ಪಾಕಿಸ್ತಾನಿ ಪತಿಯನ್ನು ಬಿಟ್ಟು ಅಂಜು ಸ್ವದೇಶಕ್ಕೆ?
ಪಾಕಿಸ್ತಾನಕ್ಕೆ ತೆರಳಿದ ವಿವಾಹಿತ ಯುವತಿ ಅಂಜು ಸ್ವದೇಶಕ್ಕೆ ಮರಳಿದ್ದೇಕೆ?
ರಾಜಸ್ಥಾನದ ಅಲ್ವಾರ್ ಜಿಲ್ಲೆಯ ಮಹಿಳೆ ಅಂಜು ಫೇಸ್ ಬುಕ್ ನಲ್ಲಿ ಪರಿಚಿತನಾಗಿದ್ದ ನಸ್ರುಲ್ಲಾನನ್ನು ಮದುವೆಯಾಗಲು ಭಾರತ ಗಡಿ ದಾಟಿ ಪಾಕಿಸ್ತಾನಕ್ಕೆ ತೆರಳಿದ್ದಳು. ಭಾರತದಲ್ಲಿ ಅರವಿಂದ್ ಎನ್ನುವವರನ್ನು ಮದುವೆಯಾಗಿ ಇಬ್ಬರು ಮಕ್ಕಳ ತಾಯಿಯಾಗಿದ್ದ ಅಂಜು ಫೇಸ್ ಬುಕ್ ಮೂಲಕ ಪಾಕಿಸ್ತಾನದ ಪ್ರಜೆಯ ಪ್ರೀತಿಯ ಬಲೆಗೆ ಬಿದ್ದಿದ್ದಳು. ಇಲ್ಲಿ ಗಂಡ, ಮಕ್ಕಳನ್ನು ಬಿಟ್ಟು ಪಾಕಿಸ್ತಾನಕ್ಕೆ ತೆರಳಿ ಮತಾಂತರಗೊಂಡು ಫಾತಿಮಾ ಆಗಿ ನಸ್ರುಲ್ಲಾಳನ್ನು ಮದುವೆಯಾಗಿದ್ದಳು. ಐದು ತಿಂಗಳ ಹಿಂದೆ ನಡೆದ ಈ ಘಟನೆ ಮಾಧ್ಯಮಗಳ ಮೂಲಕ ಸಾಕಷ್ಟು ಚರ್ಚೆಗೆ ಒಳಗಾಗಿತ್ತು.
ಈಗ ಅಂಜು ಯಾನೆ ಫಾತಿಮಾ ವಾಘಾ ಗಡಿಯ ಮೂಲಕ ಭಾರತ ಪ್ರವೇಶಿಸಿ ಅಲ್ಲಿಂದ ಗುರು ರಾಮದಾಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಿ ಅಲ್ಲಿಂದ ವಿಮಾನ ಮೂಲಕ ದೆಹಲಿಗೆ ತೆರಳಿದ್ದಾಳೆ. ಈಗ ಉದ್ಭವಿಸಿರುವ ಪ್ರಶ್ನೆ ಏನೆಂದರೆ ಆಕೆ ಪಾಕಿ ಗಂಡನನ್ನು ಬಿಟ್ಟು ಮತ್ತೆ ಭಾರತದಲ್ಲಿರುವ ಗಂಡನ ಆಶ್ರಯ ಕೋರಿ ಬಂದಿದ್ದಾಳಾ ಅಥವಾ ಮಕ್ಕಳನ್ನು ನೋಡಿ ಮಾತನಾಡಿಸಲು ಬಂದಿದ್ದಾಳಾ ಎನ್ನುವುದೇ ಮುಖ್ಯ ಸಂಗತಿಯಾಗಿದೆ. ಒಂದು ವೇಳೆ ಆಕೆ ಶಾಶ್ವತವಾಗಿ ಪಾಕಿಸ್ತಾನಿ ಪತಿಯನ್ನು ಬಿಟ್ಟು ಬಂದಿದ್ದರೆ ಇದು ಮತ್ತೊಂದು ಚರ್ಚೆಗೆ ನಾಂದಿ ಹಾಡಲಿದೆ.
Leave A Reply