• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ನಾವು ಅಂಜುವುದಿಲ್ಲ ಎಂದು ಕಮ್ಮಿನಿಷ್ಟರಿಗೆ ಗೊತ್ತಿಲ್ಲ!!

Hanumantha Kamath Posted On February 13, 2023
0


0
Shares
  • Share On Facebook
  • Tweet It

ಕೇರಳದ ರಾಜಕೀಯ ಹೇಗಿದೆ ಎಂದರೆ ಅಲ್ಲಿ ಕಮ್ಯೂನಿಸ್ಟರು ತಮ್ಮ ಪಕ್ಷ ಮತ್ತು ತಮ್ಮದೇ ಒರಗೆಯ ಸಂಘಟನೆಗಳನ್ನು ಬಿಟ್ಟು ಬೇರೆ ಯಾರನ್ನು ಸಹಿಸುವುದಿಲ್ಲ. ಅವರು ಬೇರೆ ಪಕ್ಷಗಳು ಅಥವಾ ಸಂಘಟನೆಗಳು ಎಲ್ಲಿಯಾದರೂ ಒಂದಿಷ್ಟು ಪ್ರಬಲವಾಗಿ ತಳವೂರುತ್ತಿವೆ ಎದು ಗೊತ್ತಾದರೆ ಅದನ್ನು ಹೇಗಾದರೂ ಮಾಡಿ ಹಿಮ್ಮೆಟ್ಟಿಸಬೇಕೆಂದು ಷಡ್ಯಂತ್ರ ರೂಪಿಸುತ್ತಲೇ ಇರುತ್ತಾರೆ. ಹೇಗೂ ಅಲ್ಲಿ ಇರುವುದು ಅವರದ್ದೇ ಸರಕಾರ. ಒಬ್ಬ ವ್ಯಕ್ತಿ ಆರ್ ಎಸ್ ಎಸ್ ನಲ್ಲಿ ಕಾರ್ಯಕರ್ತನಾಗಿ ಸೇವೆ ಸಲ್ಲಿಸುತ್ತಿದ್ದಾನೆ ಎಂದರೆ ಅವನು ತನ್ನ ಏರಿಯಾದಲ್ಲಿ ಸಂಘಟನೆಯನ್ನು ಬೆಳೆಸುತ್ತಿದ್ದಾನೆ ಎಂದು ಗೊತ್ತಾದರೆ ಆತ ಕಮ್ಯೂನಿಸ್ಟರ ಕೆಂಗೆಣ್ಣಿಗೆ ಗುರಿಯಾಗುತ್ತಾನೆ ಎಂದೇ ಅರ್ಥ. ಮೇಲಿನಿಂದ ಆದೇಶ ಬಂದ ಕೂಡಲೇ ಸಂಘದ ಕಾರ್ಯಕರ್ತ ಜೀವನ ಮುಗಿದ ಅಧ್ಯಾಯ ಎಂದೇ ಲೆಕ್ಕ.

