ಇಮಾಮುಗಳಿಗೆ ನಮ್ಮ ತೆರಿಗೆಯ ಹಣದಲ್ಲಿ ಸಂಬಳ ಯಾಕೆ? ಆಯೋಗ ಪ್ರಶ್ನೆ!
1993 ರಲ್ಲಿ ಸುಪ್ರೀಂ ಕೋರ್ಟ್ ಮುಂದೆ ಒಂದು ಪ್ರಕರಣ ಬರುತ್ತದೆ. ಅದು ಆಲ್ ಇಂಡಿಯಾ ಇಮಾಮ್ ಆರ್ಗನೈಸೇಶನ್ ಮತ್ತು ಯೂನಿಯನ್ ಆಪ್ ಇಂಡಿಯನ್ ಮತ್ತು ಇತರರು ಪ್ರಕರಣ. ಮೇ 13, 1993ರಲ್ಲಿ ದೇಶದ ಸರ್ವೋಚ್ಚ ನ್ಯಾಯಾಲಯ ಈ ಪ್ರಕರಣದಲ್ಲಿ ಏನು ಆದೇಶ ಕೊಡುತ್ತದೆ ಎಂದರೆ ಕೇಂದ್ರ ಸರಕಾರ ಮತ್ತು ವಕ್ಫ್ ಬೋರ್ಡ್ ನಿಂದ ವಕ್ಪ್ ಅಡಿಯಲ್ಲಿ ಬರುವ ಮಸೀದಿಗಳ ಇಮಾಮ್ ಅವರಿಗೆ ವೇತನ ನೀಡಬೇಕು. ಈ ಸಂಬಂಧವಾಗಿ ವ್ಯಕ್ತಿಯೊಬ್ಬರು ಮಾಹಿತಿ ಹಕ್ಕಿನ ಅಡಿಯಲ್ಲಿ ಮಾಹಿತಿ ಕೇಳುತ್ತಾರೆ. ಅಲ್ಲಿ ಅವರಿಗೆ ಸೂಕ್ತವಾದ ಮಾಹಿತಿ ಸಿಗುವುದಿಲ್ಲ. ಅದಕ್ಕಾಗಿ ಅವರು ಮಾಹಿತಿ ಹಕ್ಕಿನ ವಿಷಯದಲ್ಲಿ ದೇಶದ ಅತ್ಯಂತ ದೊಡ್ಡ ಆಯೋಗವಾಗಿರುವ ಕೇಂದ್ರ ಮಾಹಿತಿ ಕಮೀಷನ್ ಗೆ ದೂರು ಸಲ್ಲಿಸುತ್ತಾರೆ. ಈ ಬಗ್ಗೆ ವಾದ, ಪ್ರತಿವಾದಗಳನ್ನು ಕೇಳಿದ ಕಮೀಷನ್ ಸುಪ್ರಿಂ ಕೋರ್ಟ್ ಬಹುತೇಕ 30 ವರ್ಷಗಳ ಹಿಂದೆ ನೀಡಿದ ತೀರ್ಪು ಈ ದೇಶದ ಸಂವಿಧಾನದ ಆರ್ಟಿಕಲ್ 27 ಅನ್ನು ಉಲ್ಲಂಘಿಸುವ ರೀತಿಯಲ್ಲಿ ಇದೆ ಎಂದು ಅಭಿಪ್ರಾಯಪಟ್ಟಿದೆ. ಈ ದೇಶದ ಜನಸಾಮಾನ್ಯರ ತೆರಿಗೆಯ ಹಣ ಯಾವುದೋ ಒಂದು ಧರ್ಮದ ಒಂದು ವರ್ಗದ ವೇತನಕ್ಕಾಗಿ ವಿನಿಯೋಗವಾಗುತ್ತಿರುವುದು ನಿಜಕ್ಕೂ ದುರಾದೃಷ್ಟಕರ ಎಂದು ಹೇಳಿದೆ. ಆರ್ಟಿಕಲ್ 25 ರಿಂದ 27 ರ ಪ್ರಕಾರ ಈ ದೇಶದ ಎಲ್ಲಾ ಧರ್ಮ, ಮತ, ಜಾತಿಗಳನ್ನು ಸಂವಿಧಾನದಲ್ಲಿ ಒಂದೇ ರೀತಿಯಲ್ಲಿ ಅಥವಾ ಸಮಾನವಾಗಿ ನೋಡಬೇಕು ಎನ್ನುವ ನಿಯಮ ಇದೆ. ಹಾಗಿರುವಾಗ ಒಂದೇ ಮತಧರ್ಮವನ್ನು ಆಚರಿಸುವವರಿಗೆ ಜನರ ತೆರಿಗೆಯ ಹಣದಲ್ಲಿ ಸಂಬಳ ನೀಡುವುದರಿಂದ ಜನರಿಗೆ ಸಾರ್ವಜನಿಕವಾಗಿ ಮೋಸ ಮಾಡಿದಂತೆ ಆಗುತ್ತದೆ. ಆದ್ದರಿಂದ ಇದು ಸರಿಯಲ್ಲ ಎನ್ನುವ ಅಭಿಪ್ರಾಯವನ್ನು ತಿಳಿಸಿದೆ. ಇದು ದೇಶದಲ್ಲಿ ಕೆಟ್ಟ ಸಂದೇಶವನ್ನು ನೀಡಿದಂತೆ ಆಗುತ್ತದೆ. ಅಷ್ಟೇ ಅಲ್ಲದೆ ರಾಜಕೀಯ ಕೆಸರೆರೆಚಾಟಕ್ಕೂ ಕಾರಣವಾಗಲಿದೆ ಎಂದು ಕಮೀಷನ್ ಹೇಳಿದೆ. ಇದರಿಂದ ರಾಷ್ಟ್ರದಲ್ಲಿ ಸಾಮಾಜಿಕ ಸಾಮರಸ್ಯ ಕೂಡ ಹಾಳಾಗುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ ಎಂಬ ಅಭಿಮತವನ್ನು ಕಮೀಷನ್ ವ್ಯಕ್ತಪಡಿಸಿದೆ. ಇದು ದೇಶದಲ್ಲಿ ದೂರಗಾಮಿ ಪರಿಣಾಮ ಸೃಷ್ಟಿಸಲಿದೆ.
