ಪ್ರಪಂಚದಲ್ಲಿ ಭಾರತೀಯರ ಸ್ಥಾನಮಾನ ಹೆಚ್ಚಳ..
ಭಾರತದ ಸ್ಥಾನಮಾನ ವಿಶ್ವಾದ್ಯಂದ ಏರುತ್ತಿರುವುದಕ್ಕೆ ಮತ್ತೊಂದು ದೃಷ್ಟಾಂತ ದೊರಕುತ್ತಿದೆ. ಭಾರತದಿಂದ ಪ್ರಸ್ತುತ 57 ರಾಷ್ಟ್ರಗಳಿಗೆ ವೀಸಾ ಪಡೆಯಲು ಇದ್ದ ಕೆಲವು ನಿರ್ಬಂಧನೆಯನ್ನು ಸಡಿಲಿಸಲಾಗಿದೆ. ಇನ್ನು ಮುಂದೆ ಪೂರ್ವಭಾವಿಯಾಗಿ ವೀಸಾ ಇಲ್ಲದಿದ್ದರೂ 57 ರಾಷ್ಟ್ರಗಳಿಗೆ ಭಾರತೀಯರಿಗೆ ಪ್ರವೇಶ ದೊರಕಲಿದೆ. ಇದರಲ್ಲಿ ಅಮೇರಿಕಾದ ಬೊಲಿವಿಯಾ, ಇಐ ಸಾಲ್ವದರ್ ಸಹಿತ 57 ರಾಷ್ಟ್ರಗಳಿಗೆ ಭಾರತೀಯರಿಗೆ ಯಾವುದೇ ಸಮಸ್ಯೆ ಇಲ್ಲದೇ ಪ್ರವೇಶ ಸ್ವಾತಂತ್ರ್ಯ ಸಿಗಲಿದೆ. ಇದರಿಂದ ಭಾರತದ ನಾಗರಿಕರು ಅಂತಹ ರಾಷ್ಟ್ರಗಳಲ್ಲಿ ಮುಕ್ತವಾಗಿ ಸಂಚರಿಸಲು ಮತ್ತು ಔದ್ಯೋಗಿಕವಾಗಿ ತಮ್ಮನ್ನು ತೊಡಗಿಸಿಕೊಳ್ಳಲು ಇದರಿಂದ ಸಾಧ್ಯವಾಗುತ್ತದೆ. ಇದರಿಂದ ಭಾರತದ ನಾಗರಿಕರಿಗೆ ಆ ರಾಷ್ಟ್ರಗಳಲ್ಲಿ ಗೌರವ, ಉದ್ಯೋಗ, ವ್ಯವಹಾರಗಳನ್ನು ಕೂಡ ನಡೆಸಲು ಅನುಕೂಲಕರ ವಾತಾವರಣ ನಿರ್ಮಾಣವಾಗುತ್ತದೆ.
ಪ್ರಧಾನಿ ಮೋದಿಯವರು ಪ್ರಧಾನಿಯಾದ ನಂತರ ವಿದೇಶದಲ್ಲಿ ಭಾರತದ ಸ್ಥಾನಮಾನ ಕೂಡ ಹೆಚ್ಚಳವಾಗಿರುವುದು ಮತ್ತು ಜಗತ್ತಿನ ಅನೇಕ ರಾಷ್ಟ್ರಗಳು ಭಾರತದತ್ತ ಮುಖ ಮಾಡಿ ಸ್ನೇಹಹಸ್ತ ಚಾಚಿ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲು ಹಾತೊರೆಯುತ್ತಿರುವುದು ಜಗತ್ತು ಗಮನಿಸುತ್ತಿದೆ. ಭಾರತದ ದ್ವಿಪಕ್ಷೀಯ ಸಂಬಂಧಗಳು ಮತ್ತು ಮೋದಿಯವರ ನಡೆಗಳು ಜಗತ್ತಿನ ಅನೇಕ ರಾಷ್ಟ್ರಗಳಲ್ಲಿ ಇರುವ ಅನಿವಾಸಿ ಭಾರತೀಯರು ಹೆಮ್ಮೆಯಿಂದ ಇರಲು ಇಂತಹ ಮಹತ್ತರ ಬದಲಾವಣೆಗಳು ಕಾರಣವಾಗುತ್ತಿವೆ
Leave A Reply