UK ಸಂಸತ್ತಿನಲ್ಲಿ ಭಗವದ್ಗೀತೆಯ ಮೇಲೆ ಪ್ರಮಾಣ ವಚನ!
ಭಗವತ್ ಗೀತೆಯ ಮೇಲೆ ಪ್ರಮಾಣ ವಚನ ಸ್ವೀಕರಿಸಿರುವ ಘಟನೆಯೊಂದು ನಡೆದಿದ್ದು ಅದು ಯುನೈಟೆಡ್ ಕಿಂಗ್ ಡಂ ಸಂಸತ್ತಿನಲ್ಲಿ ಎನ್ನುವ ವಿಷಯ ನಿಮಗೆ ಗೊತ್ತಾದರೆ ನಿಜಕ್ಕೂ ಆಶ್ಚರ್ಯವಾಗಬಹುದು. ಹೌದು, ಹಾಗೆ ಆಗಿದೆ. ಶಿವಾನಿ ರಾಜಾ ಎನ್ನುವ ಮಹಿಳೆ ಸಂಸದೆ ಭಗವತ್ ಗೀತೆಯ ಮೇಲೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ. 29 ವರ್ಷದ ಶಿವಾನಿ ರಾಜಾ ಅವರು ಲೇಸೆಸ್ಟರ್ ಪೂರ್ವ ಕ್ಷೇತ್ರದಿಂದ ಗೆದ್ದಿದ್ದಾರೆ. ಇನ್ನು ವಿಶೇಷ ಎಂದರೆ ಅವರ ಕನಸರವೇಟಿವ್ ಪಕ್ಷ ಕಳೆದ 37 ವರ್ಷಗಳಲ್ಲಿ ಮೊದಲ ಬಾರಿ ಇಲ್ಲಿ ಗೆಲ್ಲುವ ಮೂಲಕ ಬಲಾಢ್ಯ ಲೇಬರ್ ಪಾರ್ಟಿಯ ಭದ್ರಕೋಟೆಯನ್ನು ಚೂರು ಚೂರು ಮಾಡಿದೆ.
ಲೇಸೆಸ್ಟರ್ ಪೂರ್ವವನ್ನು ಪ್ರತಿನಿಧಿಸುತ್ತಿರುವುದು ನಿಜಕ್ಕೂ ಹೆಮ್ಮೆ ತಂದಿದೆ, ಆದ್ದರಿಂದ ಭಗವತ್ ಗೀತೆಯ ಪ್ರಮಾಣವಚನ ಸ್ವೀಕರಿಸುತ್ತೇನೆ ಎಂದು ಶಿವಾನಿ ರಾಜಾ ಹೇಳಿದ್ದಾರೆ.
ಲೇಬರ್ ಪಕ್ಷ ಇಲ್ಲಿಯ ತನಕ ಸೋಲದೇ ಇದ್ದ ಬಲಿಷ್ಟವಾಗಿ ಬೇರೂರಿದ್ದ ಲೇಸೆಸ್ಟರ್ ಪೂರ್ವ ಕ್ಷೇತ್ರವನ್ನು ಗೆದ್ದಿರುವ ಶಿವಾನಿ ರಾಜಾ ಅವರಿಗೆ ಸಿಕ್ಕಿರುವ ಒಟ್ಟು ಮತಗಳು 14,526. ಅವರ ಸಮೀಪದ ಪ್ರತಿಸ್ಪರ್ಧಿ ಲೇಬರ್ ಪಾರ್ಟಿಯ ರಾಜೇಶ್ ಅಗರ್ವಾಲ್ ಅವರಿಗೆ 10,100 ಮತಗಳು ಸಿಕ್ಕಿವೆ. ಇನ್ನು ಲಿಬರಲ್ ಡೆಮಾಕ್ರೆಟ್ ಪಕ್ಷದ ಝಾಪರ್ ಹಕ್ ಅವರಿಗೆ 6329 ಮತಗಳು ಸಿಕ್ಕಿದ್ದು ಅವರು ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ.
ಲೇಸಿಸ್ಟರ್ ನಗರದ ಇತಿಹಾಸದಲ್ಲಿ ಶಿವಾನಿ ರಾಜಾ ಅವರ ವಿಜಯ ಬಹುದೊಡ್ಡ ಪರಿಣಾಮವನ್ನು ಬೀರಿದ್ದು, ಈ ಭಾಗದಲ್ಲಿ ಬಹಳ ಸಮಯದಿಂದ ಸನಾತನಿಗಳ ಮತ್ತು ಮುಸಲಿಯರ ನಡುವಿನ ಸಂಘರ್ಷಕ್ಕೆ ಈ ಜಾಗ ಸಾಕ್ಷಿಯಾಗಿತ್ತು.
2022 ರಲ್ಲಿ ಎರಡೂ ಸಮುದಾಯದವರ ನಡುವಿನ ತಿಕ್ಕಾಟಕ್ಕೆ ಯುನೈಟೆಡ್ ಕಿಂಗ್ ಡಂ ವೇದಿಕೆಯಾಗಿತ್ತು. ರಾಣಿಯ ಪಾರ್ಥಿವ ಶರೀರದ ಮೆರವಣಿಗೆಯ ಸಮಯದಲ್ಲಿ ಜೈ ಶ್ರೀ ರಾಮ್ ಎನ್ನುವ ಘೋಷ ವಾಕ್ಯ ಮೊಳಗುತ್ತಿದ್ದಂತೆ ಎರಡೂ ಸಮುದಾಯದವರ ನಡುವೆ ವ್ಯಾಪಕ ಗಲಾಟೆ, ದೊಂಬಿ ನಡೆದಿದ್ದವು. ಇದೆಲ್ಲದರ ನಂತರ ಈಗ ಅದೇ ಲೇಸಿಸ್ಟರ್ ಪೂರ್ವದಲ್ಲಿ ಗುಜರಾತಿ ಮೂಲದ ಹಿಂದೂ ಉದ್ಯಮಿ ಶಿವಾನಿ ರಾಜಾ ಗೆದ್ದು ಚರಿತ್ರೆ ನಿರ್ಮಿಸಿದ್ದಾರೆ.
Leave A Reply