ಸತ್ಯನಾರಾಯಣ ಆಲಿಯಾಸ್ ಸ್ಯಾಮ್ ಏನಿದು ಅವಸ್ಥೆ!
ವಿದೇಶದಲ್ಲಿ ಕುಳಿತು ಅಲ್ಲಿನ ಜನರನ್ನು ಉದ್ದೇಶಿಸಿ ಮಾತನಾಡುವಾಗ “ದೇವಸ್ಥಾನಗಳನ್ನು ಕಟ್ಟುವುದರಿಂದ ಏನು ಉಪಯೋಗ?” ಎಂದು ಪ್ರಶ್ನಿಸಿದರೆ ಅಲ್ಲಿನ ಜನರಿಗೆ ಖುಷಿಯಾಗಬಹುದು. ಯಾಕೆಂದರೆ ದೇವಸ್ಥಾನಗಳ ಮಹತ್ವ ಅಲ್ಲಿನವರಿಗೆ ಗೊತ್ತಿರುವುದಿಲ್ಲ. ಅದೇ ಇಲ್ಲಿ ಕುಳಿತು ಅದೇ ಮಾತನ್ನು ಹೇಳಿ ನೋಡಲಿ ಸ್ಯಾಮ್ ಪಿತ್ರೋಡಾ, ಆಗ ಅವರಿಗೆ ಅದರ ಬಿಸಿ ತಾಗಲಿದೆಯಾ, ಗ್ಯಾರಂಟಿ ಇಲ್ಲ. ಯಾಕೆಂದರೆ ಹಿಂದೂ ಧರ್ಮದ ಮೇಲೆ ಇಂತಹ ಹಲವು ಕಲ್ಲುಗಳು ಆಗಾಗ ಎಸೆಯಲ್ಪಡುತ್ತವೆ. ಆದರೆ ಅಗತ್ಯವಿಲ್ಲದೆ, ಬಾಯಿ ಚಪಲಕ್ಕೆ ಮಾತನಾಡಿ, ತನ್ನ ತೀಟೆ ತೀರಿಸಿಕೊಂಡ ಮಹಾನುಭಾವ ಸ್ಯಾಮ್ ಪಿತ್ರೋಡಾ ಗಾಂಧಿ ಕುಟುಂಬದ ಪರಮಾಪ್ತ. ಇಂದಿರಾಗಾಂಧಿ, ರಾಜೀವ್ ಗಾಂಧಿ ಕಾಲದಿಂದಲೂ ಸ್ಯಾಮ್ ಗಾಂಧಿಗಳಿಗೆ ತುಂಬಾ ಹತ್ತಿರದವನಾಗಿಯೇ ಇದ್ದಾರೆ. ಇತನನ್ನು ಆಧುನಿಕ ಟೆಲಿಕಮ್ಯೂನಿಕೇಶನ್ ಯುಗದ ಪಿತಾಮಹಾ ಎಂದು ಕಾಂಗ್ರೆಸ್ ಸರಕಾರಗಳು ಕರೆದವು. ಅಂದಹಾಗೆ ಮೇಲ್ನೋಟಕ್ಕೆ ಹೆಸರು ಕ್ರೈಸ್ತ ಸಮುದಾಯದ ತರಹ ಕಂಡರೂ ಆ ಮನುಷ್ಯನ ಪೂರ್ಣ ಹೆಸರು ಸತ್ಯನಾರಾಯಣ ಗಂಗಾರಾಮ್ ಪಿತ್ರೋಡಾ. ಓಡಿಶಾದ ಟಿಟ್ಲಾಗ್ರಾ ಎನ್ನುವ ಪುಟ್ಟ ಗ್ರಾಮದಲ್ಲಿ ಹುಟ್ಟಿದ ಸತ್ಯನಾರಾಯಣ ಬೆಳೆಯುತ್ತಾ ಹೋದ ಹಾಗೆ ತನ್ನ ಹೆಸರನ್ನು ಸ್ಯಾಮ್ ಎಂದು