ಓಡಿಶಾದಲ್ಲಿ ಮುಂದುವರೆದ ರೈಲು ಅಪಘಾತ
ಓಡಿಶಾದಲ್ಲಿ ರೈಲು ಅಪಘಾತಗಳ ಸರಣಿ ಮುಂದುವರೆದಿದೆ. ಜಜ್ಪುರ ಜಿಲ್ಲೆಯಲ್ಲಿ ಗೂಡ್ಸ್ ರೈಲು ಕಾರ್ಮಿಕರ ಮೇಲೆ ಹರಿದು ಆರು ಮಂದಿ ಸಾವನ್ನಪ್ಪಿ, ಇಬ್ಬರು ಗಾಯಗೊಂಡ ಘಟನೆ ನಡೆದಿದೆ.
ಜಜ್ಪುರ ಕಿಯೋಂಜರ್ ರಸ್ತೆ ರೈಲು ನಿಲ್ದಾಣದಲ್ಲಿ ಭಾರೀ ಮಳೆ ಸುರಿಯುತ್ತಿತ್ತು. ಈ ವೇಳೆ ಕಾರ್ಮಿಕರು ಗೂಡ್ಸ್ ರೈಲಿನ ಕೆಳಗೆ ಮಳೆಯಿಂದ ಆಶ್ರಯ ಪಡೆದಿದ್ದರು. ಈ ವೇಳೆ ರೈಲು ಅಚಾನಕ್ ಆಗಿ ಚಲಿಸಲು ಆರಂಭಿಸಿದೆ. ರೈಲು ಒಮ್ಮಿಂದೊಮ್ಮೆಲೆ ಚಲಿಸಬಹುದು ಎನ್ನುವ ಯಾವುದೇ ಐಡಿಯಾ ಇಲ್ಲದ ಕಾರ್ಮಿಕರಿಗೆ ಅಲ್ಲಿಂದ ಎದ್ದು ಓಡಿಹೋಗಲು ಕೂಡ ಅವಕಾಶ ಸಿಗಲಿಲ್ಲ. ಅವರು ಯೋಚಿಸುವ ಅಷ್ಟರಲ್ಲಿ ರೈಲು ವೇಗ ಪಡೆದುಕೊಂಡು ಆರು ಜೀವಗಳನ್ನು ಬಲಿ ಪಡೆದುಕೊಂಡಿದೆ. ಇಬ್ಬರು ಅದೃಷ್ಟವಶಾತ್ ಪಾರಾಗಿದ್ದರೂ ಗಂಭೀರ ಗಾಯಗಳೊಂದಿಗೆ ಕಟಕ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮಳೆಗಾಲದ ಸಮಯದಲ್ಲಿ ನಾವು ಎಲ್ಲಿ ಆಶ್ರಯ ಪಡೆದುಕೊಂಡಿದ್ದೇವೆ ಎನ್ನುವುದರ ಬಗ್ಗೆ ಸೂಕ್ಷ್ಮ ಅರಿವು ನಮಗೆ ಇರಬೇಕು. ಜೋರು ಮಳೆ ಬರುವ ಸಮಯದಲ್ಲಿ ಮರದ ಕೆಳಗೆ ಕೂಡ ನಿಲ್ಲುವುದು ಕೂಡ ರಿಸ್ಕ್. ಯಾಕೆಂದರೆ ಎಷ್ಟೋ ಕಡೆ ಮಳೆಗೆ ಮರಗಳು ಬಿದ್ದು ಕೆಳಗೆ ನಿಂತ ವ್ಯಕ್ತಿಗಳು ಸಾವಿಗೀಡಾದ ಅಥವಾ ಗಂಭೀರ ಗಾಯಗೊಂಡ ಉದಾಹರಣೆಗಳು ಕೂಡ ನಡೆದಿವೆ. ಹಾಗಿರುವಾಗ ರೈಲಿನ ಕೆಳಗೆ ಕುಳಿತು ಮಳೆಯಿಂದ ರಕ್ಷಣೆ ಪಡೆದುಕೊಳ್ಳುವ ರಿಸ್ಕ್ ತೆಗೆದುಕೊಂಡದ್ದೇ ಕಾರ್ಮಿಕರ ಸಾವಿಗೆ ಮುನ್ನುಡಿಯಾಗಿತ್ತು
Leave A Reply