• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಕೂಸು ಹುಟ್ಟುವ ಮೊದಲೇ ಕ್ರೆಡಿಟ್ ವಾರ್ !

Hanumantha Kamath Posted On June 21, 2023
0


0
Shares
  • Share On Facebook
  • Tweet It

ರಾಜ್ಯದ ಕಾಂಗ್ರೆಸ್ ನಾಯಕರು ನಿರೀಕ್ಷೆಗಿಂತ ಹೆಚ್ಚು ಶಾರ್ಪ್ ಆಗಿ ರಾಜಕೀಯವನ್ನು ಮಾಡುತ್ತಿದ್ದಾರೆ. ನಾಲ್ಕೂವರೆ ವರ್ಷಗಳಿಂದ ಅಧಿಕಾರದಲ್ಲಿ ಇಲ್ಲದ ಹತಾಶೆ, ಆಪರೇಶನ್ ಕಮಲಕ್ಕೆ ಒಳಗಾಗಿ ತಮ್ಮದೇ ಶಾಸಕರು ತಮ್ಮನ್ನು ವಿಪಕ್ಷದಲ್ಲಿ ಕೂರಿಸಿದ ನಂತರದ ಬೆಳವಣಿಗೆಗಳು ಹೀಗೆ ಎಲ್ಲಾ ನೋವು ನುಂಗಿ ಇಷ್ಟು ಕಾಲವನ್ನು ಕಾಂಗ್ರೆಸ್ಸಿಗರು ಕಳೆದು ಆಗಿದೆ. ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರದೇ ಇದ್ದರೆ ಬಹುತೇಕ ಕರ್ನಾಟಕ ರಾಜ್ಯದಲ್ಲಿ ಕೈ ಮುಖಂಡರು ವಿನಾಶಕ್ಕೆ ಸಾಗುವುದು ಪಕ್ಕಾ ಆಗಿತ್ತು. ಅಧಿಕಾರಕ್ಕೆ ಬರದೇ ಇದ್ದರೇ ರಾಜಕೀಯ ಜೀವನವೇ ಮುಗಿಯಿತು ಎಂದು ಗೊತ್ತಿದ್ದ ಕಾರಣ ಕಾಂಗ್ರೆಸ್ ಆಶ್ಚರ್ಯ ರೀತಿಯಲ್ಲಿ ಎಂಬಂತೆ ಒಟ್ಟಾಯಿತು. ಪರಸ್ಪರರ ಕಾಲೆಳೆಯುವುದರಲ್ಲಿ ಪಿಎಚ್ ಡಿ ಮಾಡಿದ್ದ ಹಿರಿಯ ಕಾಂಗ್ರೆಸ್ಸಿಗರಿಗೆ ಈ ಬಾರಿ ಒಂದೊಂದು ಸೀಟು ಕೂಡ ಎಷ್ಟು ಮುಖ್ಯ ಎನ್ನುವುದು ಗೊತ್ತಾಗಿತ್ತು. ಅದಕ್ಕಾಗಿ ಅಷ್ಟೂ ಗುಂಪುಗಾರಿಕೆಯ ನಡುವೆಯೂ ಅವರು ಪಕ್ಷಕ್ಕಾಗಿ ದುಡಿದರು. ಆರ್ಥಿಕ ಸಂಪನ್ಮೂಲ ಒಗ್ಗೂಡಿಸಿದರು. ಸಾಮಾಜಿಕ ಜಾಲತಾಣಗಳನ್ನು ಬಲಪಡಿಸಿದರು. ಅಕ್ಷರಶ: ಮತಗಳನ್ನು ಬೇಡಿದರು. ಕೊನೆಗೆ ಅಧಿಕಾರಕ್ಕೆ ಬಂದುಬಿಟ್ಟರು. ಆದರೆ ಆಡಳಿತ ಪಕ್ಷವಾಗಿದ್ದ ಭಾರತೀಯ ಜನತಾ ಪಾರ್ಟಿಯ ಮುಖಂಡರು ಏನು ಮಾಡಿದರು? ಏನೂ ಮಾಡಲೇ ಇಲ್ಲ.

ಕೂಸು ಹುಟ್ಟುವ ಮೊದಲೇ ಕ್ರೆಡಿಟ್ ವಾರ್ !

