ಬಿಜೆಪಿ ಕರ್ನಾಟಕ ಟ್ವಿಟರ್ ಇನ್ನೊಂದು ಆಯಾಮದ ಚಿಂತನೆ!
ಉಡುಪಿಯ ನೇತ್ರಾ ಕಾಲೇಜಿನಲ್ಲಿ ಯುವತಿಯರ ಶೌಚಾಲಯದಲ್ಲಿ ಮುಸ್ಲಿಂ ಯುವತಿಯರು ಕ್ಯಾಮೆರಾ ಇಟ್ಟ ಪ್ರಕರಣದಲ್ಲಿ ಬಹಳ ನಿಧಾನವಾಗಿಯಾದರೂ ಪ್ರಕರಣ ದಾಖಲಾಗಿದೆ. ಒಂದು ವೇಳೆ ಹಿಂದೂ ಯುವತಿಯರ ಬದಲು ಮುಸ್ಲಿಂ ಯುವತಿಯರ ಚಿತ್ರೀಕರಣವಾಗುತ್ತಿದ್ದರೆ ಕರ್ನಾಟಕದಲ್ಲಿ ಏನಾಗುತ್ತಿತ್ತು ಎನ್ನುವ ವಿಡಂಬನಾತ್ಮಕ ಅಂಶಗಳನ್ನು ಬಿಜೆಪಿ ಕರ್ನಾಟಕ ಟ್ವಿಟರ್ ನಲ್ಲಿ ಬರೆಯಲಾಗಿದೆ. ಈಗ ಫನ್ ಗಾಗಿ ಹೀಗೆ ಮಾಡಿದ್ದಾರೆ ಎಂದು ಕಾಲೇಜು ಆಡಳಿತ ಮಂಡಳಿಯವರು ಹೇಳುತ್ತಾ ಬಂದಿದ್ದಾರೆ. ರಾಜ್ಯದ ಗೃಹ ಸಚಿವರು ಇದು ಚಿಕ್ಕ ವಿಷಯ. ಇದನ್ನು ಅಗತ್ಯಕ್ಕಿಂತ ದೊಡ್ಡದ್ದು ಮಾಡಲಾಗುತ್ತಿದೆ ಎಂದು ಹೇಳುತ್ತಿದ್ದಾರೆ. ಒಂದು ವೇಳೆ ಆರೋಪಿಗಳಾಗಿರುವ ಮುಸ್ಲಿಂ ಯುವತಿಯರ ಸಾಲಿನಲ್ಲಿ ಹಿಂದೂ ಯುವತಿಯರು ಇದ್ದರೆ ಇದು ಮಕ್ಕಳಾಟವಲ್ಲ, ಮುಸ್ಲಿಂ ಯುವತಿಯರನ್ನು ಟಾರ್ಗೆಟ್ ಮಾಡಿ ಮಾನಹರಣ ಮಾಡಲಾಗಿದೆ. ಈ ಘಟನೆಯ ಹಿಂದೆ ಹಿಂದೂ ಸಂಘಟನೆಗಳ ಕೈವಾಡವಿದೆ ಎಂದು ಎಂದಿನಂತೆ ಬೊಬ್ಬೆ ಹೊಡೆಯಲಾಗುತ್ತಿತ್ತು. ಘಟನೆಯನ್ನು ಖಂಡಿಸಿ ಎಡಪಂಥಿಯ ಸಾಹಿತಿಗಳು ಆವಾರ್ಡ್ ವಾಪ್ಸಿ ಅಭಿಯಾನ ಮಾಡುತ್ತಿದ್ದರು. ಬುದ್ಧಿಜೀವಿಗಳು, ಅರ್ಬನ್ ನಕ್ಸಲರು ಟೌನ್ ಹಾಲ್ ಮುಂದೆ ಬೋರ್ಡ್ ಹಿಡಿದು ನಿಲ್ಲುತ್ತಿದ್ದರು, ಕ್ಯಾಂಡಲ್ ಹಿಡಿದು ಮೆರವಣಿಗೆಗಳಾಗುತ್ತಿತ್ತು. ಡಿಜೆ ಹಳ್ಳಿ, ಕೆಜೆ ಹಳ್ಳಿ, ಹುಬ್ಬಳ್ಳಿಯಲ್ಲಿ ಮಾಡಿದ ಹಾಗೆ ಜಿಹಾದಿಗಳು ದಾಂಧಲೆ ಎಬ್ಬಿಸುತ್ತಿದ್ದರು. ಮೋದಿ ಸರಕಾರದ ವೈಫಲ್ಯ ಎನ್ನುತ್ತಿದ್ದರು. ಘಟನೆಯನ್ನು ಅಂತರಾಷ್ಟ್ರೀಯ ಸುದ್ದಿಯನ್ನಾಗಿಸಿ ಷಡ್ಯಂತ್ರ ರೂಪಿಸಿ ಕೇಂದ್ರ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನ ನಡೆಯುತ್ತಿತ್ತು. ಕರ್ನಾಟಕದಲ್ಲಿ ಅನ್ಯಕೋಮಿನವರ ವಿರುದ್ಧ ಅಸಹಿಷ್ಣುತೆ ಸೃಷ್ಟಿಯಾಗಿದೆ ಎಂದು ಬೀದಿಗೆ ಇಳಿಯಲಾಗುತ್ತಿತ್ತು. ಇಂತಹ ಹಲವು ವಿಷಯಗಳನ್ನು ಬಿಜೆಪಿ ಕರ್ನಾಟಕ ತನ್ನ ಟ್ವಿಟರ್ ನಲ್ಲಿ ಪ್ರಸ್ತಾವಿಸಿದೆ. ಇದೇ ಅಂಶಗಳನ್ನು ಇಟ್ಟುಕೊಂಡು ಬಿಜೆಪಿ ಕಾಂಗ್ರೆಸ್ ವಿರುದ್ಧ ಟೀಕಾಸ್ತ್ರವನ್ನು ಎಸೆಯುತ್ತಿದೆ.
ಇನ್ನೊಂದೆಡೆ ಮಣಿಪುರದ ವಿಷಯವನ್ನು ಬದಿಗೆ ಸರಿಸಲು ಟಾಯ್ಲೆಟ್ ನಲ್ಲಿ ಕ್ಯಾಮೆರಾ ಪ್ರಕರಣವನ್ನು ಮುನ್ನಲೆಗೆ ತರಲಾಗಿದೆ ಎಂದು ಕಾಂಗ್ರೆಸ್ಸಿಗರು ತಮ್ಮ ವಾದವನ್ನು ಮಂಡಿಸುತ್ತಿದ್ದಾರೆ. ಆದರೆ ಹೆಣ್ಣುಮಕ್ಕಳ ವಿಷಯ ಬಂದಾಗ ಕಾಂಗ್ರೆಸ್ ಪಕ್ಷ ಸ್ವಲ್ಪ ಸೂಕ್ಷ್ಮವಾಗಿ ವಿಷಯವನ್ನು ಅರ್ಥ ಮಾಡಬೇಕು ಎನ್ನುವುದು ಜನರ ಸಹಜ ಆಗ್ರಹ!
Leave A Reply