ಅಧಿಕಾರ ಸ್ವೀಕರಿಸುವ ಮುನ್ನಾ ದಿನ ಯುವ ಪೊಲೀಸ್ ಅಧಿಕಾರಿ ವಿಧಿವಶ!
Posted On December 2, 2024

ಟ್ರೈನಿಂಗ್ ಮುಗಿಸಿ ಅಧಿಕಾರ ಸ್ವೀಕರಿಸಲು ಹೊರಟಿದ್ದ ಯುವ ಪೊಲೀಸ್ ಅಧಿಕಾರಿ ವಿಧಿಯಾಟಕ್ಕೆ ಬಲಿಯಾಗಿ ಪ್ರಾಣ ಕಳೆದುಕೊಳ್ಳಬೇಕಾಗಿ ಬಂದಿರುವುದು ದುರಂತ. ಕರ್ತವ್ಯಕ್ಕೆ ವರದಿ ಮಾಡಲು ಬಂದ ದಿನವೇ ಪ್ರೊಬೇಷನರಿ ಅಧಿಕಾರಿ ಐಪಿಎಸ್ ಹರ್ಷವರ್ಧನ್ ಅವರು ಹಾಸನ ಬಳಿ ಭೀಕರ ರಸ್ತೆ ಅಪಘಾತದಲ್ಲಿ ದುರಂತ್ಯ ಅಂತ್ಯ ಕಂಡಿದ್ದಾರೆ.
ಹರ್ಷವರ್ಧನ್ ಅವರು ಮೈಸೂರಿನಲ್ಲಿರುವ ಕರ್ನಾಟಕದ ಪೊಲೀಸ್ ಅಕಾಡೆಮಿಯಲ್ಲಿ ಟ್ರೈನಿಂಗ್ ಮುಗಿಸಿದ್ದರು. ಬಳಿಕ ಐಜಿಪಿ ಬೋರಲಿಂಗಯ್ಯ ಅವರ ಬಳಿ ರಿಪೋರ್ಟ್ ಮಾಡಿಕೊಂಡಿದ್ದರು. ಇನ್ನೇನು ಡಿವೈಎಸ್ ಪಿ ಆಗಿ ಜವಾಬ್ದಾರಿ ಸ್ವೀಕರಿಸಬೇಕಿತ್ತು. ಅಷ್ಟರಲ್ಲಿ ವಿಧಿ ಅವರನ್ನು ಕಾಣದ ಲೋಕಕ್ಕೆ ಎಳೆದುಕೊಂಡು ಹೋಗಿದೆ.
ಮೂಲತ: ಬಿಹಾರ ಮೂಲದ ಹರ್ಷವರ್ಧನ್ ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ನೆಲೆಸಿದ್ದರು. ಮಧ್ಯಪ್ರದೇಶದ ಐಐಟಿಯಲ್ಲಿ ಡಿಎವಿಇ ಎಂಜಿನಿಯರಿಂಗ್ ಪದವಿ ಪೂರೈಸಿದ್ದರು. 2022 – 23 ರ ಐಪಿಎಸ್ ಬ್ಯಾಚ್ ನಲ್ಲಿ ತೇರ್ಗಡೆ ಹೊಂದಿ ಕರ್ನಾಟಕ ಕೇಡರ್ ನಲ್ಲಿ ರಾಜ್ಯಕ್ಕೆ ಆಯ್ಕೆಯಾಗಿದ್ದರು.
- Advertisement -
Leave A Reply