬ್ಬೆ ಹಾಕಿ ಹೇಳುವುದಿಲ್ಲ. ಆದರೆ ಸೈಲೆಂಟಾಗಿ ದೇಶವಿರೋಧಿಗಳಿಗೆ ಗೋರಿ ತೋಡುತ್ತಾರೆ ಎನ್ನುವ ಆತಂಕ ಅವರಲ್ಲಿ ಆರಂಭದಿಂದಲೂ ಇದೆ. ಅದಕ್ಕೆ ಸಾಕ್ಷಿ ಆಗಾಗ ಕಂಡು ಬರುತ್ತದೆ. ಹಿಂದೆ ಹಿಂದೂ ಉತ್ಸವಗಳ ಸಂದರ್ಭದಲ್ಲಿ ಮೆರವಣಿಗೆಯ ಮೇಲೆ ಕಲ್ಲು ಬಿಸಾಡಿ ಆರಾಮವಾಗಿ ಕಾಲರ್ ಮೇಲೆ ಮಾಡಿ ನಡೆಯಬಹುದಿತ್ತು. “ಹೇಗೆ ಹಿಂದೂಗಳಿಗೆ ಧಮ್ ಇಲ್ಲ ನೋಡಿ” ಎಂದು ಕುಹಕವಾಡಬಹುದಿತ್ತು. ಒಂದು ವೇಳೆ ಆ ರಾಜ್ಯದಲ್ಲಿ ಬಿಜೆಪಿ ಸರಕಾರ ಇದ್ದರೂ ಅಂತಹ ವಿಷಯಗಳಲ್ಲಿ ಏನೂ ಕ್ರಮ ತೆಗೆದುಕೊಳ್ಳುತ್ತಿರಲಿಲ್ಲ. ಆದ್ದರಿಂದ ಒಂದು ಕಾಲದಲ್ಲಿ ಮತಾಂಧರದ್ದು ನಡೆಯುತ್ತಿತ್ತು. ಆದರೆ ಯಾವಾಗ ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸರಕಾರ ಬಂತಲ್ಲ. ಇಡೀ ದೇಶದಲ್ಲಿ ಹಿಂದೂಗಳಿಗೆ ಒಂದು ಮುಖ ಸಿಕ್ಕಿದಂತೆ ಆಯಿತು. ಇವರು ಒಬ್ಬ ಸಾಧು, ಏನು ಮಾಡುತ್ತಾರೆ ಬಿಡಿ ಎಂದು ಅಂದುಕೊಂಡು ಹಿಂದೂ ಮೆರವಣಿಗೆಯ ಮೇಲೆ ಕಲ್ಲು ಬಿಸಾಡಿದವರು ಮನೆಗೆ ಬಂದು ಮಲಗಿ ಬೆಳಿಗ್ಗೆ ಏಳುವಷ್ಟರಲ್ಲಿ ಅವರ ಬಾಗಿಲಿನ ಎದುರು ಬುಲ್ಡೋಜರ್ ನಿಂತವು. ಇದೆಲ್ಲ ಯಾವಾಗ ಕಂಡುಬಂದವೋ ಮೊತ್ತ ಮೊದಲ ಬಾರಿಗೆ ಈ ದೇಶದ ಮತಾಂಧ ಮುಸ್ಲಿಂ ಹೆದರಿ ಹೋದ. ಇದು ಅವನಿಗೆ ಅರಗಿಸಿಕೊಳ್ಳಲು ಕಷ್ಟವಾಯಿತು. ಕೈಯಲ್ಲಿ ಅಧಿಕಾರ ಇದ್ರೆ ಏನು ಮಾಡಬಹುದು ಎಂದು ಯೋಗಿಯ ಯುಪಿ ಸರಕಾರ ಮೊದಲ ಬಾರಿಗೆ ತೋರಿಸಿತು. ಹಿಂದೆ ಕಾಂಗ್ರೆಸ್ ಸರಕಾರಗಳು ಇದ್ದಾಗ ಮತಾಂಧ ಮುಸ್ಲಿಮರು ಏನು ಮಾಡಿದ್ರು ಪಾಪ, ಅಮಾಯಕರು, ನಮ್ಮ ಸಹೋದರರಿದ್ದ ಹಾಗೆ ಎಂದು ಕಾಂಗ್ರೆಸ್ ಮುಖಂಡರು ಹೇಳುತ್ತಿದ್ದರು. ಆ ಕಾರಣ ಹಿಂದೂಗಳ ಮೇಲೆ ಕಲ್ಲು ಬಿಸಾಡುವುದು ಪ್ಯಾಶನ್ ಆಗಿತ್ತು. ಆದರೆ ಯಾವಾಗ ಯೋಗಿ ಬಂದರೋ ಕಲ್ಲುಗಳನ್ನು ನೋಡಿದರೆ ಹೆದರಿದ್ದು ಮತಾಂಧರು. ಅಲ್ಲಿಗೆ ಸನಾತನಿಗಳ ನಾಡಿನಲ್ಲಿ ಬಾಲ ಮುದುಡಿ ಕುಳಿತುಕೊಂಡರೆ ನೀವು ಚೆನ್ನಾಗಿರುತ್ತೀರಿ. ಬಾಲ ಬಿಚ್ಚಿದರೆ ಕಲ್ಲು ಬಿಸಾಡಿ ಮನೆಗೆ ಹೋಗುವಷ್ಟರಲ್ಲಿ ನಿಮ್ಮ ಗೋರಿ ಕಟ್ಟಿಸಿಬಿಡುತ್ತೇನೆ ಎಂದು ಲಕ್ನೋದಲ್ಲಿ ಕುಳಿತ ಸಿಂಹ ಘರ್ಜಿಸಿತೋ ಹಿಂದೂ ನೆಲದಲ್ಲಿ ಗತವೈಭವದ ಬೀಜಗಳು ಮೊಳಕೆ ಒಡೆದಂತೆ ಆಯಿತು. ಯೋಗಿ ಮಾದರಿಯನ್ನು ಜಾರಿಗೆ ತನ್ನಿ ಎನ್ನುವ ಧ್ವನಿ ಬಿಜೆಪಿ ಸರಕಾರಗಳು ಇರುವ ದೇಶದ ವಿವಿಧ ರಾಜ್ಯಗಳಲ್ಲಿ ಕೇಳಿ ಬಂದವು. ಅದಕ್ಕೆ ಕರ್ನಾಟಕ ಕೂಡ ಹೊರತಲ್ಲ. ಆದರೆ ಕರ್ನಾಟಕದಲ್ಲಿ ಅಷ್ಟು ಮೀಟರ್ ಇರುವ ಮುಖ್ಯಮಂತ್ರಿ ಇಲ್ಲದೇ ಇರುವುದರಿಂದ ಅದು ಅಷ್ಟರಮಟ್ಟಿಗೆ ಜಾರಿಗೆ ಬರಲಿಲ್ಲ. ಆದರೆ ಚುನಾವಣೆಯ ಹೊಸ್ತಿಲಲ್ಲಿ ನಿಂತಿರುವ ಗುಜರಾತ್ ರಾಜ್ಯದಲ್ಲಿ ಸ್ಲಾಗ್ ಓವರ್ ನಲ್ಲಿ ಸಿಕ್ಸರ್ ಸುರಿಮಳೆ ಹೊಡೆಯಬೇಕಾದ ಅನಿವಾರ್ಯತೆಗೆ ಬಿದ್ದಿರುವ ಬಿಜೆಪಿ ಸರಕಾರ ದ್ವಾರಕಾದಲ್ಲಿರುವ ಬೇಟಾ ದ್ವಾರಕಾದಲ್ಲಿ ಮಿಂಚಿನ ಕಾರ್ಯಾಚರಣೆಯನ್ನು ನಡೆಸಿದೆ. ನಾಲ್ಕು ದಿನಗಳ ತನಕ ನಿರಂತರ ಬುಲ್ಡೋಜರ್ ಚಲಾಯಿಸಿ ಅಲ್ಲಿ ಅಕ್ರಮವಾಗಿ ನಿರ್ಮಿಸಲಾದ ಗೋರಿ ಹಾಗೂ ದರ್ಗಾಗಳನ್ನು ನೆಲ ಸಮಗೊಳಿಸಲಾಗಿದೆ. ಆ ಊರಿನಲ್ಲಿ ಅಂದಾಜು ಹತ್ತು ಸಾವಿರ ಜನಸಂಖ್ಯೆ ಇದೆ. ಅದರಲ್ಲಿ ಬಹುತೇಕರು ಮುಸ್ಲಿಮರು. ಒಂದು ಕಾಲದಲ್ಲಿ ಅಲ್ಲಿ ಹಿಂದೂಗಳು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಆದರೆ ಕ್ರಮೇಣ ಮುಸ್ಲಿಮರ ಸಂಖ್ಯೆ ಹೆಚ್ಚಾಗುತ್ತಾ ಹೋಯಿತು. ಅದಕ್ಕೆ ಅನೇಕ ಕಾರಣಗಳು ಇದ್ದಿರಬಹುದು. ಹಿಂದೂಗಳ ಆಸ್ತಿಯನ್ನು ಅತಿಕ್ರಮಿಸಿ ಅವರನ್ನು