ಬಿಜೆಪಿ ಮುಖಂಡರೊಬ್ಬರ ಹತ್ಯೆ: ಮತ್ತೊಂದು ಕೇರಳ ಆಯ್ತೆ ಉತ್ತರಪ್ರದೇಶ?
Posted On September 3, 2017

ಲಖನೌ: ಉತ್ತರ ಪ್ರದೇಶವೂ ಬಿಜೆಪಿ ಹಾಗೂ ಆರ್‌ಎಸ್‌ಎಸ್ ಕಾರ್ಯಕರ್ತರ ಹತ್ಯೆಯಲ್ಲಿ ಮತ್ತೊಂದು ಕೇರಳವಾಗಿ ಪರಿಣಮಿಸುತ್ತಿದ್ದು, ಗಾಜಿಯಾಬಾದ್‌ನ ಖೋರಾ ಕಾಲೊನಿಯಲ್ಲಿ ಬಿಜೆಪಿ ಮುಖಂಡರೊಬ್ಬರನ್ನು ಹತ್ಯೆ ಮಾಡಲಾಗಿದೆ. ಮುಖಂಡ ಗಜೇಂದ್ರ ಭಾಟಿ ಅವರನ್ನು ಹಾಡಹಗಲೇ ಗುಂಡಿಟ್ಟು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾಾರೆ. ಗಜೇಂದ್ರ ಭಾಟಿ ಹಾಗೂ ಅವರ ಸ್ನೇಹಿತ ಬಲಬೀರ್ ಸಿಂಗ್ ಚೌಹಾಣ್ ಬೈಕಿನಲ್ಲಿ ಹೋಗುತ್ತಿದ್ದರು. ಈ ವೇಳೆ ದುಷ್ಕರ್ಮಿಗಳು ಗುಂಡಿಕ್ಕಿ ಭಾಟಿಯನ್ನು ಕೊಲೆಗೈದಿದ್ದಾರೆ. ವಿಷಯ ತಿಳಿದಾಕ್ಷಣ ಆಸ್ಪತ್ರೆ ಬಳಿ ನೂರಾರು ಬೆಂಬಲಿಗರು ಧಾವಿಸಿದ್ದು, ಪೊಲೀಸ್ ಪಡೆ ನಿಯೋಜಿಸಲಾಗಿದೆ. ಈ ಹಿಂದೆಯೂ ಇದೇ ಪ್ರದೇಶದಲ್ಲಿ ಬಿಜೆಪಿ ಮುಖಂಡರೊಬ್ಬರನ್ನು ಗುಂಡಿಟ್ಟು ಕೊಲೆ ಮಾಡಲಾಗಿತ್ತು. ಕಳೆದ ವರ್ಷ ಮೂರು ಬಿಜೆಪಿ ನಾಯಕರನ್ನು ಕೊಲೆ ಮಾಡಲಾಗಿತ್ತು. ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು, ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.
- Advertisement -
Leave A Reply