ಗೆದ್ದರೆ ಈ ಕ್ರೆಡಿಟ್ ಯಾರಿಗೆ ಹೋಗುತ್ತೆ ಎನ್ನುವುದೇ ಬಿಜೆಪಿ ಪಾಳಯದ ಪ್ರಶ್ನೆಯಾಗಿತ್ತು. ಯಾರಿಗೆ ಕ್ರೆಡಿಟ್ ಸಿಕ್ಕಿದರೆ ನಾವು ಮೂಲೆಗುಂಪಾಗುತ್ತೇವೆ? ಅವರು ಗೆದ್ದರೆ ನಮ್ಮ ಅಸ್ತಿತ್ವ ಮುಗಿಯುತ್ತದೆಯಾ? ಹೀಗೆ ಇದೇ ಲೆಕ್ಕಾಚಾರದಲ್ಲಿ ಬಿಜೆಪಿಗರು ಹೋದರೆ ವಿನ: ಯಾರೂ ಕೂಡ ನಾವು ಸೋತರೆ, ಪಕ್ಷ ಅಧಿಕಾರಕ್ಕೆ ಬರದೇ ಇದ್ದರೆ ಏನು ಎಂಬುದಾಗಿ ಯೋಚಿಸಲೇ ಇಲ್ಲ. ತಮ್ಮದೇ ಪಕ್ಷದ ಅವ ಸೋಲಲಿ, ಇವ ಗೆಲ್ಲಬಾರದು ಎಂದು ರಣತಂತ್ರ ಹೆಣೆದರೆ ವಿನ: ಹೆಚ್ಚಿನವರು ಸೋತರೆ ನಾವು ಮಕಾಡೆ ಮಲಗಬೇಕಾದಿತು ಎಂದು ಚಿಂತಿಸಲೇ ಇಲ್ಲ. ಪ್ರಧಾನಿ ಮೋದಿಯವರು ಸರಣಿ ಸಮಾವೇಶಗಳನ್ನು ನಡೆಸಿದರಾದರೂ ಜಡ್ಡು ಹಿಡಿದಿದ್ದ ಬಿಜೆಪಿಯನ್ನು ಮೇಲಕ್ಕೆ ಎತ್ತಲು ಅವರಿಗೆ ಸಾಧ್ಯವಾಗಲೇ ಇಲ್ಲ. ಮೋದಿಯವರ ಮುಖ ನೋಡಿ ಲೋಕಸಭೆಯಲ್ಲಿ ವೋಟ್ ಮಾಡ್ತಿವಿ. ಈಗ ಸುಮ್ಮನೆ ಅವರನ್ನು ಕರೆಸಿ ಅವರ ಸಮಯ ವ್ಯರ್ಥ ಮಾಡಬೇಡಿ ಎಂದು ಮತದಾರ ಆಂತರಿಕವಾಗಿ ಹೇಳಿಕೊಂಡಾನಾದರೂ ಅದನ್ನು ಬಿಜೆಪಿ ಮುಖಂಡರು ಕಿವಿಗೆ ಹಾಕಿಕೊಳ್ಳಲಾರದಷ್ಟು ಕಿವುಡರಾಗಿಬಿಟ್ಟಿದ್ದರು. ಕೊನೆಗೆ ಫಲಿತಾಂಶದ ದಿನ ಬಿಜೆಪಿಯವರು ಯಾಕೆ, ಕಾಂಗ್ರೆಸ್ಸಿಗರು ಕೂಡ ಊಹೆ ಮಾಡಲಾಗದಷ್ಟು ಕೆಳಗೆ ಬಿಜೆಪಿ ಕುಸಿದು ಹೋಗಿತ್ತು.