ಓಡಿಸಿದ್ದು ಕೂಡ ಕಾರಣವಾಗಿರಬಹುದು. ಒಟ್ಟಿನಲ್ಲಿ ಬಹಳ ವರ್ಷಗಳಿಂದ ತಮಗೆ ಬೇಕಾದ ಹಾಗೆ ಈ ದೇಶದ ನೆಲದಲ್ಲಿ ಇಷ್ಟು ಬಂದಷ್ಟು ಗೋರಿಗಳನ್ನು, ದರ್ಗಾಗಳನ್ನು ನಿರ್ಮಿಸಿ ತಮ್ಮ ಹುಕುಂ ನಡೆಯುವಂತೆ ನೋಡಿಕೊಳ್ಳುತ್ತಿದ್ದ ಕೆಲವು ಮುಸ್ಲಿಮರಿಗೆ ಗುಜರಾತ್ ಸರಕಾರದ ಈ ಅಚಾನಕ್ ನಡೆ ಆಕ್ರೋಶಕ್ಕೆ ಈಡು ಮಾಡಿದೆ. ಇದರಿಂದ ಬಿಜೆಪಿಗೆ ಚುನಾವಣೆಯಲ್ಲಿ ಎಷ್ಟು ಲಾಭ ಆಗುತ್ತೆ ಎನ್ನುವುದು ಬೇರೆ ವಿಷಯ. ಆದರೆ ಇಂತಹ ಒಂದು ಧೈರ್ಯವನ್ನು ಬಿಜೆಪಿ ಸರಕಾರಗಳು ಮಾಡುತ್ತಿರುವುದು ಮಾತ್ರ ಒಳ್ಳೆಯ ನಿರ್ಧಾರ. ಹಿಂದೆ ಹಿಂದೂಗಳು ಕೂಡ ಹೀಗೆ ಅಕ್ರಮ ನಿರ್ಮಾಣವಾದಾಗ ಏನೂ ಮಾತನಾಡದೇ ಸುಮ್ಮನೆ ಕೂರುತ್ತಿದ್ದರು. ಏನು ಅನ್ಯಾಯವಾದರೂ ಬಾಯಿ ತೆರೆಯುತ್ತಿರಲಿಲ್ಲ. ಸರಕಾರಗಳು ತಮ್ಮ ಮಾತನ್ನು ಕೇಳಲ್ಲ ಎಂದು ತೆಪ್ಪಗೆ ಇರುತ್ತಿದ್ದರು. ಈಗ ಹಾಗಲ್ಲ. ಅಕ್ರಮ ಗೋರಿ, ದರ್ಗಾಗಳು ನಿರ್ಮಾಣವಾದರೆ ಜನರೇ ಸರಕಾರವನ್ನು ಪ್ರಶ್ನಿಸುತ್ತಾರೆ. ಯುಪಿ ಮಾದರಿ ಮಾಡಿ ಎನ್ನುತ್ತಾರೆ. ಇಲ್ಲದಿದ್ದರೆ ಪರಿಣಾಮ ಎದುರಿಸಿ ಎನ್ನುತ್ತಾರೆ. ಆದ್ದರಿಂದ ಬಿಜೆಪಿ ಸರಕಾರ ಫೀಲ್ಡಿಗೆ ಇಳಿಯಬೇಕಿದೆ. ಅದಕ್ಕೆ ಶ್ರೀಕೃಷ್ಣನ ಜನ್ಮಸ್ಥಾನ ದ್ವಾರಕ ಒಂದು ಉದಾಹರಣೆ. ಒಂದು ಸಾವಿರ ಪೊಲೀಸರನ್ನು ನಿಲ್ಲಿಸಿ ಅಕ್ರಮ ಗೋರಿ, ದರ್ಗಾಗಳನ್ನು ಒಡೆಯಲಾಗಿದೆ. ಇನ್ನು ಹೀಗೆ ಮಾಡಿದ್ದರ ವಿರುದ್ಧ ಮತಾಂಧರು ಹಿಂದೂಗಳ ಮೇಲೆ ದೌರ್ಜನ್ಯ ನಡೆಸಿದರೆ ಪರಿಣಾಮ ನೆಟ್ಟಗಿರಲ್ಲ ಎನ್ನುವ ಎಚ್ಚರಿಕೆಯನ್ನು ಕೂಡ ನೀಡಲಾಗಿದೆ. ಕೃಷ್ಣ ಮೇಲೆ ನಿಂತು ನಗುತ್ತಿದ್ದಾನೆ. ಚುನಾವಣೆಯ ಹೊತ್ತಿನಲ್ಲಾದರೂ ಎಚ್ಚರಗೊಂಡರಲ್ಲ ಎಂದು ಅಂದುಕೊಳ್ಳುತ್ತಿದ್ದಾನೆ!
Leave A Reply