• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಸನಾತನಿಗಳು ಅನಕ್ಷರಸ್ಥರು ಮತ್ತು ಮೂರ್ಖರಂತೆ!

Tulunadu News Posted On September 13, 2023
0


0
Shares
  • Share On Facebook
  • Tweet It

ಇ.0.ಡಿ.ಯಾ ಎಂಬ ಮೈತ್ರಿಕೂಟದ ಸದಸ್ಯ ಪಕ್ಷ ಡಿಎಂಕೆಯ ಉದಯನಿಧಿ ಸ್ಟಾಲಿನ್ ಹಾಗೂ ರಾಜಾ ಅವರು ಸನಾತನ ಧರ್ಮದ ಬಗ್ಗೆ ಬಹಳ ಲಘುವಾಗಿ ಮಾತನಾಡಿದ್ದನ್ನು ದೇಶದ ಜನರು ನೋಡಿದ್ದಾರೆ. ಡಿಎಂಕೆ ಪಕ್ಷದ ನಾಯಕರು ಸನಾತನ ಧರ್ಮದ ವಿರುದ್ಧ ಮಾತನಾಡಿದ್ದನ್ನು ವಿರೋಧಿಸದೇ ಉಳಿದ ಪಕ್ಷಗಳು ಮೌನವಾಗಿರುವುದು ಅದನ್ನು ಒಪ್ಪಿಕೊಂಡಂತೆ ಎನ್ನುವುದು ಯಾರಿಗಾದರೂ ಅರ್ಥವಾಗುತ್ತದೆ. ಆದರೆ ಈಗ ನಾವು ಕೊಡುತ್ತಿರುವ ಒಂದೊಂದು ಉದಾಹರಣೆಯನ್ನೇ ನೀವು ಕೂಲಂಕುಶವಾಗಿ ಗಮನಿಸಿದರೆ ವಿಪಕ್ಷಗಳ ಮೈತ್ರಿಕೂಟ ಹುಟ್ಟಿದ್ದೇ ಸನಾತನ ಧರ್ಮದ ವಿರೋಧಿ ಅಡಿಪಾಯದ ಮೇಲೆ ಎನ್ನುವುದು ಈಗ ನಿಧಾನವಾಗಿ ಸಾಬೀತಾಗಿದೆ. ಏಕೆಂದರೆ ಈ ಮೈತ್ರಿಕೂಟದ ಬೇರೆ ಬೇರೆ ಸದಸ್ಯರು ಹೇಗೆಲ್ಲ ಸನಾತನ ಧರ್ಮದ ವಿರುದ್ಧ ಮಾತನಾಡಿದರು ಮತ್ತು ವರ್ತಿಸಿದರು ಎನ್ನುವುದನ್ನು ನೋಡುತ್ತಾ ಬರೋಣ.
ಮೊದಲನೇಯದಾಗಿ ಉದಯನಿಧಿ ಸ್ಟಾಲಿನ್ ಹೇಳಿಕೆ. ಸನಾತನ ಧರ್ಮ ಸೊಳ್ಳೆ, ಡೆಂಗ್ಯೂ, ಫ್ಲೂ, ಮಲೇರಿಯಾ ಅದನ್ನು ಸಂಪೂರ್ಣವಾಗಿ ನಾಶಪಡಿಸಬೇಕು ಎಂದು ಜ್ಯೂನಿಯರ್ ಸ್ಟಾಲಿನ್ ಹೇಳಿಕೆ ನೀಡಿದ ಬೆನ್ನಲ್ಲೇ ಸ್ಪರ್ಧೆಗೆ ಬಿದ್ದಂತೆ ಅವರದ್ದೇ ಪಕ್ಷದ ಸಂಸದ ರಾಜಾ ಅವರು “ನಮ್ಮ ಮೈತ್ರಿಕೂಟ ಅಸ್ತಿತ್ವಕ್ಕೆ ಬಂದಿರುವುದೇ ಸನಾತನ ಧರ್ಮ ವಿರೋಧಿಸಲು” ಎಂದು ಹೇಳಿಕೆ ನೀಡಿದ್ದರು. ಆದರೆ ವಿಷಯ ಇಷ್ಟಕ್ಕೆ ಮುಗಿಯಲಿಲ್ಲ.
