• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಉಗ್ರರ ನಾಡಾಗಿದ್ದ ಕಾಶ್ಮೀರ, ಎನ್‌ಡಿಎ ಬಂದ ಬಳಿಕ ಅವರ ಸಂಹಾರ

TNN Correspondent Posted On September 3, 2017


  • Share On Facebook
  • Tweet It

ದೆಹಲಿ: ಶನಿವಾರವಷ್ಟೇ ಲಷ್ಕರೆ ತೊಯ್ಬಾ ಉಗ್ರರನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ. ಆ ಮೂಲಕ ಜಮ್ಮು-ಕಾಶ್ಮೀರ ಗಡಿಯಲ್ಲಿ ನಿರಂತರವಾಗಿ ಉಗ್ರರನ್ನು ಛೂ ಬಿಟ್ಟು ಉಪಟಳ ಮೆರೆಯುತ್ತಿದ್ದ ಪಾಕಿಸ್ತಾನ ಹಾಗೂ ಪಾಕಿಸ್ತಾನದ ಎಂಜಲು ಕಾಸಿಗಾಗಿ ದಾಳಿ ಮಾಡುತ್ತಿದ್ದ ಉಗ್ರರಿಗೆ ಭಾರತೀಯ ಸೇನೆ ದಿಟ್ಟ ಪಾಠ ಕಲಿಸಿದ್ದು, ಪ್ರಸಕ್ತ ವರ್ಷದ ಆರು ತಿಂಗಳಲ್ಲಿ ಅಂದರೆ ಜುಲೈ ವೇಳೆಗೆ 100 ಉಗ್ರರನ್ನು ಹೊಡೆದುರುಳಿಸಿದೆ.ಗೃಹ ಸಚಿವಾಲಯದ ಅಧಿಕಾರಿಯೊಬ್ಬರು ಈ ಕುರಿತು ಮಾಹಿತಿ ನೀಡಿದ್ದು, ಭಾರತೀಯ ಸೇನೆ, ಕೇಂದ್ರೀಯ ಪಡೆ, ರಾಜ್ಯ ಸರಕಾರ ಹಾಗೂ ಗುಪ್ತಚರ ಇಲಾಖೆಯ ಸಹಕಾರದೊಂದಿಗೆ ಉಗ್ರರ ವಿರುದ್ಧ ಕಾರ್ಯಾಚರಣೆ ಕೈಗೊಂಡು ಉಗ್ರರನ್ನು ಸದೆಬಡಿಯಲಾಗಿದೆ ಎಂದು ತಿಳಿಸಿದ್ದಾರೆ.ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸಲು ಸೇನೆಗೆ ಅಧಿಕ ಸ್ವಾತಂತ್ರ್ಯ ನೀಡಿರುವುದರಿಂದಲೇ ಇಷ್ಟು ಉಗ್ರರನ್ನು ಹತ್ಯೆ ಮಾಡಲು ಸಾಧ್ಯವಾಯಿತು. ಕಳೆದ ವರ್ಷ ಇದೇ ಅವಧಿಯಲ್ಲಿ 79 ಉಗ್ರರನ್ನು ಹೊಡೆದುರುಳಿಸಲಾಗಿತ್ತು ಎಂದು ಹೇಳಿದ್ದಾರೆ. ಉಗ್ರರ ಹತ್ಯೆಯಷ್ಟೇ ಅಲ್ಲ, ಉಗ್ರ ಸಂಘಟನೆ ಹಿಜ್ಬುಲ್ ಮುಜಾಹಿದ್ದೀನ್ ಮುಖ್ಯಸ್ಥ ಸಯ್ಯದ್ ಸಲಾಹುದ್ದೀನ್‌ನನ್ನು ಜಾಗತಿಕ ಉಗ್ರ ಎಂದು ಅಮೆರಿಕ ಘೋಷಿಸುವಂತೆ ಮಾಡುವಲ್ಲೂ ನಾವು ಸಫಲರಾಗಿದ್ದೇವೆ ಎಂದಿದ್ದಾರೆ.

