ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ಪಂಚಾಯತ್ ನೂತನ ಕಟ್ಟಡ ಲೋಕಾರ್ಪಣೆ
ಮೂಡಬಿದ್ರೆಯಲ್ಲಿ ಶಾಸಕ ಉಮಾನಾಥ್ ಕೋಟ್ಯಾನ್ ತಮ್ಮ ಕ್ಷೇತ್ರದ ಇರುವೈಲ್ ಗ್ರಾಮ ಪಂಚಾಯತ್ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದ ಆಮಂತ್ರಣ ಪತ್ರಿಕೆಯಲ್ಲಿ ಸಚಿವ ಪ್ರಿಯಾಂಕಾ ಖರ್ಗೆಯವರ ಹೆಸರನ್ನು ಹಾಕದಿರುವ ಕಾರಣಕ್ಕೆ ಶಾಸಕರು ಆಯೋಜಿಸಿರುವ ಕಾರ್ಯಕ್ರಮವನ್ನು ಸಚಿವರು ಅಧಿಕಾರಿಗಳ ಮೂಲಕ ರದ್ದು ಗೊಳಿಸಿದ್ದರು.
ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಗಳೂರಿಗೆ ಬೇಟಿ ನೀಡಿದ ಸಂದರ್ಭದಲ್ಲಿ ಮಂಗಳೂರಿನಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳ ಮೂಲಕ ಕಾರ್ಯಕ್ರಮ ರದ್ದು ಗೊಳಿಸಿದ್ದ ವಿಚಾರವಾಗಿ ಸಚಿವರ ನಡೆಯನ್ನು ಮುಖ್ಯಮಂತ್ರಿಗಳ ಎದುರೆ ಶಾಸಕ ಉಮಾನಾಥ್ ಕೋಟ್ಯಾನ್ ಪ್ರಶ್ನಿಸಿದ್ದರು ಹಾಗೂ ಆಕ್ರೋಶ ವ್ಯಕ್ತಪಡಿಸಿದ್ದರು. ಮುಖ್ಯಮಂತ್ರಿಗಳು ಇದರ ಬಗ್ಗೆ ವಿಚಾರಿಸುವೆ ಎಂದು ಭರವಸೆಯನ್ನು ನೀಡಿದ್ದರು.
ಶಾಸಕ ಉಮಾನಾಥ್ ಕೋಟ್ಯಾನ್ ಇಂದು ತಮ್ಮ ಕ್ಷೇತ್ರದಲ್ಲಿ ಇರುವೈಲ್ ಗ್ರಾಮ ಪಂಚಾಯತ್ ನೂತನ ಕಟ್ಟಡದ ಉದ್ಘಾಟನಾ ಕಾರ್ಯಕ್ರಮವನ್ನು ಶಾಸಕ ಪ್ರತಾಪ್ ಸಿಂಹ ನಾಯಕ್ ಹಾಗೂ ಗಣ್ಯ ಅತಿಥಿಗಳೊಂದಿಗೆ ಬಿಗಿ ಪೊಲೀಸ್ ಬಂದೋ ಬಸ್ತಿನಲ್ಲಿ ಯಾವೂದೇ ತೊಂದರೆ ಇಲ್ಲದೆ ಸಾಂಗವಾಗಿ ನೆರವೇರಿಸಿದರು.
Leave A Reply