ನಿತಿನ್ ದೇಸಾಯಿ ಯಾಕೆ ಆತ್ಮಹತ್ಯೆ ಮಾಡಿಕೊಂಡರು?
Posted On August 2, 2023

ಬಾಲಿವುಡ್ ನಲ್ಲಿ ಹಮ್ ದಿಲ್ ದೇಚುಕೆ ಸನಮ್, ಜೋಧಾ ಅಕ್ಬರ್, ಪ್ರೇಮ್ ರತನ್ ದ್ಯಾನ್ ಪಾಯೋ ನಂತಹ ಅಬ್ಬರದ ಕಲಾ ಶ್ರೀಮಂತಿಕೆಯ ಸಿನೆಮಾಗಳ ಕಲಾ ನಿರ್ದೇಶಕ ನಿತಿನ್ ದೇಸಾಯಿಯವರು ತಮ್ಮ ಸ್ಟುಡಿಯೋ ಎನ್ ಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 58 ವರ್ಷದ ನಿತಿನ್ ದೇಸಾಯಿಯವರು ಹಲವು ಹಿಟ್ ಬಾಲಿವುಡ್ ಮತ್ತು ಮರಾಠಿ ಸಿನೆಮಾಗಳಿಗೆ ಕಲಾ ನಿರ್ದೇಶನ ಮಾಡಿದ್ದಾರೆ.
ತಮ್ಮ ಸ್ಟುಡಿಯೋದ ಆವರಣದಲ್ಲಿರುವ ನಿವಾಸದಲ್ಲಿಯೇ ವಾಸವಿದ್ದ ನಿತಿನ್ ದೇಸಾಯಿಯವರು ನೇಣು ಬಿಗಿದು ಸಾವಿಗೆ ಶರಣಾಗಿದ್ದಾರೆ. ಬುಧವಾರ ಅವರ ಸಹಾಯಕರು ಕರೆ ಮಾಡಿದಾಗ ಅವರು ಸ್ವೀಕರಿಸಿರಲಿಲ್ಲ. ನಂತರ ಅಲ್ಲಿಗೆ ಬಂದ ಅವರ ಆಪ್ತರು ಬಾಗಿಲು ಒಡೆದು ಒಳಗೆ ಬಂದಾಗ ಅವರು ಹಗ್ಗ ಕುತ್ತಿಗೆಗೆ ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ನಿಧನಕ್ಕೆ ಬಾಲಿವುಡ್ ಖ್ಯಾತನಾಮರು ಕಂಬನಿ ಮಿಡಿದಿದ್ದಾರೆ. ನಿತಿನ್ ದೇಸಾಯಿ ಯಾಕೆ ಆತ್ಮಹತ್ಯೆ ಮಾಡಿಕೊಂಡರು ಎನ್ನುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
- Advertisement -
Leave A Reply