ಅಂತಹ ಪರಿಸ್ಥಿತಿಯಲ್ಲಿ ಕಮ್ಮಿಗಳನ್ನು ಎದುರು ಹಾಕಿ ಸಂಘದ ಶಾಖೆಗಳಿಗೆ ಹೋಗುವ ಧೈರ್ಯ ಯಾರೂ ಮಾಡುವುದಿಲ್ಲ. ಅಲ್ಲಿ ಶಾಖೆಗಳಿಗೆ ಹೋಗಿ ಪ್ರಾರ್ಥನೆ ಮಾಡಿ ಸಂಘದ ಧ್ಯೇಯೋದ್ದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಒಬ್ಬ ಜನಸಾಮಾನ್ಯನಿಗೆ ಗಟ್ಟಿಗುಂಡಿಗೆ ಬೇಕು. ಯಾಕೆಂದರೆ ಶಾಖೆಗಳಿಗೆ ಹೋಗಿ ಹಿಂದೆ ಬರುವಾಗ ಯಾರು, ಎಲ್ಲಿಂದ ದಾಳಿ ಮಾಡುತ್ತಾರೆ ಎಂದು ಹೇಳಲು ಆಗುವುದಿಲ್ಲ. ಇತ್ತೀಚೆಗೆ ಕೇರಳದ ಮಲ್ಲಪುರಂ ಎನ್ನುವ ಪ್ರದೇಶದಲ್ಲಿರುವ ಶಿವ ದೇವಸ್ಥಾನದಲ್ಲಿ ಒಂದು ಘಟನೆ ನಡೆಯಿತು. ದೇವಸ್ಥಾನದ ಅಂಗಣದಲ್ಲಿ ಅಲ್ಲಿ ಪ್ರತಿ ದಿನ ಸಂಜೆ ಸಂಘದ ಶಾಖೆ ನಡೆಯುತ್ತಿತ್ತು. ಸುಮಾರು 12 ಜನ ಸಂಘದ ಸ್ವಯಂ ಸೇವಕರು ಅಲ್ಲಿ ಭಾಗವಹಿಸುತ್ತಿದ್ದರು. ಸಂಘದ ಶಾಖೆ ನಡೆಯುತ್ತಿರುವುದನ್ನು ನೋಡಿ ಆಕ್ರೋಶಿತಗೊಂಡ ಡಿವೈ ಎಫ್ ಐ ಕಾರ್ಯಕರ್ತರು ಶಾಖೆಯಲ್ಲಿ ಪ್ರಾರ್ಥನೆ ನಡೆಯುವಾಗಲೇ ದಿಕ್ಕಾರ ಕೂಗುತ್ತಾ ಗಲಾಟೆ ಮಾಡಿದ್ದಾರೆ. ವಿರೋಧಿ ಘೋಷಣೆಗಳನ್ನು ಕೂಗಿದ್ದಾರೆ. ಶಾಖೆಯಲ್ಲಿ ಯಾವತ್ತೂ ಹೇಗೆ ಎಂದರೆ ಸಂಘದ ಪ್ರಾರ್ಥನೆ ಮುಗಿಯದೇ ಶಾಖೆ ಆವತ್ತಿನದ್ದು ಅಂತ್ಯವಾಗುವುದಿಲ್ಲ. ಕಳೆದ ಬಾರಿ ಕೂಡ ಹಾಗೆ ಆಯಿತು. ಡಿವೈಎಫ್ ಐ ತಮ್ಮ ಸಂಘಟನೆಯ ಧ್ವಜ ಹಿಡಿದು ದಿಕ್ಕಾರ ಕೂಗುತ್ತಾ ಎದುರಿಗೆ ನಿಂತಿದ್ದರೂ ಸಂಘದ ಯಾವ ಕಾರ್ಯಕರ್ತ ಕೂಡ ಒಂದು ಚೂರು ಕದಡಲಿಲ್ಲ. ಅವರ ಧಮ್ಕಿಗಳಿಗೆ ಬೆದರಲಿಲ್ಲ. ಅವರಿಂದ ಏನಾದರೂ ಆಗುತ್ತೆ ಎಂದು ಅಳಕುಲಿಲ್ಲ. ತಾಯಿ ಭಾರತಾಂಬೆಯನ್ನು ಸ್ಮರಿಸುತ್ತಾ ಸಂಘದ ಪ್ರಾರ್ಥನೆ ಮುಗಿಸಿದರು. ಅಷ್ಟೊತ್ತಿಗೆ ಪೊಲೀಸರು ಬಂದರು. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಇಲ್ಲಿ ಕಮ್ಮಿಗಳು ಪ್ರತಿಭಟನೆ ಮಾಡುವ ಉದ್ದೇಶ ಏನೆಂಬುದನ್ನು ಅವರೇ ಹೇಳಬೇಕು. ಇಳಿಸಂಜೆಯಲ್ಲಿ ದೇವಳದ ಹೊರಗಿನ ಅಂಗಣದಲ್ಲಿ ತಮ್ಮ ಪಾಡಿಗೆ ತಾವು ಕೆಲವು ಜನರು ಶಾಖೆ ಮಾಡಿದರೆ ಯಾರಿಗಾದರೂ ಆಗುವ ನಷ್ಟವಾದರೂ ಏನು? ಅದಕ್ಕೆ ಪ್ರತಿಭಟನೆ ಯಾಕೆ? ವಿರೋಧ ಯಾಕೆ? ದಿಕ್ಕಾರ ಯಾಕೆ? ವಿರುದ್ಧ ಘೋಷಣೆ ಯಾಕೆ? ಇದನ್ನೆಲ್ಲಾ ಕಣ್ಣು ಮುಚ್ಚಿಕೊಂಡು ಕುಳಿತು ನೋಡುವ ರಾಜ್ಯ ಸರಕಾರಕ್ಕೆ ನೈತಿಕತೆ ಇದೆಯೇ? ಅಷ್ಟಕ್ಕೂ ಡಿವೈಎಫ್ ಐ ಕಾಲು ಕೆರೆದು ಜಗಳಕ್ಕೆ ಬರುವುದು ಯಾಕೆ?