ಹಾಗಂತ ಸಿದ್ದು, ಡಿಕೆಶಿ ಕೊಡುತ್ತೇವೆ ಎಂದು ಉಚಿತ ಘೋಷಣೆಗಳನ್ನು ಮಾಡಿದ್ದರಲ್ಲ, ಅದನ್ನು ಈಡೇರಿಸುವಷ್ಟು ರೂಪುರೇಶೆ ಇವರ ಬಳಿ ಇರಲೇ ಇಲ್ಲ. ಎಲ್ಲಿಯಾದರೂ ಹೆಚ್ಚು ಕಡಿಮೆ ಆದರೆ ಮೋದಿ ನೇತೃತ್ವದ ಕೇಂದ್ರ ಸರಕಾರದ ಮೇಲೆ ಹಾಕಿ ಅದರಲ್ಲಿಯೂ ರಾಜಕೀಯ ಮೈಲೇಜ್ ಪಡೆದುಕೊಳ್ಳಬೇಕು ಎನ್ನುವ ದೂರಾಲೋಚನೆ ಕಾಂಗ್ರೆಸ್ ಮುಖಂಡರ ಮನಸ್ಸಿನಲ್ಲಿತ್ತು. ಇಂತಹ ಪರಿಸ್ಥಿತಿಯಲ್ಲಿಯೇ ಬಿಜೆಪಿ ಅಡಕತ್ತರಿಗೆ ಸಿಕ್ಕಿದಂತೆ ಆಡಲು ಶುರುಮಾಡಿತು. ಕಾಂಗ್ರೆಸ್ ವಿರುದ್ಧ ಆರೋಪ ಮಾಡಲು ಆರಂಭಿಸಿದರೆ ಇಷ್ಟು ಬೇಗ ಮಾತನಾಡಲು ಶುರುಹಚ್ಚಿಕೊಂಡಿದ್ದಾರೆ ಎಂದು ಜನರು ಅಸಹ್ಯಪಟ್ಟುಕೊಳ್ಳುವ ಸಾಧ್ಯತೆ ಇತ್ತು. ಅದೇ ಮೌನವಾಗಿದ್ದರೆ ಬಿಜೆಪಿಯವರು ಸೋತಿದ್ದಾರೆ ಎಂದು ಅಂದುಕೊಂಡಿದ್ವಿ. ಆದರೆ ಸತ್ತಿದ್ದಾರೆ ಎನ್ನುವಂತೆ ಕಾಣುತ್ತಿದೆ ಎಂದು ಬಿಜೆಪಿ ಮತದಾರರೇ ಮಾತನಾಡಿಕೊಳ್ಳುವಂತಾಯಿತು. ಬಿಜೆಪಿ ಮುಖಂಡರು ಟೆನ್ಷನಿಗೆ ಒಳಗಾದವರಂತೆ ಯಾವ ಕಡೆ ಬಾಣ ಬಿಡಬೇಕೋ ಗೊತ್ತಿಲ್ಲದೆ ತಮ್ಮ ಪಾಳಯದಲ್ಲಿಯೇ ಲಕ್ಷ್ಮಿಬಾಂಬ್ ಬಿಸಾಡಲು ಶುರು ಮಾಡಿಕೊಂಡರು. ರಾಜಕೀಯ ಗಲೀಜಾಗತೊಡಗಿತು.