ಕಳೆದ ಬಾರಿ ಗುಜರಾತ್ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ” ಮೋದಿ ಮತ್ತೊಮ್ಮೆ ಪ್ರಧಾನ ಮಂತ್ರಿ ಆದರೆ ಈ ದೇಶವನ್ನು ಸನಾತನ ಧರ್ಮ ಆಳುತ್ತದೆ. ನಾವು ಅವರನ್ನು ಪ್ರಧಾನಿಯಾಗದಂತೆ ತಡೆಯಬೇಕು” ಎನ್ನುವ ಹೇಳಿಕೆಯನ್ನು ನೀಡಿದ್ದರು. ಇದರ ಅರ್ಥ ಏನು? ಸನಾತನ ಧರ್ಮ ಈ ದೇಶದಲ್ಲಿ ಇರಬಾರದು. ಖರ್ಗೆಯ ಮಾತುಗಳಲ್ಲಿ ಸ್ಪಷ್ಟತೆ ಇತ್ತು. ಜನರಿಗೆ ಆವತ್ತೆ ಕಾಂಗ್ರೆಸ್ ಮಾನಸಿಕತೆ ತಿಳಿದುಹೋಗಿತ್ತು.
ಮೂರನೇ ಉದಾಹರಣೆಯನ್ನು ತೆಗೆದುಕೊಳ್ಳೋಣ. “ದೇವಸ್ಥಾನಗಳ ಮುಂದೆ ನಿಮ್ಮನ್ನು ನೇತಾಡಿಸಿ ಬೆಂಕಿ ಕೊಟ್ಟು ಸುಡುತ್ತೇವೆ” ಈ ಅರ್ಥದ ಘೋಷಣೆಗಳನ್ನು ಕೂಗುತ್ತಾ ಕೇರಳದ ಬೀದಿಬೀದಿಗಳಲ್ಲಿ ಮುಸ್ಲಿಂ ಲೀಗ್ ಕಾರ್ಯಕರ್ತರು ಹಿಂದೂಗಳಲ್ಲಿ ಭಯದ ವಾತಾವರಣ ಸೃಷ್ಟಿಸುತ್ತಾ ಪಾದಯಾತ್ರೆ ಮಾಡಿದ್ದಾರೆ. ಈ ಘಟನೆಯ ಬಗ್ಗೆ ವಯನಾಡು ಸಂಸದ ರಾಹುಲ್ ಗಾಂಧಿಯವರ ಪ್ರತಿಕ್ರಿಯೆ ಕೇಳಿದಾಗ ಮುಸ್ಲಿಂ ಲೀಗ್ ಒಂದು ಜಾತ್ಯಾತೀತ ಪಕ್ಷವಾಗಿದೆ ಎನ್ನುವ ಅಸಂಬದ್ಧ ಹೇಳಿಕೆಯನ್ನು ನೀಡಿದ್ದಾರೆ. ಆಶ್ಚರ್ಯ ಎಂದರೆ ಸನಾತನ ಧರ್ಮ ವಿರೋಧಿ ಮನಸ್ಥಿತಿಯ ಮುಸ್ಲಿಂ ಲೀಗ್ ವಿಪಕ್ಷಗಳ ಮೈತ್ರಿಕೂಟದ ಅಂಗವಾಗಿದೆ.

ಗಣಪತಿ ಮಿಥ್ಯೆ ಎಂದಿರುವವರು!