ಈ ಬಗ್ಗೆ ತಮ್ಮ ತೀರ್ಪನ್ನು ನೀಡಿರುವ ಮಾಹಿತಿ ಆಯೋಗದ ಕಮೀಷನರ್ ಉದಯ್ ಮಹುರಕರ್ ತಮ್ಮ ತೀರ್ಪಿನ ಪ್ರತಿಯನ್ನು ಕೇಂದ್ರ ಸರಕಾರದ ಕಾನೂನು ಸಚಿವರಿಗೂ ಕಳುಹಿಸಿಕೊಡುತ್ತಿದ್ದು, ಆರ್ಟಿಕಲ್ 25 ಯಿಂದ 28 ತನಕ ನಿಯಮಗಳನ್ನು ಉಲ್ಲಂಘಿಸುವ ಯಾವುದೇ ಆದೇಶಗಳು ದೇಶದ ಹಿತಾಸಕ್ತಿಗೆ ಒಳ್ಳೆಯದ್ದಲ್ಲ ಎಂದು ಹೇಳಿದೆ. ಮುಂದಿನ ದಿನಗಳಲ್ಲಿ ದೇಶದ ಮಾಹಿತಿ ಆಯೋಗದ ಕಮೀಷನರ್ ಅವರ ಆದೇಶದ ಪ್ರತಿಯನ್ನು ಕೇಂದ್ರ ಸರಕಾರ ಗಂಭೀರವಾಗಿ ತೆಗೆದುಕೊಂಡು ನಿಯಮ ಜಾರಿಗೆ ತಂದರೆ ನಮ್ಮ ತೆರಿಗೆಯ ಹಣದಲ್ಲಿ ಇಮಾಮ್ ಗಳಿಗೆ ಕೊಡಲಾಗುತ್ತಿರುವ ವೇತನಕ್ಕೆ ಕೊಕ್ಕೆ ಬೀಳಲಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಹೊರೆಯಾಗಲಿರುವ ಈ ಮೊತ್ತವನ್ನು ಉಳಿಸಿ ಬೇರೆ ಅಭಿವೃದ್ಧಿ ಕಾರ್ಯಗಳಿಗೆ ಬಳಸುವ ಇಚ್ಚಾಶಕ್ತಿ ಸರಕಾರಗಳಿಗೆ ಇದ್ದರೆ ಆದಷ್ಟು ಬೇಗ ಈ ನಿಟ್ಟಿನಲ್ಲಿ ಸೂಕ್ತ ಹೆಜ್ಜೆ ಇಡಬೇಕಿದೆ. ಇಷ್ಟೇ ಅಲ್ಲದೇ ಡೆಲ್ಲಿ ವಕ್ಫ್ ಬೋರ್ಡ್ 25000 ರೂಪಾಯಿಗಳನ್ನು ಪರಿಹಾರವಾಗಿ ಸುಭಾಷ್ ಅಗರವಾಲ್ ಎನ್ನುವ ಮಾಹಿತಿ ಹಕ್ಕು ಕಾರ್ಯಕರ್ತನಿಗೆ ಪಾವತಿಸಬೇಕು ಎಂದು ಆಯೋಗ ಸೂಚನೆ ನೀಡಿದೆ. ಯಾಕೆಂದರೆ ಈ ವಿಷಯದಲ್ಲಿ ಸುಭಾಷ್ ಅಗರವಾಲ್ ವಕ್ಫ್ ಬೋರ್ಡಿಗೆ ಸಾಕಷ್ಟು ಅಲೆದಾಟ ನಡೆಸಬೇಕಾಯಿತ್ತಲ್ಲದೇ, ಅವರಿಗೆ ಸೂಕ್ತ ಮಾಹಿತಿ ನೀಡಲು ವಕ್ಫ್ ಬೋರ್ಡ್ ಕಾಡಿಸಿದೆ ಎಂದು ಆಯೋಗ ತನ್ನ ತೀರ್ಪಿನಲ್ಲಿ ತಿಳಿಸಿದೆ. ಭಾರತದಲ್ಲಿ ಮುಸ್ಲಿಮರಿಗೆ ವಿಶೇಷವಾಗಿರುವ ಸ್ಥಾನಮಾನವನ್ನು ನೀಡಲು ಸಾಧ್ಯವಿಲ್ಲ. ಅವರು ದೇಶದ ಎಲ್ಲ ಪ್ರಜೆಗಳಂತೆ ಸಮಾನರಾಗಿದ್ದಾರೆ. ಹಾಗಿರುವಾಗ ಇಮಾಮ್ ಅವರಿಗೆ ಮಾತ್ರ ಯಾಕೆ ಜನರ ತೆರಿಗೆಯ ಹಣ ನೀಡಬೇಕು. ಈ ದೇಶ 1947 ರಲ್ಲಿ ಇಬ್ಭಾಗವಾಗುವಾಗ ಮುಸ್ಲಿಮರು ತಮಗಾಗಿ ಪ್ರತ್ಯೇಕ ರಾಷ್ಟ್ರವನ್ನು ರಚಿಸಿಕೊಂಡರು. ಅವರಿಗೆ ಅಲ್ಲಿ ಬೇಕಾದ ಸಂಪನ್ಮೂಲದ ವ್ಯವಸ್ಥೆ ಆಗ ಮಾಡಲಾಗಿತ್ತು. ಅಲ್ಲಿ ಇಸ್ಲಾಂ ಕಾನೂನು ಜಾರಿಗೆ ತರಲಾಗಿದೆ. ಆದರೆ ಭಾರತ ಜಾತ್ಯಾತೀತ ರಾಷ್ಟ್ರವಾಗಿಯೇ ಸಂವಿಧಾನವನ್ನು ರಚಿಸಿರುವುದರಿಂದ ಒಬ್ಬರಿಗೆ ಉನ್ನತ ಸೌಲಭ್ಯ ಮತ್ತು ಬಹುಸಂಖ್ಯಾತರಿಗೆ ಕಡಿಮೆ ಸೌಲಭ್ಯ ಕೊಡಲು ಸಾಧ್ಯವಿಲ್ಲ ಎಂದು ಪರೋಕ್ಷವಾಗಿ ಚಾಟಿ ಬೀಸಿದೆ. ಇನ್ನು ದೆಹಲಿ ವಕ್ಫ್ ಬೋರ್ಡ್ ಗೆ ದೆಹಲಿ ಸರಕಾರ ಪ್ರತಿ ವರ್ಷ 62 ಕೋಟಿ ರೂಪಾಯಿಗಳನ್ನು ಅನುದಾನವಾಗಿ ನೀಡುತ್ತಿದೆ. ಇದರಿಂದಲೇ ಪ್ರತಿ ಇಮಾಮುವಿಗೆ ತಿಂಗಳಿಗೆ 18000 ರೂಪಾಯಿ ನೀಡಲಾಗುತ್ತಿದೆ. ಅದೇ ಹಿಂದೂ ದೇವಾಲಯದ ಅರ್ಚಕರಿಗೆ ದೇವಳದ ಟ್ರಸ್ಟಿನಿಂದ ಸಿಗುವುದು 2000 ರೂಪಾಯಿ ಮಾತ್ರ. ಇಂತಹ ತಾರತಮ್ಯ ಇರುವುದನ್ನು ನೋಡುವಾಗ ನಿಜಕ್ಕೂ ಆಶ್ಚರ್ಯವಾಗುತ್ತದೆ ಎಂದು ಆಯೋಗ ಹೇಳಿದೆ. ಈ ಬಗ್ಗೆ ತನ್ನ ಪ್ರತಿವಾದ ಮಂಡಿಸಿರುವ ದೆಹಲಿ ವಕ್ಫ್ ಬೋರ್ಡ್ ನಾವು ಇಮಾಮುಗಳಿಗೆ ನೀಡುತ್ತಿರುವುದು ಸಂಬಳವಲ್ಲ. ಅದು ಗೌರವಧನ. ಅದು ಒಂದು ರೀತಿಯಲ್ಲಿ ಅಳಿಯ ಅಲ್ಲ, ಮಗಳ ಗಂಡ ಎಂದಾಗೆ ಆಯಿತು!!
Leave A Reply