ಕಾಂಗ್ರೆಸ್ ಪಕ್ಕಾ ಪ್ಲಾನಿಗೆ ಬಿಜೆಪಿ ಡಲ್!

ವಿದ್ಯುತ್ ಬಿಲ್ ಭರಿಸಲಾಗದೇ ಮಧ್ಯಮ ವರ್ಗದವರು ಒದ್ದಾಡುತ್ತಿದ್ದರೆ ಬಿಜೆಪಿಯ ಬಳಿಯಲ್ಲಿ ಈ ವಿಷಯದಲ್ಲಿ ಕಾಂಗ್ರೆಸ್ ಬುಡಕ್ಕೆ ಬತ್ತಿ ನೀಡಲು ನಾಯಕರೇ ಇರಲಿಲ್ಲ. ಅಕ್ಕಿ ಬೆಲೆ ಕಿಲೋಗೆ 44 ರಿಂದ 55 ರೂ ಸದ್ದಿಲ್ಲದೇ ಹೆಚ್ಚಾಗುತ್ತಾ ಹೋದರೂ ಬಿಜೆಪಿ ನಾಯಕರು ಒಂದು ಸಣ್ಣ ಕೆಮ್ಮು ಕೂಡ ತೆಗೆದಿಲ್ಲ. ಆದರೆ ಕಾಂಗ್ರೆಸ್ ಗೆದ್ದ ಖುಷಿಯಲ್ಲಿ ಕ್ಷಣವೂ ಮೈಮರೆಯದೇ ತನ್ನ ಆಯುಧಗಳನ್ನು ಚೂಪುಗೊಳಿಸುವಲ್ಲಿ ಮಗ್ನವಾಗಿತ್ತು. ಅಕ್ಕಿ ಉಚಿತ ಹತ್ತು ಕೆಜಿ ಕೊಡಲು ಕಷ್ಟವಾಗುತ್ತಿದ್ದಾಗ ಅದಕ್ಕೆ ಕಾರಣ ಕೇಂದ್ರದ ಬಿಜೆಪಿ ಸರಕಾರ ಎಂದು ಮೋದಿ ಮೇಲೆ ಸಿದ್ದು ಆರೋಪ ಹಾಕುತ್ತಿದ್ದರೆ ರಾಜ್ಯ ಬಿಜೆಪಿ ಮುಖಂಡರು ತೆರೆಮರೆಯಲ್ಲಿ ನಿಂತು ಕಿಸಕ್ಕನೆ ನಕ್ಕರೆ ವಿನ: ಮೋದಿಯವರ ತಪ್ಪಿಲ್ಲ ಎಂದು ಜನರಿಗೆ ವಿವರಿಸುವಲ್ಲಿ ಎಡವಿದರು. ಬಸ್ಸುಗಳಲ್ಲಿ ಮಹಿಳೆಯರು ಕಿಕ್ಕಿರಿದು ತುಂಬಿ ಅನಾಹುತ ಸೃಷ್ಟಿಯಾದಾಗ ಹೆಚ್ಚೆಚ್ಚು ಧಾರ್ಮಿಕ ಕ್ಷೇತ್ರಗಳಿಗೆ ಮಹಿಳೆಯರು ತೆರಳುವಂತೆ ಮಾಡಿ ತಮ್ಮ ಸರಕಾರ ಹಿಂದೂ ಧರ್ಮದ ಪರ ಇದೆ ಎಂದು ತೋರಿಸಿದ್ದೇವೆ ಎಂದು ಕಾಂಗ್ರೆಸ್ಸಿಗರು ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡರು. ಈ ನಡುವೆ ಗೃಹಜ್ಯೋತಿ ಸೌಲಭ್ಯ ಪಡೆಯುವಲ್ಲಿ ಅರ್ಜಿ ತುಂಬುವ ಆಪ್ ನಲ್ಲಿ ಸಮಸ್ಯೆ ಕಾಣಿಸಿಕೊಂಡು ಜನ ತೊಂದರೆ ಅನುಭವಿಸುತ್ತಿದ್ದರೂ ಕಾಂಗ್ರೆಸ್ಸಿನ ಸತೀಶ್ ಜಾರಕಿಹೊಳಿ ಅಂತವರು ಕೇಂದ್ರ ಸರಕಾರ ನಮ್ಮ ಆಪ್ ಹ್ಯಾಕ್ ಮಾಡಿದೆ ಎಂದು ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ. ಈಗ ಪರಿಸ್ಥಿತಿ ಹೇಗಿದೆ ಎಂದರೆ ಕಾಂಗ್ರೆಸ್ಸಿಗರು ಉಚಿತ ಘೋಷಣೆಗಳನ್ನು ಕೊಡಲು ಬಿಜೆಪಿಯವರು ಅಡ್ಡಗಾಲು ಹಾಕುತ್ತಿದ್ದಾರೆ ಎನ್ನುವ ವಾತಾವರಣ ಸೃಷ್ಟಿಯಾಗಿದೆ. ಇದನ್ನು ಹೇಗೆ ಹ್ಯಾಂಡಲ್ ಮಾಡಬೇಕು ಎನ್ನುವುದರಲ್ಲಿ ರಾಜ್ಯ ಬಿಜೆಪಿ ಮುಖಂಡರಿಗೆ ಗೊಂದಲ ಮೂಡಿದೆ. ಇವರ ನಿರುತ್ಸಾಹ ನೋಡಿಯೇ ಕೆಲವು ದಿನ ಇವರು ಹೀಗೆ ಇರಲಿ ಎಂದು ಕೇಂದ್ರದ ನಾಯಕರು ಬೇರೆ ಕಡೆ ಗಮನ ಹರಿಸಿದ್ದಾರೆ!