ನಾಲ್ಕನೇ ಉದಾಹರಣೆಯನ್ನು ತೆಗೆದುಕೊಳ್ಳೋಣ. ಡಿಎಂಕೆಯ ಉದಯನಿಧಿ ಸ್ಟಾಲಿನ್ ಮತ್ತು ಎಂ.ಕೆ.ರಾಜಾ ಅವರು ಸನಾತನ ಧರ್ಮದ ವಿರೋಧಿ ಹೇಳಿಕೆಯನ್ನು ಈಗ ನೀಡಿರಬಹುದು. ಆದರೆ ಅವರ ಪಕ್ಷದ ಸಚಿವರೊಬ್ಬರು ಒಂದು ವರ್ಷದ ಹಿಂದೆ ಮಾಧ್ಯಮಕ್ಕೆ ಕೊಟ್ಟ ಸಂದರ್ಶನದಲ್ಲಿ ಅವರ ಪಕ್ಷದ ಮುಖ್ಯ ಗುರಿ ಹಿಂದೂ ಧರ್ಮದ ನಾಶ ಎಂದು ಹೇಳಿದ್ದರು. ಆ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವಿಕ್ರಮ್ ಗೌಡ್ ಎನ್ನುವವರು ತಮ್ಮ ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ.
ಐದನೇ ಉದಾಹರಣೆಯನ್ನು ತೆಗೆದುಕೊಳ್ಳೋಣ. ಕೇರಳದ ಸಿಪಿಐ (ಎಂ) ರಾಜ್ಯ ಕಾರ್ಯದರ್ಶಿ ಎಂ ವಿ ಗೋವಿಂದನ್ ” ಗಣಪತಿ ದೇವರು ಎನ್ನುವುದು ಮಿಥ್ಯೆ ” ಎಂದು ಹೇಳಿದರು. ಆಗ ಎಲ್ಲಾ ಮತಧರ್ಮಗಳು ಕೂಡ ಹಾಗೆನಾ ಎಂದು ಕೇಳಿದ್ದಕ್ಕೆ ಎಲ್ಲಾ ಮತಧರ್ಮಗಳಲ್ಲಿ ಹಾಗಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ. ಇವರ ಉದ್ದೇಶ ಸನಾತನ ಧರ್ಮವನ್ನು ಅವಹೇಳನಕಾರಿಯಾಗಿಸುವುದು ಮಾತ್ರ ಎನ್ನುವುದು ಸ್ಪಷ್ಟವಾಯಿತಲ್ಲ.