ಬದಲಾಯಿಸಿಬಿಟ್ಟಿದ್ರು. ಈ ವಿದೇಶದಲ್ಲಿ ಕೆಲಸ ಮಾಡುವವರಿಗೆ ತಮ್ಮ ಹೆಸರನ್ನು ಶಾರ್ಟ್ ಆಗಿ ಮಾಡಿ ತಾವು ಕೂಡ ಮಾಡ್ರನ್ ಎಂದು ತೋರಿಸುವ ಹಪಾಹಪಿ ಇರುತ್ತದೆ. ಹಾಗಿರುವ ಸ್ಯಾಮ್ ತನ್ನ ಕೆಲಸ ಮಾಡಿ ತನ್ನಷ್ಟಕ್ಕೆ ಇದ್ದರೆ ಚೆನ್ನಾಗಿತ್ತು. ಆದರೆ ಅವರಿಗೆ ಅರ್ಜೆಂಟಾಗಿ ಹಿಂದೂ ದೇವಾಲಯಗಳ ಬಗ್ಗೆ ಮಾತನಾಡಬೇಕಿದೆ.
ಒಂದು ದೇವಸ್ಥಾನ ಕಟ್ಟಿದರೆ ಏನು ಲಾಭ ಎಂದು ಯಾರಾದರೂ ಕೇಳುವುದೇ ಅತೀ ದೊಡ್ಡ ಮೂರ್ಖತನ. ಸ್ಯಾಮ್ ಪಿತ್ರೋಡಾ ಏನೋ ಮತಾಂತರವಾಗಿದ್ದಿರಬಹುದು. ಆದ್ದರಿಂದ ಅವರಿಗೆ ದೇವಸ್ಥಾನದ ಮಹತ್ವ ಗೊತ್ತಿಲ್ಲದಿರಬಹುದು. ಆದ್ದರಿಂದ ಸ್ಯಾಮ್ ಹಾಗೂ ಅವರಂತವರಿಗೆ ಒಂದೊಂದಾಗಿ ಬಿಡಿಸಿ ಹೇಳುವ ಪ್ರಯತ್ನ ಮಾಡಬೇಕಾಗುತ್ತದೆ. ಮೊದಲನೇಯದಾಗಿ ಒಂದು ದೇವಸ್ಥಾನ ಕಟ್ಟುವಾಗಲೇ ನೂರಾರು ಸಂಖ್ಯೆಯಲ್ಲಿ ಕಾರ್ಮಿಕರಿಗೆ ಪರೋಕ್ಷವಾಗಿ ಮತ್ತು ಪ್ರತ್ಯಕ್ಷವಾಗಿ ಕೆಲಸ ಸಿಗುತ್ತದೆ. ಇದು ಚರ್ಚ್ ಮತ್ತು ಮಸೀದಿ ಕಟ್ಟುವಾಗಲು ಆಗುತ್ತದೆ ಎಂದೇ ಇಟ್ಟುಕೊಳ್ಳೋಣ. ಆದರೆ ಮಸೀದಿ ಮತ್ತು ಚರ್ಚ್ ಕಟ್ಟಿದ ನಂತರ ದೇವಾಲಯಗಳ ವಿಷಯದಲ್ಲಿ ಉತ್ಪತ್ತಿಯಾಗುವಷ್ಟು ಉದ್ಯೋಗಾವಕಾಶಗಳು ಆಗುತ್ತಾ ಎನ್ನುವುದನ್ನು ನೋಡಿಕೊಳ್ಳಬೇಕು. ದೇವಾಲಯಗಳು ಶ್ರದ್ಧಾಕೇಂದ್ರಗಳು. ಅಲ್ಲಿ ದೇವರನ್ನು ಪ್ರಾಣಪ್ರತಿಷ್ಟೆ ಮಾಡುವುದರಿಂದ ಆತ್ಮಶಕ್ತಿ ಜಾಗೃತವಾಗುತ್ತದೆ. ಸಕರಾತ್ಮಕ ಶಕ್ತಿಯ ಉತ್ತೇಜನ ಆಗುತ್ತದೆ. ಇಂತಹ ಹಲವು ಪ್ರಯೋಜನಗಳು ದೇವಾಲಯಕ್ಕೆ ಹೋಗಿಬರುವವರಿಗೆ ಆಗುತ್ತದೆ. ಇದೆಲ್ಲಾ ಸ್ಯಾಮ್ ಗೆ ಅರ್ಥವಾಗುವುದಿಲ್ಲ. ಆದ್ದರಿಂದ ಸ್ಯಾಮ್ ಭಾಷೆಯಲ್ಲಿಯೇ ಹೇಳುವುದಾದರೆ ದೇವಸ್ಥಾನಗಳ ನಿರ್ಮಾಣದಿಂದ ಎಷ್ಟೋ ಬದುಕುಗಳು ಕಟ್ಟಲ್ಪಡುತ್ತದೆ. ಹೂ ವ್ಯಾಪಾರಿಯಿಂದ ಹಿಡಿದು ಹಣ್ಣುಕಾಯಿ, ಧೂಪ ಅಂಗಡಿಗಳು, ದೇವರಿಗೆ ಸಂಬಂಧಪಟ್ಟ ವಸ್ತುಗಳ ಮಾರಾಟದ ಅಂಗಡಿಗಳು, ದೇವರ ಫೋಟೋದಿಂದ ಹಿಡಿದು ಶಾಲು, ವಸ್ತ್ರಗಳನ್ನು ಸೇರಿಸಿ ಆಟಿಕೆ, ಜ್ಯೂಸ್ ಅಂಗಡಿ, ಚಪ್ಪಲಿ ಸ್ಟ್ಯಾಂಡಿನವನ ತನಕ ಎಷ್ಟೋ ಜನರಿಗೆ ಬದುಕು ನೀಡುತ್ತದೆ. ನೇರ ಮಾರಾಟಗಾರರಿಂದ ಹಿಡಿದು ಅದನ್ನು ತಯಾರಿಸುವವರಿಗೂ ಇದು ಉದ್ಯೋಗಕ್ಕೆ ದಾರಿಯಾಗುತ್ತದೆ. ಇನ್ನು ದೇವಸ್ಥಾನಕ್ಕೆ ಭಕ್ತಾದಿಗಳು ಭೇಟಿ ನೀಡುವಾಗ ಟ್ಯಾಕ್ಸಿಯವರಿಗೆ, ಬಸ್ಸಿನವರಿಗೆ ಹೀಗೆ ಸ್ಥಳೀಯ ಹೋಟೇಲಿನವರಿಗೆ ವ್ಯಾಪಾರವಾಗುತ್ತದೆ. ಸ್ವಲ್ಪ ದೊಡ್ಡ ದೇವಸ್ಥಾನವಾದರೆ ನಿತ್ಯ ಅನ್ನದಾನದ ಸಂಪ್ರದಾಯ ಇರುತ್ತದೆ. ಭಕ್ತರಿಗೆ ಅನ್ನಪ್ರಸಾದವಾಗಿ ಇದು ಕಂಡರೆ ಅದರಿಂದಲೂ ಎಷ್ಟೋ ಪಾಪದವರಿಗೆ ಹೊಟ್ಟೆ ತುಂಬಾ ಊಟ ಸಿಗುತ್ತದೆ. ಅಲ್ಲಿ ಅಡುಗೆ ತಯಾರಿಸುವವರಿಂದ ಹಿಡಿದು ಕಚ್ಚಾ ವಸ್ತುಗಳನ್ನು ಪೂರೈಸುವವರನ್ನು ಸೇರಿಸಿ ಹಲವರಿಗೆ ಉದ್ಯೋಗ ದೊರಕುತ್ತದೆ. ಇನ್ನು ದೇವಸ್ಥಾನದಲ್ಲಿ ವರ್ಷವೀಡಿ ಒಂದಲ್ಲ ಒಂದು ವಿವಿಧ ರೀತಿಯ ಹಬ್ಬ ಹರಿದಿನಗಳಂದು ವಿಶೇಷ ಉತ್ಸವ, ಧಾರ್ಮಿಕ ವಿಧಿವಿಧಾನಗಳು ನಡೆಯುತ್ತಾ ಇರುವುದರಿಂದ ಅಲ್ಲಿಯೂ ಜನರೇಟರ್, ವಿದ್ಯುತ್ ಅಲಂಕಾರದಿಂದ ಹಿಡಿದು ಬೊಂಬೆ ಕುಣಿತದ ತನಕ ಎಷ್ಟೋ ಮಂದಿಯ ಬದುಕು ನಡೆಯುತ್ತದೆ. ಹೀಗೆ ಹೇಳುತ್ತಾ ಹೋದರೆ ಒಂದು ದೇವಸ್ಥಾನದಿಂದ ಜೀವನ ಸಾಗಿಸುವ ಎಷ್ಟೋ ಕಥೆಗಳು ಅದರ ಮಹತ್ವ ಗೊತ್ತಿರುವವರಿಗೆ ತಿಳಿದೇ ಇರುತ್ತದೆ. ಆದರೆ ಒಂದು ಚರ್ಚ್ ಅಥವಾ ಮಸೀದಿಯಲ್ಲಿ ಇದರ ಹತ್ತು ಶೇಕಡಾದಷ್ಟಾದರೂ ಯಾರಿಗಾದರೂ ಪ್ರಯೋಜನ ಇದೆಯಾ? ಇದ್ದರೆ ಸತ್ಯನಾರಾಯಣ ಆಲಿಯಾಸ್ ಸ್ಯಾಮ್ ಹೇಳಲಿ.
ಟೀಕೆ ಇವರಿಗೆ ಊಟ ನೀಡುತ್ತದೆ!
ಹಿಂದೂ ಧರ್ಮಕ್ಕೆ ಟೀಕೆ ಮಾಡುವವರೇ ಇಂತಹ ಹಾಫ್ ಮೆಂಟಲ್ ಗಳು. ಇವರಿಗೆ ಬಾಲ್ಯದಲ್ಲಿ ಧರ್ಮದ ಮಹತ್ವ ಹೇಳಿರುವುದಿಲ್ಲ. ದೊಡ್ಡವರಾದ ನಂತರ ಇವರು ತಿಳಿದುಕೊಳ್ಳುವ ಸಾಧ್ಯತೆಯೇ ಇರುವುದಿಲ್ಲ. ಇನ್ನು ಹಿಂದೂಗಳಿಗೆ ಹೀಗೆ ಟೀಕೆ ಮಾಡಿದರೆ ಯಾರೂ ಏನೂ ಮಾಡಲು ಬರುವುದಿಲ್ಲ ಎನ್ನುವ ಧೈರ್ಯ ಇವರಿಗೆ ಇದ್ದೇ ಇರುತ್ತದೆ. ಇನ್ನು ಯಾರಿಗೋ ಬಕೆಟ್ ಹಿಡಿಯಲು ಈ ಹೇಳಿಕೆಗಳು ಇಂತವರಿಗೆ ಲಾಭ ನೀಡುತ್ತವೆ. ಒಟ್ಟಿನಲ್ಲಿ ನಮ್ಮ ಧರ್ಮವನ್ನು ಟೀಕಿಸಿಯಾದರೂ ಇವರು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ ಎಂದರೆ ಅದು ನಮ್ಮ ಧರ್ಮ ಇವರಿಗೆ ನೀಡಿದ ಸಲುಗೆ!
Leave A Reply