0
Shares
  • Share On Facebook
  • Tweet It




Trending Now
ಮಹೇಶ್ ಶೆಟ್ಟಿ ತಿಮರೋಡಿ ವಶಕ್ಕೆ ಪಡೆಯುವ ವೇಳೆ ಪೊಲೀಸ್ ಕಾರಿಗೆ ಗುದ್ದಿದ ಮೂವರು ಅರೆಸ್ಟ್
Hanumantha Kamath August 22, 2025
ನಮಸ್ತೆ ಸದಾ ವತ್ಸಲೆ... ಆರ್ ಎಸ್ ಎಸ್ ಗೀತೆ ಹಾಡಿದ ಡಿಕೆಶಿವಕುಮಾರ್!
Hanumantha Kamath August 22, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಮಹೇಶ್ ಶೆಟ್ಟಿ ತಿಮರೋಡಿ ವಶಕ್ಕೆ ಪಡೆಯುವ ವೇಳೆ ಪೊಲೀಸ್ ಕಾರಿಗೆ ಗುದ್ದಿದ ಮೂವರು ಅರೆಸ್ಟ್
    • ನಮಸ್ತೆ ಸದಾ ವತ್ಸಲೆ... ಆರ್ ಎಸ್ ಎಸ್ ಗೀತೆ ಹಾಡಿದ ಡಿಕೆಶಿವಕುಮಾರ್!
    • ಸ್ನೇಹಮಯಿ ಕೃಷ್ಣ ಅವರಿಂದ ಸುಜಾತ ಭಟ್ ಹಾಗೂ ಇತರರ ಮೇಲೆ ಪ್ರಕರಣ ದಾಖಲು!
    • ಕಾನೂನು ಸ್ಪಷ್ಟವಾಗಿದೆ, ಡಿಜೆಗಳಿಗೆ ಅವಕಾಶ ನೀಡುವುದಿಲ್ಲ: ಕಮಿಷನ‌ರ್ ಸುಧೀರ್ ಕುಮಾರ್ ರೆಡ್ಡಿ
    • ಡಿಜೆ ಬಳಕೆಗೆ ವಿರೋಧವಿದೆ, ಆದರೆ ಧಾರ್ಮಿಕ ಕಾರ್ಯಕ್ರಮಗಳ ಆಚರಣೆಗೆ ಅಡ್ಡಿ ಪಡಿಸುವ ನಿಯಮ ಸಲ್ಲದು!
    • ಚುನಾವಣೆ ಜಂಟಿ ಎದುರಿಸಿದ ಠಾಕ್ರೆ ಸಹೋದರರಿಗೆ ಶೂನ್ಯ ಸಂಪಾದನೆಯಿಂದ ತೀವ್ರ ಮುಖಭಂಗ!
    • ಧರ್ಮಸ್ಥಳದ ವಿರುದ್ಧದ ಷಡ್ಯಂತ್ರದ ಹಿಂದೆ ಯಾರಿದ್ದಾರೆ ಎಂದು ಗೊತ್ತು, ಸಾಕ್ಷ್ಯವಿಲ್ಲ ಎಂದ ಹೆಗ್ಗಡೆ!
    • ಇನ್ನು ವಿಮಾನದಂತೆಯೆ ರೈಲಿನಲ್ಲಿಯೂ ಲಗೇಜ್ ತೂಕದ ಪರಿಶೀಲನೆ! ಪ್ರಯಾಣಿಕರು ತಿಳಿದುಕೊಳ್ಳಬೇಕಾದ ವಿಷಯಗಳು...
    • ಧರ್ಮಸ್ಥಳದ ಷಡ್ಯಂತ್ರದ ಹಿಂದೆ ಸಸಿಕಾಂತ್ ಸೆಂಥಿಲ್ ಕೈವಾಡ ಎಂದ ಜನಾರ್ಧನ ರೆಡ್ಡಿ!
    • ಕೆಂಪುಕಲ್ಲು ಓವರ್ ಲೋಡ್ ಸಾಗಾಟ! ಕೇಸ್ ದಾಖಲು
  • Popular Posts

    • 1
      ಮಹೇಶ್ ಶೆಟ್ಟಿ ತಿಮರೋಡಿ ವಶಕ್ಕೆ ಪಡೆಯುವ ವೇಳೆ ಪೊಲೀಸ್ ಕಾರಿಗೆ ಗುದ್ದಿದ ಮೂವರು ಅರೆಸ್ಟ್
    • 2
      ನಮಸ್ತೆ ಸದಾ ವತ್ಸಲೆ... ಆರ್ ಎಸ್ ಎಸ್ ಗೀತೆ ಹಾಡಿದ ಡಿಕೆಶಿವಕುಮಾರ್!
    • 3
      ಸ್ನೇಹಮಯಿ ಕೃಷ್ಣ ಅವರಿಂದ ಸುಜಾತ ಭಟ್ ಹಾಗೂ ಇತರರ ಮೇಲೆ ಪ್ರಕರಣ ದಾಖಲು!
    • 4
      ಕಾನೂನು ಸ್ಪಷ್ಟವಾಗಿದೆ, ಡಿಜೆಗಳಿಗೆ ಅವಕಾಶ ನೀಡುವುದಿಲ್ಲ: ಕಮಿಷನ‌ರ್ ಸುಧೀರ್ ಕುಮಾರ್ ರೆಡ್ಡಿ
    • 5
      ಡಿಜೆ ಬಳಕೆಗೆ ವಿರೋಧವಿದೆ, ಆದರೆ ಧಾರ್ಮಿಕ ಕಾರ್ಯಕ್ರಮಗಳ ಆಚರಣೆಗೆ ಅಡ್ಡಿ ಪಡಿಸುವ ನಿಯಮ ಸಲ್ಲದು!

  • Privacy Policy
  • Contact
© Tulunadu Infomedia.

Press enter/return to begin your search