ವಕ್ಫ್ ಪ್ರತಿಭಟನೆ ನೆಪದಲ್ಲಿ ಕೇಸರಿ ಬಂಟಿಂಗ್ ತೆರವು ಖಂಡನೀಯ:- ಶಾಸಕ ಕಾಮತ್

ಎ.18ರಂದು ಮಂಗಳೂರಿನ ಅಡ್ಯಾರಿನಲ್ಲಿ ವಕ್ಫ್ ಕಾಯ್ದೆಯ ವಿರುದ್ಧ ಪ್ರತಿಭಟನೆ ನಡೆಯಲಿರುವ ಸಂದರ್ಭದಲ್ಲಿ ಹಿಂದೂ ಧಾರ್ಮಿಕ ಕಾರ್ಯಕ್ರಮಗಳಿಗೆ, ನೇಮೋತ್ಸವಗಳಿಗೆ, ಶುಭ ಕೋರಿ ಹಾಕಲಾಗಿರುವ ಬ್ಯಾನರ್, ಬಂಟಿಂಗ್ಸ್ ಗಳನ್ನು ತೆರವುಗೊಳಿಸುವಂತೆ ರಾಜ್ಯ ಕಾಂಗ್ರೆಸ್ ಸರ್ಕಾರ ಪೊಲೀಸರ ಮೂಲಕ ಯತ್ನಿಸುತ್ತಿರುವುದಕ್ಕೆ ಶಾಸಕ ವೇದವ್ಯಾಸ ಕಾಮತ್ ರವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಈ ಪ್ರತಿಭಟನೆ ಧಿಡೀರನೆ ನಿರ್ಧಾರವಾಗಿದ್ದು, ಹಿಂದೂ ಧಾರ್ಮಿಕ ಕಾರ್ಯಕ್ರಮಗಳು, ನೇಮೋತ್ಸವಗಳು, ಪೂರ್ವ ನಿಗದಿಯಾಗಿವೆ. ಅದಕ್ಕೆ ತಕ್ಕಂತೆ ಬ್ಯಾನರ್, ಬಂಟಿಂಗ್ಸ್, ಕೇಸರಿ ಧ್ವಜಗಳನ್ನು ಹಾಕಲಾಗಿದ್ದು, ಪ್ರತಿಭಟನೆ ನೆಪದಲ್ಲಿ ಅವುಗಳನ್ನು ತೆರವುಗೊಳಿಸಬೇಕೆಂದರೆ ಏನರ್ಥ? ಅವರ ಪ್ರತಿಭಟನೆ ಇರುವುದು ವಕ್ಫ್ ಕಾಯ್ದೆ ವಿರುದ್ಧ. ಅದನ್ನು ಸಂವಿಧಾನ ಬದ್ಧವಾಗಿ ಮಾಡಿಕೊಳ್ಳಲಿ. ಯಾರದ್ದೂ ಅಭ್ಯಂತರವಿಲ್ಲ. ಅದು ಬಿಟ್ಟು ಕಾಂಗ್ರೆಸ್ ಸರ್ಕಾರ ಕೇಸರಿ ಬಂಟಿಂಗ್ಸ್ ಬ್ಯಾನರ್ ತೆರವುಗೊಳಿಸುವ ಮೂಲಕ ವಿನಾಕಾರಣ ಗೊಂದಲ ಸೃಷ್ಟಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕ್ರೈಸ್ತ ಸಮಾಜದ ಗುಡ್ ಫ್ರೈಡೇ ದಿನದಂದೇ ಜಿಲ್ಲೆಯಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಹೇರಿ, ರಸ್ತೆ ಬದಲಾವಣೆ ಮಾಡಿದ್ದು ಅವರ ಹಬ್ಬದ ಸಂಭ್ರಮಕ್ಕೂ ಅಡ್ಡಿಯಾಗಿದ್ದು ಯಾವೊಬ್ಬ ಕಾಂಗ್ರೆಸ್ ನಾಯಕರೂ ಮಾತನಾಡುತ್ತಿಲ್ಲ. ಅಲ್ಲದೇ ಇದು ರಾಜ್ಯ ಕಾಂಗ್ರೆಸ್ ಸರ್ಕಾರ ಬೆಂಬಲಿತ ಪ್ರತಿಭಟನೆ ಎನ್ನುವುದು ಗುಟ್ಟಾಗಿ ಉಳಿದಿಲ್ಲ. ಹಾಗಾಗಿಯೇ ಪ್ರತಿಭಟನೆಯ ಆಯೋಜಕರನ್ನು ಠಾಣೆಗೆ ಕರೆಸಿ ಮುಚ್ಚಳಿಕೆ ಬರೆಸಿಕೊಳ್ಳುವುದು ಬಿಟ್ಟು, ಹಿಂದೂ ಮುಖಂಡರನ್ನು ಠಾಣೆಗೆ ಕರೆಸಿ ಓಲೈಕೆ ರಾಜಕಾರಣ ಮಾಡಲಾಗುತ್ತಿದೆ. ನಮ್ಮ ಪ್ರತಿಭಟನೆ, ಕಾರ್ಯಕ್ರಮಗಳ ಸಂದರ್ಭದಲ್ಲಿ ರಸ್ತೆ ಬಂದ್ ಮಾಡಿದರೆ ಕೇಸ್ ಮಾಡುತ್ತೇವೆ ಎನ್ನುವ ಪೊಲೀಸ್ ಇಲಾಖೆ ಈಗ ಹೇಗೆ ಮುಖ್ಯ ಹೆದ್ದಾರಿಯನ್ನೇ ಬಂದ್ ಮಾಡಲು ಅನುಮತಿ ನೀಡಿದ್ದಾರೆ? ಹಿಟ್ಲರ್, ಟಿಪ್ಪು, ಮೊಘಲ್ ಎಲ್ಲವನ್ನೂ ಒಳಗೊಂಡ ಈ ಕಾಂಗ್ರೆಸ್ ಸರ್ಕಾರ ಹಿಂದೂ ಆಚರಣೆಗಳಿಗೆ ಅಡ್ಡಿಯುಂಟು ಮಾಡಿದರೆ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲವೆಂದು ಶಾಸಕರು ಎಚ್ಚರಿಕೆ ನೀಡಿದರು.
Leave A Reply