ಇನ್ನು ಆರನೇ ಉದಾಹರಣೆಯನ್ನು ತೆಗೆದುಕೊಳ್ಳೋಣ. ಇತ್ತೀಚೆಗಷ್ಟೇ ವಿಪಕ್ಷ ಮೈತ್ರಿಕೂಟದ ಸಭೆ ಮುಂಬೈಯಲ್ಲಿ ನಡೆದಾಗ ಸಭೆಯಲ್ಲಿ ಭಾಗವಹಿಸಲು ಪಶ್ಚಿಮ ಬಂಗಾಲ ಸಿಎಂ, ಟಿಎಂಸಿ ಅಧಿನಾಯಕಿ ಮಮತಾ ಬ್ಯಾನರ್ಜಿ ಮುಂಬೈಯ ಹೋಟೇಲಿಗೆ ಆಗಮಿಸಿದಾಗ ಸ್ವಾಗತಕಾರಿಣಿಯೊಬ್ಬರು ದೀಪ ಬೆಳಗಿದ ಹಣತೆಯನ್ನು ಹಿಡಿದು ಮಮತಾ ಹಣೆಗೆ ಕುಂಕುಮ ಹಚ್ಚಲು ಮುಂದಾದಾಗ ಅದನ್ನು ಮಮತಾ ನಿರಾಕರಿಸಿದ್ದರು. ಸನಾತನ ಧರ್ಮದ ಬಗ್ಗೆ, ಆಚಾರ, ವಿಚಾರದ ಬಗ್ಗೆ ಅವರಲ್ಲಿರುವ ಅಭಿಪ್ರಾಯ ಅದರಿಂದಲೇ ಗೊತ್ತಾಗುತ್ತದೆ.
ಇನ್ನು ಏಳನೇ ಉದಾಹರಣೆಯನ್ನು ತೆಗೆದುಕೊಳ್ಳೋಣ. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಸನಾತನ ಧರ್ಮದ ವಿರುದ್ಧದ ವ್ಯಂಗ್ಯದ ಪೋಸ್ಟರ್ ಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲು ಹಿಂಜರಿಯುವುದಿಲ್ಲ. ಹಿಂದೂ ಧರ್ಮದ ಸ್ವಸ್ತಿಕ್ ಚಿನ್ನೆಯನ್ನು ಅನ್ನು ಅಟ್ಟಾಟಿಸಿಕೊಂಡು ಹೋಗುತ್ತಿರುವ ಉಗ್ರಗಾಮಿಯ ಪೋಸ್ಟರ್, ಹನುಮಂತ ದೇವರು ಎಲ್ಲಾ ಕಡೆ ಬೆಂಕಿ ಕೊಡುವವರು ಎನ್ನುವ ಅರ್ಥದ ಪೋಸ್ಟರ್ ಗಳನ್ನು ಅವರ ವಾಲ್ ನಲ್ಲಿ ಇದ್ದದ್ದನ್ನು ವಿಕ್ರಮ್ ಗೌಡರು ಸ್ಕ್ರೀನ್ ಶಾಟ್ ತೆಗೆದು ತಮ್ಮ ಎಕ್ಸ್ ನಲ್ಲಿ ಹಾಕಿಕೊಂಡಿದ್ದಾರೆ.