ಇದರ ಮರುದಿನ ಏನಾಯಿತು ಎಂದರೆ ಕೇವಲ 12 ಜನ ಸ್ವಯಂ ಸೇವಕರು ಶಾಖೆ ನಡೆಸುತ್ತಿದ್ದ ಮಲ್ಲಪುರಂ ದೇವಳದ ಹೊರಗೆ 250 ಸ್ವಯಂ ಸೇವಕರು ಸೇರಿಕೊಂಡು ಶಾಖೆ ನಡೆಸಿದರು. ನೀವು ಕಡಿಮೆ ಜನರಿದ್ದ ಕಡೆ ಹೆದರಿಸಿ ಶಾಖೆಯನ್ನು ನಿಲ್ಲಿಸಲು ಪ್ರಯತ್ನಿಸುತ್ತೀರಿ ಎಂದರೆ ಈಗ ನಾವು 250 ಜನರು ಸೇರಿದ್ದೇವೆ, ನಮಗೆ ಏನು ಮಾಡಲು ಸಾಧ್ಯವಿದೆ ಎಂದು ಪ್ರಶ್ನಿಸಿ ಕಮ್ಮಿನಿಷ್ಟರ ಮುಖಕ್ಕೆ ಹೊಡೆದಂತೆ ಶಾಖೆ ಮಾಡಿದ್ದಾರೆ. ಕೇರಳದಲ್ಲಿ ಸದ್ಯಕಂತೂ ಭಾರತೀಯ ಜನತಾ ಪಾರ್ಟಿಯ ಸರಕಾರ ಬರುವ ವಾತಾವರಣವಿಲ್ಲ. ಇದ್ದ ಒಂದು ಸೀಟು ಕೂಡ ಭಾಜಪಾ ಈ ಬಾರಿ ಗೆದ್ದಿಲ್ಲ. ಸಂಘ ಎಂದರೆ ಉರಿದು ಬೀಳುವವರ ನಡುವೆ ಶಾಖೆ ನಡೆಸುವುದು ಎಂದರೆ ಬೆಂಕಿಯ ಕೆಂಡಗಳ ಮೇಲೆ ನಡೆದುಕೊಂಡು ಹೋದ ಹಾಗೆ. ಇಂತಹ ವಾತಾವರಣದಲ್ಲಿಯೂ ಅಲ್ಲಿ ಸಂಘದ ಕಾರ್ಯಕರ್ತರ ನೈತಿಕತೆ ಕುಸಿದಿಲ್ಲ. ಹೆದರಿಕೆಯ ವಾತಾವರಣದಲ್ಲಿಯೂ ಸಂಘ ಬಲಿಷ್ಟವಾಗಿ ಬೆಳೆದಿದೆ. ಪೊಲೀಸ್, ಸರಕಾರ ಎಲ್ಲವೂ ಕಮ್ಮಿನಿಷ್ಟರ ಪರ ಇದ್ದರೂ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಅಲ್ಲಿ ಬಂಡೆಗಲ್ಲಿನಂತೆ ಅಚಲವಾಗಿದೆ. ಕಮ್ಮಿನಿಷ್ಟರು ಏನು ಮಾಡುತ್ತಾರೆ, ನೋಡಿಬಿಡೋಣ ಎಂಬ ಆತ್ಮಶಕ್ತಿ ಎದ್ದು ನಿಂತಿದೆ. ರಕ್ತದೋಕುಳಿಯಲ್ಲಿ ಆಡುವ ಕೇರಳದ ರಾಜಕೀಯ ಒಂದು ತಿರುವಿನಲ್ಲಿ ನಿಂತಿದೆ!!

0
Shares
  • Share On Facebook
  • Tweet It




Trending Now
20 ವರ್ಷಗಳ ಬಳಿಕ ರಾಜ್ ಠಾಕ್ರೆ ಹಾಗೂ ಉದ್ದವ್ ಠಾಕ್ರೆ ಸಮ್ಮಿಲನ!
Hanumantha Kamath July 5, 2025
20, 30 ವಯಸ್ಸಿನಲ್ಲಿ ಮಗು ಬೇಕೆನ್ನುವ ಆಸೆ ಹುಟ್ಟಿರಲಿಲ್ಲ, 40 ರಲ್ಲಿ ಬಂತು! ಖ್ಯಾತ ನಟಿಯ ಮನದಿಂಗಿತ...
Hanumantha Kamath July 5, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • 20 ವರ್ಷಗಳ ಬಳಿಕ ರಾಜ್ ಠಾಕ್ರೆ ಹಾಗೂ ಉದ್ದವ್ ಠಾಕ್ರೆ ಸಮ್ಮಿಲನ!
    • 20, 30 ವಯಸ್ಸಿನಲ್ಲಿ ಮಗು ಬೇಕೆನ್ನುವ ಆಸೆ ಹುಟ್ಟಿರಲಿಲ್ಲ, 40 ರಲ್ಲಿ ಬಂತು! ಖ್ಯಾತ ನಟಿಯ ಮನದಿಂಗಿತ...
    • ಸ್ಯಾನಿಟರಿ ಪ್ಯಾಡ್ ಪ್ಯಾಕೆಟ್ ಮೇಲೆ ರಾಹುಲ್ ಗಾಂಧಿ ಫೋಟೋಗೆ ಜೆಡಿಯು-ಬಿಜೆಪಿ ವ್ಯಂಗ್ಯ!
    • ಪರಸ್ಪರ ಸಮ್ಮತಿಯಿಂದ ನಡೆದ ಲೈಂಗಿಕ ಕ್ರಿಯೆ ನಂತರ ರೇಪ್ ಎನ್ನಲಾಗುವುದಿಲ್ಲ - ಕೇರಳ ಹೈಕೋರ್ಟ್ ಆದೇಶ
    • ಭಾರತದ ಇತಿಹಾಸದಲ್ಲಿ 2025ರ ಹಜ್ ಯಾತ್ರಾ ಆಯೋಜನೆ ಅತ್ಯಂತ ಯಶಸ್ವಿ - ಕೇಂದ್ರ ಸಚಿವ ಕಿರಣ್ ರಿಜ್ಜು
    • ಈ ಬಾರಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಮಹಿಳೆಗೆ ಪಟ್ಟ?
    • ರೇಪ್ ಕೇಸಿನಲ್ಲಿ ಕಾಂಪ್ರಮೈಸ್ ಆದರೆ ಸಂತ್ರಸ್ತೆಯ ವಿರುದ್ಧವೇ ದೂರು ದಾಖಲು - ಬಾಂಬೆ ಹೈಕೋರ್ಟ್ ಪೀಠ!
    • ದೆಹಲಿಯಲ್ಲಿ 10 ವರ್ಷ ದಾಟಿದ ಕಾರುಗಳು ಕಡಿಮೆ ದರದಲ್ಲಿ ಸಿಗಲಿವೆ! ಯಾಕ್ ಗೊತ್ತಾ?
    • ಟಾಯ್ಲೆಟಲ್ಲಿ ಮಹಿಳಾ ಉದ್ಯೋಗಿಗಳ ವಿಡಿಯೋ ರೆಕಾರ್ಡ್... ಇನ್ಫೋಸಿಸ್ ಉದ್ಯೋಗಿ ಬಂಧನ!
    • ದಕ್ಷಿಣ ಕನ್ನಡ ಜಿಲ್ಲೆಯನ್ನು ಮಂಗಳೂರು ಜಿಲ್ಲೆ ಎಂದು ನಾಮಕರಣ ಮಾಡಬೇಕಾ?
  • Popular Posts

    • 1
      20 ವರ್ಷಗಳ ಬಳಿಕ ರಾಜ್ ಠಾಕ್ರೆ ಹಾಗೂ ಉದ್ದವ್ ಠಾಕ್ರೆ ಸಮ್ಮಿಲನ!
    • 2
      20, 30 ವಯಸ್ಸಿನಲ್ಲಿ ಮಗು ಬೇಕೆನ್ನುವ ಆಸೆ ಹುಟ್ಟಿರಲಿಲ್ಲ, 40 ರಲ್ಲಿ ಬಂತು! ಖ್ಯಾತ ನಟಿಯ ಮನದಿಂಗಿತ...
    • 3
      ಸ್ಯಾನಿಟರಿ ಪ್ಯಾಡ್ ಪ್ಯಾಕೆಟ್ ಮೇಲೆ ರಾಹುಲ್ ಗಾಂಧಿ ಫೋಟೋಗೆ ಜೆಡಿಯು-ಬಿಜೆಪಿ ವ್ಯಂಗ್ಯ!
    • 4
      ಪರಸ್ಪರ ಸಮ್ಮತಿಯಿಂದ ನಡೆದ ಲೈಂಗಿಕ ಕ್ರಿಯೆ ನಂತರ ರೇಪ್ ಎನ್ನಲಾಗುವುದಿಲ್ಲ - ಕೇರಳ ಹೈಕೋರ್ಟ್ ಆದೇಶ
    • 5
      ಭಾರತದ ಇತಿಹಾಸದಲ್ಲಿ 2025ರ ಹಜ್ ಯಾತ್ರಾ ಆಯೋಜನೆ ಅತ್ಯಂತ ಯಶಸ್ವಿ - ಕೇಂದ್ರ ಸಚಿವ ಕಿರಣ್ ರಿಜ್ಜು

  • Privacy Policy
  • Contact
© Tulunadu Infomedia.

Press enter/return to begin your search