ಐಫೋನ್ ಕೊಡಿಸಲಿಲ್ಲ ಎಂದು ಹುಡುಗ ಆತ್ಮಹತ್ಯೆ!
ಆತನಿಗೆ ಇನ್ನು 18 ವಯಸ್ಸು. ನಡತೆ ಸರಿಯಿಲ್ಲ ಎಂದು ಶಾಲೆಯಿಂದ ಹೊರಗೆ ಹಾಕಲಾಗಿತ್ತು. ಆತ ಪುಂಡರ ಸಹವಾಸಕ್ಕೆ ಬಿದ್ದಿದ್ದ. ಡ್ರಗ್ಸ್ ಚಟವೂ ಹತ್ತಿಕೊಂಡಿತ್ತು. ಹೀಗಿರುವಾಗಲೇ ಮಾರುಕಟ್ಟೆಗೆ ಬಿಡುಗಡೆಯಾಗಿರುವ ಹೊಸ ಐಫೋನ್ ಇವನ ಕಣ್ಣಿಗೆ ಬಿದ್ದಿದೆ. ಅದನ್ನು ಖರೀದಿಸಿಕೊಡುವಂತೆ ತಂದೆಗೆ ದಂಬಾಲು ಬಿದ್ದಿದ್ದಾನೆ. ಆ ಮೊಬೈಲ್ ಫೋನ್ ಬೆಲೆ ನೋಡಿ ತಂದೆ ಬೆಚ್ಚಿಬಿದ್ದಿದ್ದಾರೆ. ಏಕೆಂದರೆ ಫೋನ್ ಬೆಲೆ 1.5 ಲಕ್ಷ. ಇಷ್ಟು ದುಬಾರಿ ಫೋನ್ ಇಟ್ಟುಕೊಂಡು ಮಗ ಮಾಡುವಂತದ್ದು ಏನೂ ಇಲ್ಲ ಎಂದು ಅಂದುಕೊಂಡ ತಂದೆ ಫೋನ್ ತಾನೆ ಬೇಕು. ಯಾವುದಾದರೂ ಕೊಡಿಸ್ತೀನಿ ಎಂದು ಬೇರೆ ಕೈಗೆಟಕುವ ಬೆಲೆಯ ವಿವೋ ಮೊಬೈಲ್ ಫೋನ್ ಖರೀದಿಸಿ ಮಗನಿಗೆ ಉಡುಗೊರೆ ನೀಡಿದ್ದಾರೆ. ಆದರೆ ಬೇರೆ ಫೋನ್ ನೋಡಿ ಹುಡುಗ ಗಲಾಟೆ ಶುರು ಮಾಡಿದ್ದಾನೆ. ಐಫೋನ್ ತಂದುಕೊಡಲು ಹೇಳಿದ್ರೆ ಇದು ಕೊಡಿಸುತ್ತೀರಾ ಎಂದವನೇ ಕೋಣೆಗೆ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ನವಿ ಮುಂಬೈಯಲ್ಲಿ ನಡೆದಿರುವ ಈ ಘಟನೆ ಇಂದಿನ ಕಾಲದ ಮಕ್ಕಳ ಮನಸ್ಥಿತಿಯನ್ನು ತೋರಿಸುತ್ತದೆ. ಸಿಮೆಂಟ್ ವ್ಯಾಪಾರವನ್ನು ಮಾಡುತ್ತಿರುವ ತಂದೆಯ ಆರ್ಥಿಕ ಸಾಮರ್ತ್ಯವನ್ನು ನೋಡದೇ ಮಕ್ಕಳು ಹೀಗೆ ಹಟ ಹಿಡಿಯುವುದು ಮತ್ತು ಅದು ಸಿಗಲಿಲ್ಲ ಎನ್ನುವ ಕಾರಣಕ್ಕೆ ಸೂಸೈಡ್ ಮಾಡುವುದು ಪ್ರಜ್ಞಾವಂತ ಸಮಾಜ ಎತ್ತ ಸಾಗುತ್ತಿದೆ ಎಂದು ಯೋಚಿಸಬೇಕಾದ ಸಂಗತಿ. ಸದ್ಯ ಕಾಮೋಥೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
Leave A Reply