ವರ್ಷ                         ಉಗ್ರರ ಹತ್ಯೆ ಸಂಖ್ಯೆ

2012 (ಯಪಿಎ )                   72

2013  (ಯುಪಿಎ)                 67

2014  (ಎನ್‌ಡಿಎ )                110

2015                                     108

2016                                      150

2017 (ಜುಲೈ ವರೆಗೆ)             100

* ಒಳನುಸುಳುವಿಕೆ ಪ್ರಮಾಣದಲ್ಲೂ ಕುಸಿತ

2016ರಲ್ಲಿ ಪಾಕ್ ಉಗ್ರರು ಸುಮಾರು 371 ಬಾರಿ ಅಕ್ರಮವಾಗಿ ಒಳನುಸುಳಿದ್ದರು.
2017ಪ್ರಸಕ್ತ ವರ್ಷದ ಜುಲೈವರೆಗೆ 124 ಬಾರಿ ಒಳನುಸುಳಲಾಗಿದೆ.

ಕಲ್ಲು ತೂರಾಟಗಾರರಿಗೂ ಬಿಸಿ

ಕಳೆದ ವರ್ಷ ಹಿಜ್ಬುಲ್ ಉಗ್ರ ಬುರ್ಹಾನ್ ವಾನಿಯ ಹತ್ಯೆ ಬಳಿಕ ಕಾಶ್ಮೀರದಲ್ಲಿ ಕಲ್ಲು ತೂರಾಟಗಾರರ ಉಪಟಳ ಜಾಸ್ತಿಯಾಗಿತ್ತು. ಆದರೆ ಈ ಬಾರಿ ಅದನ್ನು ಹತೋಟಿಗೆ ತರಲಾಗಿದ್ದು, ಕಲ್ಲು ತೂರಾಟಗಾರರಿಗೂ ಬಿಸಿ ಮುಟ್ಟಿಸಲಾಗಿದೆ. ಕಳೆದ ವರ್ಷ ಜುಲೈವರೆಗಿನ ಅಂಕಿ-ಅಂಶದ ಪ್ರಕಾರ 820 ಕಲ್ಲು ತೂರಾಟ ಪ್ರಕರಣ ದಾಖಲಾಗಿದ್ದವು. ಆದರೆ ಈ ಬಾರಿ ಆ ಪ್ರಕರಣಗಳು ಕೇವಲ 142ಕ್ಕೆ ಇಳಿದಿದೆ. ಉಗ್ರ ಸಂಬಂಧೀ ಚಟುವಟಿಕೆಗಳನ್ನೂ ತಹಬಂದಿಗೆ ತರಲಾಗಿದ್ದು 2016ರಲ್ಲಿ ಜುಲೈ ವೇಳೆಗೆ 168 ಉಗ್ರ ಸಂಬಂಧಿ ಚಟುವಟಿಕೆ ದಾಖಲಾಗಿದ್ದರೆ, ಪ್ರಸಕ್ತ ವರ್ಷದಲ್ಲಿ ಆ ಸಂಖ್ಯೆೆ 120ಕ್ಕೆ ಕುಸಿಯುತ್ತಿಿದೆ.

460

ಎನ್‌ಡಿಎ ಸರಕಾರಕ್ಕೆೆ ಅಸ್ತಿತ್ವಕ್ಕೆ ಬಂದ ಮೇಲೆ ಹತ್ಯೆೆ ಮಾಡಲಾಗಿರುವ ಉಗ್ರರ ಸಂಖ್ಯೆ.

ಪ್ರಸಕ್ತ ವರ್ಷ ಹತ್ಯೆಯಾದ ಪ್ರಮುಖ ಉಗ್ರರು

– ಸಬ್ಜಾರ್ ಅಹ್ಮದ್ ಭಟ್ (ಹಿಜ್ಬುಲ್ ಉಗ್ರ. ಹತ್ಯೆ- ಮೇ 27)
-ಬಷೀರ್ ಲಷ್ಕರಿ(ಲಷ್ಕರೆ ತಯ್ಯಬಾ ಉಗ್ರ. ಹತ್ಯೆ- ಜೂನ್ 1)

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Tulunadu News May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Tulunadu News May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search