ಸನಾತನಿಗಳು ಅನಕ್ಷರಸ್ಥರು ಮತ್ತು ಮೂರ್ಖರಂತೆ!

ಇನ್ನು ಎಂಟನೇ ಉದಾಹರಣೆಯನ್ನು ತೆಗೆದುಕೊಳ್ಳೊಣ. ಕರ್ನಾಟಕದ ಸಚಿವ ಪ್ರಿಯಾಂಕ್ ಖರ್ಗೆ ” ಹಿಂದೂ ಧರ್ಮ ಮಾನವೀಯ ಮೌಲ್ಯಗಳನ್ನು ಗೌರವಿಸುವುದಿಲ್ಲ. ಅದು ಒಂದು ರೀತಿಯಲ್ಲಿ ಕಾಯಿಲೆ” ಎನ್ನುವ ಅರ್ಥದ ಹೇಳಿಕೆಯನ್ನು ನೀಡಿದ್ದಾರೆ. ರಾಜ್ಯದಲ್ಲಿ ಪ್ರಭಾವಿ ಸಚಿವರಾಗಿರುವ, ಎಐಸಿಸಿ ಅಧ್ಯಕ್ಷರ ಮಗ, ಕಾಂಗ್ರೆಸ್ಸಿನ ನಾಯಕನ ಹಿಂದೂ ವಿರೋಧಿ ಮನಸ್ಥಿತಿಯನ್ನು ನಾವು ಅರ್ಥ ಮಾಡಿಕೊಳ್ಳಬಹುದು.
ಇನ್ನು ಒಂಭತ್ತನೇ ಉದಾಹರಣೆಯನ್ನು ತೆಗೆದುಕೊಳ್ಳೋಣ. ಸಂಸದ ತಿರುಮಾಲ್ಲಾವನ್ ಎಂಬುವವರು ವೇದಿಕೆಯಲ್ಲಿ ಭಾಷಣ ಮಾಡುತ್ತಾ ” ಅಯ್ಯಪ್ಪ ಸ್ವಾಮಿ ಸಲಿಂಗಿಗಳ ಮದುವೆಯಿಂದ ಹುಟ್ಟಿದ ಶಿಶು. ಹಿಂದೂ ದೇವಾಲಯಗಳು ಅಶ್ಲೀಲ ಕಟ್ಟಡಗಳು. ಮಸೀದಿ ಹಾಗೂ ಚರ್ಚುಗಳು ಮಾತ್ರ ಉತ್ತಮ ನಿರ್ಮಾಣಗಳು” ಎಂದು ಟೀಕಿಸಿದ್ದಾರೆ. ಇವರು ಕೂಡ ವಿಪಕ್ಷ ಮೈತ್ರಿಕೂಟದ ಭಾಗ. ಬಹುತೇಕ ಮೈತ್ರಿಕೂಟದ ಸದಸ್ಯರ ಮನಸ್ಥಿತಿ ಇಂತವರಿಂದ ತುಂಬಿದೆ.
ಇನ್ನು ಹತ್ತನೆ ಉದಾಹರಣೆಯನ್ನು ತೆಗೆದುಕೊಳ್ಳೋಣ. ಅನಕ್ಷರಸ್ಥರು ಮತ್ತು ಮೂರ್ಖರು ಮಾತ್ರ ಸನಾತನ ಧರ್ಮವನ್ನು ಅನುಸರಿಸುತ್ತಾರೆ. ಆದ್ದರಿಂದ ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಸನಾತನಿಗಳ ಸಂಖ್ಯೆ ಹೆಚ್ಚಿದೆ ಎಂದು ಹೇಳಿದ್ದು ಡಿಎಂಕೆ ವಕ್ತಾರರು. ಅದು ಕೂಡ ಸಾಮಾಜಿಕ ಜಾಲತಾಣದಲ್ಲಿ ಅವರ ಸಂದರ್ಶನದ ಹೇಳಿಕೆ ಇದೆ.
ಈ ಹತ್ತು ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಕಾಂಗ್ರೆಸ್ಸಿನಿಂದ ಡಿಎಂಕೆ ತನಕ ಮತ್ತು ಟಿಎಂಸಿಯಿಂದ ಆಪ್ ಪಕ್ಷದ ತನಕ ಇವರ ಇಂತಹ ಹೇಳಿಕೆಗಳು, ವರ್ತನೆಗಳು ಇವರು ಎಷ್ಟರಮಟ್ಟಿಗೆ ಸನಾತನ ವಿರೋಧಿ ಎನ್ನುವುದನ್ನು ಸಾಬೀತುಪಡಿಸಿವೆ. ಒಂದು ವೇಳೆ ಇವರ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಏನಾಗಬಹುದು ಎನ್ನುವುದಕ್ಕೆ ಇವೆಲ್ಲವೂ ಜಸ್ಟ್ ಸ್ಯಾಂಪಲ್!!

