ಕೊಲ್ಕೊತ್ತಾ “ಹತ್ಯಾಚಾರ” ಆರೋಪಿ ಬಳಸುತ್ತಿದ್ದ ಬೈಕ್ ಪೊಲೀಸ್ ಕಮೀಷನರದ್ದು!
ಕೊಲ್ಕೊತ್ತಾದಲ್ಲಿ ಟ್ರೇನಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಪ್ರಧಾನ ಆರೋಪಿ ಸಂಜಯ್ ರಾಯ್ ನಿತ್ಯ ಬಳಸುತ್ತಿದ್ದ ಬೈಕ್ ಯಾರದ್ದು ಗೊತ್ತೆ? ಕೊಲ್ಕೊತ್ತಾ ಪೊಲೀಸ್ ಕಮೀಷನರ್ ಅವರದ್ದು. ಆರೋಪಿ ಸಂಜಯ್ ರಾವ್ ಇದೇ ಬೈಕ್ ಅನ್ನು ಚಲಾಯಿಸಿ ಉತ್ತರ ಕೊಲ್ಕೊತ್ತಾದಲ್ಲಿರುವ ರೆಡ್ ಲೈಟ್ ಏರಿಯಾಗೆ ಈ ಪ್ರಕರಣ ನಡೆದ ದಿನ ಹೋಗಿ ಬಂದಿದ್ದ ಎನ್ನುವ ಮಾಹಿತಿ ತನಿಖಾಧಿಕಾರಿಗಳಿಗೆ ಸಿಕ್ಕಿದೆ. 2014 ರಲ್ಲಿ ಆ ಬೈಕ್ ನೋಂದಾವಣೆಯಾಗಿದೆ. ಆ ಬೈಕಿನ ಮೇಲೆ ‘ಪೊಲೀಸ್’ ಎಂದು ಬರೆಯಲಾಗಿದೆ.
ಸಂಜಯ್ ರಾಯ್ ಕೊಲ್ಕೊತ್ತಾ ಪೊಲೀಸರ ಬಳಿ ನಾಗರಿಕ ಸೇವೆಯಲ್ಲಿ ಇದ್ದಾನೆ. ಅವನ ಬಳಿ ಪೊಲೀಸ್ ಕಮೀಷನರ್ ಅವರ ಬೈಕ್ ಹೇಗೆ ಬಂತು ಎನ್ನುವ ಪ್ರಶ್ನೆಗೆ ಉತ್ತರಿಸಿದ ಪೊಲೀಸ್ ಅಧಿಕಾರಿಗಳು ” ಪೊಲೀಸ್ ಇಲಾಖೆಯಲ್ಲಿ ನೊಂದಾವಣೆಯಾಗಿರುವ ಎಲ್ಲಾ ವಾಹನಗಳು ಕಮೀಷನರ್ ಅವರ ಹುದ್ದೆಯ ಹೆಸರಿನಲ್ಲಿಯೇ ನೊಂದಾವಣೆಯಾಗಿ ನಂತರ ಅದನ್ನು ಯಾರು ಕರ್ತವ್ಯದಲ್ಲಿ ಬಳಸುತ್ತಾರೋ ಅವರಿಗೆ ನೀಡಲಾಗುತ್ತದೆ” ಎಂದು ತಿಳಿಸಿದ್ದಾರೆ. ಆದ್ದರಿಂದ ಪೊಲೀಸ್ ಇಲಾಖೆಯ ಬೈಕ್ ಆರೋಪಿಯ ಬಳಿಯಲ್ಲಿ ಇತ್ತು. ಇಲ್ಲಿ ಸಂಜಯ್ ರಾಯ್ ನಾಗರಿಕ ಪೊಲೀಸ್ ಆಗಿ ಕೆಲಸ ಮಾಡುವ ನೆಪದಲ್ಲಿ ಆ ಹುದ್ದೆಯನ್ನು ತನ್ನ ಕುಕೃತ್ಯಗಳಿಗೆ ಗುರಾಣಿಯಂತೆ ಬಳಸುತ್ತಿದ್ದ ಎಂದು ಹೇಳಲಾಗುತ್ತಿದೆ.
ಸಂಜಯ್ ರಾಯ್ ಈ ಬೈಕ್ ಅನ್ನು ತನ್ನ ವೈಯಕ್ತಿಕ ತೆವಳಿಗೆ ಬಳಸಿದ ಸಾಧ್ಯತೆ ಇದ್ದಂತೆ ಕಾಣುತ್ತದೆ. ಯಾಕೆಂದರೆ ಪೊಲೀಸ್ ಇಲಾಖೆಯ ವಾಹನವನ್ನು ಉಪಯೋಗಿಸುತ್ತಿದ್ದ ಎಂದರೆ ಅವನನ್ನು ಯಾರೂ ತಡೆಯುವಂತಿರಲಿಲ್ಲ. ಆದ್ದರಿಂದ ಅವನಿಗೆ ಒಂದು ರೀತಿಯಲ್ಲಿ ಏನೂ ಕೆಲಸ ಮಾಡಲು ಕೂಡ ಒಂದು ಪರ್ಮಿಟ್ ಸಿಕ್ಕಿದ್ದಂತೆ ಆಗುತ್ತಿತ್ತಾ ಎನ್ನುವುದನ್ನು ಸಿಬಿಐ ತನಿಖೆಯ ಮೂಲಕವೂ ಪತ್ತೆಹಚ್ಚಲಿದೆ.
Leave A Reply