ಭ್ರೂಣ ಬದಲಿಸುವ ಮುಸ್ಲಿಂ ನಕಲಿ ಬಾಬಾನ ಬಂಧನ
ಹೈದರಾಬಾದ್: ಅತ್ಯಾಚಾರ ಪ್ರಕರಣದಲ್ಲಿ ಸಿಲುಕಿ ಹರಿಯಾಣದ ಗುರ್ಮೀತ್ ರಾಮ್ ರಹೀಮ್ ಸಿಂಗ್ ಜೈಲುಪಾಲಾದ ಸುದ್ದಿ ಮರೆಮಾಚುವ ಮುನ್ನವೇ ಹೈದರಾಬಾದ್‌ನಲ್ಲಿ ಹೊಟ್ಟೆಯಲ್ಲಿರುವ ಮಗು ಹೆಣ್ಣಾಾಗಿದ್ದರೆ ಅದನ್ನು ಗಂಡಾಗಿ ಪರಿವರ್ತಿಸುತ್ತೇನೆ ಎಂದು ಜನರಿಗೆ ಮೋಸ ಮಾಡುತ್ತಿದ್ದ ಮುಸ್ಲಿಂ ನಕಲಿ ಬಾಬಾನೊಬ್ಬನನ್ನು ಹೈದರಾಬಾದ್‌ನಲ್ಲಿ ಬಂಧಿಸಲಾಗಿದೆ.
ಅಬ್ದುಲ್ ರಹೀಮ್ ಎಂಬಾತ ಗರ್ಭಿಣಿಯರ ಬಳಿ ತೆರಳಿ, ನಿಮ್ಮ ಹೊಟ್ಟೆಯಲ್ಲಿ ಹೆಣ್ಣು ಭ್ರೂಣವಿದ್ದು, ಅದನ್ನು ಗಂಡಾಗಿ ಪರಿವರ್ತಿಸುತ್ತೇನೆ. ಡಿಎನ್‌ಎ ಬದಲಾವಣೆ ಮಾಡಿದರೆ ಇದು ಸಾಧ್ಯ ಎಂದು ನಂಬಿಸುತ್ತಿದ್ದ ಎಂದು ತಿಳಿದುಬಂದಿದ್ದು, ಚಾರ್‌ಮಿನಾರ್ ಪೊಲೀಸರು ಈತನನ್ನು ಬಂಧಿಸಿದ್ದಾರೆ.
ಅಲ್ಲದೆ ಈತನ ಕೆಲಸಕ್ಕೆ ಸಾಥ್ ನೀಡುತ್ತಿದ್ದ ಇಬ್ಬರು ಮಹಿಳೆಯರನ್ನು ಸಹ ಪೊಲೀಸರು ಬಂಧಿಸಿದ್ದಾರೆ.
ಹೀಗೆ ಮಹಿಳೆಯ ಹೊಟ್ಟೆಯಲ್ಲಿದ್ದ ಹೆಣ್ಣು ಭ್ರೂಣವನ್ನು ಗಂಡಾಗಿ ಪರಿವರ್ತಿಸುತ್ತೇನೆ ಎಂದು ಬಾಬಾ 20 ಸಾವಿರ ರು. ಪಡೆದಿದ್ದ. ಅಲ್ಲದೆ ಅವರ ಗುಪ್ತಾಂಗ ಮುಟ್ಟಿ ಅದೇನೋ ನಾಟಕ ಆಡಿದ್ದ. ಅನುಮಾನ ಬಂದ ಮಹಿಳೆ ಈತನ ವಿರುದ್ಧ ದೂರು ನೀಡಿದ್ದರು. ದೂರಿನ ಅನ್ವಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
Leave A Reply