0
Shares
  • Share On Facebook
  • Tweet It




Trending Now
ಯೋಗಿ ದೇಶದ ನಂ 1 ಸಿಎಂ - ಇಂಡಿಯಾ ಟುಡೇ ಸಮೀಕ್ಷೆ
Tulunadu News August 30, 2025
ಬೀದಿನಾಯಿಗಳಿಗೆ ಇನ್ನು ವಿಧಾನಸೌಧದಲ್ಲೇ ವಸತಿ ಕಲ್ಪಿಸಲು ಯೋಜನೆ!
Tulunadu News August 30, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಯೋಗಿ ದೇಶದ ನಂ 1 ಸಿಎಂ - ಇಂಡಿಯಾ ಟುಡೇ ಸಮೀಕ್ಷೆ
    • ಬೀದಿನಾಯಿಗಳಿಗೆ ಇನ್ನು ವಿಧಾನಸೌಧದಲ್ಲೇ ವಸತಿ ಕಲ್ಪಿಸಲು ಯೋಜನೆ!
    • ಹುಬ್ಬಳ್ಳಿಯ ಈದ್ಗಾ ಮೈದಾನವನ್ನು ರಾಣಿ ಚೆನ್ನಮ್ಮ ಮೈದಾನ ಎಂದು ಪಾಲಿಕೆ ಅಧಿಕೃತ ಘೋಷಣೆ!
    • ಅನುಶ್ರೀ - ರೋಷನ್ ದಾಂಪತ್ಯ ಜೀವನಕ್ಕೆ ನಿಮ್ಮದೂ ಶುಭ ಹಾರೈಕೆ ಇರಲಿ!
    • ಬಸ್ ನಲ್ಲಿ 200 ಕೆಜಿ ಸ್ಫೋಟಕ ಪತ್ತೆ! ತಪ್ಪಿದ ದೊಡ್ಡ ಸಂಚು..
    • ತಿಮರೋಡಿ ಮನೆಯಲ್ಲಿತ್ತು ಮಾಸ್ಕ್ ಮ್ಯಾನ್ ಮೊಬೈಲ್, ತಂಗುತ್ತಿದ್ದ ಕೋಣೆಯ ಸಿಸಿಟಿವಿ ಫೂಟೇಜ್ ವಶಕ್ಕೆ!
    • ಧರ್ಮ ಜಾಗೃತಿ ಯಾತ್ರೆ:  ದೇವರ ಅನುಗ್ರಹದಿಂದ ಸತ್ಯದ ಅನಾವರಣ - ಡಾ. ಹೆಗ್ಗಡೆ 
    • ರಾಜ್ಯ ಬೊಕ್ಕಸ ಖಾಲಿ, ಗ್ಯಾರಂಟಿಗೂ ದುಡ್ಡಿಲ್ಲ - ಸಿಎಂ ರೇವಂತ್ ರೆಡ್ಡಿ
    • ಬಾನು ಮುಷ್ತಾಕ್ ದಸರಾ ಉದ್ಘಾಟನೆ ಮಾಡುವ ಬಗ್ಗೆ ಪರ - ವಿರೋಧ ಚರ್ಚೆ!
    • ತಿಮರೋಡಿ ಮನೆ ಮೇಲೆ ಬೆಳ್ಳಂಬೆಳಗ್ಗೆ SIT ದಾಳಿ.. ಮಾಸ್ಕ್ ಮ್ಯಾನ್ ಚಿನ್ನಯ್ಯಗೆ ಆಶ್ರಯ ನೀಡಿದ ಆರೋಪ!
  • Popular Posts

    • 1
      ಯೋಗಿ ದೇಶದ ನಂ 1 ಸಿಎಂ - ಇಂಡಿಯಾ ಟುಡೇ ಸಮೀಕ್ಷೆ
    • 2
      ಬೀದಿನಾಯಿಗಳಿಗೆ ಇನ್ನು ವಿಧಾನಸೌಧದಲ್ಲೇ ವಸತಿ ಕಲ್ಪಿಸಲು ಯೋಜನೆ!
    • 3
      ಹುಬ್ಬಳ್ಳಿಯ ಈದ್ಗಾ ಮೈದಾನವನ್ನು ರಾಣಿ ಚೆನ್ನಮ್ಮ ಮೈದಾನ ಎಂದು ಪಾಲಿಕೆ ಅಧಿಕೃತ ಘೋಷಣೆ!
    • 4
      ಅನುಶ್ರೀ - ರೋಷನ್ ದಾಂಪತ್ಯ ಜೀವನಕ್ಕೆ ನಿಮ್ಮದೂ ಶುಭ ಹಾರೈಕೆ ಇರಲಿ!
    • 5
      ಬಸ್ ನಲ್ಲಿ 200 ಕೆಜಿ ಸ್ಫೋಟಕ ಪತ್ತೆ! ತಪ್ಪಿದ ದೊಡ್ಡ ಸಂಚು..

  • Privacy Policy
  • Contact
© Tulunadu Infomedia.

Press enter/return to begin your search