ನ್ಯಾಯಾಧೀಶರಿಂದಲೇ ನ್ಯಾಯಾಧೀಶೆಗೆ ಲೈಂಗಿಕ ಕಿರುಕುಳ!

ಜನರಿಗೆ ನ್ಯಾಯ ಕೊಡಿಸುವ ನ್ಯಾಯದೇಗುಲಗಳ ಒಳಗಿನ ಸತ್ಯಗಳು ಕೂಡ ಭಯಾನಕವಾಗಿರುತ್ತವೆ ಎನ್ನುವುದಕ್ಕೆ ಸಾಕ್ಷಿಯೊಂದು ಸಿಕ್ಕಿದೆ. ನ್ಯಾಯಾಧೀಶೆಯೊಬ್ಬರು ತಮಗೆ ಸಾಯಲು ಅವಕಾಶ ನೀಡಬೇಕೆಂದು ಗೋಗರೆದು ಪತ್ರ ಬರೆದಿದ್ದಾರೆ. ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಪತ್ರ ಬರೆದಿರುವ ಅವರು ” ಜಿಲ್ಲಾ ನ್ಯಾಯಾಧೀಶರು ಹಾಗೂ ಸಹಚರರಿಂದ ತಾನು ಲೈಂಗಿಕ ಕಿರುಕುಳಕ್ಕೊಳಗಾಗಿದ್ದೇನೆ. ಜೀವನ ಸಾಕಾಗಿದೆ, ಆತ್ಮಹತ್ಯೆಗೆ ಅನುಮತಿ ನೀಡಿ” ಎಂದು ಬರೆದಿದ್ದಾರೆ.
ಈ ಮಹಿಳಾ ನ್ಯಾಯಮೂರ್ತಿಯವರು ಉತ್ತರಪ್ರದೇಶದ ಬಾರಾಬಂಕಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ತಮಗೆ ರಾತ್ರಿ ಮನೆಗೆ ಕರೆಯುತ್ತಾರೆ. ಇದರಿಂದ ಸಾಕಷ್ಟು ನೊಂದಿದ್ದೇನೆ. ತೀರಾ ಹಿಂಸೆಯಾಗುತ್ತಿದೆ. ಆತ್ಮಹತ್ಯೆಯೊಂದೇ ದಾರಿ ಎಂದು ಅನಿಸುತ್ತದೆ ಎಂದು ಬರೆದಿದ್ದಾರೆ. ಪತ್ರ ಸ್ವೀಕರಿಸಿದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಅವರು ಈ ಕುರಿತು ವರದಿ ನೀಡುವಂತೆ ಸೂಚಿಸಿದ್ದಾರೆ. ಅವರ ಸೂಚನೆಯ ಮೇರೆಗೆ ಸುಪ್ರೀಂಕೋರ್ಟ್ ಸೆಕ್ರೆಟರಿ ಜನರಲ್ ಅತುಲ್ ಎಂ ಕುರ್ಹೇಕರ್ ಅವರು ಅಲಹಾಬಾದ್ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಅವರಿಗೆ ಲಿಖಿತವಾಗಿ ಮಹಿಳಾ ನ್ಯಾಯಾಧೀಶರ ಎಲ್ಲಾ ದೂರುಗಳ ಸ್ಥಿತಿಯ ಕುರಿತು ವರದಿ ನೀಡುವಂತೆ ಹೇಳಿದ್ದಾರೆ.
Leave A Reply